ನಿಮ್ಮ ಮೊಬೈಲ್ ಡೇಟಾ ಬೇಗನೆ ಖಾಲಿ ಆಗದಿರಲು ಈ ಟ್ರಿಕ್ ಫಾಲೋ ಮಾಡಿ
Smartphone Tips: ಆಂಡ್ರಾಯ್ಡ್ ಫೋನ್‌ಗಳು ಡೇಟಾ ಉಳಿತಾಯ ಮೋಡ್ ಎಂಬ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಆಯ್ಕೆಯನ್ನು ಹೊಂದಿರುವವರು ಅದನ್ನು ಸಕ್ರಿಯಗೊಳಿಸಿದರೆ ಡೇಟಾವನ್ನು ಉಳಿಸಬಹುದು. ಡೇಟಾ ಸೇವಿಂಗ್ ಮೋಡ್ ವೈಶಿಷ್ಟ್ಯದ ಸಹಾಯದಿಂದ, ಸಾಧ್ಯವಾದಷ್ಟು ಡೇಟಾವನ್ನು ಉಳಿಸಲು ಅವಕಾಶವಿದೆ.
Updated on: Nov 27, 2023 | 6:55 AM

ಇಂದು ಇಂಟರ್ನೆಟ್ ಬೆಲೆ ಏರುತ್ತಿದ್ದರೂ ಇದರ ಬಳಕೆ ಮಾತ್ರ ಹೆಚ್ಚುತ್ತಲೇ ಇದೆ. ಆದರೆ ಕೆಲವು ಕಾರಣಗಳಿಂದಾಗಿ ನಾವು ಬಳಸುವ ಮೊಬೈಲ್ ಡೇಟಾ ತ್ವರಿತವಾಗಿ ಖಾಲಿ ಆಗುತ್ತದೆ. ನಿಮಗೂ ಇದೇರೀತಿ ಆಗುತ್ತಿದ್ದರೆ ಚಿಂತಿಸಬೇಕಿಲ್ಲ. ಈ ಸಮಸ್ಯೆ ನಿವಾರಣೆಗೆ ಇಲ್ಲಿದೆ ನೋಡಿ ಟ್ರಿಕ್.

ಸ್ಮಾರ್ಟ್ಫೋನ್ಗಳಲ್ಲಿ ಕೆಲವು ಆ್ಯಪ್ಗಳು ಸ್ವಯಂಚಾಲಿತವಾಗಿ ಅಪ್ಡೇಟ್ ಆಗುತ್ತವೆ. ಇದರಿಂದಾಗಿ ಇಂಟರ್ನೆಟ್ ಡೇಟಾ ಬೇಗನೆ ಖಾಲಿ ಆಗುತ್ತದೆ. ಅದಕ್ಕಾಗಿಯೇ ನೀವು ಅಪ್ಲಿಕೇಶನ್ ಸೆಟ್ಟಿಂಗ್‌ಗಳಿಗೆ ತೆರಳಿ ಅಟೋಮೆಟಿಕ್ ಡೌನ್‌ಲೋಡ್ ಆಯ್ಕೆಯನ್ನು ಆಫ್ ಮಾಡಬೇಕು. ವೈಫೈ ಬಳಸುವಾಗ ಅಪ್ಲಿಕೇಶನ್‌ಗಳನ್ನು ನವೀಕರಿಸುವುದು ಉತ್ತಮ.

ಆಂಡ್ರಾಯ್ಡ್ ಫೋನ್‌ಗಳು ಡೇಟಾ ಉಳಿತಾಯ ಮೋಡ್ ಎಂಬ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ. ಈ ಆಯ್ಕೆಯನ್ನು ಹೊಂದಿರುವವರು ಅದನ್ನು ಸಕ್ರಿಯಗೊಳಿಸಿದರೆ ಡೇಟಾವನ್ನು ಉಳಿಸಬಹುದು. ಡೇಟಾ ಸೇವಿಂಗ್ ಮೋಡ್ ವೈಶಿಷ್ಟ್ಯದ ಸಹಾಯದಿಂದ, ಸಾಧ್ಯವಾದಷ್ಟು ಡೇಟಾವನ್ನು ಉಳಿಸಲು ಅವಕಾಶವಿದೆ.

ಇತ್ತೀಚಿಗೆ ಗೂಗಲ್ ಮ್ಯಾಪ್ ಬಳಕೆ ತುಂಬಾ ಹೆಚ್ಚಾಗಿದೆ. ಇವುಗಳು ಹೆಚ್ಚಿನ ಡೇಟಾವನ್ನು ಸಹ ತಿನ್ನುತ್ತದೆ. ಆದರೆ, ಇಂತಹ ಆ್ಯಪ್ಗಳನ್ನು ಆಫ್ ಲೈನ್ ಮೋಡ್‌ನಲ್ಲಿ ಬಳಸಬೇಕೇ ಹೊರತು ಆನ್ ಲೈನ್ ಮೋಡ್‌ನಲ್ಲಿ ಅಲ್ಲ. ಇದು ಇಂಟರ್ನೆಟ್ ಡೇಟಾವನ್ನು ಸಾಧ್ಯವಾದಷ್ಟು ಉಳಿಸುತ್ತದೆ.

ನಾವು ಸಾಮಾನ್ಯವಾಗಿ ನಮ್ಮ ಪ್ರಯಾಣದ ಸಮಯದಲ್ಲಿ OTT ಪ್ಲಾಟ್‌ಫಾರ್ಮ್‌ಗಳು ಅಥವಾ ಯೂಟ್ಯೂಬ್ನಲ್ಲಿ ವಿಡಿಯೋಗಳನ್ನು ಸ್ಟ್ರೀಮ್ ಮಾಡುತ್ತೇವೆ. ಆದರೆ, ಅದರ ಹೊರತಾಗಿ ವೈಫೈ ಎಲ್ಲಿಯಾದರೂ ಲಭ್ಯವಿದ್ದಾಗ ಕೆಲವು ವಿಡಿಯೋಗಳನ್ನು ಡೌನ್‌ಲೋಡ್ ಮಾಡಿಟ್ಟರೆ ಆಫ್‌ಲೈನ್ ಮೋಡ್‌ನಲ್ಲಿ ವೀಕ್ಷಿಸಿ ಮೊಬೈಲ್ ಫೋನ್ ಡೇಟಾವನ್ನು ಉಳಿಸಬಹುದು.

ಡೇಟಾ ಖಾಲಿಯಾಗಲು ಮತ್ತೊಂದು ಪ್ರಮುಖ ಕಾರಣವೆಂದರೆ ವಾಟ್ಸ್ಆ್ಯಪ್ನಲ್ಲಿ ಸಿಕ್ಕ ಸಿಕ್ಕ ಫೋಟೋ, ವಿಡಿಯೋಗಳನ್ನು ಡೌನ್‌ಲೋಡ್ ಮಾಡುವುದು. ವಿಡಿಯೋಗಳು ಮತ್ತು ಫೋಟೋಗಳನ್ನು ಅಟೋಮೆಟಿಕ್ ಡೌನ್‌ಲೋಡ್ ಆಯ್ಕೆಯಿಂದ ತೆಗೆಯಿರಿ. ಇಲ್ಲವಾದರೆ ಇದು ಡೇಟಾವನ್ನು ವೇಗವಾಗಿ ಪೂರ್ಣಗೊಳಿಸುತ್ತದೆ.
























