Apple Watch: ಮಹಿಳೆಯ ಪ್ರಾಣ ಉಳಿಸಿದ ಆ್ಯಪಲ್ ಸ್ಮಾರ್ಟ್ವಾಚ್: ಹೇಗೆ ಗೊತ್ತೇ?
ಆ್ಯಪಲ್ ಸ್ಮಾರ್ಟ್ ವಾಚ್ ನಿಂದ ಮಹಿಳೆಯೊಬ್ಬರ ಪ್ರಾಣ ಉಳಿದಿದೆ. 9To5Mac ಮಾಡಿರುವ ವರದಿಯ ಪ್ರಕಾರ, ಯುಎಸ್ ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರು ರಾತ್ರಿ ಮಲಗಿದ್ದಾಗ ಎರಡು ದಿನ ನಿಮ್ಮ ಹೃದಯದಲ್ಲಿ ಬದಲಾವಣೆ ಆಗುತ್ತಿದೆ ಎಂದು ಆ್ಯಪಲ್ ವಾಚ್ (Apple Watch) ಎಚ್ಚರಿಕೆಯನ್ನು ನೀಡಿದೆ.
ಆ್ಯಪಲ್ (Apple) ಕಂಪನಿಯ ಸಾಧನಗಳು ಮನುಷ್ಯನ ಪ್ರಾಣ ಉಳಿಸಿದಂತಹ ಮತ್ತೊಂದು ವಿಚಾರ ಬೆಳಕಿಗೆ ಬಂದಿದೆ. ಇತ್ತೀಚೆಗಷ್ಟೆ ಆ್ಯಪಲ್ ಐಫೋನ್ 11 ಪ್ರೊ ಉಕ್ರೇನ್ ಸೈನಿಕನಿಗೆ ಬುಲೆಟ್ ತಗುಲುವುದನ್ನು ತಡೆದಿತ್ತು. ಇದಕ್ಕೂ ಮುನ್ನ ಆ್ಯಪಲ್ ವಾಚ್ನಲ್ಲಿರುವ ECG ಫೀಚರ್ ವ್ಯಕ್ತಿಯೊಬ್ಬರ ಜೀವ ಉಳಿ ಘಟನೆ ಹರಿಯಾಣದಲ್ಲಿ ವರದಿಯಾಗಿತ್ತು. ಇದೀಗ ಆ್ಯಪಲ್ ಸ್ಮಾರ್ಟ್ ವಾಚ್ ನಿಂದ ಮಹಿಳೆಯೊಬ್ಬರ ಪ್ರಾಣ ಉಳಿದಿದೆ. 9To5Mac ಮಾಡಿರುವ ವರದಿಯ ಪ್ರಕಾರ, ಯುಎಸ್ ನಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬರು ರಾತ್ರಿ ಮಲಗಿದ್ದಾಗ ಎರಡು ದಿನ ನಿಮ್ಮ ಹೃದಯದಲ್ಲಿ ಬದಲಾವಣೆ ಆಗುತ್ತಿದೆ ಎಂದು ಆ್ಯಪಲ್ ವಾಚ್ (Apple Watch) ಎಚ್ಚರಿಕೆಯನ್ನು ನೀಡಿದೆ. ಮೊದಲೆರಡು ಬಾರಿ ಇದನ್ನು ಕಡೆಗಣಿಸಿದ್ದ ಮಹಿಳೆ ಮೂರನೇ ಬಾರಿ ಕೂಡ ಎಚ್ಚರಿಕೆ ನೀಡಿದಾಗ ವೈದ್ಯರನ್ನು ಸಂಪರ್ಕಿಸಿದ್ದಾರೆ.
ವೈದ್ಯರು ಪರೀಕ್ಷೆ ನಡೆಸಿದ ಸಂದರ್ಭ ಮಹಿಳೆಗೆ ಗಡ್ಡೆಯಾಗಿದೆ ಎಂಬ ವಿಚಾರ ಬೆಳಕಿಗೆ ಬಂದಿದೆ. “ಕೆಲವು ಸಣ್ಣ ಮತ್ತು ಭಯಾನಕ ಕಾರಣಕ್ಕಾಗಿ ಮಹಿಳೆಯ ಹೃದಯವು ನಿರಂತರವಾಗಿ ಬಡಿಯುತ್ತದೆ. ಅವರಿಗೆ ಮೈಕ್ಸೋಮಾ ಎಂಬ ಅಪರೂಪದ ಕಾಯಿಲೆ ಇದೆ. ಇದು ಗಡ್ಡೆಯಾಗಿದ್ದು ಅವರ ಹೃದಯಕ್ಕೆ ರಕ್ತ ಪೂರೈಸುವಲ್ಲಿ ಉಸಿರುಗಟ್ಟಿಸುತ್ತಿತ್ತು, ಅಂತಿಮವಾಗಿ ಪಾರ್ಶ್ವವಾಯುವಿಗೆ ಕಾರಣವಾಗಬಹುದಿತ್ತು,” ಎಂದು ವೈದ್ಯರು ಹೇಳಿದ್ದಾರೆ.
ಆ್ಯಪಲ್ ವಾಚ್ ಕೊಟ್ಟ ಎಚ್ಚರಿಕೆಯಿಂದ ಈ ವಿಚಾರ ತಿಳಿದುಬಂದಿದ್ದು ಮಹಿಳೆಯ ಪ್ರಾಣ ಉಳಿಸಿದೆ. ವೈದ್ಯರು ಐದು ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ ಗಡ್ಡೆಯನ್ನು ತೆಗೆದಿದ್ದು, ಮಹಿಳೆ ಈಗ ಸುರಕ್ಷಿತರಾಗಿದ್ದಾರೆ.
ಕೆಲ ತಿಂಗಳುಗಳ ಹಿಂದೆ ಕೂಡ ಆ್ಯಪಲ್ ವಾಚ್ನಲ್ಲಿರುವ ECG ಫೀಚರ್ ವ್ಯಕ್ತಿಯೊಬ್ಬರ ಜೀವ ಉಳಿಸಲು ಸಹಾಯಕವಾಗಿತ್ತು. ಈ ಘಟನೆ ಹರಿಯಾಣದಲ್ಲಿ ನಡೆದಿದ್ದು, 34 ವರ್ಷದ ನಿತೇಶ್ ಚೋಪ್ರಾ ತಮ್ಮ ವೈಯಕ್ತಿಕ ಅನುಭವವನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಂಡಿದ್ದರು. ಮಾರ್ಚ್ 12 ರಂದು, ಚೋಪ್ರಾ ಅವರು ತಮ್ಮ ಎದೆಯಲ್ಲಿ ಅಸ್ವಸ್ಥತೆಯನ್ನು ಅನುಭವಿಸಿದರು. ಹೀಗಾಗಿ ತಕ್ಷಣವೆ ಆ್ಯಪಲ್ ವಾಚ್ ಮೂಲಕ ತಮ್ಮ ಇಸಿಜಿಯನ್ನು ಪರಿಶೀಲಿಸಿದ್ದಾರೆ. ಈ ವೇಳೆ ಆ್ಯಪಲ್ ವಾಚ್ ಅನಿಯಮಿತ ಹೃದಯದ ಲಯ (Afib) ಎಚ್ಚರಿಕೆಯನ್ನು ತೋರಿಸಿದೆ.
ಈ ಸಂದರ್ಭ ಹೆಚ್ಚು ಹೊತ್ತು ಮಾಡದೆ ನಿತೇಶ್ ಮತ್ತು ಅವರ ಹೆಂಡತಿ ನೇಹಾ ತಕ್ಷಣ ಹತ್ತಿರದ ಆಸ್ಪತ್ರೆಗೆ ತೆರಳಿ, ಅಲ್ಲಿ ಅವರು ತಮ್ಮ ಆ್ಯಪಲ್ ವಾಚ್‌ನಿಂದ ಪಡೆದ ಇಸಿಜಿ ವರದಿಯನ್ನು ವೈದ್ಯರಿಗೆ ತೋರಿಸಿದ್ದಾರೆ. ಇದನ್ನು ಗಮನಿಸಿದ ವೈದ್ಯರು ಇಸಿಜಿ ಮಾಡಿಸಿದ್ದಾರೆ. ವೈದ್ಯರು ನಡೆಸಿದ ಇಸಿಜಿ ಪರೀಕ್ಷೆಗಳು ಆ್ಯಪಲ್ ವಾಚ್ ನೀಡಿದ್ದ ಫಲಿತಾಂಶಗಳನ್ನು ದೃಢಪಡಿಸಿವೆ. ಅದೇ ಸಂಜೆ ವೈದ್ಯರು ಕಾರ್ಯಪ್ರವೃತ್ತರಾಗಿ ತುರ್ತು ಆಂಜಿಯೋಗ್ರಫಿಯನ್ನು ಮಾಡಿದ್ದಾರೆ. ಚಿಕಿತ್ಸೆ ವೇಳೆ ಚೋಪ್ರಾ ಅವರ ಮುಖ್ಯ ಪರಿಧಮನಿ ಸಂಪೂರ್ಣವಾಗಿ ಬ್ಲಾಕ್ ಆಗಿತ್ತು ಎಂದು ತಿಳಿದುಬಂದಿದ್ದು, ಇದು ಸಂಭಾವ್ಯ ಹೃದಯ ಸ್ತಂಭನಕ್ಕೆ ಕಾರಣವಾಗಬಹುದಿತ್ತು ಎಂದು ವೈದ್ಯರು ಹೇಳಿದ್ದರು.