Redmi 13C: ಭಾರತದಲ್ಲಿ ಈ ವರ್ಷದ ಕೊನೆಯ ಫೋನ್ ರಿಲೀಸ್ ಮಾಡಲು ಮುಂದಾದ ಶವೋಮಿ: ಯಾವುದು ನೋಡಿ
Redmi 13C India Launch Date: ರೆಡ್ಮಿಯ ಹೊಸ ಬಜೆಟ್ ಸ್ಮಾರ್ಟ್ಫೋನ್ ರೆಡ್ಮಿ 13C ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆ ಆಗಲಿದೆ. ಇದು ಮೀಡಿಯಾಟೆಕ್ ಹಿಲಿಯೊ G85 ಚಿಪ್‌ಸೆಟ್‌ನೊಂದಿಗೆ ಬರುವ ನಿರೀಕ್ಷೆ ಇದೆ. ಇದರ 4GB RAM + 128GB ಸ್ಟೋರೇಜ್ ಮಾಡೆಲ್‌ಗೆ ಸುಮಾರು ರೂ. 10,100 ಇರಬಹುದು.
ಈಗೀಗ ಶವೋಮಿ (Xiaomi) ಕಂಪನಿಯ ಸ್ಮಾರ್ಟ್ಫೋನ್ಗಳು ಬಿಡುಗಡೆ ಆಗುತ್ತಿರುವುದು ತೀರ ಅಪರೂಪ. ಎರಡು ಮೂರು ತಿಂಗಳಿಗಷ್ಟೆ ಒಂದು ಫೋನನ್ನು ಪರಿಚಯಿಸುತ್ತಿದೆ. ಹೀಗಿರುವಾಗ ಇದೀಗ ಶವೋಮಿ ತನ್ನ ರೆಡ್ಮಿ ಬ್ರ್ಯಾಂಡ್ನ ಅಡಿಯಲ್ಲಿ ಭಾರತದಲ್ಲಿ ಈ ವರ್ಷದ ಕೊನೆಯ ಫೋನ್ ಅನಾವರಣ ಮಾಡಲು ಸಜ್ಜಾಗಿದೆ. ಮುಂದಿನ ತಿಂಗಳು ಭಾರತೀಯ ಮಾರುಕಟ್ಟೆಯಲ್ಲಿ ತನ್ನ ಬಜೆಟ್ ಬೆಲೆಯ ರೆಡ್ಮಿ 13C ರಿಲೀಸ್ ಮಾಡಲಿದೆ ಎಂದು ಹೇಳಲಾಗಿದೆ. ಇದು ರೆಡ್ಮಿ 12C ಯ ಉತ್ತರಾಧಿಕಾರಿಯಾಗಿದೆ. ಈ ಫೋನಿನ ಬೆಲೆ, ಫೀಚರ್ಸ್ ಏನಿರಬಹುದು ಎಂಬುದನ್ನು ನೋಡೋಣ.
ರೆಡ್ಮಿ 13C ಭಾರತೀಯ ರೂಪಾಂತರ
- ರೆಡ್ಮಿಯ ಹೊಸ ಬಜೆಟ್ ಸ್ಮಾರ್ಟ್ಫೋನ್, ಮೀಡಿಯಾಟೆಕ್ ಹಿಲಿಯೊ G85 ಚಿಪ್‌ಸೆಟ್‌ನೊಂದಿಗೆ ಬರುವ ನಿರೀಕ್ಷೆ ಇದೆ. ಈ ಸಾಧನದ ಯಾವ ಬಣ್ಣ ಮತ್ತು ಶೇಖರಣಾ ರೂಪಾಂತರಗಳಲ್ಲಿ ಭಾರತಕ್ಕೆ ಬರುತ್ತವೆ ಎಂಬುದರ ಕುರಿತು ಇನ್ನೂ ಯಾವುದೇ ಮಾಹಿತಿ ಇಲ್ಲ.
- ರೆಡ್ಮಿ 13C ಸ್ಮಾರ್ಟ್ಫೋನ್ ಆಂಡ್ರಾಯ್ಡ್ 13 ಆಧಾರಿತ MIUI 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 90Hz ರಿಫ್ರೆಶ್ ದರದೊಂದಿಗೆ 6.74-ಇಂಚಿನ HD+ (1,080×2,460 ಪಿಕ್ಸೆಲ್‌ಗಳು) ಡಿಸ್‌ಪ್ಲೇಯನ್ನು ಹೊಂದಿದೆ.
- ಕ್ಯಾಮೆರಾ ವಿಚಾರಕ್ಕೆ ಬಂದರೆ, ರೆಡ್ಮಿ 13C ಟ್ರಿಪಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಇದು ಎರಡು 2-ಮೆಗಾಪಿಕ್ಸೆಲ್ ಶೂಟರ್‌ಗಳ ಜೊತೆಗೆ 50-ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾವನ್ನು ಒಳಗೊಂಡಿದೆ.
- ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ ಮುಂಭಾಗ 5 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಈ ರೆಡ್ಮಿ ಫೋನ್ 5,000mAh ಬ್ಯಾಟರಿ ಮತ್ತು 18W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.
- ಮೂಲಗಳ ಪ್ರಕಾರ ರೆಡ್ಮಿ 13C ಸ್ಮಾರ್ಟ್ಫೋನ್ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಅನಾವರಣಗೊಳ್ಳಬಹುದು. ಇದರ 4GB RAM + 128GB ಸ್ಟೋರೇಜ್ ಮಾಡೆಲ್‌ಗೆ ಸುಮಾರು ರೂ. 10,100 ಇರಬಹುದು.
- 6GB RAM + 128GB ಸ್ಟೋರೇಜ್ ಮಾದರಿಯ ಬೆಲೆ ಸುಮಾರು ರೂ. 11,000, 8GB RAM + 256GB ಆಯ್ಕೆಗೆ ಸುಮಾರು ರೂ. 12,500 ಇರುವ ಸಾಧ್ಯತೆ ಇದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ