
ಬೆಂಗಳೂರು (ಆ. 26): ಕಳೆದ ವರ್ಷಾಂತ್ಯದ ವರೆಗೆ ಗ್ರಾಹಕರು ಕಡಿಮೆ ಬ್ಯಾಟರಿಯ ಸ್ಮಾರ್ಟ್ಫೋನ್ನಿಂದ ಚಿಂತಿತರಾಗಿದ್ದರು, ಅದಕ್ಕಾಗಿಯೇ ಈ ವರ್ಷದ ಆರಂಭದಿಂದ ಕಂಪನಿಗಳು ಸ್ಮಾರ್ಟ್‌ಫೋನ್‌ಗಳಲ್ಲಿ ದೊಡ್ಡ ಬ್ಯಾಟರಿಗಳನ್ನು ಒದಗಿಸುವತ್ತ ಗಮನ ಹರಿಸುತ್ತಿವೆ. ಈಗಾಗಲೇ 7000mAh ಬ್ಯಾಟರಿಯ ಅನೇಕ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗಿವೆ. 9000mAh, 10000mAh ಬ್ಯಾಟರಿಯ ಫೋನ್ ಕೂಡ ಇನ್ನೇನು ಕೆಲವೇ ದಿನಗಳಲ್ಲಿ ಅನಾವರಣಗೊಳ್ಳಲಿದೆ. ಹೀಗಿರುವಾಗ ದೊಡ್ಡ ಸುದ್ದಿಯೊಂದು ಹೊರಬಿದ್ದಿದ್ದು, ರಿಯಲ್ ಮಿ (Realme) ಕಂಪನಿ 15000mAh ಬ್ಯಾಟರಿ ಸಾಮರ್ಥ್ಯವಿರುವ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲು ತಯಾರಿ ನಡೆಸುತ್ತಿದೆ. ರಿಯಲ್ ಮಿ ಇತ್ತೀಚೆಗೆ 15000 mAh ಬ್ಯಾಟರಿ ಹೊಂದಿರುವ ಹೊಸ ಸ್ಮಾರ್ಟ್‌ಫೋನ್ ಬಗ್ಗೆ ಟೀಸರ್ ಬಿಡುಗಡೆ ಮಾಡಿದೆ, ಹೊಸ ಟೀಸರ್‌ನಲ್ಲಿ ತೋರಿಸಿರುವ ಫೋನ್‌ನ ಹಿಂಭಾಗದಲ್ಲಿ 15000mAh ಎಂದು ಬರೆಯಲಾಗಿದೆ.
ಇದಲ್ಲದೆ, ಈ ಫೋನ್‌ನ ಬ್ಯಾಟರಿಯ ಬಗ್ಗೆ ಕಂಪನಿಯು ಹೇಳಿಕೊಂಡಂತೆ, ಇದು ಚಾರ್ಜ್ ಮಾಡಿದ ನಂತರ, 50 ಗಂಟೆಗಳ ಕಾಲ ತಡೆರಹಿತ ವೀಡಿಯೊ ಸ್ಟ್ರೀಮಿಂಗ್ ಅನ್ನು ಸುಲಭವಾಗಿ ಚಲಾಯಿಸಬಹುದು. ಸಾಮಾನ್ಯವಾಗಿ ದೊಡ್ಡ ಬ್ಯಾಟರಿಯಿಂದಾಗಿ, ಫೋನ್‌ಗಳು ಹೆಚ್ಚಾಗಿ ಭಾರವಾಗಿ ಮತ್ತು ದಪ್ಪವಾಗಿ ಕಾಣುತ್ತವೆ, ಆದರೆ ಈ ರಿಯಲ್ ಮಿ ಫೋನ್‌ನಲ್ಲಿ ಹಾಗಲ್ಲ.
ಈ ಫೋನ್ ಸಿಲಿಕಾನ್ ಆನೋಡ್ ತಂತ್ರಜ್ಞಾನದೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ, ಈ ತಂತ್ರಜ್ಞಾನವನ್ನು 2025 ರ ಆರಂಭದಲ್ಲಿ ಅನಾವರಣಗೊಳಿಸಲಾಯಿತು. ಕಂಪನಿಯು ಆಗಸ್ಟ್ 27 ರಂದು ಗ್ರಾಹಕರಿಗಾಗಿ ವಿಶೇಷವಾದದ್ದನ್ನು ಹಂಚಿಕೊಳ್ಳಲಿದೆಯಂತೆ. ಈ ಸಂದರ್ಭ ಕಂಪನಿಯು 10000mAh ಬ್ಯಾಟರಿ ಹೊಂದಿರುವ ಫೋನ್ ಅನ್ನು ಅನಾವರಣಗೊಳಿಸಬಹುದು ಎಂದು ನಿರೀಕ್ಷಿಸಲಾಗಿದೆ. ಕಂಪನಿಯು ಇತ್ತೀಚೆಗೆ ಟೀಸರ್ ಅನ್ನು ಬಿಡುಗಡೆ ಮಾಡಿತು, ಇದರಲ್ಲಿ ಬ್ಯಾಟರಿ ಸಾಮರ್ಥ್ಯವನ್ನು 1x000mAh ಎಂದು ಬರೆಯಲಾಗಿದೆ, ಇದು ಈ ಫೋನ್ 10,000mAh ಅಥವಾ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿಯೊಂದಿಗೆ ಬರುತ್ತದೆ ಎಂದು ಸೂಚಿಸುತ್ತದೆ.
Flipkart Black: ಅಮೆಜಾನ್‌ಗೆ ಪೈಪೋಟಿ ನೀಡಲು ಫ್ಲಿಪ್ಕಾರ್ಟ್ನಿಂದ ಹೊಸ ಪ್ರಯೋಗ
320W ಸೂಪರ್‌ಫಾಸ್ಟ್ ಚಾರ್ಜಿಂಗ್ ವೇಗ
ಈ ರಿಯಲ್ ಮಿ ಫೋನ್‌ಗೆ 320W ವೇಗದ ಚಾರ್ಜರ್ ನೀಡಬಹುದು. ಫೋನ್‌ನ ಹಿಂಭಾಗದಲ್ಲಿ ಅರೆ-ಪಾರದರ್ಶಕ ಬ್ಯಾಕ್ ಪ್ಯಾನಲ್ ಅನ್ನು ಕಾಣಬಹುದು. ಫೋನ್‌ನ ದಪ್ಪವು 8.5 ಮಿಮೀ ಆಗಿರಬಹುದು. ಕಂಪನಿಯು ಈ ಫೋನ್‌ನಲ್ಲಿ ಸಿಲಿಕಾನ್ ಕಾರ್ಬನ್ ಬ್ಯಾಟರಿಯನ್ನು ಬಳಸಬಹುದು, ಇದರಿಂದಾಗಿ ಫೋನ್‌ನ ತೂಕ ಕಡಿಮೆಯಾಗುತ್ತದೆ. ರಿಯಲ್ ಮಿ ತನ್ನ 320W ಸೂಪರ್‌ಸಾನಿಕ್ ಚಾರ್ಜಿಂಗ್ ತಂತ್ರಜ್ಞಾನದಲ್ಲಿಯೂ ಕಾರ್ಯನಿರ್ವಹಿಸುತ್ತಿದೆ.
ಈ ಫಾಸ್ಟ್ ಚಾರ್ಜರ್ ಫೋನ್‌ನ ಬ್ಯಾಟರಿಯನ್ನು 2 ನಿಮಿಷಗಳಲ್ಲಿ ಶೇ. 50 ವರೆಗೆ ಚಾರ್ಜ್ ಮಾಡಬಹುದು. ಇದು ಕೇವಲ 4 ನಿಮಿಷ 30 ಸೆಕೆಂಡುಗಳಲ್ಲಿ ಫೋನ್ ಅನ್ನು ಫುಲ್ ಚಾರ್ಜ್ ಮಾಡಬಹುದು ಎಂದು ಹೇಳಲಾಗಿದೆ. ಫೋನ್ ಅನ್ನು ಕೇವಲ 1 ನಿಮಿಷದಲ್ಲಿ ಶೇಕಡಾ 26 ರಷ್ಟು ಚಾರ್ಜ್ ಮಾಡಬಹುದು ಎಂದು ಕಂಪನಿ ಹೇಳಿಕೊಂಡಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ