ಬಹುನಿರೀಕ್ಷಿತ ಒನ್​ಪ್ಲಸ್ 12 ಫೋನ್ ಬಿಡುಗಡೆ ದಿನಾಂಕ ಬಹಿರಂಗ: ಫೀಚರ್ಸ್ ಕೂಡ ಸೋರಿಕೆ

OnePlus 12 Launch Date: ಒನ್​ಪ್ಲಸ್ 12 ಆರಂಭದಲ್ಲಿ ಚೀನಾದಲ್ಲಿ ಅನಾವರಣಗೊಳ್ಳಲಿದೆ. ಬಳಿಕ 2024 ರ ಜನವರಿಯಲ್ಲಿ ಜಾಗತಿಕ ಮಾರುಕಟ್ಟೆಗೆ ಚೊಚ್ಚಲ ಪ್ರವೇಶ ಪಡೆಯಲಿದೆ. ಈ ಫೋನಿನ ಹಿಂದಿನ ವರ್ಷನ್ ಒನ್​ಪ್ಲಸ್ 11 ಫೆಬ್ರವರಿ 2023 ರಲ್ಲಿ ಭಾರತದಲ್ಲಿ ರಿಲೀಸ್ ಆಗಿತ್ತು.

ಬಹುನಿರೀಕ್ಷಿತ ಒನ್​ಪ್ಲಸ್ 12 ಫೋನ್ ಬಿಡುಗಡೆ ದಿನಾಂಕ ಬಹಿರಂಗ: ಫೀಚರ್ಸ್ ಕೂಡ ಸೋರಿಕೆ
OnePlus 12
Follow us
Vinay Bhat
|

Updated on:Nov 27, 2023 | 2:03 PM

ಒನ್​ಪ್ಲಸ್ ಪ್ರಿಯರು ಬಹಳ ದಿನಗಳಿಂದ ಕಾದುಕುಳಿತಿರುವ ಬಹುನಿರೀಕ್ಷಿತ ಒನ್​ಪ್ಲಸ್ 12 (OnePlsu 12) ಸ್ಮಾರ್ಟ್​ಫೋನ್ ಬಿಡುಗಡೆ ದಿನಾಂಕ ಬಹಿರಂಗವಾಗಿದೆ. ಒನ್​ಪ್ಲಸ್ ಕಂಪನಿ ಇದೇ ಡಿಸೆಂಬರ್ 4 ರಂದು ತನ್ನ 10 ನೇ ವಾರ್ಷಿಕೋತ್ಸವ ಆಚರಿಸಲು ಮುಂದಾಗಿದೆ. ಆ ದಿನದಂದೇ ಒನ್​ಪ್ಲಸ್ 12 ಅನಾವರಣಗೊಳ್ಳಲಿದೆ. ಬಿಡುಗಡೆಗೆ ಮುಂಚಿತವಾಗಿ, ಈ ಸ್ಮಾರ್ಟ್​ಫೋನ್​ನ ಕೆಲ ಫೀಚರ್ಸ್ ಮತ್ತು ಟೀಸರ್‌ಗಳು ಇಂಟರ್ನೆಟ್‌ನಲ್ಲಿ ಧೂಳೆಬ್ಬಿಸಿದೆ. ಅಧಿಕೃತ ಫೀಚರ್ಸ್ ತಿಳಿದುಬಂದಿಲ್ಲವಾದರೂ ಕೆಲ ಟಿಪ್​ಸ್ಟರ್​ಗಳು ಈ ಫೋನಿನ ಮಾಹಿತಿ ಹೊರಹಾಕಿದ್ದಾರೆ.

ಒನ್​ಪ್ಲಸ್ 12 ಆರಂಭದಲ್ಲಿ ಚೀನಾದಲ್ಲಿ ಅನಾವರಣಗೊಳ್ಳಲಿದೆ. ಬಳಿಕ 2024 ರ ಜನವರಿಯಲ್ಲಿ ಜಾಗತಿಕ ಮಾರುಕಟ್ಟೆಗೆ ಚೊಚ್ಚಲ ಪ್ರವೇಶ ಪಡೆಯಲಿದೆ. ಈ ಫೋನಿನ ಹಿಂದಿನ ವರ್ಷನ್ ಒನ್​ಪ್ಲಸ್ 11 ಫೆಬ್ರವರಿ 2023 ರಲ್ಲಿ ಭಾರತದಲ್ಲಿ ರಿಲೀಸ್ ಆಗಿತ್ತು. ಭಾರತದಲ್ಲಿ ಒನ್​ಪ್ಲಸ್ 12 ಬಿಡುಗಡೆ ದಿನಾಂಕದ ಇನ್ನೂ ಖಚಿತವಾಗಿಲ್ಲದಿದ್ದರೂ, ಇದು ಮೂರು ಬಣ್ಣಗಳಲ್ಲಿ ಲಭ್ಯವಿರುತ್ತದೆ- ಪೇಲ್ ಗ್ರೀನ್, ರಾಕ್ ಬ್ಲ್ಯಾಕ್ ಮತ್ತು ವೈಟ್.

ಸೋರಿಕೆ ಆಗಿರುವ ಮಾಹಿತಿಯ ಪ್ರಕಾರ, ಒನ್​ಪ್ಲಸ್ 12 ನಯವಾದ ವಿನ್ಯಾಸದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿರುತ್ತದೆ. ಈ ಫೋನ್ ಪೆರಿಸ್ಕೋಪ್ ಜೂಮ್ ಲೆನ್ಸ್​ನೊಂದಿಗೆ ಬರುತ್ತದೆ. ಇದು ಒಂದು ರೀತಿಯ ಟೆಲಿಫೋಟೋ ಲೆನ್ಸ್ ಆಗಿದ್ದು ಅತ್ಯುತ್ತಮ ಕ್ವಾಲಿಟಿಯಲ್ಲಿ ಫೋಟೋ ಸೆರೆಯುಡಿಯುತ್ತದೆ. ಮುಖ್ಯವಾಗಿ ದೂರದ ವಸ್ತುವನ್ನು ಉತ್ತಮ ಗುಣಮಟ್ಟದ ಮೂಲಕ ಫೋಟೋಗಳನ್ನು ತೆಗೆದುಕೊಳ್ಳಲು ಸಹಾಯ ಮಾಡುತ್ತದೆ. ಒನ್​ಪ್ಲಸ್ ಚೀನಾ ಅಧ್ಯಕ್ಷ ಲಿ ಜೀ ಈ ಹಿಂದೆ ವೈಬೊದಲ್ಲಿ ಒನ್​ಪ್ಲಸ್ 12 64-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುತ್ತದೆ ಎಂದು ಬಹಿರಂಗಪಡಿಸಿದ್ದರು.

ಇದನ್ನೂ ಓದಿ
Image
ನಿಮ್ಮ ಮೊಬೈಲ್ ಡೇಟಾ ಬೇಗನೆ ಖಾಲಿ ಆಗದಿರಲು ಈ ಟ್ರಿಕ್ ಫಾಲೋ ಮಾಡಿ
Image
ಭಾರತದಲ್ಲಿ ಈ ವರ್ಷದ ಕೊನೆಯ ಫೋನ್ ರಿಲೀಸ್ ಮಾಡಲು ಮುಂದಾದ ಶವೋಮಿ: ಯಾವುದು?
Image
Netflixಗೆ ಹಣ ಕಟ್ಟಬೇಕಿಲ್ಲ: ಏರ್ಟೆಲ್​ನಿಂದ ಬಂತು ಹೊಸ ಪ್ರಿಪೇಯ್ಡ್ ಪ್ಲಾನ್
Image
ಚಾರ್ಜ್ ಫುಲ್ ಮಾಡಿ ಉಪಯೋಗಿಸಿ: ಹೊಸ ಫೋನ್ ಖರೀದಿಸಿದಾಗ ಹೀಗೆ ಹೇಳೋದು ಯಾಕೆ?

Tech Tips: ನಿಮ್ಮ ಫೋನ್ ಬಗ್ಗೆ ನಿಮಗೆ ಗೊತ್ತಿಲ್ಲದ ರಹಸ್ಯಗಳು: ಈ ಸೀಕ್ರೆಟ್ ಕೋಡ್‌ಗಳ ಮೂಲಕ ತಿಳಿಯಿರಿ

ಇದರ ಹೊರತಾಗಿ, ಈ ಫೋನ್ OIS ಬೆಂಬಲದೊಂದಿಗೆ 50-ಮೆಗಾಪಿಕ್ಸೆಲ್ Sony LYT-808 ಸಂವೇದಕವನ್ನು ಮತ್ತು 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್ Sony IMX581 ಸಂವೇದಕವನ್ನು ಹೊಂದಿರಬಹುದು. ಮುಂಭಾಗದಲ್ಲಿ, ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಇರುವ ಸಾಧ್ಯತೆ ಇದೆ.

ಈ ಫೋನ್ ಬಾಗಿದ ಡಿಸ್‌ಪ್ಲೇಯೊಂದಿಗೆ ಬರಲಿದ್ದು, ಸ್ಟೈಲಿಶ್ ಆಗಿದೆಯಂತೆ. 2,600nits ನ ಗರಿಷ್ಠ ಬ್ರೈಟ್​ನೆಸ್ ಮಟ್ಟದೊಂದಿಗೆ 2K ಡಿಸ್‌ಪ್ಲೇಯೊಂದಿಗೆ ಬರುತ್ತದೆ. ಡಿಸ್​ಪ್ಲೇಯು DisplayMate A+ ರೇಟಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಜೊತೆಗೆ ಈ ಫೋನ್ ಅನ್ನು ಹಿಡಿದಿಕೊಳ್ಳುವುದು ತುಂಬಾ ಸುಲಭವಂತೆ. ಒನ್​ಪ್ಲಸ್ 12 ನ ಇತರ ನಿರೀಕ್ಷಿತ ವೈಶಿಷ್ಟ್ಯಗಳ ಬಗ್ಗೆ ನೋಡುವುದಾದರೆ, ಸ್ನಾಪ್​ಡ್ರಾಗನ್ 8 Gen 3 ಪ್ರೊಸೆಸರ್ ಅನ್ನು 16GB RAM ನೊಂದಿಗೆ ಜೋಡಿಸಲಾಗಿದೆ ಮತ್ತು 512GB ವರೆಗಿನ ಸಂಗ್ರಹಣೆಯನ್ನು ಒಳಗೊಂಡಿದೆ. ಈ ಫೋನ್ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುವ ದೊಡ್ಡ ಬ್ಯಾಟರಿಯನ್ನು ಸಹ ಹೊಂದಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:03 pm, Mon, 27 November 23