AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಕ್ರೋಸಾಫ್ಟ್ ವಿಂಡೋಸ್‌ ಬಳಕೆದಾರರಿಗೆ ಬಿಗ್ ಶಾಕ್: ಇನ್ನುಂದೆ ಇರಲ್ಲ ಈ ಅಪ್ಲಿಕೇಷನ್

Microsoft plans on removing Wordpad: ವರ್ಡ್‌ಪ್ಯಾಡ್ ಯಾವುದೇ ನೂತನ ಅಪ್ಡೇಟ್ ಪಡೆಯದ ಕಾರಣ ಮೈಕ್ರೋಸಾಫ್ಟ್ ಅದನ್ನು ತೆಗೆದುಹಾಕುತ್ತಿದೆ ಎಂದು ಹೇಳಿದೆ. ಸ್ಟ್ಯಾಂಡರ್ಡ್ ಬರಹಕ್ಕಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಅನೇಕ ಆಯ್ಕೆಗಳಿರುವ ಎಂಎಸ್ ವರ್ಡ್ ಬಳಸಿ. ಅಥವಾ ಸರಳ ಬರಹಕ್ಕಾಗಿ ನೋಟ್‌ಪ್ಯಾಡ್‌ ಉಪಯೋಗಿಸಿ.

ಮೈಕ್ರೋಸಾಫ್ಟ್ ವಿಂಡೋಸ್‌ ಬಳಕೆದಾರರಿಗೆ ಬಿಗ್ ಶಾಕ್: ಇನ್ನುಂದೆ ಇರಲ್ಲ ಈ ಅಪ್ಲಿಕೇಷನ್
Microsoft
Vinay Bhat
|

Updated on: Sep 04, 2023 | 12:03 PM

Share

ವರ್ಡ್​ಪ್ಯಾಡ್ (Word Pad) ನಿಮಗೆ ನೆನಪಿದೆಯೇ? ಸುಲಭವಾಗಿ ಬರೆಯಲು ಮತ್ತು ಅಕ್ಷರವನ್ನು ಎಡಿಟ್ ಮಾಡಲು ಬಳಕೆದಾರರಿಗೆ ಮೈಕ್ರೋಸಾಫ್ಟ್ ಒದಗಿಸಿರುವ ಉಪಯುಕ್ತ ಅಪ್ಲಿಕೇಷನ್. ಆದರೆ, ಇದು ಎಂಎಸ್ ವರ್ಡ್​ನಷ್ಟು ಜನಪ್ರಿಯವಾಗಿಲ್ಲ, ಅಷ್ಟೊಂದು ವೈಶಿಷ್ಟ್ಯ-ಆಯ್ಕೆಗಳು ಇದರಲ್ಲಿಲ್ಲ. ಇದೀಗ ಆಘಾತಕಾರಿ ಸುದ್ದಿ ಎಂಬಂತೆ ಉಚಿತವಾಗಿ ಲಭ್ಯವಾಗುತ್ತಿದ್ದ ಈ ಅಪ್ಲಿಕೇಷನ್ ಸದ್ಯದಲ್ಲೇ ತನ್ನ ಕೆಲಸವನ್ನು ನಿಲ್ಲಿಸಲಿದೆ. ಕಳೆದ ಕೆಲವು ವರ್ಷಗಳಿಂದ ಯಾವುದೇ ಅಪ್ಡೇಟ್ ಪಡೆಯದ ವರ್ಡ್​ಪ್ಯಾಡ್ ಅನ್ನು ಮೈಕ್ರೋಸಾಫ್ಟ್ ವಿಂಡೋಸ್‌ನ ಮುಂದಿನ ವರ್ಷನ್​ನಲ್ಲಿ ತೆಗೆದುಹಾಕಲು ನಿರ್ಧರಿಸಿದೆ.

ಐಎಎನ್‌ಎಸ್ ವರದಿಯ ಪ್ರಕಾರ, ವರ್ಡ್‌ಪ್ಯಾಡ್ ಯಾವುದೇ ನೂತನ ಅಪ್ಡೇಟ್ ಪಡೆಯದ ಕಾರಣ ಮೈಕ್ರೋಸಾಫ್ಟ್ ಅದನ್ನು ತೆಗೆದುಹಾಕುತ್ತಿದೆ ಎಂದು ಹೇಳಿದೆ. ಸ್ಟ್ಯಾಂಡರ್ಡ್ ಬರಹಕ್ಕಾಗಿ ಉತ್ತಮವಾಗಿ ಕಾರ್ಯನಿರ್ವಹಿಸುವ ಮತ್ತು ಅನೇಕ ಆಯ್ಕೆಗಳಿರುವ ಎಂಎಸ್ ವರ್ಡ್ ಬಳಸಿ. ಅಥವಾ ಸರಳ ಬರಹಕ್ಕಾಗಿ ನೋಟ್‌ಪ್ಯಾಡ್‌ ಉಪಯೋಗಿಸಿ. .doc, .rtf ಮತ್ತು .txt ನಂತಹ ಸರಳ ಡಾಕ್ಯುಮೆಂಟ್‌ಗಳಿಗಾಗಿ ವಿಂಡೋಸ್ ನೋಟ್​ಪ್ಯಾಡ್ ಬಳಸಿ ಎಂದು ಕಂಪನಿಯು ಬಳಕೆದಾರರಲ್ಲಿ ಹೇಳಿದೆ.

ಭಾರತದಲ್ಲಿ 108MP ಕ್ಯಾಮೆರಾದ ಇನ್ಫಿನಿಕ್ಸ್ ಜಿರೋ 30 5G ಸ್ಮಾರ್ಟ್​ಫೋನ್ ಬಿಡುಗಡೆ: ಬೆಲೆ ಎಷ್ಟು?

ಇದನ್ನೂ ಓದಿ
Image
ಐಫೋನ್ 15 ಸರಣಿ ಬಿಡುಗಡೆಗೆ ದಿನಗಣನೆ: ಭಾರತದಲ್ಲಿ ಎಷ್ಟು ಗಂಟೆಗೆ ಲೈವ್?
Image
ಮೊನ್ನೆಯಷ್ಟೆ ರಿಲೀಸ್ ಆದ 6,000mAh ಬ್ಯಾಟರಿಯ ಈ ಫೋನ್ ಮೇಲೆ ಡಿಸ್ಕೌಂಟ್
Image
ವಿವೋ ಕಂಪನಿಯ ಈ ಎರಡು ಸ್ಮಾರ್ಟ್​ಫೋನ್​ಗಳ ಬೆಲೆಯಲ್ಲಿ ದಿಢೀರ್ ಇಳಿಕೆ
Image
ಫ್ಲಿಪ್‌ಕಾರ್ಟ್ ಬಿಗ್ ಬಚತ್ ಧಮಾಲ್ ಸೇಲ್ ಇಂದು ಕೊನೇ ದಿನ

ಕಂಪನಿಯು ನೋಟ್‌ಪ್ಯಾಡ್‌ನಲ್ಲಿ ನೂತನ ಅಪ್ಡೇಟ್ ಘೋಷಿಸಿದ ನಂತರವೇ ಮೈಕ್ರೋಸಾಫ್ಟ್ ವರ್ಡ್‌ಪ್ಯಾಡ್ ಅನ್ನು ತೆಗೆದುಹಾಕುವ ಯೋಜನೆ ಮಾಡಿದೆ. ವರ್ಡ್‌ಪ್ಯಾಡ್​ನಲ್ಲಿ ಮಾಹಿತಿಯನ್ನು ಟೈಪ್ ಮಾಡುವುದು ಮತ್ತು ಅದರ ಫಾಂಟ್, ಗಾತ್ರ, ಇತ್ಯಾದಿಗಳನ್ನು ಬದಲಾಯಿಸುವುದು ಹೊರತುಪಡಿಸಿ ಹೆಚ್ಚಿನ ಆಯ್ಕೆಯನ್ನು ನೀಡಲಾಗಿಲ್ಲ. ಹೀಗಾಗಿ ಇದನ್ನು ಕೊನೆಗೊಳಿಸಲು ಮುಂದಾಗಿದೆ.

ಮೈಕ್ರೋಸಾಫ್ಟ್ ಸದ್ಯ AI ಜನರೇಟಿವ್ ಮೇಲೆ ಹೆಚ್ಚು ಗಮನಹರಿಸುತ್ತಿದೆ ಮತ್ತು ವಿಂಡೋಸ್ 12 AI-ಚಾಲಿತ ವೈಶಿಷ್ಟ್ಯಗಳೊಂದಿಗೆ ಬಿಡುಗಡೆ ಆಗಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಮೈಕ್ರೋಸಾಫ್ಟ್ ಇನ್ನೂ ಏನನ್ನೂ ಘೋಷಿಸದಿದ್ದರೂ, ವಿಂಡೋಸ್ 12 ಅನ್ನು 2024 ರಲ್ಲಿ ಬಿಡುಗಡೆ ಮಾಡಲಾಗುವುದು ಎಂದು ಹೇಳಲಾಗಿದೆ. ಓಪನ್​ಎಐ ಮೂಲಕ ಎಐ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಮೈಕ್ರೋಸಾಫ್ಟ್ ಅದೇ ಅಸ್ತ್ರ ಹಿಡಿದು ಭಾರತದ ಭವಿಷ್ಯವನ್ನು ಹಿಡಿಯಲು ಹೊರಟಿದೆ. ಭಾರತದ ಆರೋಗ್ಯ, ಶಿಕ್ಷಣ, ಉದ್ಯಮ ಮತ್ತು ಕೃಷಿ ಕ್ಷೇತ್ರಗಳಲ್ಲಿ ಎಐ ತಂತ್ರಜ್ಞಾನ ಅಳವಡಿಕೆಗೆ ಮೈಕ್ರೋಸಾಫ್ಟ್ ಬಂಡವಾಳ ಹಾಕಲಿದೆಯಂತೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಗೌತಮ್ ಅದಾನಿ ಡಿಕೆಶಿ​​​​​ ಭೇಟಿ ಮಾಡಿದ್ಯಾಕೆ? ಇಲ್ಲಿದೆ ಅಸಲಿ ಕಾರಣ
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
ಎಕ್ಸ್​​ಪೋ ಲಕ್ಕಿ ಡ್ರಾನಲ್ಲಿ ಚಿನ್ನದ ನಾಣ್ಯ, ಪೆಪ್ಸ್ ಮಾಟ್ರೆಸ್ ಗೆದ್ದವರು
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
‘ಟಾಕ್ಸಿಕ್’ ಅವಘಡ: ಸೌಂಡ್ ಬಾಕ್ಸ್ ಬಿದ್ದ ಬಳಿಕ ಪರಿಸ್ಥಿತಿ ಹೀಗಿತ್ತು ನೋಡಿ
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೂಲಭೂತ ಸೌಕರ್ಯಗಳಿಲ್ಲದೆ ಎತ್ತಿನ ಭುಜ ಟ್ರೆಕ್ಕಿಂಗ್ ರೀ ಓಪನ್
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಮೈಸೂರಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋಗೆ ಭರ್ಜರಿ ರೆಸ್ಪಾನ್ಸ್!
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಟಿವಿ9 ಸ್ವೀಟ್ ಹೋಮ್ ರಿಯಲ್ ಎಸ್ಟೇಟ್ ಎಕ್ಸ್‌ಪೋ: ಇಂದೇ ಕೊನೆಯ ದಿನ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಅಂಬೇಡ್ಕರ್ ವಸತಿ ನಿಲಯದಲ್ಲಿ ಅವ್ಯವಸ್ಥೆ: ಊಟಕ್ಕೂ ವಿದ್ಯಾರ್ಥಿಗಳ ಪರದಾಟ
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಹೊಸಕೋಟೆ ಮುಂಜಾನೆಯ ಬಿಸಿಬಿಸಿ ಬಿರಿಯಾನಿ ಪ್ರಿಯರಿಗೆ ಪೊಲೀಸರು ಬಿಗ್ ಶಾಕ್!
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಮಾಸ್ಟರ್ ಪ್ಲಾನ್
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ
ಚಾಮರಾಜನಗರ ಶೂಟೌಟ್: ಹೊಳೆ ದಟ್ಟಿ ಅರಣ್ಯದಿಂದ ಟಿವಿ9 ವಿಶೇಷ ತನಿಖಾ ವರದಿ