Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹೊಸ ವೇರಿಯೆಂಟ್​ನಲ್ಲಿ ಬಿಡುಗಡೆ ಆಯಿತು ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಫೋನ್: ಬೆಲೆ ಎಷ್ಟು?

samsung galaxy a05s new variant: ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಸ್ಮಾರ್ಟ್​ಫೋನ್ 6 ಜಿಬಿ ರೂಪಾಂತರದಲ್ಲಿ ಮತ್ತು ಮೂರು ವಿಭಿನ್ನ ಬಣ್ಣಗಳಲ್ಲಿ ಮಾತ್ರ ಲಭ್ಯವಿತ್ತು. ಗ್ಯಾಲಕ್ಸಿ A05s ಕಳೆದ ತಿಂಗಳು ಭಾರತಕ್ಕೆ ಪದಾರ್ಪಣೆ ಮಾಡಿತ್ತು. ಇದೊಂದು ಬಜೆಟ್ ಫೋನ್ ಆಗಿದ್ದರೂ ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ.

ಹೊಸ ವೇರಿಯೆಂಟ್​ನಲ್ಲಿ ಬಿಡುಗಡೆ ಆಯಿತು ಸ್ಯಾಮ್​ಸಂಗ್ ಗ್ಯಾಲಕ್ಸಿ A05s ಫೋನ್: ಬೆಲೆ ಎಷ್ಟು?
Samsung Galaxy A05s
Follow us
Vinay Bhat
|

Updated on:Nov 07, 2023 | 3:04 PM

ದಕ್ಷಿಣ ಕೊರಿಯಾ ಮೂಲದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಸ್ಯಾಮ್‌ಸಂಗ್ ಕಂಪನಿ ಇತ್ತೀಚೆಗಷ್ಟೆ ಭಾರತದಲ್ಲಿ ತನ್ನ ಎ ಸರಣಿಯ ಅಡಿಯಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ A05s (Samsung Galaxy A05s) ಫೋನನ್ನು ಲಾಂಚ್ ಮಾಡಿತ್ತು. ಇದೀಗ ಈ ನೂತನ ಮೊಬೈಲ್ ಹೊಸ 4GB ರೂಪಾಂತರದಲ್ಲಿ ಬಿಡುಗಡೆ ಆಗಿದೆ. ಆರಂಭದಲ್ಲಿ ಈ ಸ್ಮಾರ್ಟ್​ಫೋನ್ 6 ಜಿಬಿ ರೂಪಾಂತರದಲ್ಲಿ ಮತ್ತು ಮೂರು ವಿಭಿನ್ನ ಬಣ್ಣಗಳಲ್ಲಿ ಮಾತ್ರ ಲಭ್ಯವಿತ್ತು. ಗ್ಯಾಲಕ್ಸಿ A05s ಕಳೆದ ತಿಂಗಳು ಭಾರತಕ್ಕೆ ಪದಾರ್ಪಣೆ ಮಾಡಿತ್ತು. ಇದೊಂದು ಬಜೆಟ್ ಫೋನ್ ಆಗಿದ್ದರೂ ಆಕರ್ಷಕ ಫೀಚರ್​ಗಳಿಂದ ಆವೃತ್ತವಾಗಿದೆ.

ಹೊಸ ಗ್ಯಾಲಕ್ಸಿ A05s ಫೋನ್ 90 Hz ನ ರಿಫ್ರೆಶ್ ರೇಟ್ ಪ್ಯಾನೆಲ್‌ನೊಂದಿಗೆ 6.71-ಇಂಚಿನ ಪೂರ್ಣ HD+ ಡಿಸ್‌ಪ್ಲೇಯನ್ನು ಹೊಂದಿದೆ. ಈ ಸ್ಮಾರ್ಟ್​ಫೋನ್​ನಲ್ಲಿ 6 GB RAM ಮತ್ತು 128 GB ಸಂಗ್ರಹದೊಂದಿಗೆ ಕ್ವಾಲ್ಕಮ್ ಸ್ನಾಪ್​ಡ್ರಾಗನ್ 680 ಚಿಪ್ಸೆಟ್ ನೀಡಲಾಗಿದೆ. ಬೃಹತ್ 5,000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ, ಇದು 25W ವೇಗದ ಚಾರ್ಜಿಂಗ್ ಬೆಂಬಲದೊಂದಿಗೆ 2 ದಿನಗಳ ಬ್ಯಾಟರಿ ಅವಧಿಯನ್ನು ನೀಡುತ್ತದೆ. ಆಂಡ್ರಾಯ್ಡ್ 13-ಆಧಾರಿತ OneUI ಸ್ಕಿನ್ ಔಟ್ ಬಾಕ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು 4 ವರ್ಷಗಳ ಭದ್ರತಾ ನವೀಕರಣಗಳು ಮತ್ತು OS ಅಪ್ಡೇಟ್​ಗಳ ಭರವಸೆ ನೀಡುತ್ತದೆ.

ರೋಚಕತೆ ಸೃಷ್ಟಿಸಿದ ವಿವೋ ಕಂಪನಿಯ ಹೊಸ X100 ಸ್ಮಾರ್ಟ್​ಫೋನ್: ಏನಿದೆ ಇದರಲ್ಲಿ?

ಇದನ್ನೂ ಓದಿ
Image
ನಿಮ್ಮ ಮೊಬೈಲ್ ಬ್ಯಾಟರಿ ಈರೀತಿ ದಪ್ಪಗಾಗಿದ್ದರೆ ಕಡೆಗಣಿಸಬೇಡಿ
Image
ಮಾರುಕಟ್ಟೆಗೆ ಬಂತು ಹೊಸ ಬಜೆಟ್ ಫೋನ್: ಬಂಪರ್ ಫೀಚರ್ಸ್​ನ ಪೋಕೋ C65 ಬಿಡುಗಡೆ
Image
ಮಹಾದೇವ ಬೆಟ್ಟಿಂಗ್​ ಆ್ಯಪ್​ ನಿಷೇಧ: ಕೇಂದ್ರ ಸರ್ಕಾರದ ಮಹತ್ವದ ಆದೇಶ
Image
ನವೆಂಬರ್​ನಲ್ಲಿ 15,000 ರೂ. ಒಳಗೆ ಖರೀದಿಸಬಹುದಾದ ಬೆಸ್ಟ್ ಸ್ಮಾರ್ಟ್​ಫೋನ್ಸ್

ಕ್ಯಾಮೆರಾ ವಿಚಾರಕ್ಕೆ ಬಂದರೆ, ಈ ಸ್ಮಾರ್ಟ್‌ಫೋನ್ 50 ಮೆಗಾ ಪಿಕ್ಸೆಲ್ ಪ್ರೈಮರಿ ಶೂಟರ್, 2 ಮೆಗಾ ಪಿಕ್ಸೆಲ್ ಡೆಪ್ತ್ ಸೆನ್ಸಾರ್ ಮತ್ತು 2 ಮೆಗಾ ಪಿಕ್ಸೆಲ್ ಮ್ಯಾಕ್ರೋ ಸಂವೇದಕದೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು ವಿಭಿನ್ನ ಮೋಡ್‌ಗಳ ಜೊತೆಗೆ ಉತ್ತಮ ಗುಣಮಟ್ಟದ ಫೋಟೋಗಳಿಗಾಗಿ ಲೈವ್ ಫೋಕಸ್‌ನಂತಹ ವೈಶಿಷ್ಟ್ಯಗಳನ್ನು ಸಹ ಹೊಂದಿದೆ. ಮುಂಭಾಗ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ, 13 ಮೆಗಾ ಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ.

ಗ್ಯಾಲಕ್ಸಿ A05s ಈಗ ಒಟ್ಟು ಎರಡು ಮೆಮೊರಿ ಆಯ್ಕೆಗಳಲ್ಲಿ ಖರೀದಿಗೆ ಸಿಗುತ್ತಿದೆ. 6 GB RAM + 128 GB ಮತ್ತು 4 GB RAM + 128 GB. ಇದರ 4 GB RAM + 128 GB ರೂಪಾಂತರದ ಬೆಲೆ ರೂ. 13,499 ರೂ. ಆಗಿದೆ. ಅಂತೆಯೆ 6GB RAM + 128 GB ರೂಪಾಂತರಕ್ಕೆ 14,999 ರೂ. ನಿಗದಿ ಮಾಡಲಾಗಿದೆ. ಈ ಎರಡೂ ರೂಪಾಂತರಗಳನ್ನು ಸ್ಯಾಮ್​ಸಂಗ್.ಕಾಮ್, ಇತರ ಆನ್‌ಲೈನ್ ಪೋರ್ಟಲ್‌ಗಳು ಮತ್ತು ಸ್ಯಾಮ್​ಸಂಗ್ ರಿಟೇಲ್ ಸ್ಟೋರ್​ಗಳಲ್ಲಿ ಖರೀದಿಸಬಹುದು.

ವಿಶೇಷ ಕೊಡುಗೆಯ ಭಾಗವಾಗಿ, ಸ್ಯಾಮ್‌ಸಂಗ್ ಫೈನಾನ್ಸ್+, ಬ್ಯಾಂಕ್‌ಗಳು ಮತ್ತು ಎನ್‌ಬಿಎಫ್‌ಸಿಗಳ ಮೂಲಕ ಗ್ರಾಹಕರು ತಿಂಗಳಿಗೆ ರೂ. 1150 ರಿಂದ ಪ್ರಾರಂಭವಾಗುವ EMI ಆಯ್ಕೆಗಳೊಂದಿಗೆ ಗ್ಯಾಜೆಟ್ ಅನ್ನು ಖರೀದಿಸಬಹುದು. ಅಂತೆಯೆ, ಎಸ್‌ಬಿಐ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರು ರೂ. 1000 ವರೆಗೆ ಕ್ಯಾಶ್‌ಬ್ಯಾಕ್ ಪಡೆಯಬಹುದು.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 3:02 pm, Tue, 7 November 23

ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ