ನೇಪಾಳದಲ್ಲಿ ಶುಕ್ರವಾರ ಮಧ್ಯರಾತ್ರಿ 6.4 ತೀವ್ರತೆಯ ಭೂಕಂಪ ಸಂಭವಿಸಿದ್ದು, 153 ಜನರು ಸಾವನ್ನಪ್ಪಿದ್ದಾರೆ ಮತ್ತು 250 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪಶ್ಚಿಮ ನೇಪಾಳದ ಜಜರ್ಕೋಟ್ ಮತ್ತು ರುಕುಮ್ ವೆಸ್ಟ್ ಜಿಲ್ಲೆಗಳನ್ನು ಸಂಭವಿಸಿದ ಭೂಕಂಪದಿಂದ ಸುಮಾರು 8,000 ಸಾರ್ವಜನಿಕ ಮತ್ತು ಖಾಸಗಿ ಮನೆಗಳಿಗೆ ಹಾನಿಯಾಗಿದೆ.