Redmi k50i 5G: ಭಾರತದಲ್ಲಿ ಇಂದಿನಿಂದ ರೆಡ್ಮಿ K50i ಮಾರಾಟ ಆರಂಭ: ಈ ಫೋನನ್ನು ಖರೀದಿಸಬಹುದೇ?

| Updated By: Vinay Bhat

Updated on: Jul 23, 2022 | 6:45 AM

ರೆಡ್ಮಿ K50i ಮಧ್ಯಮ ಬೆಲೆಯ ಫೋನಾಗಿದ್ದು ಉತ್ತಮ ಬ್ಯಾಟರಿ ಜೊತೆಗೆ ಅತ್ಯಂತ ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಜೊತೆಗೆ ಮೀಡಿಯಾ ಟೆಕ್‌ ಡೈಮೆನ್ಸಿಟಿ ಪ್ರೊಸೆಸರ್ ಬಲಿಷ್ಠವಾಗಿದ್ದು, ಗೇಮಿಂಗ್ ಅನ್ನು ಸುಲಭವಾಗಿ ಆಡಬಹುದು

Redmi k50i 5G: ಭಾರತದಲ್ಲಿ ಇಂದಿನಿಂದ ರೆಡ್ಮಿ K50i ಮಾರಾಟ ಆರಂಭ: ಈ ಫೋನನ್ನು ಖರೀದಿಸಬಹುದೇ?
Redmi k50i 5G
Follow us on

ಚೀನಾ ಮೂಲದ ಪ್ರಸಿದ್ಧ ಕಂಪನಿ ಶವೋಮಿ (Xiaomi) ಬಿಡುಗಡೆ ಮಾಡುವ ಸ್ಮಾರ್ಟ್​​ಫೋನ್​ಗಳಿಗೆ ಭಾರತದಲ್ಲಿ ದೊಡ್ಡ ಮಾರ್ಕೆಟ್ ಇದೆ. ಬಜೆಟ್ ಬೆಲೆಯಿಂದ ಹಿಡಿದು ಮಧ್ಯಮ ಶ್ರೇಣಿಯ ವರೆಗೆ ಶವೋಮಿ ಫೋನ್​ಗಳನ್ನು ಬಿಡುಗಡೆ ಮಾಡಿ ಯಶಸ್ಸು ಕೂಡ ಸಾಧಿಸಿದೆ. ಇದಕ್ಕಾಗಿಯೆ ಇದು ಭಾರತದ ನಂಬರ್ ಒನ್ ಸ್ಮಾರ್ಟ್​​ಫೋನ್ (Smartphone) ಬ್ರ್ಯಾಂಡ್ ಆಗು ಗುರುತಿಸಿಕೊಂಡಿದೆ. ಎರಡು ದಿನಗಳ ಹಿಂದೆಯಷ್ಟೆ ಶವೋಮಿ ತನ್ನ ರೆಡ್ಮಿ ಅಡಿಯಲ್ಲಿ ಹೊಸ ರೆಡ್ಮಿ ಕೆ50 (Redmi K50i) ಫೋನನ್ನು ಭಾರತದಲ್ಲಿ ರಿಲೀಸ್ ಮಾಡಿತ್ತು. ಈ ಫೋನ್ ಡೈಮೆನ್ಸಿಟಿ 8100 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದಿದ್ದು, 5080 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್‌ ಅನ್ನು ನೀಡಲಾಗಿದೆ. ಇದೀಗ ಇಂದಿನಿಂದ ಈ ಫೋನ್ ಸೇಲ್ ಕಾಣಲಿದೆ.

ರೆಡ್ಮಿ K50i 5G ಸ್ಮಾರ್ಟ್‌ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿತ್ತು. ಈ ಪೈಕಿ ಇದರ 6GB + 128GB ರೂಪಾಂತರಕ್ಕೆ 25,999 ರೂ. ಮತ್ತು 8GB + 256GB ಸ್ಟೋರೇಜ್‌ ಫೋನ್ ಬೆಲೆ 28,999 ರೂ. ಆಗಿದೆ. ಈ ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್​ನಲ್ಲಿ ಇಂದಿನಿಂದ ಮಾರಾಟ ಕಾಣಲಿದೆ. ಅಲ್ಲದೆ ಇಂದು ಪ್ರೈಮ್ ಡೇ ಸೇಳ್ ಶುರುವಾಗಿದ್ದು ಭರ್ಜರಿ ಡಿಸ್ಕೌಂಟ್​ನಲ್ಲಿ ಕೂಡ ಖರೀದಿಸವಹುದು. ICICI ಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ 3,000 ರೂ. ವರೆಗೆ ತ್ವರಿತ ರಿಯಾಯಿತಿ ಪಡೆಯಬಹುದು. ಅಮೆಜಾನ್‌ ನಲ್ಲಿ ಅಮೆಜಾನ್‌ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ 5% ಅನಿಯಮಿತ ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿದೆ.

ರೆಡ್ಮಿ K50i ಸ್ಮಾರ್ಟ್‌ಫೋನ್ 6.6 ಇಂಚಿನ ಐಪಿಎಸ್‌ ಎಲ್‌ಸಿಡಿ ಮಾದರಿಯ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇದು 144Hz ರಿಫ್ರೇಶ್‌ ರೇಟ್‌ ಅನ್ನು ಒಳಗೊಂಡಿದ್ದು, ಡಾಲ್ಬಿ ವಿಷನ್ ಮತ್ತು HDR10 ಸಪೋರ್ಟ್‌ ಸಹ ಪಡೆದಿದೆ. ಮೀಡಿಯಾ ಟೆಕ್‌ ಡೈಮೆನ್ಸಿಟಿ 8100 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಬೆಂಬಲ ಪಡೆದಿದೆ.

ಇದನ್ನೂ ಓದಿ
WhatsApp: ವಾಟ್ಸ್​ಆ್ಯಪ್ ಮೂಲಕ ನಿಮ್ಮ ಬ್ಯಾಂಕ್ ಖಾತೆಯಲ್ಲಿ ಎಷ್ಟು ಹಣವಿದೆ ಎಂದು ತಿಳಿಯಿರಿ: ಹೇಗೆ ಗೊತ್ತೇ?
Google: ಪ್ಲೇ ಸ್ಟೋರ್​ನಲ್ಲಿ ಅಪ್ಲಿಕೇಶನ್ ಅನುಮತಿ ಲಿಸ್ಟ್​ ಮರುಸ್ಥಾಪಿಸಲು ಮುಂದಾದ ಗೂಗಲ್
ಪ್ಲೇ ಸ್ಟೋರ್​ನಿಂದ 50 ಅಪಾಯಕಾರಿ ಆ್ಯಪ್​ಗಳನ್ನು ಕಿತ್ತೆಸೆದ ಗೂಗಲ್: ಇನ್​ಸ್ಟಾಲ್ ಮಾಡಿದ್ರೆ ತಕ್ಷಣ ಡಿಲೀಟ್ ಮಾಡಿ
Google Pixel 6a: ಸದ್ದಿಲ್ಲದೆ ಭಾರತದಲ್ಲಿ ಗೂಗಲ್‌ ಪಿಕ್ಸೆಲ್‌ 6a ಬಿಡುಗಡೆ: ಖರೀದಿಗೆ ಯಾವಾಗ ಲಭ್ಯ?, ಬೆಲೆ ಎಷ್ಟು?

ರೆಡ್ಮಿ K50i ಸ್ಮಾರ್ಟ್‌ಫೋನ್ 5,080mAh ಬ್ಯಾಟರಿ ಬ್ಯಾಕ್‌ಅಪ್‌ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 67W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಪಡೆದಿದೆ. ಇದು ಲಿಕ್ವಿಡ್‌ಕೂಲ್ 2.0 ಸೌಲಭ್ಯ ಹೊಂದಿರುವುದು ವಿಶೇಷ. ಟ್ರಿಪಲ್‌ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸಲ್‌ ಸೆನ್ಸಾರ್‌ ಹೊಂದಿದೆ. ಇದರಲ್ಲಿರುವ ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 16 ಮೆಗಾ ಪಿಕ್ಸಲ್‌ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಕೂಡ ನೀಡಲಾಗಿದೆ.

ಖರೀದಿಸಬಹುದೇ?:

ಇದೊಂದು ಮಧ್ಯಮ ಬೆಲೆಯ ಫೋನಾಗಿದ್ದು ಉತ್ತಮ ಬ್ಯಾಟರಿ ಜೊತೆಗೆ ಅತ್ಯಂತ ವೇಗದ ಚಾರ್ಜಿಂಗ್ ಸೌಲಭ್ಯ ನೀಡಲಾಗಿದೆ. ಜೊತೆಗೆ ಮೀಡಿಯಾ ಟೆಕ್‌ ಡೈಮೆನ್ಸಿಟಿ ಪ್ರೊಸೆಸರ್ ಬಲಿಷ್ಠವಾಗಿದ್ದು, ಗೇಮಿಂಗ್ ಅನ್ನು ಸುಲಭವಾಗಿ ಆಡಬಹುದು. ಕ್ಯಾಮೆರಾ ಕೂಡ ಉತ್ತಮವಾಗಿದೆ. 144Hz ರಿಫ್ರೇಶ್‌ ರೇಟ್‌ ನಿಮಗೆ ಒಳ್ಳೆಯ ಡುಸ್​ಪ್ಲೇ ಅನುಭವ ನೀಡುತ್ತದೆ. ಒಟ್ಟಾರೆ ನೀವು ಮಧ್ಯಮ ಬೆಲೆಗೆ ಒಂದೊಳ್ಳೆ ಸ್ಮಾರ್ಟ್​​ಫೋನ್ ಖರೀದಿಸುವ ಪ್ಲಾನ್​ನಲ್ಲಿದ್ದರೆ ರೆಡ್ಮಿ K50i ಒಂದೊಳ್ಳೆ ಆಯ್ಕೆಯಾಗಿದೆ.