Redmi 10A: ಕೇವಲ 8,499 ರೂಪಾಯಿಗೆ ಎಂಥಾ ಫೋನ್: ರೆಡ್ಮಿ 10A ಕಂಡು ದಂಗಾದ ಬಜೆಟ್ ಪ್ರಿಯರು

ಇದೀಗ ರೆಡ್ಮಿಯ ಹೊಸ ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಅದುವೇ ಹೊಸ ರೆಡ್ಮಿ 10ಎ (Redmi 10A). ಈ ಫೋನ್ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ LED ಫ್ಲ್ಯಾಷ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ.

Redmi 10A: ಕೇವಲ 8,499 ರೂಪಾಯಿಗೆ ಎಂಥಾ ಫೋನ್: ರೆಡ್ಮಿ 10A ಕಂಡು ದಂಗಾದ ಬಜೆಟ್ ಪ್ರಿಯರು
Redmi 10A
Updated By: Vinay Bhat

Updated on: Apr 21, 2022 | 12:59 PM

ಅತ್ಯಂತ ಕಡಿಮೆ ಬೆಲೆಗೆ ಆಕರ್ಷಕ ಫೀಚರ್​​ಗಳಿರುವ ಸ್ಮಾರ್ಟ್​​ಫೋನ್​ಗಳನ್ನು ಬಿಡುಗಡೆ ಮಾಡುವುದರಲ್ಲಿ ಶವೋಮಿ ಕಂಪನಿ ಎತ್ತಿದ ಕೈ. ಈಗಂತು ಶವೋಮಿ (Xiaomi) ತನ್ನ ಫೋನ್​ಗಳನ್ನು ರೆಡ್ಮಿ ಮತ್ತು ಎಂಐ (Mi) ಎಂಬ ಎರಡು ಭಾಗ ಮಾಡಿದಂತಿದೆ. ಬಜೆಟ್ ಸ್ಮಾರ್ಟ್​​ಫೋನ್​ಗಳಿಗಾಗಿ ರೆಡ್ಮಿ ಮತ್ತು ಹೈ ರೇಂಜ್ ಮಾದರಿಯ ಫೋನ್​ಗೆ ಎಂಐ ಎಂಬಂತಾಗಿದೆ. ಇದಕ್ಕೆ ಸಾಕ್ಷಿ ಎಂಬಂತೆ ಇದೀಗ ರೆಡ್ಮಿಯ ಹೊಸ ಫೋನ್ ಭಾರತದಲ್ಲಿ ಬಿಡುಗಡೆ ಆಗಿದೆ. ಅದುವೇ ಹೊಸ ರೆಡ್ಮಿ 10ಎ (Redmi 10A). ಹೌದು, ಶವೋಮಿ ಕಂಪೆನಿಯ ಹೊಸ ರೆಡ್ಮಿ 10A ಸ್ಮಾರ್ಟ್‌ಫೋನ್‌ ದೇಶದಲ್ಲಿ ಅನಾವರಣಗೊಂಡಿದೆ. ಈ ಸ್ಮಾರ್ಟ್‌ಫೋನ್‌ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾ ಹೊಂದಿದೆ. ಜೊತೆಗೆ 5000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 10W ಚಾರ್ಜಿಂಗ್ ಬೆಂಬಲಿಸಲಿದೆ. ಹಾಗಾದ್ರೆ ಇದರ ಬೆಲೆ ಎಷ್ಟು?, ಏನು ಫೀಚರ್​ಗಳಿವೆ ಎಂಬುದನ್ನು ನೋಡೋಣ.

ಬೆಲೆ ಎಷ್ಟು?:

ಭಾರತದಲ್ಲಿ ರೆಡ್ಮಿ 10A ಸ್ಮಾರ್ಟ್‌ಫೋನ್‌ ಒಟ್ಟು ಎರಡು ಮಾದರಿಯಲ್ಲಿ ಖರೀದಿಗೆ ಸಿಗಲಿದೆ. ಇದರ ಬೇಸ್‌ ಮಾಡೆಲ್‌ 3GB RAM ಮತ್ತು 32GB ಸ್ಟೋರೇಜ್ ರೂಪಾಂತರಕ್ಕೆ 8,499 ರೂ. ನಿಗದಿ ಮಾಡಲಾಗಿದೆ. ಹಾಗೆಯೇ 4GB RAM ಮತ್ತು 64GB ಆವೃತ್ತಿಯ ಆಯ್ಕೆಗೆ 9,499 ರೂ. ಬೆಲೆ ಹೊಂದಿದೆ. ಈ ಸ್ಮಾರ್ಟ್‌ಫೋನ್‌ ಇದೇ ಏಪ್ರಿಲ್ 26 ರಿಂದ ಮಧ್ಯಾಹ್ನ 12 ಗಂಟೆಗೆ ಪ್ರಸಿದ್ಧ ಇ ಕಾಮರ್ಸ್​ ತಾಣವಾದ ಅಮೆಜಾನ್ ಸೇರಿದಂತೆ ಶವೋಮಿ ವೆಬ್‌ಸೈಟ್ ಮತ್ತು ಅಧಿಕೃತ ಮಳಿಗೆಗಳ ಮೂಲಕ ಮಾರಾಟಕ್ಕೆ ಬರಲಿದೆ.

ಏನು ವಿಶೇಷತೆ?:

ರೆಡ್ಮಿ 10A ಸ್ಮಾರ್ಟ್‌ಫೋನ್‌ 720×1600 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.53 ಇಂಚಿನ HD+ LCD ಡಿಸ್‌ಪ್ಲೇ ಹೊಂದಿದೆ. ಈ ಡಿಸ್‌ಪ್ಲೇ 400ನಿಟ್ಸ್‌ ಬ್ರೈಟ್‌ನೆಸ್​ನಿಂದ ಕೂಡಿದೆ. ಆಕ್ಟಾ-ಕೋರ್‌ ಮೀಡಿಯಾಟೆಕ್‌ ಹಿಲಿಯೋ G25SoC ಪ್ರೊಸೆಸರ್‌ ಬಲವನ್ನು ಪಡೆದಿದೆ. ಇದು ಆಂಡ್ರಾಯ್ಡ್‌ 11 ಆಧಾರಿತ MIUI 12.5 ಕಸ್ಟಮ್ ಸ್ಕಿನ್ ಔಟ್-ಆಫ್-ದಿ-ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ.

ಈ ಫೋನ್ 13 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸಿಂಗಲ್‌ ರಿಯರ್‌ ಕ್ಯಾಮೆರಾವನ್ನು ಹೊಂದಿದೆ. ಈ ಕ್ಯಾಮೆರಾ LED ಫ್ಲ್ಯಾಷ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಇದಲ್ಲದೆ 5 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಒಳಗೊಂಡಿದೆ. ಇನ್ನು 10W ಚಾರ್ಜಿಂಗ್ ಬೆಂಬಲಿಸುವ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 4G LTE, Wi-Fi 802.11 b/g/n, ಬ್ಲೂಟೂತ್‌ 5, ಮತ್ತು GPS ಹಾಗೂ ಮೈಕ್ರೋ-ಯುಎಸ್‌ಬಿ ಪೋರ್ಟ್ ಜೊತೆಗೆ 3.5 ಎಂಎಂ ಹೆಡ್‌ಫೋನ್ ಜ್ಯಾಕ್ ಅನ್ನು ಹೊಂದಿದೆ. ಇದಲ್ಲದೆ ರಿಯರ್‌ ಫಿಂಗರ್‌ಪ್ರಿಂಟ್ ಸೆನ್ಸಾರ್‌ ಅನ್ನು ಸಹ ಹೊಂದಿದೆ. ಒಟ್ಟಾರೆ ಬಜೆಟ್ ಪ್ರಿಯರನ್ನು ಗುರಿಯಾಗಿಸಿ ಶವೋಮಿ ಕಂಪನಿ ಆಕರ್ಷಕ ಫೋನ್ ಒಂದನ್ನು ಮಾರುಕಟ್ಟೆಗೆ ಪರಿಚಯಿಸಿದೆ.

OnePlus 10R: ಒನ್​ಪ್ಲಸ್ 10 ಪ್ರೊ ಆಯ್ತು ಈಗ ಒನ್​ಪ್ಲಸ್ 10R ಸರದಿ: ಇದರಲ್ಲಿನ ಫೀಚರ್ಸ್​ ಕೇಳಿದ್ರೆ ಶಾಕ್ ಆಗ್ತೀರ

WhatsApp: ವಾಟ್ಸ್​ಆ್ಯಪ್ ಲಾಸ್ಟ್​ ಸೀನ್​ನಲ್ಲಿ ಊಹಿಸಲಾಗದ ಫೀಚರ್: ಬಳಕೆದಾರರು ಫುಲ್ ಖುಷ್