ಸ್ಯಾಮ್​ಸಂಗ್​ನಿಂದ ಬರುತ್ತಿದೆ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ಯಾವುದು?

Samsung Galaxy S23 Ultra features a 200-megapixel Camera: ಸ್ಯಾಮ್‌ಸಂಗ್‌ನ 2024 ಫ್ಲ್ಯಾಗ್‌ಶಿಪ್ ಸ್ಮಾರ್ಟ್​ಫೋನ್ 200-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL HP2SX ಸಂವೇದಕವನ್ನು ಹೊಂದಿರುತ್ತದೆ. ಈ ಇಮೇಜ್ ಸಂವೇದಕವು ಗ್ಯಾಲಕ್ಸಿ S23 ಅಲ್ಟ್ರಾದ ISOCELL HP2 ಸಂವೇದಕದ ಆಪ್ಟಿಮೈಸ್ಡ್ ಆವೃತ್ತಿಯಾಗಿದೆ.

ಸ್ಯಾಮ್​ಸಂಗ್​ನಿಂದ ಬರುತ್ತಿದೆ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ಯಾವುದು?
samsung galaxy s24 ultra
Follow us
Vinay Bhat
|

Updated on: Sep 02, 2023 | 11:42 AM

ಸ್ಯಾಮ್​ಸಂಗ್ ಕಂಪನಿಯ ಸ್ಮಾರ್ಟ್​ಫೋನ್​ಗಳಿಗೆ ಜಾಗತಿಕ ಮಾರುಕಟ್ಟೆಯಲ್ಲಿ ಭರ್ಜರಿ ಬೇಡಿಕೆ ಇದೆ. ಅದರಲ್ಲೂ ತನ್ನ ಎಸ್ ಸರಣಿಯ ಫೋನುಗಳನ್ನು ದೊಡ್ಡ ಮಟ್ಟದಲ್ಲಿ ಅನಾವರಣ ಮಾಡುತ್ತದೆ. ಸ್ಯಾಮ್‌ಸಂಗ್ ಈ ವರ್ಷದ ಆರಂಭದಲ್ಲಿ ಗ್ಯಾಲಕ್ಸಿ S23 ಸರಣಿಯನ್ನು ಬಿಡುಗಡೆ ಮಾಡಿತ್ತು. ಈ ಫೋನ್ ಈಗಲೂ ಟ್ರೆಂಡಿಂಗ್​ನಲ್ಲಿದೆ. ತನ್ನ ಎಸ್ ಸರಣಿಯ ಅಡಿಯಲ್ಲಿ ವರ್ಷಕ್ಕೊಂದು ಫೋನ್ ಬಿಡುಗಡೆ ಮಾಡುವ ಸ್ಯಾಮ್​ಸಂಗ್ ಮುಂದಿನ ವರ್ಷದ ಆರಂಭದಲ್ಲಿ S24 ಸರಣಿಯನ್ನು (Samsung Galaxy S24 Series) ರಿಲೀಸ್ ಮಾಡಲಿದೆ. ಇದೀಗ ಈ ಫೋನ್​ನಲ್ಲಿ ವಿಶೇಷವಾದ 200 ಮೆಗಾ ಪಿಕ್ಸೆಲ್ ಕ್ಯಾಮೆರಾ ಇರಲಿದೆ ಎಂಬ ಮಾಹಿತಿ ಹೊರಬಿದ್ದಿದೆ.

ಈ ವರ್ಷದ ಆರಂಭದಲ್ಲಿ ಬಿಡುಗಡೆ ಆದ ಟಾಪ್-ಎಂಡ್ ಗ್ಯಾಲಕ್ಸಿ S23 ಅಲ್ಟ್ರಾ ಸ್ಮಾರ್ಟ್​ಫೋನ್​ನ ಕ್ಯಾಮೆರಾ ಕೂಡ ಅದ್ಭುತವಾಗಿತ್ತು. ಇದು 200-ಮೆಗಾಪಿಕ್ಸೆಲ್​ನ ಸ್ಯಾಮ್​ಸಂಗ್ ISOCELL HP2 ಸೆನ್ಸಾರ್ ಹೊಂದಿತ್ತು. ಇದು ಹಿಂದಿನ ಗ್ಯಾಲಕ್ಸಿ S22 ಅಲ್ಟ್ರಾದಲ್ಲಿನ 108-ಮೆಗಾಪಿಕ್ಸೆಲ್ ಸಂವೇದಕದ ಅಪ್‌ಗ್ರೇಡ್ ಆಗಿದೆ. ಈಗ, ಮುಂದಿನ ವರ್ಷದ ಗ್ಯಾಲಕ್ಸಿ S24 ಅಲ್ಟ್ರಾ ಮತ್ತಷ್ಟು ಕ್ಯಾಮೆರಾ ಸುಧಾರಣೆಯೊಂದಿಗೆ ಬಿಡುಗಡೆ ಆಗಲಿದೆಯಂತೆ.

ಕಾಲೇಜು ವಿದ್ಯಾರ್ಥಿಗಳಿಗಾಗಿ ಹೊಸ ಮೋಟೋ G84 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?

ಇದನ್ನೂ ಓದಿ
Image
ಮೊಬೈಲ್ ನಂಬರ್ ಹಾಕದೆ ವಾಟ್ಸ್​ಆ್ಯಪ್ ಉಪಯೋಗಿಸುವ ಟ್ರಿಕ್ ನಿಮಗೆ ಗೊತ್ತೇ?
Image
ಭಾರತದಲ್ಲಿ 200MP ಕ್ಯಾಮೆರಾದ ಹಾನರ್ 90 ಫೋನ್ ಬಿಡುಗಡೆ ಖಚಿತ
Image
ವಾಟ್ಸ್​ಆ್ಯಪ್​ನಲ್ಲಿ ಬರುತ್ತಿದೆ ಹೊಸ ಇ-ಮೇಲ್ ವೆರಿಫಿಕೇಷನ್ ಫೀಚರ್: ಬಳಕೆದಾರರು ಫುಲ್ ಖುಷ್
Image
ಬಹುನಿರೀಕ್ಷಿತ ಐಕ್ಯೂ Z8, ಐಕ್ಯೂ Z8x ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?, ಏನಿದೆ ಫೀಚರ್ಸ್

ಗ್ಯಾಲಕ್ಸಿ S24 ಅಲ್ಟ್ರಾದಲ್ಲಿ ಹೊಸದಾದ 200-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಇರಲಿದೆ. ಟಿಪ್‌ಸ್ಟರ್ ಐಸ್ ಯೂನಿವರ್ಸ್ (@UniverseIce) X (ಈ ಹಿಂದೆ Twitter) ನಲ್ಲಿ ಗ್ಯಾಲಕ್ಸಿ S24 ಅಲ್ಟ್ರಾದ ಕ್ಯಾಮೆರಾ ಫೀಚರ್ಸ್ ಅನ್ನು ಬಹಿರಂಗ ಪಡಿಸಿದ್ದಾರೆ. ಟಿಪ್‌ಸ್ಟರ್ ಪ್ರಕಾರ, ಸ್ಯಾಮ್‌ಸಂಗ್‌ನ 2024 ಫ್ಲ್ಯಾಗ್‌ಶಿಪ್ ಸ್ಮಾರ್ಟ್​ಫೋನ್ 200-ಮೆಗಾಪಿಕ್ಸೆಲ್ ಸ್ಯಾಮ್‌ಸಂಗ್ ISOCELL HP2SX ಸಂವೇದಕವನ್ನು ಹೊಂದಿರುತ್ತದೆ. ಈ ಇಮೇಜ್ ಸಂವೇದಕವು ಗ್ಯಾಲಕ್ಸಿ S23 ಅಲ್ಟ್ರಾದ ISOCELL HP2 ಸಂವೇದಕದ ಆಪ್ಟಿಮೈಸ್ಡ್ ಆವೃತ್ತಿಯಾಗಿದೆ. ಇದು 1/1.3 ಆಪ್ಟಿಕಲ್ ಫಾರ್ಮ್ಯಾಟ್‌ನಲ್ಲಿ 200 ಮಿಲಿಯನ್ ಪಿಕ್ಸೆಲ್‌ಗಳನ್ನು ಒಳಗೊಂಡಿರುತ್ತದಂತೆ. ಮತ್ತು 0.6-ಮೈಕ್ರಾನ್ ಪಿಕ್ಸೆಲ್‌ಗಳನ್ನು ಹೊಂದಿದೆ ಎಂದು ಹೇಳಲಾಗುತ್ತದೆ.

200-ಮೆಗಾಪಿಕ್ಸೆಲ್ ಪ್ರಾಥಮಿಕ ಸಂವೇದಕದ ಜೊತೆಗೆ, ಗ್ಯಾಲಕ್ಸಿ S24 ಅಲ್ಟ್ರಾ ಫೋನಿನಲ್ಲಿ ಹೊಸ ಟೆಲಿಫೋಟೋ ಲೆನ್ಸ್‌ ಕೂಡ ನೀಡಲಾಗುತ್ತದೆ. 3x ಆಪ್ಟಿಕಲ್ ಜೂಮ್‌ನೊಂದಿಗೆ 50-ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾವನ್ನು ಪ್ಯಾಕ್ ಮಾಡಲಿದೆ ಎಂಬ ಸುದ್ದಿ ಹೊರಬಿದ್ದಿದೆ. ಇನ್ನು ಗ್ಯಾಲಕ್ಸಿ S24 ಅಲ್ಟ್ರಾದಲ್ಲಿ ಸ್ನಾಪ್​ಡ್ರಾಗನ್ 8 Gen 3 ಪ್ರೊಸೆಸರ್ ಇರುವ ಸಾಧ್ಯತೆ ಇದೆ. ಆದರೆ ಗ್ಯಾಲಕ್ಸಿ S24 ಮತ್ತು ಗ್ಯಾಲಕ್ಸಿ S24+ ನಲ್ಲಿ ಎಕ್ಸಿನೊಸ್ 2400 SoC ಯೊಂದಿಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ. ಅಲ್ಟ್ರಾ ಮಾಡೆಲ್ 12GB RAM + 256GB ಮತ್ತು 8GB RAM + 128GB ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್ 24 ಸರಣಿಯಲ್ಲಿ ಟೈಟಾನಿಯಂ ಫ್ರೇಮ್‌ಗಳನ್ನು ಬಳಸಲಾಗಿದೆ ಎಂದು ಹೇಳಲಾಗಿದೆ. ಇದು ಅಲ್ಯೂಮಿನಿಯಂ ಚಾಸಿಸ್ ಅನ್ನು ಹೊಂದಿವೆ. ಇದಲ್ಲದೆ, ಗ್ಯಾಲಕ್ಸಿ S24 ಆಲ್ಟ್ರಾ ದೀರ್ಘ ಸಮಯ ಬಾಳಕೆ ಬರುವ ಬಲಿಷ್ಠ ಬ್ಯಾಟರಿ ಅವಧಿಯನ್ನು ನೀಡಲು ಹೊಸ EV ಬ್ಯಾಟರಿ ತಂತ್ರಜ್ಞಾನದೊಂದಿಗೆ ಬರುತ್ತದೆ ಎಂಬ ಮಾಹಿತಿ ಕೂಡ ಸೋರಿಕೆ ಆಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಕ್ರೇನ್ ಮೂಲಕ ಪುನಃ ಚಕ್ರಗಳ ಮೇಲೆ ನಿಲ್ಲುವಂದಾದ ಕೆಎಸ್ಸಾರ್ಟಿಟಿಸಿ ಬಸ್ಸು
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
ಪೊಲೀಸರು ನನ್ನ ಮಾತೇ ಕೇಳಲ್ಲ ಎಂದು ಜ್ಞಾನೇಂದ್ರ ಹೇಳಿದ್ದರು: ಯತ್ನಾಳ್
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
‘ಬಾಯ್ಸ್ vs ಗರ್ಲ್ಸ್​’ ರಿಯಾಲಿಟಿ ಶೋನಲ್ಲಿ ಜಗದೀಶ್, ಶೋಭಾ ಶೆಟ್ಟಿ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಯತ್ನಾಳ್ ದೂರು ನೀಡಿದರೆ ವಿಜಯೇಂದ್ರ ವಿರುದ್ಧ ತನಿಖೆ: ಪ್ರಿಯಾಂಕ್ ಖರ್ಗೆ
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
ಬೆಂಗಳೂರು: ಡೆಡ್ಲಿ ಆಕ್ಸಿಡೆಂಟ್, ಕೂದಲೆಳೆ ಅಂತರದಲ್ಲಿ ಬೈಕ್​ ಸವಾರ ಪಾರು
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
14 ತಿಂಗಳುಗಳ ಬಳಿಕ ಮೊಹಮ್ಮದ್ ಶಮಿ ಎಂಟ್ರಿ: ವಿಡಿಯೋ ಹಂಚಿಕೊಂಡ ಬಿಸಿಸಿಐ
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ವಿಜಯಪುರದಲ್ಲಿ ಮೂವರು ಕಾರ್ಮಿಕರ ಮೇಲೆ ಮಾರಣಾಂತಿಕ ಹಲ್ಲೆ, ವಿಡಿಯೋ ವೈರಲ್​
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಗೃಹ ಇಲಾಖೆ ನೀಡುವ ಸೂಚನೆಗಳನ್ನು ಬ್ಯಾಂಕ್​ಗಳು ಪಾಲಿಸುತ್ತಿಲ್ಲ: ಪರಮೇಶ್ವರ್
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಉದ್ಯಮಿಗೆ ಹಲ್ಲೆ ಮಾಡಿ ಹಣ ಕಸಿದು ಕಾರು ಸಮೇತ ಪರಾರಿಯಾದ ಮುಸುಕುಧಾರಿಗಳು
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ
ಬಾಗಲಕೋಟೆಯ ಪ್ರೌಢ ಮತ್ತು ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ