ಬಹುನಿರೀಕ್ಷಿತ ಐಕ್ಯೂ 12 ಪ್ರೊ, ಐಕ್ಯೂ 12 ಸ್ಮಾರ್ಟ್ಫೋನ್ ಬಿಡುಗಡೆ: ಬೆಲೆ, ಫೀಚರ್ಸ್ ಏನಿದೆ ನೋಡಿ
iQoo 12 Pro, iQoo 12 Launched: ಹೊಸ ಐಕ್ಯೂ 12 ಪ್ರೊ ಮತ್ತು ಐಕ್ಯೂ 12 ಫೋನ್ ಲಾಂಚ್ ಆಗಿದೆ. ಆಕರ್ಷಕ ಫೀಚರ್ಗಳಿಂದ ಕೂಡಿರುವ ಈ ಸ್ಮಾರ್ಟ್ಫೋನ್ನಲ್ಲಿ ಇತ್ತೀಚೆಗೆ ಬಿಡುಗಡೆ ಆದ ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್ ಅಳವಡಿಸಲಾಗಿದೆ. ಅದ್ಭುತವಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಕೂಡ ಇದೆ.
ಕಳೆದ ಕೆಲವು ವಾರಗಳಿಂದ ಟೆಕ್ ಮಾರುಕಟ್ಟೆಯಲ್ಲಿ ಸಾಕಷ್ಟು ಸದ್ದು ಮಾಡುತ್ತಿದ್ದ ವಿವೋ ಉಪ-ಬ್ರಾಂಡ್ನ ಐಕ್ಯೂ ಕೊನೆಗೂ ತನ್ನ ಐಕ್ಯೂ 12 ಸರಣಿಯ (iQoo 12 Series) ಸ್ಮಾರ್ಟ್ಫೋನ್ ಅನ್ನು ಅನಾವರಣ ಮಾಡಿದೆ. ಚೀನಾದ ಮಾರುಕಟ್ಟೆಯಲ್ಲಿ ಹೊಸ ಐಕ್ಯೂ 12 ಪ್ರೊ ಮತ್ತು ಐಕ್ಯೂ 12 ಫೋನ್ ಲಾಂಚ್ ಆಗಿದೆ. ಆಕರ್ಷಕ ಫೀಚರ್ಗಳಿಂದ ಕೂಡಿರುವ ಈ ಸ್ಮಾರ್ಟ್ಫೋನ್ನಲ್ಲಿ ಇತ್ತೀಚೆಗೆ ಬಿಡುಗಡೆ ಆದ ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್ ಅಳವಡಿಸಲಾಗಿದೆ. ಅದ್ಭುತವಾದ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಕೂಡ ಇದೆ. ಈ ಫೋನುಗಳ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
ಐಕ್ಯೂ 12 ಪ್ರೊ, ಐಕ್ಯೂ 12 ಬೆಲೆ:
ಐಕ್ಯೂ 12 ಪ್ರೊ ಸ್ಮಾರ್ಟ್ಫೋನ್ ಒಟ್ಟು ಮೂರು ಸ್ಟೋರೇಜ್ ಆಯ್ಕೆಯಲ್ಲಿ ಬಿಡುಗಡೆ ಆಗಿದೆ. ಇದರ 16GB + 256GB ರೂಪಾಂತರಕ್ಕಾಗಿ CNY 4,999 (ಸುಮಾರು ರೂ. 57,000). 16GB + 512GB ರೂಪಾಂತರವು CNY 5,499ಕ್ಕೆ (ಸುಮಾರು ರೂ. 64,000) ಲಭ್ಯವಿದೆ. 16GB + 1TB ರೂಪಾಂತರಕ್ಕೆ CNY 5,999 (ಸುಮಾರು ರೂ. 68,000) ವರೆಗೆ ನಿಗದಿ ಮಾಡಲಾಗಿದೆ.
ಹೊಸ ವೇರಿಯೆಂಟ್ನಲ್ಲಿ ಬಿಡುಗಡೆ ಆಯಿತು ಸ್ಯಾಮ್ಸಂಗ್ ಗ್ಯಾಲಕ್ಸಿ A05s ಫೋನ್: ಬೆಲೆ ಎಷ್ಟು?
ಅಂತೆಯೆ, ಐಕ್ಯೂ 12 ಫೋನಿನ 12GB + 256GB ರೂಪಾಂತರ CNY 3,999 (ಸುಮಾರು ರೂ. 45,000) ನಿಂದ ಪ್ರಾರಂಭವಾಗುತ್ತದೆ. 16GB + 512GB ರೂಪಾಂತರಕ್ಕಾಗಿ CNY 4,299 (ಸರಿಸುಮಾರು ರೂ. 50,00) ನಿಗದಿ ಮಾಡಲಾಗಿದೆ. 16GB + 1TB ಸ್ಟೋರೇಜ್ ಸಾಮರ್ಥ್ಯಕ್ಕೆ CNY 4,699 (53,000 ರೂ.) ಇದೆ.
ಈ ಎರಡೂ ಸ್ಮಾರ್ಟ್‌ಫೋನ್‌ಗಳು ಬರ್ನಿಂಗ್ ವೇ, ಲೆಜೆಂಡ್ ಆವೃತ್ತಿ ಮತ್ತು ಟ್ರ್ಯಾಕ್ ಆವೃತ್ತಿ (ಚೀನೀ ಭಾಷೆಯಿಂದ ಅನುವಾದಿಸಲಾಗಿದೆ) ಬಣ್ಣಗಳಲ್ಲಿ ಲಭ್ಯವಿದೆ. ನವೆಂಬರ್ 14 ರಿಂದ ಆನ್‌ಲೈನ್ ಮತ್ತು ಆಫ್‌ಲೈನ್ ಮೂಲಕ ಮಾರಾಟವಾಗಲಿದೆ. ಐಕ್ಯೂ 12 ಸರಣಿಯ ಭಾರತದಲ್ಲಿ ಡಿಸೆಂಬರ್ 12 ರಂದು ಬಿಡುಗಡೆ ಆಗಲಿದೆ. ಇದು ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನೊಂದಿಗೆ ಭಾರತದಲ್ಲಿ ರಿಲೀಸ್ ಆಗಲಿರುವ ಮೊದಲ ಫೋನ್ ಎಂದು ಹೇಳಲಾಗುತ್ತದೆ.
ಐಕ್ಯೂ 12 ಪ್ರೊ ಫೀಚರ್ಸ್:
ಐಕ್ಯೂ 12 ಪ್ರೊ ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ಆಧಾರಿತ OriginOS 4 ನಲ್ಲಿ ಕಾರ್ಯನಿರ್ವಹಿಸುತ್ತದೆ. HDR ಬೆಂಬಲದೊಂದಿಗೆ 6.78-ಇಂಚಿನ 2K (1,440×3,200 ಪಿಕ್ಸೆಲ್‌ಗಳು) AMOLED E7 ಡಿಸ್‌ಪ್ಲೇ ಮತ್ತು 144Hz ವರೆಗೆ ರಿಫ್ರೆಶ್ ದರವನ್ನು ಹೊಂದಿದೆ. ಆಕ್ಟಾ-ಕೋರ್ 4nm ಸ್ನಾಪ್‌ಡ್ರಾಗನ್ 8 Gen 3 SoC ಯಿಂದ ಚಾಲಿತವಾಗಿದೆ. ಗೇಮಿಂಗ್ಗೆ ಹೇಳಿ ಮಾಡಿಸಿದ ಈ ಹ್ಯಾಂಡ್ಸೆಟ್ನಲ್ಲಿ ಇ-ಸ್ಪೋರ್ಟ್ಸ್ ಎಂಜಿನ್ ಮತ್ತು ಕೂಲಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.
ಈ ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು 50-ಮೆಗಾಪಿಕ್ಸೆಲ್ 1/1.3-ಇಂಚಿನ ಪ್ರಾಥಮಿಕ ಸಂವೇದಕದೊಂದಿಗೆ f/1.68 ಲೆನ್ಸ್, 64-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಸೆನ್ಸಾರ್ ಜೊತೆಗೆ 100X ಡಿಜಿಟಲ್ ಜೂಮ್ ಮತ್ತು f/2.57 ಲೆನ್ಸ್ ಮತ್ತು 50- f/2.0 ಲೆನ್ಸ್‌ನೊಂದಿಗೆ ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಹೊಂದಿದೆ. ಮುಂಭಾಗದಲ್ಲಿ f/2.45 ಲೆನ್ಸ್‌ನೊಂದಿಗೆ 16-ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾ ಅಳವಡಿಸಲಾಗಿದೆ.
ಐಕ್ಯೂ 12 ಪ್ರೊ 120W ವೇಗದ ವೈರ್ಡ್ ಚಾರ್ಜಿಂಗ್ ಬೆಂಬಲ ಮತ್ತು 50W ವೈರ್‌ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 5,100mAh ಬ್ಯಾಟರಿಯನ್ನು ನೀಡಲಾಗಿದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 7, ಬ್ಲೂಟೂತ್ 5.4, USB OTG, NFC, Beidou, GPS, GLONASS, GALILEO, ಮತ್ತು USB ಟೈಪ್-C ಪೋರ್ಟ್ ಸೇರಿವೆ.
ಐಕ್ಯೂ 12 ಫೀಚರ್ಸ್:
ಐಕ್ಯೂ 12 ಫೋನ್ ಐಕ್ಯೂ 12 ಪ್ರೊನಂತೆಯೇ ಸಾಫ್ಟ್‌ವೇರ್ ಮತ್ತು ಹಾರ್ಡ್‌ವೇರ್ ಫೀಚರ್ಗಳನ್ನು ಒಳಗೊಂಡಿದೆ. 6.78-ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ನಲ್ಲಿ 50-ಮೆಗಾಪಿಕ್ಸೆಲ್ 1/1.3-ಇಂಚಿನ ಸಂವೇದಕ, f/2.57 ಲೆನ್ಸ್‌ನೊಂದಿಗೆ 64-ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ, f/2.0 ಲೆನ್ಸ್‌ನೊಂದಿಗೆ 50-ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಸೆನ್ಸಾರ್ ಅನ್ನು ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಚಾಟ್‌ಗಳಿಗಾಗಿ 16-ಮೆಗಾಪಿಕ್ಸೆಲ್ ಕ್ಯಾಮೆರಾ ನೀಡಲಾಗಿದೆ. ಈ ಹ್ಯಾಂಡ್‌ಸೆಟ್ 120W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ