ಆ್ಯಪಲ್ ದೀಪಾವಳಿ ಸೇಲ್ 2023: ಅರ್ಧ ಬೆಲೆಗೆ ಸಿಗುತ್ತಿದೆ ಆ್ಯಪಲ್ ಪ್ರೊಡಕ್ಟ್, ಆಫರ್ ಮಿಸ್ ಮಾಡ್ಬೇಡಿ

Apple Diwali Sale 2023: ಭಾರತೀಯರು ದೀಪಾವಳಿ ಆಫರ್​ನಲ್ಲಿ ಈಗ ಐಫೋನ್‌ಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು ಮತ್ತು ಏರ್​ಪಾಡ್​ಗಳಲ್ಲಿ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಇದೇ ಮೊದಲ ಬಾರಿಗೆ, ಟೆಕ್ ದೈತ್ಯ ಮುಂಬೈನ ಆ್ಯಪಲ್ BKC ಮತ್ತು ದೆಹಲಿಯ ಆ್ಯಪಲ್ Saket ನಲ್ಲಿರುವ ತನ್ನ ಮಳಿಗೆಗಳಿಂದ ಗ್ರಾಹಕರಿಗೆ ನೇರ ಉತ್ಪನ್ನ ಮಾರಾಟವನ್ನು ಒದಗಿಸುತ್ತದೆ.

ಆ್ಯಪಲ್ ದೀಪಾವಳಿ ಸೇಲ್ 2023: ಅರ್ಧ ಬೆಲೆಗೆ ಸಿಗುತ್ತಿದೆ ಆ್ಯಪಲ್ ಪ್ರೊಡಕ್ಟ್, ಆಫರ್ ಮಿಸ್ ಮಾಡ್ಬೇಡಿ
Apple Diwali Sale 2023
Follow us
Vinay Bhat
|

Updated on:Nov 10, 2023 | 12:35 PM

ದೀಪಾವಳಿ ಹಬ್ಬದ ರಂಗು ಶುರುವಾಗಿದೆ. ಈಗಾಗಲೇ ಫ್ಲಿಪ್​ಕಾರ್ಟ್, ಅಮೆಜಾನ್​ನಂತಹ ಇ ಕಾಮರ್ಸ್ ವೆಬ್​ಸೈಟ್​ಗಳು ದೀಪವಾಳಿ ಸೇಲ್ (Diwali Sale) ಆರಂಭಿಸಿದೆ. ಇದರಲ್ಲಿ ಅನೇಕ ಉತ್ಪನ್ನಗಳ ಮೇಲೆ ಗಮನಾರ್ಹ ರಿಯಾಯಿತಿಗಳನ್ನು ನೀಡಲಾಗುತ್ತಿದೆ. ಫ್ಲಿಪ್‌ಕಾರ್ಟ್, ಅಮೆಜಾನ್ ಮತ್ತು ಹೆಚ್ಚಿನ ಆನ್‌ಲೈನ್ ಚಿಲ್ಲರೆ ವ್ಯಾಪಾರಿಗಳ ಜೊತೆಗೆ, ಹಲವಾರು ಕಂಪನಿಗಳು ತಮ್ಮ ಉತ್ಪನ್ನಗಳ ಮೇಲೆ ಅನೇಕ ಕೊಡುಗೆಗಳನ್ನು ನೀಡುತ್ತವೆ. ಇದೀಗ, ಪ್ರಸಿದ್ಧ ಆ್ಯಪಲ್ ಸಂಸ್ಥೆ ಕೂಡ ತನ್ನ ಉತ್ಪನ್ನಗಳ ಮೇಲೆ ಭಾರೀ ರಿಯಾಯಿತಿಗಳನ್ನು ಘೋಷಿಸಿದೆ.

ಭಾರತೀಯರು ದೀಪಾವಳಿ ಆಫರ್​ನಲ್ಲಿ ಈಗ ಐಫೋನ್‌ಗಳನ್ನು ಅತಿ ಕಡಿಮೆ ಬೆಲೆಗೆ ಖರೀದಿಸಬಹುದು ಮತ್ತು ಏರ್​ಪಾಡ್​ಗಳಲ್ಲಿ ಬಂಪರ್ ಡಿಸ್ಕೌಂಟ್ ಘೋಷಿಸಲಾಗಿದೆ. ಇದೇ ಮೊದಲ ಬಾರಿಗೆ, ಟೆಕ್ ದೈತ್ಯ ಮುಂಬೈನ ಆ್ಯಪಲ್ BKC ಮತ್ತು ದೆಹಲಿಯ ಆ್ಯಪಲ್ Saket ನಲ್ಲಿರುವ ತನ್ನ ಮಳಿಗೆಗಳಿಂದ ಗ್ರಾಹಕರಿಗೆ ನೇರ ಉತ್ಪನ್ನ ಮಾರಾಟವನ್ನು ಒದಗಿಸುತ್ತದೆ.

ಶೇ. 50% ವರೆಗೆ ಡಿಸ್ಕೌಂಟ್:

ಆ್ಯಪಲ್ ತನ್ನ ದೀಪಾವಳಿ ಆಫರ್​ಗಳನ್ನು ಬಹಿರಂಗಪಡಿಸಿದೆ, ಇದು ಏರ್​ಪಾಡ್, ಐಫೋನ್ 14 ಮತ್ತು ಐಫೋನ್ 14 ಪ್ಲಸ್​ಗೆ ಅನ್ವಯಿಸುತ್ತದೆ. ಇದರಲ್ಲಿ ನೀವು ಐಫೋನ್ 14 ಮತ್ತು 14 ಪ್ಲಸ್ ಖರೀದಿಸಿದರೆ ಏರ್​ಪಾಡ್ ಮೇಲೆ 50 ಪ್ರತಿಶತದವರೆಗೆ ರಿಯಾಯಿತಿ ಪಡೆಯಬಹುದು. ಏರ್‌ಪಾಡ್‌ಗಳ ಇತ್ತೀಚಿನ ಮೂಲ ಮಾದರಿಯು ಮೂರನೇ ತಲೆಮಾರಿನದ್ದಾಗಿದೆ, ಇದನ್ನು 2021 ರಲ್ಲಿ ಬಿಡುಗಡೆ ಮಾಡಲಾಗಿತ್ತು. ಇದರ ಮೂಲ ಬೆಲೆ 20,900 ರೂ. ಆದರೆ ನೀವು ಐಫೋನ್ 14 ಅಥವಾ ಐಫೋನ್ 14 ಪ್ಲಸ್ ಅನ್ನು ಖರೀದಿಸಿದರೆ ಇವುಗಳನ್ನು ಅರ್ಧ ಬೆಲೆಗೆ ಪಡೆಯಬಹುದು.

ಇದನ್ನೂ ಓದಿ
Image
ರಶ್ಮಿಕಾ ನಕಲಿ ವಿಡಿಯೋ: ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ನಿಯಮ ಪಾಲಿಸಲು ಸೂಚನೆ
Image
ಏನಿದು ಡೀಪ್‌ಫೇಕ್ ವಿಡಿಯೋ? ರಶ್ಮಿಕಾ ಅವರ ನಕಲಿ ವಿಡಿಯೋ ಹೇಗೆ ಮಾಡಿದ್ರು?
Image
ಹೊಸ ವೇರಿಯೆಂಟ್​ನಲ್ಲಿ ಬಿಡುಗಡೆ ಆಯಿತು ಗ್ಯಾಲಕ್ಸಿ A05s ಫೋನ್: ಬೆಲೆ ಎಷ್ಟು
Image
ನಿಮ್ಮ ಮೊಬೈಲ್ ಬ್ಯಾಟರಿ ಈರೀತಿ ದಪ್ಪಗಾಗಿದ್ದರೆ ಕಡೆಗಣಿಸಬೇಡಿ

ಮಾರುಕಟ್ಟೆಗೆ ಬಂತು ಹೊಸ ಬಜೆಟ್ ಫೋನ್: ಬಂಪರ್ ಫೀಚರ್ಸ್​ನ ಪೋಕೋ C65 ಬಿಡುಗಡೆ

ಐಫೋನ್ 14 128GB ಮಾದರಿಯ ಮೂಲ ಬೆಲೆ 79,900 ರೂ. ಆಗಿದೆ. ಆದರೆ, ಇದೀಗ 69,900 ರೂ. ಗೆ ಮಾರಾಟ ಕಾಣುತ್ತಿದೆ. ಇದು ಒಟ್ಟು ಮೂರು ಶೇಖರಣಾ ಸಾಮರ್ಥ್ಯಗಳಲ್ಲಿ ಲಭ್ಯವಿವೆ: 128GB, 256GB, ಮತ್ತು 512 GB. ಹೆಚ್ಚುವರಿಯಾಗಿ, ಗ್ರಾಹಕರು ಸ್ಮಾರ್ಟ್‌ಫೋನ್‌ಗಳನ್ನು ಖರೀದಿಸಿದಾಗ, ಆ್ಯಪಲ್ ಮ್ಯೂಸಿಕ್‌ನ ಆರು ತಿಂಗಳ ಚಂದಾದಾರಿಕೆಯನ್ನು ಪಡೆಯುತ್ತಾರೆ ಎಂದು ಆ್ಯಪಲ್ ಘೋಷಿಸಿದೆ.

ಅರ್ಹ ಕಾರ್ಡ್ ಮೂಲಕ ಪಡೆದುಕೊಂಡರೆ ಕ್ಯಾಶ್‌ಬ್ಯಾಕ್ ಆಫರ್ ಕೂಡ ಇದೆ. ಹೆಚ್ಚುವರಿಯಾಗಿ, ಅರ್ಹ ಉತ್ಪನ್ನಗಳನ್ನು ಖರೀದಿಸಲು ಗ್ರಾಹಕರು ಮೂರು ಅಥವಾ ಆರು ತಿಂಗಳ ಅವಧಿಯೊಂದಿಗೆ ಪ್ರಸಿದ್ಧ ಬ್ಯಾಂಕ್‌ಗಳಿಂದ ಅರ್ಹತಾ ಕಾರ್ಡ್‌ಗಳನ್ನು ಬಳಸಿದಾಗ, ಅವರು ಉಚಿತ EMI ಡೀಲ್‌ಗಳ ಲಾಭವನ್ನು ಪಡೆಯಬಹುದು. ಐಪಾಡ್, ಏರ್​ಪಾಡ್ಸ್, ಏರ್ ಟ್ಯಾಗ್ ಅಥವಾ ಆ್ಯಪಲ್ ಪೆನ್ಸಿಲ್ (2 ನೇ ತಲೆಮಾರಿನ) ಖರೀದಿಸುವ ಆಕರ್ಷಕ ಆಫರ್​ಗಳನ್ನು ನೀಡಲಾಗಿದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:34 am, Thu, 9 November 23