- Kannada News Photo gallery Smartphone Battery Problem Here is the reason why your smartphone battery swells
ನಿಮ್ಮ ಮೊಬೈಲ್ ಬ್ಯಾಟರಿ ಈರೀತಿ ದಪ್ಪಗಾಗಿದ್ದರೆ ಕಡೆಗಣಿಸಬೇಡಿ: ಕೂಡಲೇ ಹೀಗೆ ಮಾಡಿ
Smartphone Battery Tips: ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರೈಟ್ನೆಸ್ ಕಡಿಮೆ ಮಾಡಿ (ಬ್ಯಾಕ್‌ಲೈಟ್) ಅಥವಾ ಅಟೋ ಬ್ರೈಟ್ನೆಸ್ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿ. ಅತಿ ಹೆಚ್ಚು ಬ್ರೈಟ್ನೆಸ್ ಇಡುವುದರಿಂದ ಬ್ಯಾಟರಿ ಬಿಸಿ ಆಗುತ್ತದೆ. ಅಂತೆಯೆ ಡಿಸ್ ಪ್ಲೇ ಟೈಮ್ ಸೆಟ್ ಮಾಡುವುದು ಕೂಡ ಮುಖ್ಯ.
Updated on: Nov 07, 2023 | 6:55 AM

ಕೆಲವೊಮ್ಮೆ ಸ್ಮಾರ್ಟ್‌ಫೋನ್‌ನಲ್ಲಿರುವ ಬ್ಯಾಟರಿ ಗಾತ್ರ ಬದಲಾಗಿರುವುದನ್ನು ನೀವು ನೋಡಿರಬಹುದು. ಆಗ ಇಡೀ ಬ್ಯಾಟರಿ ಊದಿಕೊಂಡಿರುತ್ತದೆ. ಆದರೆ, ಬ್ಯಾಟರಿ ಅಷ್ಟು ದೊಡ್ಡದಾಗಿ ಊದಿರಲು ಕಾರಣವೇನೆಂದು ಅನೇಕರಿಗೆ ತಿಳಿದಿಲ್ಲ. ಇದರ ಹಿಂದೆ ಹಲವು ಕಾರಣಗಳಿದ್ದರೂ, ಕೆಲವೊಮ್ಮೆ ಬಳಕೆದಾರ ಮಾಡುವ ಸಣ್ಣ, ಸಣ್ಣ ತಪ್ಪುಗಳಿಂದಲೇ ಇದು ಸಂಭವಿಸುತ್ತದೆ.

ನಿಮ್ಮ ಮೊಬೈನ್ನ ನಿಧಾನವಾಗಿ ಬ್ಯಾಟರಿ ಕ್ಷೀಣಿಸಲು ಪ್ರಾರಂಭವಾಗುತ್ತದೆ. ಅಂತಿಮವಾಗಿ ಅದು ಉಬ್ಬಿ ಸ್ಫೋಟಗೊಳ್ಳುತ್ತದೆ. ಇದಕ್ಕೆಲ್ಲ ಮುಂಚಿತವಾಗಿ ಬ್ಯಾಟರಿ ಉಬ್ಬುವಿಕೆಯನ್ನು ತಡೆಗಟ್ಟಬೇಕು. ಹಾಗಾದರೆ, ಸ್ಮಾರ್ಟ್‌ಫೋನ್ ಬ್ಯಾಟರಿ ಉಬ್ಬದಿರಲು ಏನು ಮಾಡಬೇಕು?.

ಸ್ಮಾರ್ಟ್‌ಫೋನ್ ಬ್ಯಾಟರಿಯು ಊದಿಕೊಳ್ಳಲು ಪ್ರಮುಖ ಕಾರಣ ಇದನ್ನು ಅತಿಯಾಗಿ ಅಥವಾ ತಪ್ಪಾಗಿ ಉಪಯೋಗಿಸುವುದು. ಉದಾಹರಣೆಗೆ, ದೀರ್ಘಕಾಲದವರೆಗೆ ವಿಡಿಯೋವನ್ನು ವೀಕ್ಷಿಸುವುದರಿಂದ ಬ್ಯಾಟರಿ ಬರಿದಾಗುತ್ತದೆ. ಹೀಗಾಗಿ ನಿಮ್ಮ ಸ್ಮಾರ್ಟ್‌ಫೋನ್ ಅನ್ನು ಸರಿಯಾದ ರೀತಿಯಲ್ಲಿ ಬಳಸಲು ಪ್ರಯತ್ನಿಸಿ.

ಕೆಲವರ ಸ್ಮಾರ್ಟ್ಫೋನ್ನಲ್ಲಿ ಲೆಕ್ಕವಿಲ್ಲದಷ್ಟು ಆ್ಯಪ್ಗಳಿರುತ್ತದೆ. ಅದು ಅಗತ್ಯ ಕೂಡ ಇರುವುದಿಲ್ಲ. ಇವು ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಅಷ್ಟೇ ಅಲ್ಲ, ಬ್ಯಾಟರಿಯನ್ನು ಬೇಗನೆ ಖಾಲಿ ಮಾಡುತ್ತದೆ. ಈಗಿರುವ ಹೆಚ್ಚಿನ ಆ್ಯಪ್ಗಳು ಜಿಪಿಎಸ್, ಕ್ಯಾಮೆರಾ ಅಥವಾ ವಿಡಿಯೋ ಕರೆಗಳ ಆ್ಯಕ್ಸಸ್ ಕೇಳುತ್ತದೆ. ಇದು ಬ್ಯಾಟರಿ ಮೇಲೆ ಹೊಡೆತ ಬಿಳುತ್ತದೆ. ಹೀಗಾಗಿ ಅನಗತ್ಯ ಅಪ್ಲಿಕೇಶನ್‌ಗಳನ್ನು ಅನ್‌ಇನ್‌ಸ್ಟಾಲ್ ಮಾಡುವುದು ಒಳ್ಳೆಯದು.

ಬ್ಯಾಟರಿ ಬೇಗೆನ ಖಾಲಿ ಆಗಲು ಅಥವಾ ಇದಕ್ಕೆ ಒತ್ತಡ ಬೀಳಲು ಮತ್ತೊಂದು ಪ್ರಮುಖ ಕಾರಣ ಬ್ಯಾಕ್ಗ್ರೌಂಡ್ ಆ್ಯಪ್. ಒಂದು ಆ್ಯಪ್ ಅನ್ನು ತೆರೆದು ಉಪಯೋಗಿಸಿದ ನಂತರ ಕೆಲವರು ಅದನ್ನು ಮಿನಿಮೈಸ್ ಮಾಡಿ ಇಟ್ಟುಕೊಳ್ಳುತ್ತಾರೆ. ಹೀಗೆ ಮಾಡಿದಾಗ ಬ್ಯಾಕ್ಗ್ರೌಂಡ್ನಲ್ಲಿ ಆ ಆ್ಯಪ್ ಕಾರ್ಯನಿರ್ವಹಿಸುತ್ತಲೇ ಇರುತ್ತದೆ. ಇದು ಬ್ಯಾಟರಿ ಮೇಲೆ ಒತ್ತಡ ಹೇರುತ್ತಿದೆ.

ನಿಮ್ಮ ಸ್ಮಾರ್ಟ್‌ಫೋನ್‌ನ ಕೆಲವು ಸೆಟ್ಟಿಂಗ್‌ಗಳು ನಿಮ್ಮ ಬ್ಯಾಟರಿ ಅವಧಿಯನ್ನು ವಿಸ್ತರಿಸಲು ಸಹಾಯ ಮಾಡುತ್ತದೆ. ಮುಖ್ಯವಾಗಿ ಡಿಸ್ ಪ್ಲೇ ಬ್ರೈಟ್ನೆಸ್ ಅನ್ನು ಕಡಿಮೆ ಮಾಡುವ ಮೂಲಕ, ಬ್ಲೂಟೂತ್, ವೈ-ಫೈ ಆಫ್ ಮಾಡುವ ಮೂಲಕ ನೀವು ಬ್ಯಾಟರಿ ಅವಧಿಯನ್ನು ಹೆಚ್ಚಿಸಬಹುದು. ಅಗತ್ಯವಿದ್ದಾಗ ಮಾತ್ರ ನೀವು ಅವುಗಳನ್ನು ಬಳಸಬೇಕು.

ನಿಮ್ಮ ಸ್ಮಾರ್ಟ್‌ಫೋನ್‌ನ ಬ್ರೈಟ್ನೆಸ್ ಕಡಿಮೆ ಮಾಡಿ (ಬ್ಯಾಕ್‌ಲೈಟ್) ಅಥವಾ ಅಟೋ ಬ್ರೈಟ್ನೆಸ್ ಸೆಟ್ಟಿಂಗ್ ಅನ್ನು ಸಕ್ರಿಯಗೊಳಿಸಿ. ಅತಿ ಹೆಚ್ಚು ಬ್ರೈಟ್ನೆಸ್ ಇಡುವುದರಿಂದ ಬ್ಯಾಟರಿ ಬಿಸಿ ಆಗುತ್ತದೆ. ಅಂತೆಯೆ ಡಿಸ್ ಪ್ಲೇ ಟೈಮ್ ಸೆಟ್ ಮಾಡುವುದು ಕೂಡ ಮುಖ್ಯ. ಹೀಗೆ ಮಾಡಿದರೆ ಮೊಬೈಲ್ ಅಟೋಮೆಟಿಕ್ ಲಾಕ್ ಸ್ಕ್ರೀನ್ ಆಗುತ್ತದೆ. ಇದರಿಂದ ನೀವು ಆಕಸ್ಮಿಕವಾಗಿ ಫೋನ್ ಲಾಕ್ ಮಾಡಲು ಮರೆತರೆ ಅಟೋಮೆಟಿಕ್ ಆಗಿ ಲಾಕ್ ಆಗುತ್ತದೆ.

ಕೆಲವು ಅಪ್ಲಿಕೇಶನ್‌ಗಳು ಬ್ಯಾಟರಿಯನ್ನು ಬಳಸುವ ಹಿನ್ನೆಲೆಯಲ್ಲಿ ಡೇಟಾವನ್ನು ಸಿಂಕ್ ಮಾಡುತ್ತಲೇ ಇರುತ್ತವೆ. ಇಂತಹ ಆ್ಯಪ್ಗಳನ್ನು ಮೊದಲು ಕ್ಲೋಸ್ ಮಾಡಿ. ನಿಮಗೆ ಬ್ಲೂಟೂತ್, ವೈ-ಫೈ, ಜಿಪಿಎಸ್ ಅಗತ್ಯವಿಲ್ಲದಿದ್ದರೆ, ಅವುಗಳನ್ನು ಆಫ್ ಮಾಡಿ. ಇವೆಲ್ಲವೂ ಹೆಚ್ಚು ಬ್ಯಾಟರಿಯನ್ನು ಬಳಸುತ್ತವೆ. ಇದು ನಿಮ್ಮ ಫೋನ್‌ನ ಬ್ಯಾಟರಿ ಅವಧಿಯನ್ನು ಕಡಿಮೆ ಮಾಡಬಹುದು.
























