ಐಕ್ಯೂ 11 ಸ್ಮಾರ್ಟ್​ಫೋನ್ ಬೆಲೆಯಲ್ಲಿ ಬರೋಬ್ಬರಿ 13,000 ರೂ. ರಿಯಾಯಿತಿ: ಖರೀದಿಸಬಹುದೇ?

iQOO 11 5G Offer: ಪ್ರಸಿದ್ಧ ಇ ಕಾಮರ್ಸ್ ತಾಣವಾದ ಅಮೆಜಾನ್ ಇಂಡಿಯಾದಲ್ಲಿ ಐಕ್ಯೂ 11 5G ಮೇಲೆ 13,000 ರೂ. ವರೆಗೆ ರಿಯಾಯಿತಿ ನೀಡಲಾಗಿದೆ. ಇದರಲ್ಲಿ ಬಲಿಷ್ಠ ಬ್ಯಾಟರಿ, ಪ್ರೊಸೆಸರ್, ಆಕರ್ಷಕ ಕ್ಯಾಮೆರಾ ಕೂಡ ಇದೆ. ಗೇಮರ್​ಗಳಿಗೆ ಹೇಳಿ ಮಾಡಿಸಿದ ಈ ಫೋನನ್ನು ಖರೀದಿಸಬಹುದೇ?, ಫೀಚರ್ಸ್ ಏನಿದೆ, ಬೆಲೆ ಎಷ್ಟು? ನೋಡೋಣ.

ಐಕ್ಯೂ 11 ಸ್ಮಾರ್ಟ್​ಫೋನ್ ಬೆಲೆಯಲ್ಲಿ ಬರೋಬ್ಬರಿ 13,000 ರೂ. ರಿಯಾಯಿತಿ: ಖರೀದಿಸಬಹುದೇ?
iQOO 11 5G
Follow us
|

Updated on: Nov 28, 2023 | 6:55 AM

ಪ್ರಸಿದ್ಧ ಐಕ್ಯೂ ಕಂಪನಿ ಈ ವರ್ಷದ ಆರಂಭದಲ್ಲಿ ಐಕ್ಯೂ 11 5G ಸ್ಮಾರ್ಟ್​ಫೋನ್ ಅನ್ನು ಭಾರತದಲ್ಲಿ ಅನಾವರಣ ಮಾಡಿತ್ತು. ಈ ಫೋನಿಗೆ ಈಗಲೂ ಭರ್ಜರಿ ಬೇಡಿಕೆ ಇದೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 2 ಪ್ರೊಸೆಸರ್​ನೊಂದಿಗೆ ರಿಲೀಸ್ ಈ ಫೋನ್ ಇದೀಗ ಆಕರ್ಷಕ ಡಿಸ್ಕೌಂಟ್​ನಲ್ಲಿ ಕಾಣಿಸಿಕೊಂಡಿದೆ. ಐಕ್ಯೂ ಸೇಲ್ ವೀಕ್ ಭಾಗವಾಗಿ ಅಮೆಜಾನ್ ಇಂಡಿಯಾದಲ್ಲಿ ಐಕ್ಯೂ 11 5G ಮೇಲೆ 13,000 ರೂ. ವರೆಗೆ ರಿಯಾಯಿತಿ ನೀಡಲಾಗಿದೆ. ಹಾಗಾದರೆ, ಈ ಫೋನನ್ನು ಖರೀದಿಸಬಹುದೇ?, ಫೀಚರ್ಸ್ ಏನಿದೆ, ಬೆಲೆ ಎಷ್ಟು? ನೋಡೋಣ.

ಅಮೆಜಾನ್​ನಲ್ಲಿ ಐಕ್ಯೂ 11 5G ಡೀಲ್

ಐಕ್ಯೂ 11 5G ಸ್ಮಾರ್ಟ್​ಫೋನ್​ನ 8GB+256GB ಮಾದರಿಗೆ 59,999 ರೂ. ಇದೆ. ಮತ್ತು 16GB+256GB ಮಾದರಿಗೆ 64,999 ರೂ. ಇದೆ. ಆದರೀಗ ಡಿಸ್ಕೌಂಟ್​ನಲ್ಲಿ, 8GB + 256GB ಮಾದರಿಯು 49,999 ರೂ. ಮತ್ತು 16GB/256GB ಆವೃತ್ತಿಗೆ 51,999 ರೂ. ನಿಗದಿ ಮಾಡಲಾಗಿದೆ. ಬೆಲೆ ಕಡಿತದ ಜೊತೆಗೆ, ಅಮೆಜಾನ್ ಐಸಿಐಸಿಐ ಮತ್ತು ಎಚ್‌ಡಿಎಫ್‌ಸಿ ಕಾರ್ಡ್‌ಗಳ ಮೂಲಕ ರೂ. 2,000 ತ್ವರಿತ ರಿಯಾಯಿತಿಯನ್ನು ನೀಡುತ್ತಿದೆ. ಇದರಿಂದ ಬೆಲೆ 47,999 ಮತ್ತು 49,999 ರೂ. ಗೆ ಖರೀದಿಸಬಹುದು.

Redmi 13C: ಭಾರತದಲ್ಲಿ ಈ ವರ್ಷದ ಕೊನೆಯ ಫೋನ್ ರಿಲೀಸ್ ಮಾಡಲು ಮುಂದಾದ ಶವೋಮಿ: ಯಾವುದು ನೋಡಿ

ಇದನ್ನೂ ಓದಿ
Image
25,000 ರೂ. ಒಳಗಿನ ಟಾಪ್ 5 ಟ್ರೆಂಡಿಂಗ್ ಸ್ಮಾರ್ಟ್​ಫೋನ್​ಗಳು ಇಲ್ಲಿದೆ ನೋಡಿ
Image
ಈಗಷ್ಟೇ ತಯಾರಾಗುತ್ತಿರುವ ಐಫೋನ್ 16 ಬಗ್ಗೆ ಹೊರಬಿತ್ತು ಶಾಕಿಂಗ್ ಸುದ್ದಿ
Image
ಬಹುನಿರೀಕ್ಷಿತ ಒನ್​ಪ್ಲಸ್ 12 ಬಿಡುಗಡೆ ದಿನಾಂಕ ಬಹಿರಂಗ: ಫೀಚರ್ಸ್ ಏನಿದೆ?
Image
ನಿಮ್ಮ ಮೊಬೈಲ್ ಡೇಟಾ ಬೇಗನೆ ಖಾಲಿ ಆಗದಿರಲು ಈ ಟ್ರಿಕ್ ಫಾಲೋ ಮಾಡಿ

ಐಕ್ಯೂ 11 5G ಖರೀದಿಸಬಹುದೇ?

ಐಕ್ಯೂ 11 5G ಬ್ರಾಂಡ್‌ನಿಂದ ಇದೊಂದು ಪ್ರೀಮಿಯಂ ಕೊಡುಗೆಯಾಗಿದ್ದು, ಆಕರ್ಷಕ ಡಿಸ್ಕೌಂಟ್​ನಲ್ಲಿ ಲಭ್ಯವಿದೆ. ಕಡಿಮೆ ವೆಚ್ಚದೊಂದಿಗೆ, ಒಂದೊಳ್ಳೆ ಫ್ಲ್ಯಾಗ್‌ಶಿಪ್ ಫೋನ್ ಹುಡುಕುತ್ತಿರುವವರಿಗೆ ಇದು ಉತ್ತಮ ಆಯ್ಕೆ. ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen2 SoC, 2K AMOLED LTPO ಡಿಸ್ಪ್ಲೇ, 144Hz ರಿಫ್ರೆಶ್ ರೇಟ್ ಮತ್ತು 50MP ಟ್ರಿಪಲ್ ಕ್ಯಾಮೆರಾಗಳಂತಹ ಪ್ರೀಮಿಯಂ ಹಾರ್ಡ್‌ವೇರ್‌ನೊಂದಿಗೆ ಈ ಫೋನ್ ಬರುತ್ತದೆ. ಗೇಮರ್​ಗಳಿಗೆ ಈ ಫೋನ್ ಹೆಚ್ಚು ಇಷ್ಟವಾಗಬಹುದು. ಉತ್ತಮ ಬೆಳಕು ಮತ್ತು ಕಡಿಮೆ-ಬೆಳಕಿನ ಸ್ಥಳದಲ್ಲಿ ಕ್ಯಾಮೆರಾಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ.

ಐಕ್ಯೂ 11 5G ಫೀಚರ್ಸ್:

ಡಿಸ್​ ಪ್ಲೇ : ಈ ಫೋನ್ 6.78-ಇಂಚಿನ 2K AMOLED LTPO 4.0 ಡಿಸ್ಪ್ಲೇ ಜೊತೆಗೆ HDR10+, 1-144Hz ವೇರಿಯಬಲ್ ರಿಫ್ರೆಶ್ ದರದೊಂದಿಗೆ ಬರುತ್ತದೆ.

ಪ್ರೊಸೆಸರ್ : ಕ್ವಾಲ್ಕಂ ಸ್ನಾಪ್​ಡ್ರಾಗನ್ 8 Gen 2 SoC ಗ್ರಾಫಿಕ್ಸ್‌ಗಾಗಿ Adreno GPU ನೊಂದಿಗೆ ಜೋಡಿಸಲಾಗಿದೆ.

ಬ್ಯಾಟರಿ : 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿ ನೀಡಲಾಗಿದೆ.

ಕನೆಕ್ಟಿವಿಟಿ : ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, ಡ್ಯುಯಲ್ 4G VoLTE, Wi-Fi 6 802.11, ಬ್ಲೂಟೂತ್ 5.3, GPS/GLONASS, USB ಟೈಪ್-C, ಮತ್ತು NFC ಸೇರಿವೆ.

ಇತರೆ : ಭದ್ರತೆಗಾಗಿ ಇನ್‌-ಡಿಸ್‌ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಇದೆ. ಹೈ-ಫೈ ಆಡಿಯೋ, ಸ್ಟೀರಿಯೋ ಸ್ಪೀಕರ್‌ಗಳು ಮತ್ತು USB ಟೈಪ್-ಸಿ ಆಡಿಯೋ ಕೂಡ ಇದೆ.

RAM ಮತ್ತು ಸಂಗ್ರಹಣೆ : ಈ ಫೋನ್ 16GB RAM ಮತ್ತು 512GB ಸಂಗ್ರಹಣೆಯನ್ನು ಪ್ಯಾಕ್ ಮಾಡುತ್ತದೆ, ಆದರೆ, ಇದನ್ನು ವಿಸ್ತರಿಸಲಾಗುವುದಿಲ್ಲ.

OS : ಆಂಡ್ರಾಯ್ಡ್ 13-ಆಧಾರಿತ Funtouch OS ಕಸ್ಟಮ್ ಸ್ಕಿನ್. ಫೋನ್ ಮೂರು ವರ್ಷಗಳ ಆಂಡ್ರಾಯ್ಡ್ ನವೀಕರಣಗಳನ್ನು ಪಡೆಯುತ್ತದೆ.

ಕ್ಯಾಮೆರಾಗಳು : 50MP ಪ್ರಾಥಮಿಕ ಸ್ಯಾಮ್​ಸಂಗ್ GN5 ಸೆನ್ಸಾರ್ ಜೊತೆಗೆ f/1.88 ದ್ಯುತಿರಂಧ್ರ, OIS, LED ಫ್ಲ್ಯಾಷ್, f/2.2 ದ್ಯುತಿರಂಧ್ರದೊಂದಿಗೆ 8MP ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು f/2.46 ದ್ಯುತಿರಂಧ್ರದೊಂದಿಗೆ 13MP 2x ಟೆಲಿಫೋಟೋ ಕ್ಯಾಮೆರಾ ಇದೆ. ಸೆಲ್ಫಿಗಾಗಿ, ಮುಂಭಾಗದಲ್ಲಿ 16MP ಕ್ಯಾಮೆರಾ ಅಳವಡಿಸಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ನಕ್ಸಲರ ದಾಳಿಗೆ ತುತ್ತಾದ ಜನರ ಸಂಕಟ ತೆರೆದಿಡುವ ಸಾಕ್ಷ್ಯಚಿತ್ರವಿದು
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಅಡ್ಡಲಾಗಿ ಬಿದ್ದ 10 ಚಕ್ರದ ಲಾರಿ, ರಿಂಗ್‌ ರೋಡಲ್ಲಿ ಫುಲ್ ಟ್ರಾಫಿಕ್ ಜಾಮ್
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಹೊಸ ಹಾನರ್ ಸ್ಮಾರ್ಟ್​ಫೋನ್​ನಲ್ಲಿದೆ 108 ಮೆಗಾಪಿಕ್ಸೆಲ್ ಸಖತ್ ಎಐ ಕ್ಯಾಮೆರಾ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಮುನಿರತ್ನ ವಿರುದ್ಧದ ಪ್ರಕರಣಗಳ ತನಿಖೆಗೆ SIT ರಚಿಸಿ: ಸಿಎಂಗೆ ಮನವಿ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ
ಕಾಡಿಗೆ ಹೋಗುವ ದಾರಿ ಗೊತ್ತು ಅಂತ ಅರಣ್ಯ ಸಿಬ್ಬಂದಿ ಮೇಲೆ ತಿರುಗಿ ಬಿದ್ದ ಆನೆ