AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Google, Microsoft: ಭಾರತದ ಡಿಜಿಟಲ್ ಭವಿಷ್ಯಕ್ಕೆ ಗೂಗಲ್ ಮತ್ತು ಮೈಕ್ರೋಸಾಫ್ಟ್​ನಿಂದ ಭರ್ಜರಿ ಹೂಡಿಕೆ; ಈ ಟೆಕ್ ದೈತ್ಯರಿಗೆ ಸಿಗುವ ಲಾಭವೇನು?

Big Investment From Global Tech Companies: ಗೂಗಲ್ ಕಂಪನಿ ಗುಜರಾತ್​ನ ಗಿಫ್ಟ್ ಸಿಟಿಯಲ್ಲಿ ಟೆಕ್ ಸೆಂಟರ್ ತೆರೆಯಲಿದೆ. ಮೈಕ್ರೋಸಾಫ್ಟ್ ಸಂಸ್ಥೆ ಭಾರತದ ನಾಲ್ಕು ಕ್ಷೇತ್ರಗಳಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನದ ನೆರವು ಒದಗಿಸಲು ಹೊರಟಿದೆ.

Google, Microsoft: ಭಾರತದ ಡಿಜಿಟಲ್ ಭವಿಷ್ಯಕ್ಕೆ ಗೂಗಲ್ ಮತ್ತು ಮೈಕ್ರೋಸಾಫ್ಟ್​ನಿಂದ ಭರ್ಜರಿ ಹೂಡಿಕೆ; ಈ ಟೆಕ್ ದೈತ್ಯರಿಗೆ ಸಿಗುವ ಲಾಭವೇನು?
ಮೈಕ್ರೋಸಾಫ್ಟ್
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2023 | 11:26 AM

Share

ನವದೆಹಲಿ: ವಿಶ್ವದ ದೈತ್ಯ ಟೆಕ್ ಕಂಪನಿಗಳಾದ ಗೂಗಲ್ ಮತ್ತು ಮೈಕ್ರೋಸಾಫ್ಟ್ ಭಾರತದಲ್ಲಿ ಇನ್ನೂ ಬಹಳ ಹೆಚ್ಚು ಮೊತ್ತದ ಹೂಡಿಕೆ ಮಾಡಲು ನಿರ್ಧರಿಸಿವೆ. ಗೂಗಲ್ ಸಂಸ್ಥೆ ಗುಜರಾತ್​ನಲ್ಲಿ ಹಣಕಾಸು ತಂತ್ರಜ್ಞಾನ ಕೇಂದ್ರ (Fintech Center) ತೆರೆಯಲಿದ್ದು 10 ಬಿಲಿಯನ್ ಡಾಲರ್​ನಷ್ಟು (ಸುಮಾರು 82,000 ಕೋಟಿ ರೂ) ಹಣದ ಹೊಳೆ ಹರಿಸಲಿದೆ. ಯುಪಿಐ ಮತ್ತು ಆಧಾರ್ ಸಂಯೋಜನೆ ಮತ್ತು ಆಧಾರದಲ್ಲಿ ನೆಲೆ ನಿಂತಿರುವ ಭಾರತದ ಹಣಕಾಸು ತಂತ್ರಜ್ಞಾನದ ನಾಯಕತ್ವವನ್ನು ಇನ್ನಷ್ಟು ಗಟ್ಟಿ ಮಾಡಲು ಯತ್ನಿಸುವಾಗಿ ಗೂಗಲ್ ಸಿಇಒ ಸುಂದರ್ ಪಿಚೈ (Google CEO Sundar Pichai) ಇತ್ತೀಚೆಗೆ ಹೇಳಿದ್ದಾರೆ. ಇನ್ನು, ಮೈಕ್ರೋಸಾಫ್ಟ್ ಸಂಸ್ಥೆ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವನ್ನು ಭಾರತದ ವಿವಿಧ ಕ್ಷೇತ್ರಗಳಲ್ಲಿ ಅಳವಡಿಸುವ ಸನ್ನಾಹದಲ್ಲಿದೆ.

ಗೂಗಲ್ ಕಂಪನಿಯ ಫಿನ್​ಟೆಕ್ ಸೆಂಟರ್​ನ ವಿಶೇಷತೆಗಳೇನು?

ಗುಜರಾತ್​ನ ಅಹ್ಮದಾಬಾದ್​ನಲ್ಲಿರುವ ಗಿಫ್ಟ್ ಸಿಟಿಯಲ್ಲಿ ಗೂಗಲ್ ಕಂಪನಿ ತನ್ನ ಟೆಕ್ ಸೆಂಟರ್​ವೊಂದನ್ನು ಆರಂಭಿಸಲಿದೆ. ಇದರಲ್ಲಿ ಗೂಗಲ್ ಪೇ ನಿರ್ವಹಣೆ ವ್ಯವಸ್ಥೆ ಇರಲಿದೆ. ಯುಪಿಐ ಆಧಾರಿತ ಪೇಮೆಂಟ್ ಕ್ಷೇತ್ರದಲ್ಲಿ ಜಿಪೇ ಗಟ್ಟಿಯಾಗಿ ಬೇರೂರಿದ್ದು, ಈಗ ತಂತ್ರಜ್ಞಾನ ಕೇಂದ್ರ ಸ್ಥಾಪನೆಯಿಂದ ಇದು ಮುಂದಿನ ಹಂತಕ್ಕೇರಲು ಸಹಾಯವಾಗುವ ನಿರೀಕ್ಷೆ ಇದೆ. ಈ ಕೇಂದ್ರದಲ್ಲಿ 2,000ಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.

ಇದನ್ನೂ ಓದಿRBI: ನಮಗೆ ನಿಮಗೆ ಕ್ರೆಡಿಟ್ ಸ್ಕೋರ್ ಕೊಡುವ ಸಿಬಿಲ್ ಇತ್ಯಾದಿ ಕಂಪನಿಗಳಿಗೇ ಬಿತ್ತು ಆರ್​ಬಿಐ ದಂಡ; ನಿಯಮ ಉಲ್ಲಂಘನೆ ಆರೋಪ

ಇದಕ್ಕಿಂತ ಹೆಚ್ಚಾಗಿ ಗೂಗಲ್ ಸಂಸ್ಥೆ ಭವಿಷ್ಯದ ಸಾಧ್ಯಾಸಾಧ್ಯತೆಯ ಮೇಲೆ ಹೂಡಿಕೆ ಮಾಡುತ್ತಿದೆ. ಭಾರತದಲ್ಲಿರುವ ಆಧಾರ್ ಮತ್ತು ಯುಪಿಐ ವ್ಯವಸ್ಥೆ ಗೂಗಲ್ ಪಾಲಿಗೆ ಭರ್ಜರಿ ಸಾಧ್ಯತೆಗಳನ್ನು ತೆರೆದಿಟ್ಟಿದೆ. ಆಧಾರ್​ನಲ್ಲಿ ಸಿಗುವ ಅಗಾಧ ದತ್ತಾಂಶಗಳನ್ನು ಬಳಸಿ ನಾನಾ ರೀತಿಯ ಅಪ್ಲಿಕೇಶನ್​ಗಳನ್ನು ರೂಪಿಸುವ ಅವಕಾಶ ಗೂಗಲ್​ಗೆ ಇದೆ. ಹೀಗಾಗಿ, ಮುಂದಿನ ಆರೇಳು ವರ್ಷದಲ್ಲಿ ಗೂಗಲ್ ಕಂಪನಿ ಭಾರತದಲ್ಲಿ 10 ಬಿಲಿಯನ್ ಡಾಲರ್​ನಷ್ಟು ಹಣದ ಹೂಡಿಕೆ ಹಾಕಲಿದೆ.

ಕೃತಕ ಬುದ್ಧಿಮತ್ತೆಯ ಅಸ್ತ್ರ ಹಿಡಿದಿರುವ ಮೈಕ್ರೋಸಾಫ್ಟ್ ಸಂಸ್ಥೆ

ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಎಂದರೆ ಈಗ ಚ್ಯಾಟ್ ಜಿಪಿಟಿ (ChatGPT) ಎನ್ನುವ ಮಟ್ಟಕ್ಕೆ ಅದು ಬ್ರ್ಯಾಂಡ್ ಅಗಿ ಹೋಗಿದೆ. ಈ ಚ್ಯಾಟ್​ಜಿಪಿಟಿ ತಯಾರಿಸಿರುವ ಓಪನ್​ಎಐ (OpenAI) ಸಂಸ್ಥೆಯನ್ನು ಪ್ರಾಯೋಜಿಸಿರುವುದು ಮೈಕ್ರೋಸಾಫ್ಟ್ ಕಂಪನಿಯೇ. ಓಪನ್​ಎಐ ಮೂಲಕ ಎಐ ಕ್ಷೇತ್ರದಲ್ಲಿ ಹಿಡಿತ ಹೊಂದಿರುವ ಮೈಕ್ರೋಸಾಫ್ಟ್ ಇದೀಗ ಅದೇ ಅಸ್ತ್ರ ಹಿಡಿದು ಭಾರತದ ಭವಿಷ್ಯವನ್ನು ಹಿಡಿಯಲು ಹೊರಟಿದೆ. ಭಾರತದ ಆರೋಗ್ಯ, ಶಿಕ್ಷಣ, ಉದ್ಯಮ ಮತ್ತು ಕೃಷಿ ಕ್ಷೇತ್ರಗಳಲ್ಲಿ ಎಐ ತಂತ್ರಜ್ಞಾನ ಅಳವಡಿಕೆಗೆ ಮೈಕ್ರೋಸಾಫ್ಟ್ ಬಂಡವಾಳ ಹಾಕಲಿದೆ.

ಇದನ್ನೂ ಓದಿIndia Russia Payment Issue: ಭಾರತ ರಷ್ಯಾ ಮಧ್ಯೆ ಚೀನಾ ಕಾಟ; ಪಾಕಿಸ್ತಾನಕ್ಕೆ ಸುಗ್ಗಿ; ಇದು ವಿಧಿ ಆಟವಾ?

ಇವೆರಡು ಕಂಪನಿಗಳ ಈ ಬೃಹತ್ ಹೂಡಿಕೆಯಿಂದ ಭಾರತದ ಡಿಜಿಟಲ್ ಪ್ರಗತಿಗೂ ಪುಷ್ಟಿ ಸಿಗುವುದರಲ್ಲಿ ಅನುಮಾನ ಇಲ್ಲ. ಹಾಗೆಯೇ, ಜನಸಾಮಾನ್ಯರ ಜೀವನ ಇನ್ನಷ್ಟು ಸುಗಮಗೊಳ್ಳಲು ಇದು ಕಾರಣವಾಗುವ ನಿರೀಕ್ಷೆ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ