AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

WhatsApp: ದೀಪಾವಳಿಯ ಖುಷಿಯಲ್ಲಿದ್ದವರಿಗೆ ಶಾಕ್: ಈ ಆಂಡ್ರಾಯ್ಡ್-ಐಫೋ​ನ್​ನಲ್ಲಿ ವಾಟ್ಸ್​ಆ್ಯಪ್ ಬಂದ್

ದೀಪಾವಳಿ (Diwali) ಹಬ್ಬ ಶುರುವಾಗಿದ್ದು, ನೀವು ಫೋಟೋ, ವಿಡಿಯೋ, ಶುಭಾಶಯಗಳನ್ನು ವಾಟ್ಸ್​ಆ್ಯಪ್ ಮೂಲಕ ಕಳುಹಿಸುತ್ತೀರಿ. ಆದರೆ, ಕೆಲ ಐಫೋನ್ (iPhone) ಮತ್ತು ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ದೀಪಾವಳಿ ಹಬ್ಬದಂದೇ ವಾಟ್ಸ್​ಆ್ಯಪ್ ತನ್ನ ಕೆಲಸವನ್ನು ನಿಲ್ಲಿಸಲಿದೆ.

WhatsApp: ದೀಪಾವಳಿಯ ಖುಷಿಯಲ್ಲಿದ್ದವರಿಗೆ ಶಾಕ್: ಈ ಆಂಡ್ರಾಯ್ಡ್-ಐಫೋ​ನ್​ನಲ್ಲಿ ವಾಟ್ಸ್​ಆ್ಯಪ್ ಬಂದ್
WhatsApp
TV9 Web
| Edited By: |

Updated on:Oct 21, 2022 | 11:19 AM

Share

ವಿಶ್ವದಲ್ಲಿ ಅತಿ ಹೆಚ್ಚು ಬಳಕೆದಾರರನ್ನು ಹೊಂದಿರುವ ಮೆಸೇಜಿಂಗ್ ಆ್ಯಪ್ ಎಂದರೆ ಅದು ವಾಟ್ಸ್​ಆ್ಯಪ್ (WhatsApp). ತಿಂಗಳಲ್ಲಿ 2 ಬಿಲಿಯನ್​ಗೂ ಅಧಿಕ ಸಕ್ರಿಯ ಬಳಕೆದಾರರನ್ನು ಹೊಂದಿದೆ. ಇದರಲ್ಲಿ 500 ಮಿಲಿಯನ್ ಅಕೌಂಟ್ ಭಾರತೀಯರದ್ದೇ ಆಗಿದೆ. ವಾಟ್ಸ್​ಆ್ಯಪ್ ಬಳಕೆದಾರರಿಗೆ ಇಷ್ಟೊಂದು ಹತ್ತಿರವಾಗಲು ಪ್ರಮುಖ ಕಾರಣ ಇದರಲ್ಲಿರುವ ಫೀಚರ್ಸ್. ಜನರ ಅನುಕೂತಕ್ಕೆ ತಕ್ಕಂತೆ ಒಂದರ ಹಿಂದೆ ಒಂದು ಆಕರ್ಷಕ ಫೀಚರ್​ಗಳನ್ನು ಬಿಡುಗಡೆ ಮಾಡುತ್ತಿರುವ ವಾಟ್ಸ್​ಆ್ಯಪ್​​ ಇದೀಗ ಶಾಕಿಂಗ್ ಸುದ್ದಿಯೊಂದು ನೀಡಿದೆ. ದೀಪಾವಳಿ (Diwali) ಹಬ್ಬ ಶುರುವಾಗಿದ್ದು, ನೀವು ಫೋಟೋ, ವಿಡಿಯೋ, ಶುಭಾಶಯಗಳನ್ನು ವಾಟ್ಸ್​ಆ್ಯಪ್ ಮೂಲಕ ಕಳುಹಿಸುತ್ತೀರಿ. ಆದರೆ, ಕೆಲ ಐಫೋನ್ (iPhone) ಮತ್ತು ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ ದೀಪಾವಳಿ ಹಬ್ಬದಂದೇ ವಾಟ್ಸ್​ಆ್ಯಪ್ ತನ್ನ ಕೆಲಸವನ್ನು ನಿಲ್ಲಿಸಲಿದೆ.

ಇದೇ ಅಕ್ಟೋಬರ್ 24 ರಿಂದ ಕೆಲವು ಐಫೋನ್‌ ಮಾಡೆಲ್‌ಗಳಲ್ಲಿ ಹಾಗೂ ಆಂಡ್ರಾಯ್ಡ್​ ಸ್ಮಾರ್ಟ್​ಫೋನ್​ಗಳಲ್ಲಿ ಶಾಶ್ವತವಾಗಿ ವಾಟ್ಸ್​ಆ್ಯಪ್ ಅಪ್ಲಿಕೇಶನ್ ಸ್ಥಗಿತವಾಗಲಿದೆ. ಆ್ಯಪಲ್‌ನ ಇತ್ತೀಚಿನ ಬೆಂಬಲ ನವೀಕರಣದ ಪ್ರಕಾರ, ಇದೇ ಅಕ್ಟೋಬರ್ ಕೆಲವು ಐಫೋನ್‌ ಮಾಡೆಲ್‌ಗಳಲ್ಲಿ ಶಾಶ್ವತವಾಗಿ ವಾಟ್ಸ್​ಆ್ಯಪ್​ ಅಪ್ಲಿಕೇಶನ್ ಇನ್ನು ಮುಂದೆ ಬೆಂಬಲಿಸುವುದಿಲ್ಲ ಎಂದು ಸೂಚಿಸಿದೆ. ಐಒಎಸ್ 10 ಅಥವಾ ಐಒಎಸ್ 11 ಆವೃತ್ತಿಗಳಲ್ಲಿ ಆ್ಯಪ್ ಚಾಲನೆ ಮಾಡುವ ಐಫೋನ್ ಬಳಕೆದಾರರಿಗೆ ವಾಟ್ಸ್​ಆ್ಯಪ್​ ಈಗಾಗಲೇ ಎಚ್ಚರಿಕೆ ಸಂದೇಶ ಕೂಡ ರವಾನಿಸಿದೆ. ಇದರ ಜೊತೆಗೆ ಆಂಡ್ರಾಯ್ಡ್ 4.1 ಮತ್ತು ಅದಕ್ಕಿಂತ ಹಳೆಯ ಆವೃತ್ತಿಗಳಲ್ಲಿ ವಾಟ್ಸ್​ಆ್ಯಪ್ ಇನ್ನುಂದೆ ಕಾರ್ಯನಿರ್ವಹಿಸಲ್ಲ.

ವಾಟ್ಸ್​ಆ್ಯಪ್​ ಮೆಸೆಜ್‌ ಆ್ಯಪ್‌ ಈ ಬಗ್ಗೆ ಬಳಕೆದಾರರಿಗೆ ಸೂಚನೆಯನ್ನು ಕಳುಹಿಸಿದ್ದು, ವಾಟ್ಸ್​ಆ್ಯಪ್​ ಶೀಘ್ರದಲ್ಲೇ ನಿಮ್ಮ ಫೋನ್‌ನಲ್ಲಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತದೆ ಎಂದು ತಿಳಿಸುತ್ತದೆ. ಹೀಗಾಗಿ ವಾಟ್ಸ್​ಆ್ಯಪ್​ ಅಪ್ಲಿಕೇಶನ್ ಅನ್ನು ಬಳಸುವುದನ್ನು ಮುಂದುವರಿಸಲು ಬಳಕೆದಾರರು ತಮ್ಮ ಐಫೋನ್‌ಗಳನ್ನು ಅಥವಾ ಆಂಡ್ರಾಯ್ಡ್​ ಫೋನ್​ಗಳನ್ನು ನವೀಕರಿಸಬೇಕಾಗುತ್ತದೆ ಎಂದು ಸಂದೇಶ ಕಳುಹಿಸಿದೆ.

ಇದನ್ನೂ ಓದಿ
Image
ಭಾರತದಲ್ಲಿ 200MP ಕ್ಯಾಮೆರಾದ ಮೋಟೋ ಎಡ್ಜ್ 30 ಆಲ್ಟ್ರಾಕ್ಕೆ ಭರ್ಜರಿ ಬೇಡಿಕೆ: ಮತ್ತೊಂದು ಹೊಸ ವೇರಿಯೆಂಟ್ ರಿಲೀಸ್
Image
Redmi Note 12 Series: 210W ಫಾಸ್ಟ್ ಚಾರ್ಜರ್: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ರೆಡ್ಮಿ ನೋಟ್ 12 ಸರಣಿ
Image
ಸ್ಪರ್ಧಾತ್ಮಕ ವಿರೋಧಿ ಅಭ್ಯಾಸಗಳಿಗಾಗಿ ಗೂಗಲ್​​ಗೆ ₹ 1,337 ಕೋಟಿ ದಂಡ ವಿಧಿಸಿದ ಸಿಸಿಐ
Image
Tech Tips: ನಿಮ್ಮಲ್ಲಿ ಉಪಯೋಗಿಸದ ಹಳೆಯ ಸ್ಮಾರ್ಟ್​​ಫೋನಿದ್ದರೆ ಅದನ್ನು ಸಿಸಿಟಿವಿ ಮಾಡಿ: ಹೇಗೆ ಗೊತ್ತೇ?

ಐಫೋನ್ 5 ಮತ್ತು ಐಫೋನ್ 5C ಫೋನ್‌ಗಳಲ್ಲಿ ವಾಟ್ಸ್​ಆ್ಯಪ್​ ಸ್ಥಗಿತವಾಗಲಿದೆ. ಆ್ಯಪಲ್‌ ಐಓಎಸ್‌ 12 ಅಥವಾ ಅದಕ್ಕಿಂತ ಮುಂದಿನ ಐಓಎಸ್‌ ಹೊಂದಿರುವ ಐಫೋನ್‌ಗಳಲ್ಲಿ ಯಾವುದೇ ಅಡೆ ತಡೆಯಿಲ್ಲದೆ ವಾಟ್ಸ್​ಆ್ಯಪ್​ ಕಾರ್ಯನಿರ್ವಹಿಸಲಿದೆ. ಹಾಗೆಯೇ ಐಒಎಸ್ 10 ಮತ್ತು ಐಒಎಸ್ 11 ಐಓಎಸ್‌ ಹಳೆಯ ಆಪರೇಟಿಂಗ್ ಸಿಸ್ಟಂಗಳಾಗಿದ್ದು, ಹೊಸ ಸಾಫ್ಟ್‌ವೇರ್‌ ಅಪ್‌ಡೇಟ್‌ ಅನ್ನು ಸ್ವೀಕರಿಸಿರಬಹುದು. ಅದಕ್ಕಾಗಿ ನೀವು ಐಫೋನ್​ನಲ್ಲಿ ಸೆಟ್ಟಿಂಗ್​ಗೆ ತೆರಳು ಜನರೇಲ್‌ ಆಯ್ಕೆ ಮಾಡಬೇಕು. ನಂತರ ಇತ್ತೀಚಿನ iOS ಆವೃತ್ತಿಯನ್ನು ಪಡೆಯಲು ಸಾಫ್ಟ್‌ವೇರ್ ಅಪ್‌ಡೇಟ್‌ ಆಯ್ಕೆ ಮೇಲೆ ಟ್ಯಾಪ್ ಮಾಡಿ. ಈ ಸಂದರ್ಭ ಯಾವುದೇ ಇತರೆ ಆಯ್ಕೆಯನ್ನು ಒತ್ತದಿರಿ. ಇದು ಅಪ್ಡೇಟ್ ಆಗಲು ಕೆಲ ಸಮಯ ತೆಗೆದುಕೊಳ್ಳುತ್ತದೆ.

ವಾಟ್ಸ್​ಆ್ಯಪ್ ಹೊಸ ಫೀಚರ್ಸ್:

ವಾಟ್ಸ್​ಆ್ಯಪ್​ನಲ್ಲಿ ಹೊಸ ಹೊಸ ಅಪ್ಡೇಟ್​ ಬರಲು ಸಜ್ಜಾಗಿದೆ. ತನ್ನ ಮುಂದಿನ ಅಪ್ಡೇಟ್​ನಲ್ಲಿ ಕಳುಹಿಸಿದ ಮೆಸೇಜ್ ಅನ್ನು ಎಡಿಟ್ ಮಾಡುವ ಆಯ್ಕೆ ನೀಡಲಿದೆ. ಅಂತೆಯೆ ವಾಟ್ಸ್​ಆ್ಯಪ್​​ ಗ್ರೂಪ್‌ ರಚನೆಯ ಸದಸ್ಯರ ಮಿತಿಯನ್ನು 1024 ಗೆ ಹೆಚ್ಚಿಸಲು ಕೆಲಸ ಮಾಡುತ್ತಿದೆ. ಈ ಆಯ್ಕೆಯು ಪ್ರಸ್ತುತ ಆಯ್ದ ಬೀಟಾ ಬಳಕೆದಾರರಿಗೆ ಸೀಮಿತವಾಗಿದೆ ಎಂದು ಹೇಳಲಾಗಿದೆ. ಇನ್ನು ವಾಟ್ಸ್​ಆ್ಯಪ್ ತನ್ನ ನೂತನ ಅಪ್ಡೇಟ್​ನಲ್ಲಿ ಡಾಕ್ಯುಮೆಂಟ್ ಕಳುಹಿಸುವಾಗಲೂ ಕಾಪ್ಷನ್ ಆಯ್ಕೆ ನೀಡಲಿದೆ. ಈ ಮೂಲಕ ಕಳುಹಿಸಿದ ಅಥವಾ ರಿಸೀವ್ ಮಾಡಿಕೊಂಡ ಡಾಕ್ಯುಮೆಂಟ್ ಅನ್ನು ಸರ್ಚ್ ಮಾಡುವ ಮೂಲಕ ಪಡೆದುಕೊಳ್ಳಲು ಇದು ಸಹಾಯ ಮಾಡುತ್ತದೆ. ಇದರ ಜೊತೆಗೆ ವಾಟ್ಸ್​ಆ್ಯಪ್​ನಲ್ಲಿ ಪಾವತಿ ಮಾಡಿ ಬಳಸಬೇಕಾದ ಪ್ರೀಮಿಯಂ ಸೌಲಭ್ಯ ಸದ್ಯದಲ್ಲೇ ಬರಲಿದೆ. ಈ ಆಯ್ಕೆ ವಾಟ್ಸ್​ಆ್ಯಪ್ ಬ್ಯುಸಿನೆಸ್ ಬಳಕೆದಾರರಿಗೆ ಲಭ್ಯವಾಗಲಿದ್ದು, ಗ್ರಾಹಕರೊಂದಿಗೆ ಸಂವಹನ ನಡೆಸಲು ಹೊಸದಾದ ಹಲವು ಪಾವತಿಸಬೇಕಾದ ವೈಶಿಷ್ಟ್ಯಗಳನ್ನು ಸೇರಿಸಲಾಗಿದೆ.

Published On - 11:19 am, Fri, 21 October 22

ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮೈಸೂರಿನಲ್ಲಿ ಹಾಡಹಗಲೇ ಸಿನಿಮೀ ಸ್ಟೈಲ್‌ನಲ್ಲಿ ಚಿನ್ನದಂಗಡಿ ದರೋಡೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಮನ್‌ ಕಿ ಬಾತ್‌ನಲ್ಲಿ ಕನ್ನಡ ಭಾಷೆ ಬಗ್ಗೆ ಪ್ರಧಾನಿ ಮೋದಿ ಶ್ಲಾಘನೆ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಒಲಿಂಪಿಕ್ಸ್ ಹೀರೋ ನೀರಜ್ ಚೋಪ್ರಾ ಆರತಕ್ಷತೆಯಲ್ಲಿ ಪ್ರಧಾನಿ ಮೋದಿ ಭಾಗಿ
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಮನೆಗಳ ತೆರವು: ಹೈಕಮಾಂಡ್​​ ಲೀಡರ್ ಮಧ್ಯಪ್ರವೇಶಕ್ಕೆ ಡಿಕೆಶಿ ಹೇಳಿದ್ದಿಷ್ಟು
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಪತ್ನಿ ಕುಟುಂಬಸ್ಥರ ಸುಳ್ಳು ಆರೋಪಕ್ಕೆ ಹೋಯ್ತು ಜೀವ: ಕಣ್ಣೀರಿಟ್ಟ ಕೆಲಸಗಾರ
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಹೊಸ ವರ್ಷಕ್ಕೆ ಬೆಂಗಳೂರು ಸಜ್ಜು; ನಗರಾದ್ಯಂತ ಪೊಲೀಸ್ ಕಣ್ಗಾವಲು
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮಹಾರಾಷ್ಟ್ರ ಪೊಲೀಸರ ಹೇಳಿಕೆ ಸತ್ಯಕ್ಕೆ ದೂರವಾಗಿದೆ; ಜಿ ಪರಮೇಶ್ವರ್
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಮತ್ತೊಂದು ಬಿಗ್ ಎಲಿಮಿನೇಷನ್: ಸ್ಪಂದನಾ-ಮಾಳು ನಡುವೆ ಯಾರು ಹೊರಗೆ?
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಹಾಲು ಕುಡಿಯಬೇಕಿದ್ದ 5 ವರ್ಷದ ಮೊಮ್ಮಗನಿಗೆ ಮದ್ಯ ಕುಡಿಸಿದ ಅಜ್ಜ!
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್
ಟಿ20 ಕ್ರಿಕೆಟ್​ನಲ್ಲಿ ಅತೀ ವೇಗದ ಅರ್ಧಶತಕ ಸಿಡಿಸಿದ ಲಾರಾ ಹ್ಯಾರಿಸ್