ರಿಮೋಟ್ ಬೇಡ: ಸ್ಮಾರ್ಟ್​ಫೋನ್ ಮೂಲಕ ಟಿವಿ ಚಾನೆಲ್ ಬದಲಾಯಿಸುವುದು ಹೇಗೆ?

How to Use Phone as Remote for Smart Tv: ಇನ್ನುಂದೆ ಟಿವಿ ರಿಮೋಟ್ ಕಳೆದು ಹೋದರೆ ಚಿಂತಿಸಬೇಕಿಲ್ಲ. ನಿಮ್ಮಲ್ಲಿ ಸ್ಮಾರ್ಟ್​ಫೋನ್ ಇದ್ದರೆ ಅದರ ಮೂಲಕ ಮನೆಯ ಟಿವಿಯನ್ನು ನೀವು ನಿಯಂತ್ರಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿ ರಿಮೋಟ್ ಆಗಿ ಬಳಸಬಹುದು.

ರಿಮೋಟ್ ಬೇಡ: ಸ್ಮಾರ್ಟ್​ಫೋನ್ ಮೂಲಕ ಟಿವಿ ಚಾನೆಲ್ ಬದಲಾಯಿಸುವುದು ಹೇಗೆ?
Smart Tv and SmartPhone
Follow us
|

Updated on:Sep 04, 2023 | 12:49 PM

ಹೆಚ್ಚಾಗಿ ಟಿವಿಯನ್ನು (TV) ನೋಡುವವರಿಗೆ ಸಾಮಾನ್ಯಗಿ ಒಂದು ಸಮಸ್ಯೆ ಇದ್ದೇ ಇರುತ್ತದೆ. ಅವರು ರಿಮೋಟ್ ಅನ್ನು ಎಲ್ಲೋ ಇಟ್ಟಿರುತ್ತಾರೆ. ಆದರೆ, ಅದನ್ನು ಎಲ್ಲಿ ಇರಿಸಿದ್ದಾರೆ ಎಂಬುದನ್ನು ಮರೆತುಬಿಡುತ್ತಾರೆ. ಅಥವಾ ಕೆಲವೊಮ್ಮೆ ಮನೆಯಲ್ಲಿ ಚಿಕ್ಕ ಮಕ್ಕಳು ರಿಮೋಟ್​ನಲ್ಲಿ ಆಟವಾಡುತ್ತಾರೆ ಎಂಬ ಕಾರಣಕ್ಕೆ ಅದನ್ನು ಅಡಗಿಸಿ ಇಟ್ಟು ನಂತರ ಎಲ್ಲಿ ಇಟ್ಟೆ ಎಂದು ಮರೆತು ಬಿಡುವುದೂ ಉಂಟು. ಇದರಿಂದಾಗಿ ಜನರು ಬಹಳಷ್ಟು ತೊಂದರೆಗಳನ್ನು ಅನುಭವಿಸತ್ತಾರೆ. ಈ ಸಾಲಿನಲ್ಲಿ ನೀವು ಕೂಡ ಸೇರಿದ್ದರೆ, ಉಪಯುಕ್ತವಾದ ಮಾಹಿತಿ ಇಲ್ಲೊಂದಿದೆ.

ಇನ್ನುಂದೆ ಟಿವಿ ರಿಮೋಟ್ ಕಳೆದು ಹೋದರೆ ಚಿಂತಿಸಬೇಕಿಲ್ಲ. ನಿಮ್ಮಲ್ಲಿ ಸ್ಮಾರ್ಟ್​ಫೋನ್ ಇದ್ದರೆ ಅದರ ಮೂಲಕ ಮನೆಯ ಟಿವಿಯನ್ನು ನೀವು ನಿಯಂತ್ರಿಸಬಹುದು. ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಟಿವಿ ರಿಮೋಟ್ ಆಗಿ ಬಳಸಬಹುದು. ಗೂಗಲ್ ಟಿವಿ ಅಪ್ಲಿಕೇಶನ್‌ನ ಸಹಾಯದಿಂದ ನಿಮ್ಮ ಆಂಡ್ರಾಯ್ಡ್ ಟಿವಿಯನ್ನು ನೀವು ನಿಯಂತ್ರಿಸಬಹುದು. ಇಷ್ಟು ಮಾತ್ರವಲ್ಲದೆ ನೀವು ಆ್ಯಂಡ್ರಾಯ್ಡ್ ಜೊತೆಗೆ ಆ್ಯಪಲ್ ಐಫೋನ್ ನಲ್ಲೂ ಇದೇ ವಿಧಾನವನ್ನು ಅಳವಡಿಸಿಕೊಳ್ಳಬಹುದು. ಈ ಟ್ರಿಕ್ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಮುಂದೆ ತಿಳಿಯಿರಿ.

ಸ್ಯಾಮ್​ಸಂಗ್​ನಿಂದ ಬರುತ್ತಿದೆ 200 ಮೆಗಾ ಪಿಕ್ಸೆಲ್ ಕ್ಯಾಮೆರಾದ ಹೊಸ ಸ್ಮಾರ್ಟ್​ಫೋನ್: ಯಾವುದು?

ಆಂಡ್ರಾಯ್ಡ್ ಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸುವುದು ಹೇಗೆ?

  • ಗೂಗಲ್ ಪ್ಲೇ ಸ್ಟೋರ್​ನಿಂದ ಗೂಗಲ್ ಟಿವಿ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಿ.
  • ನಿಮ್ಮ ಟಿವಿ ಮತ್ತು ಮೊಬೈಲ್ ಅನ್ನು ಒಂದೇ ವೈ-ಫೈಗೆ ಸಂಪರ್ಕಿಸಿ. ಮನೆಯಲ್ಲಿ ವೈ-ಫೈ ಇಲ್ಲದಿದ್ದರೆ, ನೀವು ಬ್ಲೂಟೂತ್ ಮೂಲಕವೂ ಕನೆಕ್ಟ್ ಮಾಡಬಹುದು.
  • ಮೊದಲು ಅಪ್ಲಿಕೇಶನ್‌ನಲ್ಲಿ ರಿಮೋಟ್ ಬಟನ್ ಕ್ಲಿಕ್ ಮಾಡಿ.
  • ಈಗ ಸ್ಮಾರ್ಟ್​ಫೋನ್​ನಲ್ಲಿರುವ ಆ್ಯಪ್ ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ಟಿವಿ ಕಾಣಿಸಿಕೊಂಡ ತಕ್ಷಣ ಅದನ್ನು ಆಯ್ಕೆಮಾಡಿ.
  • ನಂತರ ನಿಮ್ಮ ಟಿವಿ ಪರದೆಯ ಮೇಲೆ ಒಂದು ಕೋಡ್ ಕಾಣಿಸುತ್ತದೆ. ಅಪ್ಲಿಕೇಶನ್‌ನಲ್ಲಿ ಆ ಕೋಡ್ ಅನ್ನು ನಮೂದಿಸಿ ಮತ್ತು ಕನೆಕ್ಟ್ ಆಯ್ಕೆಯನ್ನು ಟ್ಯಾಪ್ ಮಾಡಿ.
  • ಒಮ್ಮೆ ನಿಮ್ಮ ಫೋನ್ ಕನೆಕ್ಟ್ ಆದರೆ, ನೀವು ಅದನ್ನು ಸಾಮಾನ್ಯ ರಿಮೋಟ್‌ನಂತೆ ಬಳಸಲು ಸಾಧ್ಯವಾಗುತ್ತದೆ.

ಐಫೋನ್ ಅನ್ನು ರಿಮೋಟ್ ಆಗಿ ಪರಿವರ್ತಿಸುವುದು ಹೇಗೆ?

  • ನಿಮ್ಮ ಐಫೋನ್ ಮತ್ತು ಟಿವಿಯನ್ನು ಒಂದೇ ವೈ-ಫೈಗೆ ಸಂಪರ್ಕಪಡಿಸಿ.
  • ಆ್ಯಪ್ ಸ್ಟೋರ್‌ನಿಂದ ಗೂಗಲ್ ಟಿವಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿರಿ.
  • ಗೂಗಲ್ ಟಿವಿ ಅಪ್ಲಿಕೇಶನ್‌ನಲ್ಲಿ ಟಿವಿ ರಿಮೋಟ್ ಐಕಾನ್ ಮೇಲೆ ಟ್ಯಾಪ್ ಮಾಡಿ.
  • ಈಗ ಸ್ಮಾರ್ಟ್​ಫೋನ್​ನಲ್ಲಿರುವ ಆ್ಯಪ್ ಸ್ಕ್ಯಾನ್ ಮಾಡಲು ಪ್ರಾರಂಭಿಸುತ್ತದೆ. ನಿಮ್ಮ ಟಿವಿ ಕಾಣಿಸಿಕೊಂಡ ತಕ್ಷಣ ಅದನ್ನು ಆಯ್ಕೆಮಾಡಿ.
  • ನಿಮ್ಮ ಟಿವಿ ಪರದೆಯ ಮೇಲೆ 6 ಅಂಕಿಗಳ ಕೋಡ್ ಕಾಣಿಸುತ್ತದೆ. ಅಪ್ಲಿಕೇಶನ್‌ನಲ್ಲಿ ಕೋಡ್ ನಮೂದಿಸಿ ಮತ್ತು ಕನೆಕ್ಟ್ ಮಾಡಿ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:49 pm, Mon, 4 September 23

ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
ರಾಜಕಾಲುವೆ ಮುಚ್ಚಿರುವ ಕಾರಣ ಐದಾರು ಮನೆಗಳಿಗೆ ನುಗ್ಗಿದ ಮಳೆ ನೀರು
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ