ತಕ್ಷಣವೇ ಹೀಗೆ ಮಾಡಿ: ಇಲ್ಲವಾದರೆ ನಿಮ್ಮ ಗೂಗಲ್ ಖಾತೆ ಶಾಶ್ವತವಾಗಿ ಡಿಲೀಟ್ ಆಗುತ್ತೆ

Google accounts: ಪ್ರಸಿದ್ಧ ಗೂಗಲ್ ಕಂಪನಿ ತನ್ನ ಬಳಕೆದಾರರ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡುವ ಬಗ್ಗೆ ಮತ್ತೊಮ್ಮೆ ಎಚ್ಚರಿಕೆ ನೀಡಿದೆ. ಖಾತೆಯು ಸಕ್ರಿಯವಾಗಿಲ್ಲದಿದ್ದರೆ, ಅದನ್ನು ಶಾಶ್ವತವಾಗಿ ಡಿಲೀಟ್ ಗೂಗಲ್ ಮುಂದಾಗಿದೆ. ಡಿಸೆಂಬರ್​ನಿಂದಲೇ ಈ ಪ್ರಕ್ರಿಯೆ ಶುರುವಾಗಲಿದೆ.

ತಕ್ಷಣವೇ ಹೀಗೆ ಮಾಡಿ: ಇಲ್ಲವಾದರೆ ನಿಮ್ಮ ಗೂಗಲ್ ಖಾತೆ ಶಾಶ್ವತವಾಗಿ ಡಿಲೀಟ್ ಆಗುತ್ತೆ
Google
Follow us
Vinay Bhat
|

Updated on:Nov 28, 2023 | 2:52 PM

ನೀವು ಗೂಗಲ್ (Google) ಖಾತೆಯನ್ನು ಹೊಂದಿದ್ದರೆ, ಈ ಸುದ್ದಿ ತಪ್ಪದೆ ಓದಿ. ಕೆಲವು ಖಾತೆಗಳನ್ನು ಶಾಶ್ವತವಾಗಿ ಡಿಲೀಟ್ ಮಾಡಲು ಗೂಗಲ್ ನಿರ್ಧರಿಸಿದೆ. ಇದಕ್ಕೆ ಕಾರಣ ಕೂಡ ಇದೆ. ನಿಮ್ಮ ಖಾತೆಯು ಎಷ್ಟು ಸಮಯದವರೆಗೆ ನಿಷ್ಕ್ರಿಯವಾಗಿದೆ?, ಅಂದರೆ ನಿಮ್ಮ ಗೂಗಲ್ ಖಾತೆಗೆ ನೀವು ಎಷ್ಟು ಸಮಯದ ಹಿಂದೆ ಲಾಗ್ ಇನ್ ಆಗಿದ್ದೀರಿ?, ಇದು ನಿನಗೆ ನೆನಪಿಲ್ಲದಿದ್ದರೆ ಕಷ್ಟ. ಈ ವಾರದ ಅಂತ್ಯದ ಮೊದಲು ನೀವು ಸಾಧ್ಯವಾದಷ್ಟು ಬೇಗ ನಿಮ್ಮ ಗೂಗಲ್ ಖಾತೆಯನ್ನು ಸಕ್ರಿಯಗೊಳಿಸಬೇಕು. ಖಾತೆಯು ಸಕ್ರಿಯವಾಗಿಲ್ಲದಿದ್ದರೆ, ಅದನ್ನು ಶಾಶ್ವತವಾಗಿ ಗೂಗಲ್ ಡಿಲೀಟ್ ಮಾಡುತ್ತದೆ. ಬಳಿಕ ಫರ್ಗಟ್ ಪಾಸ್‌ವರ್ಡ್ ಅಥವಾ ಇಮೇಲ್ ಬಳಸಿ ಇದನ್ನು ಪುನಃ ಸಕ್ರಿಯಗೊಳಿಸಲಾಗುವುದಿಲ್ಲ.

ಗೂಗಲ್ ನಿಷ್ಕ್ರಿಯ ಖಾತೆಗಳನ್ನು ಡಿಲೀಟ್ ಮಾಡುವ ಬಗ್ಗೆ ಮೇ ತಿಂಗಳಲ್ಲೇ ಎಚ್ಚರಿಕೆ ನೀಡಿತ್ತು. ಅದರಂತೆ ಕಳೆದ ಎರಡು ವರ್ಷಗಳಿಂದ ಬಳಕೆಯಾಗದ ಖಾತೆಯನ್ನು ಡಿಲೀಟ್ ಮಾಡುತ್ತದೆ. ಆದ್ದರಿಂದ, ನೀವು ಖಾತೆಯಲ್ಲಿ ಪ್ರಮುಖ ಮಾಹಿತಿಯನ್ನು ಹೊಂದಿದ್ದರೆ, ಅದು ಶಾಶ್ವತವಾಗಿ ಕಣ್ಮರೆಯಾಗುವ ಮೊದಲು ಲಾಗಿನ್ ಆಗಿ.

ಬಹುನಿರೀಕ್ಷಿತ ಒನ್​ಪ್ಲಸ್ 12 ಫೋನ್ ಬಿಡುಗಡೆ ದಿನಾಂಕ ಬಹಿರಂಗ: ಫೀಚರ್ಸ್ ಕೂಡ ಸೋರಿಕೆ

ಇದನ್ನೂ ಓದಿ
Image
ಕಡಿಮೆ ಬೆಲೆಯಲ್ಲಿ ಸೂಪರ್ 5G ಸ್ಮಾರ್ಟ್​ಫೋನ್ ಬೇಕೇ?: ಇಲ್ಲಿದೆ ನೋಡಿ
Image
ಐಕ್ಯೂ 11 ಸ್ಮಾರ್ಟ್​ಫೋನ್ ಬೆಲೆಯಲ್ಲಿ ಬರೋಬ್ಬರಿ 13,000 ರೂ. ರಿಯಾಯಿತಿ
Image
25,000 ರೂ. ಒಳಗಿನ ಟಾಪ್ 5 ಟ್ರೆಂಡಿಂಗ್ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ
Image
ಈಗಷ್ಟೇ ತಯಾರಾಗುತ್ತಿರುವ ಐಫೋನ್ 16 ಬಗ್ಗೆ ಹೊರಬಿತ್ತು ಶಾಕಿಂಗ್ ಸುದ್ದಿ

ಕಳೆದ ಎರಡು ವರ್ಷಗಳಲ್ಲಿ ನಿಮ್ಮ ಖಾತೆಯನ್ನು ಬಳಸದೇ ಇದ್ದರೆ, ಈಗಾಗಲೇ ನಿಮ್ಮ ಇಮೇಲ್ ಖಾತೆಗೆ ಗೂಗಲ್ ಸಂದೇಶ ಕಳುಹಿಸಿದೆ. ಖಾತೆಗಳನ್ನು ಮುಚ್ಚುವಂತೆ ಗೂಗಲ್ ಬಳಕೆದಾರರಿಗೆ ಸೂಚನೆ ನೀಡಿದೆ. ನೀವು ಈ ಮೇಲ್ ಅನ್ನು ಪರಿಶೀಲಿಸದಿದ್ದರೆ, ತಕ್ಷಣವೇ ನಿಮ್ಮ ಖಾತೆಯನ್ನು ಪರಿಶೀಲಿಸಿ. ಗೂಗಲ್ ಡ್ರೈವ್, ಡಾಕ್ಸ್, ಜಿ-ಮೇಲ್ ಮತ್ತು ಇತರ ಖಾತೆಗಳನ್ನು ಕೂಡ ಮುಚ್ಚಲಾಗುತ್ತದೆ.

ಈ ಬಗ್ಗೆ ಗೂಗಲ್ ಈ ವರ್ಷದ ಮೇ ತಿಂಗಳಲ್ಲಿ ಮಾಹಿತಿ ನೀಡಿತ್ತು. ಭದ್ರತಾ ಕಾರಣಗಳಿಗಾಗಿ ಗೂಗಲ್ ಈ ನಡೆಗೆ ಮುಂದಾಗಿದೆ. ಈರೀತಿ ನಿಷ್ಕ್ರಿಯವಾಗಿದ್ದ ಖಾತೆಯನ್ನು ಹಾಗೆಯೆ ಇಡುವುದರಿಂದ ತಪ್ಪು ಕೆಲಸಕ್ಕೆ ಬಳಸಬಹುದು. ಹೀಗಾಗಿ ಅಸುರಕ್ಷಿತ ಕೆಲಸಗಳ ಸಾಧ್ಯತೆಯನ್ನು ಗಣನೆಗೆ ತೆಗೆದುಕೊಂಡು ಗೂಗಲ್ ಈ ಕ್ರಮ ಕೈಗೊಳ್ಳಲಾಗುತ್ತಿದೆ.

ಈ ನಿಯಮವನ್ನು ವೈಯಕ್ತಿಕ ಖಾತೆಗಾಗಿ ಮಾತ್ರ ಮಾಡಲಾಗಿದೆ. ವೈಯಕ್ತಿಕ ಖಾತೆಗಳನ್ನು ಎರಡು ವರ್ಷಗಳವರೆಗೆ ತೆರೆಯದಿದ್ದರೆ ಮತ್ತು ಬಳಸದಿದ್ದರೆ, ಅವುಗಳನ್ನು ಶಾಶ್ವತವಾಗಿ ಡಿಲೀಟ್ ಮಾಡಲಾಗುತ್ದೆ. ಶಾಲೆಗಳು, ಸಂಸ್ಥೆಗಳು ಅಥವಾ ಇತರ ಸಂಸ್ಥೆಗಳ ಇಮೇಲ್‌ಗಳಿಗೆ ಇದು ಅನ್ವಯ ಆಗುವುದಿಲ್ಲ. ಆದ್ದರಿಂದ, ವೈಯಕ್ತಿಕ ಬಳಕೆದಾರರು ತಕ್ಷಣವೇ ಈ ಖಾತೆಗೆ ಲಾಗಿನ್ ಮಾಡಲು ಸಲಹೆ ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:52 pm, Tue, 28 November 23

ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್
‘ಬಾಯಲ್ಲಿ ಬರುವ ಮಾತು ವ್ಯಕ್ತಿತ್ವದ ವರ್ಚಸ್ಸು’ ಎಂದ ಸುದೀಪ್