Kannada News Technology Redmi K50i 5G was launched in India with 64MP Triple Camera and 67W Turbo Charge
Redmi K50i 5G: 67W ಫಾಸ್ಟ್ ಚಾರ್ಜಿಂಗ್, ಕಡಿಮೆ ಬೆಲೆ: ಭಾರತದಲ್ಲಿ ಬಹುನಿರೀಕ್ಷಿತ ರೆಡ್ಮಿ K50i ಸ್ಮಾರ್ಟ್‌ಫೋನ್ ಬಿಡುಗಡೆ
Redmi K50i 5G Price: ರೆಡ್ಮಿ K50i ಸ್ಮಾರ್ಟ್‌ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 6GB + 128GB ರೂಪಾಂತರಕ್ಕೆ 25,999 ರೂ. ನಿಗದಿ ಮಾಡಲಾಗಿದೆ.
Redmi K50i 5G
Follow us on
ಚೀನಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಶವೋಮಿ (Xiaomi) ಸಂಸ್ಥೆ ವಿನೂತನ ಪ್ರಯೋಗ ಮಾಡುವುದರಲ್ಲಿ ಎತ್ತಿದ ಕೈ. ಮಾರುಕಟ್ಟೆಗೆ ಸದಾ ಏನಾದರು ಹೊಸ ತನವನ್ನು ಪರಿಚಯಿಸುವ ಶವೋಮಿ ಇದೀಗ ವಿಶೇಷವಾಗಿರುವ ಸ್ಮಾರ್ಟ್‌ಫೋನ್ ಒಂದನ್ನು ಅನಾವರಣ ಮಾಡಿದೆ. ಇದೇ ವರ್ಷ ಕಳೆದ ಮಾರ್ಚ್ನಲ್ಲಿ ರೆಡ್ಮಿ K50 (Redmi K50) ಸ್ಮಾರ್ಟ್‌ಫೋನ್ ಸರಣಿಯನ್ನು ಲಾಂಚ್ ಮಾಡಿದ್ದ ಶವೋಮಿ, ಇದು ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಇದೀಗ ಇದರ ಮುಂದಿನ ಆವೃತ್ತಿಯಾದ ರೆಡ್ಮಿ ಕೆ50ಐ (Redmi K50i) ಫೋನನ್ನು ಭಾರತದಲ್ಲಿ ರಿಲೀಸ್ ಮಾಡಿದೆ. ಈ ಫೋನ್ ಡೈಮೆನ್ಸಿಟಿ 8100 SoC ಪ್ರೊಸೆಸರ್ ಸಾಮರ್ಥ್ಯವನ್ನು ಪಡೆದಿದ್ದು, 5080 mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ಅಪ್ ಅನ್ನು ನೀಡಲಾಗಿದೆ. ಹಾಗಾದ್ರೆ ಈ ಫೋನಿನ ಬೆಲೆ ಎಷ್ಟು?, ವಿಶೇಷತೆ ಏನು ಎಂಬುದನ್ನು ನೋಡೊಣ.
ರೆಡ್ಮಿ K50i 5G ಸ್ಮಾರ್ಟ್‌ಫೋನ್ ದೇಶದಲ್ಲಿ ಎರಡು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 6GB + 128GB ರೂಪಾಂತರಕ್ಕೆ 25,999 ರೂ. ನಿಗದಿ ಮಾಡಲಾಗಿದೆ. ಹಾಗೆಯೇ 8GB + 256GB ಸ್ಟೋರೇಜ್ ಫೋನ್ ಬೆಲೆ 28,999 ರೂ. ಆಗಿದೆ.
ಈ ಫೋನ್ ಕ್ವಿಕ್ ಸಿಲ್ವರ್, ಸ್ಟೆಲ್ತ್ ಬ್ಲ್ಯಾಕ್ ಮತ್ತು ಫ್ಯಾಂಟಮ್ ಬ್ಲೂ ಎಂಬ ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ. ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ನಲ್ಲಿ ಈ ಫೋನ್ ಜುಲೈ 23 ರಿಂದ ಮಾರಾಟ ಕಾಣಲಿದೆ.
ಆಫರ್ ಕೂಡ ನೀಡಲಾಗಿದ್ದು ICICIಬ್ಯಾಂಕ್ ಕ್ರೆಡಿಟ್ ಕಾರ್ಡ್‌ನೊಂದಿಗೆ 3,000 ರೂ. ವರೆಗೆ ತ್ವರಿತ ರಿಯಾಯಿತಿ ಪಡೆಯಬಹುದು. ಜೊತೆಗೆ ಅಮೆಜಾನ್ ನಲ್ಲಿ ಅಮೆಜಾನ್ ಪೇ ಐಸಿಐಸಿಐ ಕ್ರೆಡಿಟ್ ಕಾರ್ಡ್‌ನೊಂದಿಗೆ 5% ಅನಿಯಮಿತ ಕ್ಯಾಶ್ ಬ್ಯಾಕ್ ಆಫರ್ ನೀಡಲಾಗಿದೆ.
ರೆಡ್ಮಿ K50i ಸ್ಮಾರ್ಟ್‌ಫೋನ್ 6.6 ಇಂಚಿನ ಐಪಿಎಸ್ ಎಲ್‌ಸಿಡಿ ಮಾದರಿಯ ಪೂರ್ಣ ಹೆಚ್‌ಡಿ ಪ್ಲಸ್ ಡಿಸ್‌ಪ್ಲೇ ಹೊಂದಿದೆ. ಇದು 144Hz ರಿಫ್ರೇಶ್ ರೇಟ್ ಅನ್ನು ಒಳಗೊಂಡಿದ್ದು, ಡಾಲ್ಬಿ ವಿಷನ್ ಮತ್ತು HDR10 ಸಪೋರ್ಟ್ ಸಹ ಪಡೆದಿದೆ.
ಇದನ್ನೂ ಓದಿ
ಮೀಡಿಯಾ ಟೆಕ್ ಡೈಮೆನ್ಸಿಟಿ 8100 SoC ಪ್ರೊಸೆಸರ್ ಸಾಮರ್ಥ್ಯವನ್ನು ಒಳಗೊಂಡಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್ 12 ಓಎಸ್ ಬೆಂಬಲ ಪಡೆದಿದೆ.
ಟ್ರಿಪಲ್ ಕ್ಯಾಮೆರಾ ರಚನೆಯನ್ನು ಹೊಂದಿದ್ದು, ಇದರ ಪ್ರಾಥಮಿಕ ಕ್ಯಾಮೆರಾವು 64 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಹಾಗೆಯೇ ದ್ವಿತೀಯ ಕ್ಯಾಮೆರಾವು 8 ಮೆಗಾ ಪಿಕ್ಸಲ್ ಸೆನ್ಸಾರ್ ಹೊಂದಿದೆ.
ಇದರಲ್ಲಿರುವ ತೃತೀಯ ಕ್ಯಾಮೆರಾವು 2 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಇದರೊಂದಿಗೆ 16 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫೀ ಕ್ಯಾಮೆರಾ ಕೂಡ ನೀಡಲಾಗಿದೆ.
ರೆಡ್ಮಿ K50i ಸ್ಮಾರ್ಟ್‌ಫೋನ್ 5,080mAh ಬ್ಯಾಟರಿ ಬ್ಯಾಕ್‌ಅಪ್ ಒಳಗೊಂಡಿದ್ದು, ಇದಕ್ಕೆ ಪೂರಕವಾಗಿ 67W ವೇಗದ ಚಾರ್ಜಿಂಗ್‌ಗೆ ಬೆಂಬಲವನ್ನು ಪಡೆದಿದೆ. ಇದು ಲಿಕ್ವಿಡ್‌ಕೂಲ್ 2.0 ಸೌಲಭ್ಯ ಹೊಂದಿರುವುದು ವಿಶೇಷ.