RBI: ನಮಗೆ ನಿಮಗೆ ಕ್ರೆಡಿಟ್ ಸ್ಕೋರ್ ಕೊಡುವ ಸಿಬಿಲ್ ಇತ್ಯಾದಿ ಕಂಪನಿಗಳಿಗೇ ಬಿತ್ತು ಆರ್​ಬಿಐ ದಂಡ; ನಿಯಮ ಉಲ್ಲಂಘನೆ ಆರೋಪ

Credit Score Companies Face Penalty: ನಿಯಮ ಉಲ್ಲಂಘನೆ ಮಾಡಿದ ಆರೋಪದ ಮೇಲೆ ಸಿಬಿಲ್, ಸಿಆರ್​ಐಎಫ್, ಎಕ್ಸ್​ಪೀರಿಯನ್ ಮತ್ತು ಈಕ್ವಿಫ್ಯಾಕ್ಸ್ ಸಂಸ್ಥೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ದಂಡ ವಿಧಿಸಿದೆ.

RBI: ನಮಗೆ ನಿಮಗೆ ಕ್ರೆಡಿಟ್ ಸ್ಕೋರ್ ಕೊಡುವ ಸಿಬಿಲ್ ಇತ್ಯಾದಿ ಕಂಪನಿಗಳಿಗೇ ಬಿತ್ತು ಆರ್​ಬಿಐ ದಂಡ; ನಿಯಮ ಉಲ್ಲಂಘನೆ ಆರೋಪ
ಕ್ರೆಡಿಟ್ ಸ್ಕೋರ್
Follow us
|

Updated on: Jun 27, 2023 | 10:37 AM

ಬೆಂಗಳೂರು: ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬಿಲ್, ಈಕ್ವಿಫ್ಯಾಕ್ಸ್ ಸೇರಿದಂತೆ 4 ಕ್ರೆಡಿಟ್ ರೇಟಿಂಗ್ ಸಂಸ್ಥೆಗಳಿಗೆ ಭಾರತೀಯ ರಿಸರ್ವ್ ಬ್ಯಾಂಕ್ ತಲಾ 25 ಲಕ್ಷ ರೂನಷ್ಟು ದಂಡ ವಿಧಿಸಿದೆ. ಕ್ರೆಡಿಟ್ ಮಾಹಿತಿ ಕಂಪನಿಗಳ ಕಾಯ್ದೆಯ ಕೆಲ ನಿಯಮಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಈ ನಾಲ್ಕು ಏಜೆನ್ಸಿಗಳಿಗೆ ಪೆನಾಲ್ಟಿ ಹಾಕಲಾಗಿದೆ. ಟ್ರಾನ್ಸ್​ಯೂನಿಯನ್ ಸಿಬಿಲ್ (TransUnion CIBIL), ಸಿಆರ್​ಐಎಫ್ ಹೈಮಾರ್ಕ್ ಕ್ರೆಡಿಟ್ ಇನ್ಫಾರ್ಮೇಶನ್ ಸರ್ವಿಸಸ್ (CIRF High Mark Credit Information Services), ಎಕ್ಸ್​ಪೀರಿಯನ್ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿ (Experian Credit Information Company) ಮತ್ತು ಈಕ್ವಿಫ್ಯಾಕ್ಸ್ ಕ್ರೆಡಿಟ್ ಇನ್ಫಾರ್ಮೇಶನ್ ಸರ್ವಿಸಸ್ (Equifax Credit Information Services) ಸಂಸ್ಥೆಗಳಿಗೆ ದಂಡ ಹಾಕುವ ಮುನ್ನ, ಕಾರಣ ಕೇಳಿ ಶೋಕಾಸ್ ನೋಟೀಸ್ ಜಾರಿ ಮಾಡಲಾಗಿತ್ತು.

ಕ್ರೆಡಿಟ್ ರೇಟಿಂಗ್ ಕಂಪನಿಗಳಿಗೆ ವಿಧಿಸಲಾದ ದಂಡ

  1. ಟ್ರಾನ್ಸ್​ಯೂನಿಯನ್ ಸಿಬಿಲ್: 26 ಲಕ್ಷ ರೂ
  2. ಸಿಆರ್​ಐಎಫ್ ಹೈ ಮಾರ್ಕ್ ಕ್ರೆಡಿಟ್ ಇನ್ಫಾರ್ಮೇಶನ್ ಸರ್ವಿಸಸ್: 25.75 ಲಕ್ಷ ರೂ
  3. ಎಕ್ಸ್​ಪೀರಿಯನ್ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿ: 24.75 ಲಕ್ಷ ರೂ
  4. ಈಕ್ವಿಫ್ಯಾಕ್ಸ್ ಕ್ರೆಡಿಟ್ ಇನ್ಫಾರ್ಮೇಶನ್ ಸರ್ವಿಸಸ್: 24.25 ಲಕ್ಷ ರೂ

ಇದನ್ನೂ ಓದಿAadhaar PAN Linking: ಆಧಾರ್ ಮತ್ತು ಪ್ಯಾನ್​ನಲ್ಲಿ ಹೆಸರು ಇತ್ಯಾದಿ ಮ್ಯಾಚ್ ಆಗದೇ ಲಿಂಕ್ ಆಗುತ್ತಿಲ್ಲವಾ? ಐಟಿ ಇಲಾಖೆ ಕೊಟ್ಟ ಸಲಹೆಗಳಿವು

ಸಿಬಿಲ್, ಸಿಆರ್​ಐಎಫ್ ಮತ್ತು ಈಕ್ವಿಫ್ಯಾಕ್ಸ್ ಕಂಪನಿಗಳು ಕೆಲ ಕ್ರೆಡಿಟ್ ಮಾಹಿತಿಯನ್ನು ಸಮರ್ಪಕವಾಗಿ ಇಟ್ಟುಕೊಂಡಿಲ್ಲ ಎಂಬುದು ವಿವಿಧ ದಾಖಲೆಗಳ ಪರಿಶೀಲನೆಯಿಂದ ಗೊತ್ತಾಗಿದೆ ಎಂದು ಆರ್​ಬಿಐ ಆರೋಪಿಸಿದೆ. ಹಾಗೆಯೆ, ಕೆಲ ಸಾಲಗಾರರು ತಮಗೆ ನೀಡಲಾದ ಕ್ರೆಡಿಟ್ ರೇಟಿಂಗ್ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ನೀಡಲಾದ ದೂರುಗಳ ವಿಚಾರದಲ್ಲೂ ಈ ಸಂಸ್ಥೆಗಳು ನಿರ್ಲಕ್ಷ್ಯ ವಹಿಸಿವೆ. ಈ ಗ್ರಾಹಕರ ಕ್ರೆಡಿಟ್ ಮಾಹಿತಿಯನ್ನು ಅಪ್​ಡೇಟ್ ಮಾಡುವುದಾಗಲೀ ಅಥವಾ ದೂರಿನ ಮೇರೆಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಮಾಹಿತಿಯನ್ನಾಗಲೀ ಅಥವಾ ಕ್ರಮ ಕೈಗೊಳ್ಳದಿದ್ದ ಸಂದರ್ಭದಲ್ಲಿ ಗಡುವಿನೊಳಗೆ ಅದಕ್ಕೆ ಕಾರಣ ನೀಡುವುದಾಲೀ ಈ ಸಂಸ್ಥೆಗಳು ಮಾಡಿಲ್ಲ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಹೇಳಿವೆ.

ಇನ್ನು, ಎಕ್ಸ್​ಪೀರಿಯನ್ ಕ್ರೆಡಿಟ್ ಇನ್ಫಾರ್ಮೇಶನ್ ಕಂಪನಿಯ ಮೇಲಿರುವ ಆರೋಪವೂ ಬಹುತೇಕ ಇಂಥವೇ ಆಗಿದೆ. ಈ ನಾಲ್ಕು ಕಂಪನಿಗಳಿಗೆ ಶೋಕಾಸ್ ಜಾರಿ ಮಾಡಿದ ಆರ್​ಬಿಐ, ದಂಡ ವಿಧಿಸುತ್ತಿರುವುದಾಗಿ ತಿಳಿಸಿದ್ದು, ದಂಡ ವಿಧಿಸಬಾರದು ಎಂದಿದ್ದರೆ ಅದಕ್ಕೆ ಕಾರಣ ನೀಡಬೇಕೆಂದು ಸೂಚಿಸಿತ್ತು. ಆದರೆ, ಈ ನಾಲ್ಕು ಕಂಪನಿಗಳು ನೀಡಿದ ಉತ್ತರ ಆರ್​ಬಿಐಗೆ ಸಮಾಧಾನ ತಂದಿಲ್ಲ. ಹೀಗಾಗಿ, ದಂಡ ಹಾಕುವ ತೀರ್ಮಾನ ಕೈಗೊಂಡಿತು. ಈ ನಾಲ್ಕು ಕಂಪನಿಗಳಿಗೆ ಸರಿಸುಮಾರು ಸಮಾನ ಮೊತ್ತದ ಪೆನಾಲ್ಟಿ ಹಾಕಲಾಗಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ