AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eid: ಬಕ್ರೀದ್ ಹಬ್ಬದಂದು ಷೇರುಮಾರುಕಟ್ಟೆಗಳಿಗೆ ರಜೆ; ಆದರೆ, ಜೂನ್ 28 ಬದಲು ಮರುದಿನ ಬಂದ್

Share Market During Bakr Eid: ಈದ್ ಉಲ್ ಜುಹಾ ಅಥವಾ ಬಕ್ರೀದ್ ಹಬ್ಬಕ್ಕೆ ಬಿಎಸ್​ಇ, ಎನ್​​ಎಸ್​ಇ, ಎಂಸಿಎಕ್ಸ್, ಫಾರೆಕ್ಸ್ ಇತ್ಯಾದಿ ಹಣಕಾಸು ಮಾರುಕಟ್ಟೆಗಳಿಗೆ ರಜೆ ಇರಲಿದೆ. ಇದೂ ಸೇರಿ ಡಿಸೆಂಬರ್​ವರೆಗೆ ಇನ್ನೂ 8 ದಿನಗಳ ಕಾಲ ಷೇರುಪೇಟೆಗೆ ರಜೆ ಇರುತ್ತದೆ.

Eid: ಬಕ್ರೀದ್ ಹಬ್ಬದಂದು ಷೇರುಮಾರುಕಟ್ಟೆಗಳಿಗೆ ರಜೆ; ಆದರೆ, ಜೂನ್ 28 ಬದಲು ಮರುದಿನ ಬಂದ್
ಷೇರುಪೇಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Jun 27, 2023 | 12:04 PM

ನವದೆಹಲಿ: ನಾಳೆ (ಜೂನ್ 28) ಮುಸ್ಲಿಮರ ಪವಿತ್ರ ಈದ್ ಉಲ್ ಜುಹಾ (Eid Ul-Zuha) ಇರುವುದರಿಂದ ದೇಶದ ಬಹುತೇಕ ಎಲ್ಲೆಡೆ ರಜೆ ಇದೆ. ಬಕ್ರೀದ್ ಪ್ರಯುಕ್ತ ಭಾರತದ ಷೇರು ಮಾರುಕಟ್ಟೆಗಳಿಗೂ ಬುಧವಾರ ರಜೆ ನಿಗದಿಯಾಗಿತ್ತು. ಆದರೆ, ಇಂದು ಅಚಾನಕ್ಕಾಗಿ ರಜಾ ಪಟ್ಟಿಯಲ್ಲಿ ಬದಲಾವಣೆ ಮಾಡಲಾಗಿದ್ದು, ಜೂನ್ 28 ಬದಲು ಮರುದಿನ ರಜೆ ಕೊಡಲು ನಿರ್ಧರಿಸಲಾಗಿದೆ. ಅಂದರೆ ಜೂನ್ 29, ಗುರುವಾದಂದು ಷೇರುಪೇಟೆಗಳು ಬಂದ್ ಆಗಿರುತ್ತವೆ. ಬುಧವಾರ ಯಥಾ ಪ್ರಕಾರ ಕಾರ್ಯನಿರ್ವಹಿಸಲಿದೆ. ಬಾಂಬೆ ಸ್ಟಾಕ್ ಎಕ್ಸ್​ಚೇಂಜ್ (BSE), ನ್ಯಾಷನಲ್ ಸ್ಟಾಕ್ ಎಕ್ಸ್​ಚೇಂಜ್ (NSE) ಮತ್ತಿತರ ಷೇರು ಎಕ್ಸ್​ಜೇಂಜ್ ಕೇಂದ್ರಗಳಿಗೆ (Stock Exchange Markets) ರಜೆ ಇದೆ. ವಿದೇಶೀ ಕರೆನ್ಸಿ ವಿನಿಮಯ ಮಾರುಕಟ್ಟೆಯೂ ಇರುವುದಿಲ್ಲ. ಜೂನ್ 29ರಂದು ಯಾವುದೇ ಷೇರು ವಹಿವಾಟು, ಬಾಂಡ್ ಮಾರಾಟ, ಫಾರೆಕ್ ವಹಿವಾಟುಗಳು ನಡೆಯುವುದಿಲ್ಲ. ನಾಳೆ ಬುಧವಾರ ಸಂಜೆ ಬಂದ್ ಆಗುವ ಷೇರುಪೇಟೆ ಮತ್ತೆ ಬಾಗಿಲು ತೆರೆಯುವುದು ಜೂನ್ 30ರ ಬೆಳಗ್ಗೆಯೇ.

ಬಹು ಸರಕು ವಿನಿಯಮ ಮಾರುಕಟ್ಟೆ ಎನಿಸಿದ ಎಂಸಿಎಕ್ಸ್ (MCX- Multi Commodity Exchange) ಜೂನ್ 29ರಂದು ಸಂಜೆಯವರೆಗೂ ಬಂದ್ ಆಗಿರುತ್ತದೆ. ಸಂಜೆ 5ರ ಬಳಿಕ ಮಧ್ಯರಾತ್ರಿಯವರೆಗೂ ಅದು ತೆರೆದಿರುತ್ತದೆ. ಕಮಾಡಿಟಿ ಡಿರೈವೇಟಿವ್ ಸೆಗ್ಮೆಂಟ್​ನಲ್ಲೂ ಸಂಜೆಯ ಬಳಿಕ ವಹಿವಾಟು ಇರುತ್ತದೆ.

ಇದನ್ನೂ ಓದಿAadhaar PAN Linking: ಆಧಾರ್ ಮತ್ತು ಪ್ಯಾನ್​ನಲ್ಲಿ ಹೆಸರು ಇತ್ಯಾದಿ ಮ್ಯಾಚ್ ಆಗದೇ ಲಿಂಕ್ ಆಗುತ್ತಿಲ್ಲವಾ? ಐಟಿ ಇಲಾಖೆ ಕೊಟ್ಟ ಸಲಹೆಗಳಿವು

ಷೇರು ಮಾರುಕಟ್ಟೆಗಳಿಗೆ ಈ ವರ್ಷದ ಮುಂದಿನ ರಜಾ ದಿನಗಳ ಪಟ್ಟಿ

  • ಜೂನ್ 29: ಬಕ್ರೀದ್ ಹಬ್ಬ
  • ಆಗಸ್ಟ್ 15: ಸ್ವಾತಂತ್ರ್ಯೋತ್ಸವ
  • ಸೆಪ್ಟಂಬರ್ 19: ಗಣೇಶ ಹಬ್ಬ
  • ಅಕ್ಟೋಬರ್ 2: ಮಹಾತ್ಮ ಗಾಂಧಿ ಜಯಂತಿ
  • ಅಕ್ಟೋಬರ್ 24: ದಸರಾ ಹಬ್ಬ
  • ನವೆಂಬರ್ 14: ದೀಪಾವಳಿ ಹಬ್ಬ
  • ನವೆಂಬರ್ 27: ಗುರುನಾನಕ್ ಜಯಂತಿ
  • ಡಿಸೆಂಬರ್ 25: ಕ್ರಿಸ್ಮಸ್ ಹಬ್ಬ

ಮಂಗಳವಾರ ಷೇರುಪೇಟೆ ಮಿಂಚಿನ ಆರಂಭ

ಜೂನ್ 27, ಮಂಗಳವಾರದಂದು ಭಾರತದ ಬಿಎಸ್​ಇ ಮತ್ತು ಎನ್​ಎಸ್​ಇ ಷೇರು ವಿನಿಮಯ ಕೇಂದ್ರಗಳು ಭರ್ಜರಿ ವಹಿವಾಟು ಕಾಣುತ್ತಿವೆ. ಸೆನ್ಸೆಕ್ಸ್ ಬೆಳ್ಳಂಬೆಳಗ್ಗೆಯೇ 100 ಅಂಕಗಳನ್ನು ಹೆಚ್ಚಿಸಿಕೊಂಡಿದೆ. ಎನ್​ಎಸ್​ಇ ನಿಫ್ಟಿ ಸೂಚ್ಯಂಕ ಮತ್ತೆ 18,700 ಅಂಕಗಳ ಮಟ್ಟಕ್ಕಿಂತ ಮೇಲೇರಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಸಿಂಧೂರದ ಮಹತ್ವ ಹಾಗೂ ಇದರ ಹಿಂದಿನ ರಹಸ್ಯವೇನು ಗೊತ್ತಾ?
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಇಂದಿನ ದ್ವಾದಶ ರಾಶಿಗಳ ಫಲಾನುಫಲಗಳ ಬಗ್ಗೆ ಸಂಕ್ಷಿಪ್ತ ವಿವರ ಇಲ್ಲಿದೆ
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಪಾಕ್​ ಡ್ರೋನ್​ ಆಕಾಶದಲ್ಲೇ ಉಡೀಸ್: ಭಯಾನಕ ಸೌಂಡ್​ಗೆ ಬೆಚ್ಚಿಬಿದ್ದ ಜಮ್ಮು
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ಭಟಿಂಡಾ ಸೇನಾನೆಲೆ ಮೇಲೆ ದಾಳಿಯ ವಿಫಲಯತ್ನ ಪಾಕ್ ನಡೆಸಿದೆ: ವ್ಯೋಮಿಕಾ ಸಿಂಗ್
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ತೆಲುಗಿನಲ್ಲಿ ಕನ್ನಡದ ನಟರಿಗೆ ಹೆಚ್ಚು ಸಂಬಳ ಸಿಗುತ್ತಾ? ಚಂದು ಗೌಡ ಉತ್ತರ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ; ಉರಿಯಲ್ಲಿ ಗುಂಡಿನ ದಾಳಿ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕ್ ಸೇನೆಯಿಂದ ಅವಿರತ ಶೆಲ್ಲಿಂಗ್, ರಜೌರಿ ಪ್ರಾಂತ್ಯ ಉದ್ವಿಗ್ನ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಪಾಕಿಸ್ತಾನದ ಕಂತ್ರಿ ಬುದ್ಧಿ ಬಿಚ್ಚಿಟ್ಟ ಬೆಳಗಾವಿ ಸೊಸೆ ಕರ್ನಲ್ ಸೋಫಿಯಾ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ
ಭಾರತದಲ್ಲಿ ಮುಸಲ್ಮಾನರೂ ಪ್ರಧಾನಿ ಮೋದಿ ಜೊತೆ ನಿಂತಿದ್ದಾರೆ: ಸೂಲಿಬೆಲೆ