Redmi K70: ಕೊನೆಗೂ ಮಾರುಕಟ್ಟೆಗೆ ಬಂತು ರೆಡ್ಮಿ K70 ಸರಣಿ: ಧೂಳೆಬ್ಬಿಸುವುದು ಖಚಿತ, ಬೆಲೆ ಎಷ್ಟು ನೋಡಿ

|

Updated on: Nov 30, 2023 | 2:18 PM

Redmi K70, Redmi K70E, and Redmi K70 Pro launched: ಶವೋಮಿ ಕಂಪನಿಯ ಸಬ್​ಬ್ರ್ಯಾಂಡ್ ರೆಡ್ಮಿ ತನ್ನ ರೆಡ್ಮಿ K70 ಸರಣಿ ಅಡಿಯಲ್ಲಿ ರೆಡ್ಮಿ K70, ರೆಡ್ಮಿ K70E ಮತ್ತು ರೆಡ್ಮಿ K70 ಪ್ರೊ ಎಂಬ ಮೂರು ಸ್ಮಾರ್ಟ್​ಫೋನ್​ಗಳನ್ನು ಚೀನಾದಲ್ಲಿ ಬಿಡುಗಡೆ ಮಾಡಿದೆ. ಹೊಸ ಶ್ರೇಣಿಯನ್ನು ಚೀನಾದ ಹೊರಗಿನ ಮಾರುಕಟ್ಟೆಗಳಲ್ಲಿ ಪೋಕೋ X6 ಸರಣಿ ಮೂಲಕ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

Redmi K70: ಕೊನೆಗೂ ಮಾರುಕಟ್ಟೆಗೆ ಬಂತು ರೆಡ್ಮಿ K70 ಸರಣಿ: ಧೂಳೆಬ್ಬಿಸುವುದು ಖಚಿತ, ಬೆಲೆ ಎಷ್ಟು ನೋಡಿ
Redmi K70 series
Follow us on

ಕಳೆದ ಕೆಲವು ವಾರಗಳಿಂದ ಭಾರೀ ಸುದ್ದಿಯಲ್ಲಿದ್ದ ಶವೋಮಿ ಕಂಪನಿಯ ಸಬ್​ಬ್ರ್ಯಾಂಡ್ ರೆಡ್ಮಿಯ ಹೊಸ ರೆಡ್ಮಿ K70 ಸರಣಿಯ (Redmi K70 Series) ಸ್ಮಾರ್ಟ್​ಫೋನ್ ಕೊನೆಗೂ ಮಾರುಕಟ್ಟೆಗೆ ಅಪ್ಪಳಿಸಿದೆ. ರೆಡ್ಮಿ K70 ಸರಣಿ ಅಡಿಯಲ್ಲಿ ರೆಡ್ಮಿ K70, ರೆಡ್ಮಿ K70E ಮತ್ತು ರೆಡ್ಮಿ K70 ಪ್ರೊ ಎಂಬ ಮೂರು ಫೋನುಗಳಿವೆ. ಸದ್ಯಕ್ಕೆ ಚೀನಾದಲ್ಲಿ ಅನಾವರಣಗೊಂಡಿರುವ ಈ ಫೋನಿನಲ್ಲಿ ಆಕರ್ಷಕ ಡಿಸ್ ಪ್ಲೇ, ಟ್ರಿಪಲ್ ಹಿಂಬದಿಯ ಕ್ಯಾಮೆರಾ, ಬಲಿಷ್ಠ ಬ್ಯಾಟರಿ ಎಲ್ಲವೂ ಇದೆ. ಮೂರು ಫೋನ್‌ಗಳು ಆಂಡ್ರಾಯ್ಡ್ 14 ಆಧಾರಿತ ಹೈಪರ್‌ಓಎಸ್‌ನೊಂದಿಗೆ ಕೆಲಸ ಮಾಡುತ್ತದೆ. ಟಾಪ್-ಎಂಡ್ ಮಾಡೆಲ್, ರೆಡ್ಮಿ K70 ಪ್ರೊ ಸ್ನಾಪ್​ಡ್ರಾಗನ್ 8 Gen 3 SoC ನಿಂದ ಚಾಲಿತವಾಗಿದೆ. ಈ ಮೂರೂ ಫೋನುಗಳ ಬೆಲೆ, ಫೀಚರ್ಸ್ ಕುರಿತ ಮಾಹಿತಿ ಇಲ್ಲಿದೆ.

ಚೀನಾದಲ್ಲಿ ರೆಡ್ಮಿ K70 ಸರಣಿಯ ಬೆಲೆ

ರೆಡ್ಮಿ K70 12GB RAM + 256GB ಸ್ಟೋರೇಜ್ ಮಾದರಿಗೆ CNY 2,499 (ಸುಮಾರು ರೂ. 29,000) ನಿಂದ ಪ್ರಾರಂಭವಾಗುತ್ತದೆ. 16GB RAM + 256GB ಸ್ಟೋರೇಜ್ ಆವೃತ್ತಿಗೆ CNY 2,699 (ಸುಮಾರು ರೂ. 31,000) ಮತ್ತು 16GB RAM + 512GB ಸ್ಟೋರೇಜ್ ಮಾದರಿಗೆ CNY 2,999 (ಸರಿಸುಮಾರು ರೂ. 35,000) ವೆಚ್ಚವಾಗುತ್ತದೆ. 16GB RAM + 1TB ಸಂಗ್ರಹಣೆಯೊಂದಿಗೆ ಟಾಪ್-ಎಂಡ್ ರೂಪಾಂತರವು CNY 3,399 (ಸುಮಾರು ರೂ. 40,000) ನಿಗದಿ ಮಾಡಲಾಗಿದೆ.

ರೆಡ್ಮಿ K70 ಪ್ರೊನ ಬೆಲೆಗಳು 12GB RAM + 256GB ಮಾಡೆಲ್‌ಗೆ CNY 3,299 (ಸುಮಾರು ರೂ. 38,600), 16GB RAM + 256GB ಸ್ಟೋರೇಜ್ ರೂಪಾಂತರಕ್ಕೆ CNY 3,599 (ಸರಿಸುಮಾರು ರೂ. 42,000), 16GB RAM + 512GB ಸ್ಟೋರೇಜ್ ರೂಪಾಂತರಕ್ಕೆ CNY 4,399 (ಸರಿಸುಮಾರು ರೂ. 51,000), ಮತ್ತು ಟಾಪ್-ಎಂಡ್ 24GB RAM + 1 TB ಸ್ಟೋರೇಜ್ ರೂಪಾಂತರಕ್ಕಾಗಿ CNY 4,399 (ಸುಮಾರು ರೂ. 51,000).

ಇದನ್ನೂ ಓದಿ
ಚಳಿಗಾಲದಲ್ಲಿ ಬಿಸಿ ಬಿಸಿ ನೀರಿನ ಸ್ಥಾನಕ್ಕೆ ಈ ಗೀಸರ್​ಗಳು ಬೆಸ್ಟ್
ಸ್ಮಾರ್ಟ್​ಫೋನ್​ನಲ್ಲಿ ನೀವು ತೆಗೆಯುವ ಫೋಟೋ ಚೆನ್ನಾಗಿ ಬರ್ತಿಲ್ವಾ?
ಬಜೆಟ್ ಪ್ರಿಯರನ್ನು ದಂಗಾಗಿಸಿದ ಹೊಸ ಟೆಕ್ನೋ ಸ್ಪಾರ್ಕ್ 20C ಸ್ಮಾರ್ಟ್​ಫೋನ್
ತಕ್ಷಣವೇ ಹೀಗೆ ಮಾಡಿ: ಇಲ್ಲವಾದರೆ ನಿಮ್ಮ ಗೂಗಲ್ ಖಾತೆ ಡಿಲೀಟ್ ಆಗುತ್ತೆ

5G Smartphones: ಕಡಿಮೆ ಬೆಲೆಯಲ್ಲಿ ಸೂಪರ್ 5G ಸ್ಮಾರ್ಟ್​ಫೋನ್ ಬೇಕೇ?: ಇಲ್ಲಿದೆ ನೋಡಿ ಟಾಪ್ 5 ಫೋನ್

ಮತ್ತೊಂದೆಡೆ, ರೆಡ್ಮಿ K70E 12GB RAM + 256GB ಮಾದರಿಗೆ CNY 1,999 (ಸುಮಾರು ರೂ. 23,000) ಮತ್ತು 12GB RAM + 512GB ಮಾದರಿಗೆ CNY 2,199 (ಸರಿಸುಮಾರು ರೂ. 25,000) ಆಗಿದೆ . 16GBRAM + 1TB ಸಂಗ್ರಹಣೆಯೊಂದಿಗೆ ಟಾಪ್-ಎಂಡ್ ಮಾಡೆಲ್ CNY 2,599 (ಸುಮಾರು ರೂ. 30,000) ವೆಚ್ಚವಾಗುತ್ತದೆ.

ಭಾರತ ಸೇರಿದಂತೆ ಜಾಗತಿಕ ಮಾರುಕಟ್ಟೆಗಳಲ್ಲಿ ರೆಡ್ಮಿ K70 ಸರಣಿಯ ಬಿಡುಗಡೆಗೆ ಸಂಬಂಧಿಸಿದ ವಿವರಗಳನ್ನು ಶವೋಮಿ ಇನ್ನೂ ಪ್ರಕಟಿಸಿಲ್ಲ. ಹೊಸ ಶ್ರೇಣಿಯನ್ನು ಚೀನಾದ ಹೊರಗಿನ ಮಾರುಕಟ್ಟೆಗಳಲ್ಲಿ ಪೋಕೋ X6 ಸರಣಿ ಮೂಲಕ ಬಿಡುಗಡೆ ಮಾಡಲಾಗುತ್ತದೆ ಎಂದು ಹೇಳಲಾಗಿದೆ.

ರೆಡ್ಮಿ K70e ಫೀಚರ್ಸ್:

  • ಡಿಸ್ ಪ್ಲೇ: ರೆಡ್ಮಿ K70e 6.67-ಇಂಚಿನ 1.5K OLED 12-ಬಿಟ್ ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ.
  • ಪ್ರೊಸೆಸರ್ : ಈ ಹ್ಯಾಂಡ್ಸೆಟ್ ಹೊಸ ಮೀಡಿಯಾ ಟೆಕ್ ಡೈಮೆನ್ಸಿಟಿ 8300 ಅಲ್ಟ್ರಾ ಚಿಪ್ಸೆಟ್​ನಿಂದ ಚಾಲಿತವಾಗಿದೆ.
  • RAM/ಸಂಗ್ರಹಣೆ : ಚಿಪ್‌ಸೆಟ್ ಅನ್ನು 16GB LPDDR5X RAM ಮತ್ತು 1TB UFS 4.0 ಸಂಗ್ರಹಣೆಯೊಂದಿಗೆ ಜೋಡಿಸಲಾಗುತ್ತದೆ.
  • ಓಎಸ್ : ಹ್ಯಾಂಡ್‌ಸೆಟ್ ಆಂಡ್ರಾಯ್ಡ್ 14-ಆಧಾರಿತ ಹೈಪರ್‌ಓಎಸ್ ಕಸ್ಟಮ್ ಸ್ಕಿನ್‌ನಿಂದ ರನ್ ಆಗುತ್ತದೆ.
  • ಕ್ಯಾಮೆರಾಗಳು : ರೆಡ್ಮಿ K70e OIS ಜೊತೆಗೆ 64MP ಪ್ರಾಥಮಿಕ ಕ್ಯಾಮೆರಾ ಮತ್ತು LED ಫ್ಲ್ಯಾಷ್, 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಸೆನ್ಸರ್ ಅನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 16MP ಸ್ನ್ಯಾಪರ್ ಇದೆ.
  • ಬ್ಯಾಟರಿ : ಫೋನ್ 5,500mAh ಬ್ಯಾಟರಿಯನ್ನು 90W ವೇಗದ ವೈರ್ಡ್ ಚಾರ್ಜಿಂಗ್‌ನೊಂದಿಗೆ ಪ್ಯಾಕ್ ಮಾಡಲಾಗಿದೆ.
  • ಸಂಪರ್ಕ : 5G, 4G LTE, Wi-Fi, ಬ್ಲೂಟೂತ್, GPS, ಮತ್ತು ಚಾರ್ಜಿಂಗ್ ಮತ್ತು ಡೇಟಾ ಸಿಂಕ್‌ಗಾಗಿ USB ಟೈಪ್-C ಪೋರ್ಟ್.

ರೆಡ್ಮಿ K70 ಮತ್ತು ರೆಡ್ಮಿ K70 ಪ್ರೊ ಫೀಚರ್ಸ್:

  • ಡಿಸ್‌ಪ್ಲೇ : ರೆಡ್ಮಿ K70 ಮತ್ತು K70 ಪ್ರೊ ಅದೇ 6.67-ಇಂಚಿನ 2K OLED 12-ಬಿಟ್ TCL CSOT C8 ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್​ನೊಂದಿಗೆ ಬರುತ್ತದೆ.
  • ಪ್ರೊಸೆಸರ್ : ಪ್ರೊ ಆವೃತ್ತಿಯು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 3 ಚಿಪ್‌ಸೆಟ್‌ನಿಂದ ಅಡ್ರಿನೊ ಜಿಪಿಯು ಜೊತೆ ಜೋಡಿಸಲ್ಪಟ್ಟಿದೆ. ವೆನಿಲ್ಲಾ ಮಾದರಿಯು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 Gen 2 ಚಿಪ್‌ಸೆಟ್ ಅನ್ನು ಒಳಗೊಂಡಿದೆ.
  • ಓಎಸ್ : ಎರಡೂ ಮಾದರಿಗಳು ಆಂಡ್ರಾಯ್ಡ್ 14-ಆಧಾರಿತ ಹೈಪರ್ಓಎಸ್ ಕಸ್ಟಮ್ ಸ್ಕಿನ್‌ನಲ್ಲಿ ರನ್ ಆಗುತ್ತವೆ.
  • ಕ್ಯಾಮೆರಾಗಳು : ರೆಡ್ಮಿ K70 Pro OIS ಜೊತೆಗೆ 50MP ಲೈಟ್ ಹಂಟರ್ 800 ಪ್ರಾಥಮಿಕ ಸಂವೇದಕ, 12MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 50MP 2X ಪೋಟ್ರೇಟ್ ಲೆನ್ಸ್ ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 16MP ಕ್ಯಾಮೆರಾ ಇದೆ.
  • ರೆಡ್ಮಿ K70 : 50MP ಲೈಟ್ ಹಂಟರ್ 800 ಪ್ರಾಥಮಿಕ ಸಂವೇದಕ, 8MP ಅಲ್ಟ್ರಾ-ವೈಡ್-ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್ ಅನ್ನು ಹೊಂದಿದೆ. ಮುಂಭಾಗದಲ್ಲಿ 16MP ಕ್ಯಾಮೆರಾ ಇದೆ.
  • ಬ್ಯಾಟರಿ : 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿ ಇದೆ.
  • ಸಂಪರ್ಕ : 5G, 4G LTE, ಡ್ಯುಯಲ್-ಬ್ಯಾಂಡ್ Wi-Fi, ಬ್ಲೂಟೂತ್, GPS, NFC, ಮತ್ತು ಚಾರ್ಜ್ ಮಾಡಲು USB ಟೈಪ್-C ಪೋರ್ಟ್.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ