ಚೀನಾ ಮೂಲದ ಪ್ರಸಿದ್ಧ ಟೆಕ್ ಕಂಪನಿ ಶವೋಮಿ (Xiaomi) ಈ ವರ್ಷ ಹೆಚ್ಚಿನ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆ ಮಾಡಿಲ್ಲ. ಅಪರೂಪಕ್ಕೆ ರಿಲೀಸ್ ಮಾಡಿದ ಫೋನ್ಗಳಲ್ಲಿ ಒಂದೊಂದು ವಿಶೇಷತೆ ಇರುತ್ತಿತ್ತು. ಸಮಯ ತೆಗೆದುಕೊಂಡು ವಿಶೇಷ ಮೊಬೈಲ್ಗಳನ್ನು ಬಿಡುಗಡೆ ಮಾಡುತ್ತಿರುವ ಶವೋಮಿ ಇದೀಗ ಟೆಕ್ ತನ್ನ ಸಬ್ ಬ್ರ್ಯಾಂಡ್ ರೆಡ್ಮಿ ಅಡಿಯಲ್ಲಿ ರೆಡ್ಮಿ ನೋಟ್ 12 ಸರಣಿ (Redmi Note 12 Series) ಎಂಬ ನೂತನ ಸ್ಮಾರ್ಟ್ಫೋನ್ ಲಾಂಚ್ ಮಾಡಲು ಮುಂದಾಗಿದೆ. ಈ ಫೋನ್ ಇದೇ ತಿಂಗಳು ಅನಾವರಣಗೊಳ್ಳಲಿದೆ ಎಂದು ಪೋಸ್ಟರ್ ಮೂಲಕ ಬಹಿರಂಗ ಪಡಿಸಿದೆ. ಆದರೆ, ನಿಗದಿತ ದಿನಾಂಕವನ್ನು ಪ್ರಕಟಿಸಿಲ್ಲ. ರೆಡ್ಮಿ ನೋಟ್ 12 ಅಡಿಯಲ್ಲಿ ಮೂರು ಫೋನುಗಳು ಬಿಡುಗಡೆ ಆಗಲಿದೆ. ಇದು ರೆಡ್ಮಿ ನೋಟ್ 12, ರೆಡ್ಮಿ ನೋಟ್ 12 ಪ್ರೊ, ರೆಡ್ಮಿ ನೋಟ್ 12 ಪ್ರೊ ಪ್ಲಸ್ (Redmi Note 12 Pro Plus) ಫೋನುಗಳಾಗಿವೆ. ಇದರಲ್ಲಿ ರೆಡ್ಮಿ ನೋಟ್ 12 ಪ್ರೊ+ 210W ನ ಫಾಸ್ಟ್ ಚಾರ್ಜರ್ನೊಂದಿಗೆ ಬಿಡುಗಡೆ ಆಗಲಿದೆಯಂತೆ.
ಸದ್ಯಕ್ಕೆ ಮಾರುಕಟ್ಟೆಯಲ್ಲಿ 200W ನ ಫಾಸ್ಟ್ ಚಾರ್ಜರ್ ಇರುವ ಫೋನ್ ಐಕ್ಯೂ 10 ಪ್ರೊ ಆಗಿದೆ. ಇದನ್ನು ಆದಷ್ಟು ಬೇಗ ಶವೋಮಿ ಹಿಂದಿಕ್ಕಲಿದೆ. ರೆಡ್ಮಿ ನೋಟ್ 12 ಪ್ರೊ ನಲ್ಲಿ 120W ನ ಫಾಸ್ಟ್ ಚಾರ್ಜರ್ ಇರಲಿದೆಯಂತೆ. ಅಂತೆಯೆ ನೋಟ್ 12 ನಲ್ಲಿ 67W ಫಾಸ್ಟ್ ಚಾರ್ಜರ್ ಸೇರಿಸಲಾಗಿದೆ. ಈ ಸ್ಮಾರ್ಟ್ಫೋನ್ಗಳು 3ಸಿ ಸೆರ್ಟಿಫಿಕೇಟ್ ಪಡೆದುಕೊಂಡಿದ್ದು, ಈ ತಿಂಗಳ ಅಂತ್ಯದಲ್ಲಿ ಮಾರುಕಟ್ಟೆಗೆ ಅಪ್ಪಳಿಸಲಿದೆ.
ಬರುತ್ತಿದೆ 200MP ಕ್ಯಾಮೆರಾದ ಫೋನ್:
ಇದರ ನಡುವೆ ಶವೋಮಿ ಬರೋಬ್ಬರಿ 200 ಮೆಗಾಫಿಕ್ಸೆಲ್ ಕ್ಯಾಮೆರಾದ ಫೋನನ್ನು ಭಾರತದಲ್ಲಿ ಪರಿಚಯಿಸಲು ಮುಂದಾಗಿದೆ. ಶವೋಮಿ ಕಂಪನಿ ತನ್ನ ಶವೋಮಿ 12T ಸರಣಿ ಬಿಡುಗಡೆಗೆ ಸಿದ್ಧತೆ ನಡೆಸಿದೆ. ಡಿಸೆಂಬರ್ ಅಂತ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಶವೋಮಿ 12T ಹಾಗೂ ಶವೋಮಿ 12T ಪ್ರೊ ಫೋನ್ ಭಾರತದಲ್ಲಿ ರಿಲೀಸ್ ಆಗಲಿದೆ. ಶವೋಮಿ 12T ಪ್ರೊ 200 ಮೆಗಾಫಿಕ್ಸೆಲ್ ಕ್ಯಾಮೆರಾದೊಂದಿಗೆ ಬಿಡುಗಡೆ ಆಗಲಿದೆ. ಸ್ವತಃ ಶವೋಮಿ ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಖಚಿತ ಪಡಿಸಿದೆ.
ಶವೋಮಿ 12T ಪ್ರೊ ಸ್ಮಾರ್ಟ್ಫೋನ್ನಲ್ಲಿ ಅತ್ಯಂತ ಬಲಿಷ್ಠವಾದ ಸ್ನಾಪ್ಡ್ರಾಗನ್ 8+ Gen 1 ಪ್ರೊಸೆಸರ್ ಇರಲಿದೆಯಂತೆ. 200MP ಮೈನ್ ಕ್ಯಾಮೆರಾದೊಂದಿಗೆ 8 ಮೆಗಾಫಿಕ್ಸೆಲ್ ವೈಡ್ ಆ್ಯಂಗಲ್ ಕ್ಯಾಮೆರಾ ಹಾಗೂ 2 ಮೆಗಾಫಿಕ್ಸೆಲ್ ಮ್ಯಾಕ್ರೊ ಸೆನ್ಸಾರ್ ಕ್ಯಾಮೆರಾ ಅಳವಡಿಸಲಾಗಿದೆಂತೆ. ಈ ಕ್ಯಾಮೆರಾ ಮೂಲಕ ಲೋ ಲೈಟ್ ಇರುವ ಜಾಗದಲ್ಲಿ ತೆಗೆದ ಫೋಟೋ ಕೂಡ ಅದ್ಭುವಾಗಿ ಮೂಡಿಬರುತ್ತಂತೆ.