ವಿವೋ ಕಂಪನಿಯ ಈ ಎರಡು ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ದಿಢೀರ್ ಇಳಿಕೆ: ಬಜೆಟ್ ಬೆಲೆಗೆ ಲಭ್ಯ

Vivo Y36, Vivo Y02t prices dropped: ಭಾರತದಲ್ಲಿ ವಿವೋ Y36 ಸ್ಮಾರ್ಟ್​ಫೋನ್​ನ 8GB + 128GB ಸ್ಟೋರೇಜ್ ರೂಪಾಂತರಕ್ಕೆ 16,999 ರೂ. ಇತ್ತು. ಇದೀಗ 1,000 ರೂ. ಬೆಲೆ ಇಳಿಕೆಯ ನಂತರ 15,999 ರೂ. ಗೆ ಖರೀದಿಸಬಹುದು. ಜೊತೆಗೆ ಖರೀದಿಸುವಾಗ 1,000 ರೂ. ವರೆಗಿನ ಕ್ಯಾಶ್‌ಬ್ಯಾಕ್ ಸೇರಿದಂತೆ ಬ್ಯಾಂಕ್ ಕೊಡುಗೆಗಳನ್ನು ಕೂಡ ಘೋಷಿಸಿದೆ.

ವಿವೋ ಕಂಪನಿಯ ಈ ಎರಡು ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ದಿಢೀರ್ ಇಳಿಕೆ: ಬಜೆಟ್ ಬೆಲೆಗೆ ಲಭ್ಯ
Vivo Y36 and Y02t
Follow us
Vinay Bhat
|

Updated on: Sep 03, 2023 | 1:00 PM

ಪ್ರಸಿದ್ಧ ವಿವೋ ಕಂಪನಿಯ ಸ್ಮಾರ್ಟ್​ಫೋನ್​ಗಳಿಗೆ ಭಾರತದಲ್ಲಿ ಭರ್ಜರಿ ಬೇಡಿಕೆ ಇದೆ. ಹೀಗಾಗಿ ಪ್ರತಿ ತಿಂಗಳು ಒಂದಲ್ಲ ಒಂದು ಫೋನನ್ನು ದೇಶದಲ್ಲಿ ಅನಾವರಣ ಮಾಡುತ್ತಿರುತ್ತದೆ. ಇದರ ಜೊತೆಗೆ ತನ್ನ ಹಳೆಯ ಮೊಬೈಲ್​ಗಳಿಗೆ ಆಕರ್ಷಕ ಆಫರ್, ಡಿಸ್ಕೌಂಟ್​ಗಳನ್ನು ಸಹ ನೀಡುತ್ತಿರುತ್ತದೆ. ಇದೀಗ ವಿವೋ ತನ್ನ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆಯಲ್ಲಿ ದಿಢೀರ್ ಇಳಿಕೆ ಮಾಡಿದೆ. ವಿವೋ Y36 (Vivo Y36) ಸ್ಮಾರ್ಟ್​ಫೋನ್ ಬೆಲೆಯಲ್ಲಿ 1,000 ರೂ. ಮತ್ತು ವಿವೋ Y02t ಬೆಲೆಯಲ್ಲಿ 500 ರೂ.  ಇಳಿಕೆ ಮಾಡಿದೆ. ವಿವೋ Y36 ಅನ್ನು ಖರೀದಿಸುವಾಗ 1,000 ರೂ. ವರೆಗಿನ ಕ್ಯಾಶ್‌ಬ್ಯಾಕ್ ಸೇರಿದಂತೆ ಬ್ಯಾಂಕ್ ಕೊಡುಗೆಗಳನ್ನು ಕೂಡ ಘೋಷಿಸಿದೆ. ವಿವೋ ಎರಡು ತಿಂಗಳ ಹಿಂದೆ ಭಾರತದಲ್ಲಿ ಎರಡು ಫೋನ್‌ಗಳನ್ನು ಬಿಡುಗಡೆ ಮಾಡಿತ್ತು.

ಭಾರತದಲ್ಲಿ ವಿವೋ Y36, Yo2t ಬೆಲೆ ಎಷ್ಟು?:

ಭಾರತದಲ್ಲಿ ವಿವೋ Y36 ಸ್ಮಾರ್ಟ್​ಫೋನ್​ನ 8GB + 128GB ಸ್ಟೋರೇಜ್ ರೂಪಾಂತರಕ್ಕೆ 16,999 ರೂ. ಇತ್ತು. ಇದೀಗ 1,000 ರೂ. ಬೆಲೆ ಇಳಿಕೆಯ ನಂತರ 15,999 ರೂ. ಗೆ ಖರೀದಿಸಬಹುದು. ಜೊತೆಗೆ ಐಸಿಐಸಿಐ, ಎಸ್‌ಬಿಐ ಕಾರ್ಡ್, ಐಡಿಎಫ್‌ಸಿ ಫಸ್ಟ್, ಫೆಡರಲ್ ಬ್ಯಾಂಕ್, ಯೆಸ್ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಮತ್ತು ಇಂಡಸ್‌ಇಂಡ್ ಬ್ಯಾಂಕ್ ಸೇರಿದಂತೆ ಆಯ್ದ ಬ್ಯಾಂಕ್‌ಗಳಿಂದ ನೀವು 1,000 ರೂ. ವರೆಗೆ ಕ್ಯಾಶ್‌ಬ್ಯಾಕ್ ಆಫರ್ ಪಡೆಯಬಹುದು.

ಸ್ಯಾಮ್​ಸಂಗ್​ನಿಂದ ಬರುತ್ತಿದೆ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ಯಾವುದು?

ಇದನ್ನೂ ಓದಿ
Image
ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ ಇಂದು ಕೊನೇ ದಿನ
Image
108MP ಕ್ಯಾಮೆರಾದ ಇನ್ಫಿನಿಕ್ಸ್ ಜಿರೋ 30 5G ಸ್ಮಾರ್ಟ್​ಫೋನ್ ಬಿಡುಗಡೆ
Image
ಬಿಡುಗಡೆಯಾದ ಒಂದೇ ತಿಂಗಳಲ್ಲಿ ಇನ್ಫಿನಿಕ್ಸ್ ಜಿಟಿ 10 ಪ್ರೊ ಬೆಲೆ ಹೆಚ್ಚಳ
Image
ಫ್ಲಿಪ್‌ಕಾರ್ಟ್​ನಲ್ಲಿ ಶುರುವಾಗಿದೆ ಬಿಗ್ ಬಚತ್ ಧಮಾಲ್ ಸೇಲ್

ಇನ್ನು ವಿವೋ Y02t ಸ್ಮಾರ್ಟ್​ಫೋನ್ 4GB + 64GB ಒಂದೇ ರೂಪಾಂತರದಲ್ಲಿ 9,999 ರೂ. ಗೆ ಅನಾವರಣಗೊಂಡಿತ್ತು. ಈ ಫೋನ್ ಈಗ 9,499 ರೂ. ಗೆ ಸೇಲ್ ಆಗುತ್ತದೆ. ಆದರೆ, ಈ ಮೊಬೈಲ್ ಮೇಲೆ ಯಾವುದೇ ಬ್ಯಾಂಕ್ ಆಫರ್ ಘೋಷಣೆ ಮಾಡಿಲ್ಲ. ವಿವೋ Y36, Yo2t ಸ್ಮಾರ್ಟ್‌ಫೋನ್‌ಗಳು ಈಗ ಫ್ಲಿಪ್‌ಕಾರ್ಟ್, ವಿವೋ ಇಂಡಿಯಾ ಇ-ಸ್ಟೋರ್ ಮತ್ತು ಚಿಲ್ಲರೆ ಅಂಗಡಿಗಳಿಂದ ಖರೀದಿಸಲು ಲಭ್ಯವಿದೆ.

ವಿವೋ Y36 ಫೀಚರ್ಸ್:

  • ಡಿಸ್ ಪ್ಲೇ: ವಿವೋ Y36 ಸ್ಮಾರ್ಟ್​ಫೋನ್ 6.64-ಇಂಚಿನ FHD+ IPS LCD ಡಿಸ್ ಪ್ಲೇ ಜೊತೆಗೆ 90Hz ರಿಫ್ರೆಶ್ ರೇಟ್, ಮತ್ತು 650 nits ಬ್ರೈಟ್​ನೆಸ್ ಅನ್ನು ಹೊಂದಿದೆ.
  • ಪ್ರೊಸೆಸರ್: ಕ್ವಾಲ್ಕಂ ಸ್ಮಾಪ್​ಡ್ರಾಗನ್ 680 ಚಿಪ್ಸೆಟ್ Adreno 610 GPU ನೊಂದಿಗೆ ಜೋಡಿಸಲಾಗಿದೆ.
  • RAM ಮತ್ತು ಸಂಗ್ರಹಣೆ: 8GB RAM ಮತ್ತು 128GB ಸಂಗ್ರಹಣೆಯೊಂದಿಗೆ 1TB ವರೆಗೆ ವಿಸ್ತರಿಸಬಹುದಾದ ಸಂಗ್ರಹಣೆ ಇದೆ.
  • OS: ಆಂಡ್ರಾಯ್ಡ್ 13 ಜೊತೆಗೆ ವಿವೋದ ಫನ್​ಟಚ್ OS 13 ಮೂಲಕ ರನ್ ಆಗುತ್ತದೆ.
  • ಕ್ಯಾಮೆರಾಗಳು: 50MP ಪ್ರಾಥಮಿಕ ಕ್ಯಾಮೆರಾ, 2MP ಡೆಪ್ತ್ ಕ್ಯಾಮೆರಾ, 16MP ಸೆಲ್ಫೀ ಕ್ಯಾಮೆರಾ ನೀಡಲಾಗಿದೆ.
  • ಬ್ಯಾಟರಿ: 44W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ಅಳವಡಿಸಲಾಗಿದೆ.

ವಿವೋ Y02t ಫೀಚರ್ಸ್:

  • ಡಿಸ್ ಪ್ಲೇ: ವಿವೋ Y02t ಸ್ಮಾರ್ಟ್​ಫೋನ್ 6.51 ಇಂಚಿನ HD+ ಡಿಸ್ ಪ್ಲೇ ಜೊತೆಗೆ 1600 × 720 ಪಿಕ್ಸೆಲ್​ಗಳ ರೆಸಲ್ಯೂಶನ್ ಹೊಂದಿದೆ.
  • ಪ್ರೊಸೆಸರ್: ಮೀಡಿಯಾಟೆಕ್ ಹಿಲಿಯೋ P35 ಆಕ್ಟಾ-ಕೋರ್ ಪ್ರೊಸೆಸರ್ ನೀಡಲಾಗಿದೆ.
  • ಸಂಗ್ರಹಣೆ: ಈ ಮೊಬೈಲ್ 4GB RAM ಜೊತೆಗೆ 64GB ಆಂತರಿಕ ಸಂಗ್ರಹಣೆಯೊಂದಿಗೆ ಬರುತ್ತದೆ. ಆದಾಗ್ಯೂ, ವರ್ಚುವಲ್ RAM ಬೆಂಬಲದೊಂದಿಗೆ ನೀವು RAM ಅನ್ನು 4GB ವರೆಗೆ ಹೆಚ್ಚಿಸಬಹುದು.
  • ಕ್ಯಾಮೆರಾ: ವಿವೋ Y02T ಸ್ಮಾರ್ಟ್‌ಫೋನ್ ಎಲ್‌ಇಡಿ ಫ್ಲ್ಯಾಷ್‌ನೊಂದಿಗೆ 8-ಮೆಗಾಪಿಕ್ಸೆಲ್ ಕ್ಯಾಮೆರಾ ಹೊಂದಿದೆ. ಮುಂಭಾಗ ಸೆಲ್ಫೀಗಾಗಿ 5-ಮೆಗಾಪಿಕ್ಸೆಲ್ ಲೆನ್ಸ್ ನೀಡಲಾಗಿದೆ.
  • ಬ್ಯಾಟರಿ: 5,000mAh ಬ್ಯಾಟರಿ ಮತ್ತು 10W ವೇಗದ ಚಾರ್ಜಿಂಗ್ ತಂತ್ರಜ್ಞಾನದೊಂದಿಗೆ ಬರುತ್ತದೆ.
  • OS: ಈ ಸ್ಮಾರ್ಟ್‌ಫೋನ್ ಆಂಡ್ರಾಯ್ಡ್ 13 ಆಧಾರಿತ Funtouch OS 13 ನಲ್ಲಿ ಕಾರ್ಯನಿರ್ವಹಿಸುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ಗೌತಮಿಯ ಮುದ್ದಾಡಿದ ಶ್ವಾನಗಳು; ಮನೆಗೆ ಬಂದ ಸ್ಪರ್ಧಿಗೆ ಹೀಗಿತ್ತು ಸ್ವಾಗತ
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ರಜತ್ ಮೇಲಿನ ಕೋಪಕ್ಕೆ ಬಿಗ್ ಬಾಸ್ ಪ್ರಾಪರ್ಟಿ ಪುಡಿ ಮಾಡಿದ ಮಂಜು
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಡೊನಾಲ್ಡ್​ಟ್ರಂಪ್​ಗೆ ಮರಳು ಕಲಾವಿದನಿಂದ ಅಭಿನಂದನೆ
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
ಪತ್ನಿ ಗರ್ಭಿಣಿಯಾಗಿದ್ದಾಗ ಪತಿ ಈ ತಪ್ಪುಗಳನ್ನು ಮಾಡಬಾರದು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
Daily horoscope: ಈ ರಾಶಿಯವರು ಇಂದು ಕೆಲಸಗಳಲ್ಲಿ ಯಶಸ್ಸು ಕಾಣುವರು
ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್..!
ಹ್ಯಾಟ್ರಿಕ್ ಅರ್ಧಶತಕ ಸಿಡಿಸಿದ ಗ್ಲೆನ್ ಮ್ಯಾಕ್ಸ್‌ವೆಲ್..!