Tech Tips: ಇನ್​ಸ್ಟಾಗ್ರಾಮ್​ನಲ್ಲಿ ನಿಮ್ಮ ಫಾಲೋವರ್ಸ್​ ಒಮ್ಮೆಲೇ ಹೆಚ್ಚಾಗಬೇಕೇ?: ಈ ಟ್ರಿಕ್ ಫಾಲೋ ಮಾಡಿ

Free Instagram Followers: ಇನ್​ಸ್ಟಾಗ್ರಾಮ್​ನಲ್ಲಿ ಈಗ ಕೇವಲ ಫೋಟೋಗ್ರಫಿ, ರೀಲ್ಸ್ ಮಾಡುವವರು ಲಕ್ಷ ಲಕ್ಷ ಫಾಲೋವರ್ಸ್ ಹೊಂದಿರುತ್ತಾರೆ. ಇದನ್ನು ನೋಡಿದಾಗ ನಮಗೂ ಆಸೆ ಹುಟ್ಟುತ್ತದೆ. ಆದರೆ, ಕೆಲವೊಂದು ಟ್ರಿಕ್​ಗಳ ಮೂಲಕ ಇನ್​ಸ್ಟಾಗ್ರಾಮ್​ನಲ್ಲಿ ನೀವು ನಿಮ್ಮ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಬಹುದು.

Tech Tips: ಇನ್​ಸ್ಟಾಗ್ರಾಮ್​ನಲ್ಲಿ ನಿಮ್ಮ ಫಾಲೋವರ್ಸ್​ ಒಮ್ಮೆಲೇ ಹೆಚ್ಚಾಗಬೇಕೇ?: ಈ ಟ್ರಿಕ್ ಫಾಲೋ ಮಾಡಿ
Instagram Followers Tricks
Follow us
| Updated By: Vinay Bhat

Updated on: Oct 21, 2022 | 12:54 PM

ಪ್ರಸಿದ್ಧ ಸಾಮಾಜಿಕ ಜಾಲತಾಣ ಇನ್​ಸ್ಟಾಗ್ರಾಮ್ (Instagram) ಅನ್ನು ಇಂದು ಬಳಕೆ ಮಾಡುವವರ ಸಂಖ್ಯೆ ಕೋಟಿಗಟ್ಟಲೆ ಇದೆ. ಭಾರತದಲ್ಲಿ ಟಿಕ್​ಟಾಕ್ ನಿಷೇಧವಾದ ಬಳಿಕವಂತು ಇದನ್ನು ಬಳಸುತ್ತಿರುವವರ ಸಂಖ್ಯೆ ದುಪ್ಪಟ್ಟಾಯಿತು. ಬಳಕೆದಾರರ ಅನುಕೂಲಕ್ಕೆ ತಕ್ಕಂತೆ, ಅವರಿಗೆ ಇಷ್ಟವಾಗುವ ರೀತಿ ಇನ್​ಸ್ಟಾಗ್ರಾಮ್ ಅನೇಕ ಫೀಚರ್​ಗಳನ್ನು ಪರಿಚಯಿಸಿದೆ. ಇದರಲ್ಲಿರುವ ರೀಲ್ಸ್ ಅಯ್ಕೆಗೆ ಜನರು ಮನಸೋತಿದ್ದಾರೆ. ಇನ್​ಸ್ಟಾಗ್ರಾಮ್ ಇಂದು ಹೊಸ ಸಂಚಲನವನ್ನೇ ಸೃಷ್ಟಿ ಮಾಡಿದ್ದು ಇದರಿಂದಲೇ ಅನೇಕ ಸೆಲೆಬ್ರಿಟಿಗಳು ಲಕ್ಷ ಗಟ್ಟಲೆ ಹಣವನ್ನು ತಮ್ಮ ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಸೆಲೆಬ್ರಿಟಿಗಳ ಖಾತೆ ತೆರೆದರೆ ಸಾಕು ಅವರನ್ನು ಫಾಲೋ ಮಾಡುವವ ಸಂಖ್ಯೆ ಮಿಲಿಯನ್​ನಲ್ಲಿ ಇರುತ್ತದೆ. ಅಲ್ಲದೆ ಈಗ ಕೇವಲ ಫೋಟೋಗ್ರಫಿ ಮಾಡುವವರು, ರೀಲ್ಸ್ ಮಾಡುವವರು ಕೂಡ ಲಕ್ಷ ಲಕ್ಷ ಫಾಲೋವರ್ಸ್ (Followers) ಹೊಂದಿರುತ್ತಾರೆ. ಇದನ್ನು ನೋಡಿದಾಗ ನಮಗೂ ಕೂಡ ಹೆಚ್ಚು ಫಾಲೋವರ್ಸ್ ಇರಬೇಕು ಎಂಬ ಆಸೆ ಹುಟ್ಟುತ್ತದೆ. ಆದರೆ, ನಿಮ್ಮನ್ನು ಫಾಲೋ ಮಾಡುವವರು ಯಾರೂ ಇರುವುದಿಲ್ಲ. ಹಾಗಂತ ಇದಕ್ಕೆ ನೀವು ಬೇಸರ ಪಡಬೇಕಿಲ್ಲ. ಯಾಕೆಂದರೆ ಕೆಲವೊಂದು ಟ್ರಿಕ್​ಗಳ (Tricks) ಮೂಲಕ ಇನ್​ಸ್ಟಾಗ್ರಾಮ್​ನಲ್ಲಿ ನೀವು ನಿಮ್ಮ ಫಾಲೋವರ್ಸ್​ ಸಂಖ್ಯೆ ಹೆಚ್ಚಿಸಬಹುದು.

ಫಾಲೋವರ್ಸ್ ಹೆಚ್ಚಿಸಲು ಥರ್ಡ್ ಪಾರ್ಟಿ ಆ್ಯಪ್:

ಇನ್​ಸ್ಟಾಗ್ರಾಮ್​ನಲ್ಲಿ ಫಾಲೋವರ್​ಗಳ ಸಂಖ್ಯೆಯನ್ನು ಹೆಚ್ಚಿಸಲು ಅನೇಕ ಥರ್ಡ್​ ಪಾರ್ಟಿ ಆ್ಯಪ್​ಗಳು ಇವೆ. ಆ ಪೈಕಿ ಸಾಕಷ್ಟು ಜನರು ಉಪಯೋಗಿಸುತ್ತಿರುವ ಅಪ್ಲಿಕೇಶನ್ ಎಂದರೆ ಅದು ಗೆಟ್ಇನ್​ಸ್ಟಾ (GetInsta) ಎಂಬ ಆ್ಯಪ್. ಈ ಆ್ಯಪ್ ಅನ್ನು ಬಳಸಿಕೊಂಡು ನೀವು ಫಾಲೋವರ್ಸ್ ಅಧಿಕ ಮಾಡಬಹುದು. ಅಷ್ಟೇ ಅಲ್ಲದೆ ನಿಮ್ಮ ಪೋಸ್ಟ್​ಗಳಿಗೆ ಹೆಚ್ಚು ಲೈಕ್ಸ್ ಬರುವಂತೆಯೂ ಮಾಡಬಹುದು. ಇದು ನಿಮಗೆ ರಿಯಲ್ ಫಾಲೋವರ್ಸ್ ನೀಡುತ್ತದೆ. ನೀವು ಇದರಲ್ಲಿ ಕಾಯಿನ್​ಗಳನ್ನು ಸಂಪಾದಿಸಿದರೆ ಸಾಕು. ಆರಂಭದಲ್ಲಿ ಕೆಲವು ಉಚಿತ ಕಾಯಿನ್ ನೀಡಿದರೆ ಬಳಿಕ ಹಣ ಕೊಟ್ಟು ಕಾಯಿನ್ ಪಡೆದುಕೊಂಡರೆ ನಿಮ್ಮ ಫಾಲೋವರ್​ಗಳನ್ನು ಹೆಚ್ಚು ಮಾಡಬಹುದು.

ಇದನ್ನೂ ಓದಿ
Image
ಗ್ರಾಹಕರ ಸೈಬರ್ ಸುರಕ್ಷತೆ ಕುರಿತು ನಾರ್ಟನ್ ವರದಿ: ಇ ಕಾಮರ್ಸ್​ ಸೈಟ್ ಉಪಯೋಗಿಸುವ ಮುನ್ನ ಎಚ್ಚರವಾಗಿರಿ
Image
WhatsApp: ದೀಪಾವಳಿಯ ಖುಷಿಯಲ್ಲಿದ್ದವರಿಗೆ ಶಾಕ್: ಈ ಆಂಡ್ರಾಯ್ಡ್-ಐಫೋ​ನ್​ನಲ್ಲಿ ವಾಟ್ಸ್​ಆ್ಯಪ್ ಬಂದ್
Image
ಭಾರತದಲ್ಲಿ 200MP ಕ್ಯಾಮೆರಾದ ಮೋಟೋ ಎಡ್ಜ್ 30 ಆಲ್ಟ್ರಾಕ್ಕೆ ಭರ್ಜರಿ ಬೇಡಿಕೆ: ಮತ್ತೊಂದು ಹೊಸ ವೇರಿಯೆಂಟ್ ರಿಲೀಸ್
Image
Redmi Note 12 Series: 210W ಫಾಸ್ಟ್ ಚಾರ್ಜರ್: ಮಾರುಕಟ್ಟೆಯಲ್ಲಿ ಧೂಳೆಬ್ಬಿಸಲು ಬರುತ್ತಿದೆ ರೆಡ್ಮಿ ನೋಟ್ 12 ಸರಣಿ

Tech Tips: ನಿಮ್ಮಲ್ಲಿ ಉಪಯೋಗಿಸದ ಹಳೆಯ ಸ್ಮಾರ್ಟ್​​ಫೋನಿದ್ದರೆ ಅದನ್ನು ಸಿಸಿಟಿವಿ ಮಾಡಿ: ಹೇಗೆ ಗೊತ್ತೇ?

ಇನ್ನು ಫಾಲೋವರ್ಸ್ ಗ್ಯಾಲರಿ (Followers Gallery) ಎಂಬ ಮತ್ತೊಂದು ಆ್ಯಪ್ ಕೂಡ ಇದೆ. ಇದರಲ್ಲಿ ಕೂಡ ಕಾಯಿನ್ ಮೂಲಕ ಫಾಲೋವರ್ಸ್, ಲೈಕ್ಸ್ ಪಡೆಯಬಹುದಾಗದೆ. ಇದೊಂದು ಉಚಿತ ಆ್ಯಪ್ ಆಗಿದ್ದು ಉಪಯೋಗಿಸಲು ಯಾವುದೇ ಹಣ ನೀಡಬೇಕಾದ ಅಗತ್ಯವಿಲ್ಲ. ಇದರಲ್ಲಿ ಲಾಗಿನ್ ಆಗಲು ಪಾಸ್ವರ್ಡ್ ಅಗತ್ಯ ಕೂಡ ಇರುವುದಿಲ್ಲ. ಕೇವಲ ಯೂಸರ್ ನೇಮ್ ಇದ್ದರೆ ಸಾಕು. ಪ್ರತಿ 24 ಗಂಟೆಗೆ ನಿಮ್ಮ ಫಾಲೋವರ್​​​ಗಳನ್ನು ಇದು ಹೆಚ್ಚಿಸುತ್ತದೆ. ಇನ್​ಸ್ಟಾದಲ್ಲಿ ಅತಿ ಹೆಚ್ಚು ಸಕ್ರಿಯವಾಗಿರುವ ರಿಯಲ್ ಅಕೌಂಟ್​ಗಳನ್ನು ಇದು ಫಾಲೋ  ಮಾಡಿಸುತ್ತದೆ.

ಫಾಲೋವರ್ಸ್ ಹೆಚ್ಚಿಸಲು ವೆಬ್​ಸೈಟ್ ಕೂಡ ಇದೆ:

ಇನ್ನು ಇನ್​ಸ್ಟಾದಲ್ಲಿ ಫಾಲೋವರ್ಸ್​​ ಸಂಖ್ಯೆ ಹೆಚ್ಚಿಸಲು ವೆಬ್‌ಸೈಟ್‌ಗಳು ಇವೆ. www.Skfollowerspro.in ಹಾಗೂ https://locationary.org ವೆಬ್‌ಸೈಟ್‌ಗಳ ಮೂಲಕ ನೀವು ಫಾಲೋವರ್ಸ್​​ನ ಖರೀದಿಸಬಹುದು. ಸರ್ಚ್ ಇಂಜಿನ್ ಆಪ್ಟಿಮೈಸೇಶನ್, ಬ್ಲಾಗಿಂಗ್, ಇನ್​ಫುಯೆನ್ಸರ್ ಮಾರ್ಕೆಟಿಂಗ್, ಸರ್ಚ್ ಮೀಡಿಯಾ ಆಪ್ಟಿಮೈಸೇಶನ್, ಇತ್ಯಾದಿಗಳು ನಿಮ್ಮ ಇನ್​ಸ್ಟಾಗ್ರಾಮ್ ಫಾಲೋವರ್ಸ್​​ ಸಂಖ್ಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ.

ಕೇವಲ ಥರ್ಡ್ ಪಾರ್ಟಿ ಆ್ಯಪ್ ಮೂಲಕ ಮಾತ್ರವಲ್ಲ ಸ್ವತಃ ಇನ್​ಸ್ಟಾಗ್ರಾಮ್​ ಮೂಲಕವೂ ಕೆಲವೊಂದಿಷ್ಟು ಟ್ರಿಕ್ ಉಪಯೋಗಿಸಿ ಫಾಲೋವರ್ಸ್ ಹೆಚ್ಚಿಸಬಹುದು. ಇದರಲ್ಲಿ ಟ್ಯಾಗ್‌ಗಳು ಬಹಳ ಮುಖ್ಯವಾದ ಪಾತ್ರವನ್ನು ವಹಿಸುತ್ತಿವೆ. ನೀವು ಯಾವುದಾದರು ಫೋಟೋ, ರೀಲ್ಸ್ ಹಂಚಿಕೊಳ್ಳುವ ಮೊದಲು ನಿಮ್ಮ ಪೋಸ್ಟ್​ನಲ್ಲಿನ ಶೀರ್ಷಿಕೆಯ ನಂತರ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿದರೆ, ನಿಮ್ಮ ಪೋಸ್ಟ್ ಆ ಹ್ಯಾಶ್‌ಟ್ಯಾಗ್‌ನ ಟ್ರೆಂಡಿಂಗ್ ಪೋಸ್ಟ್​​ಗಳಲ್ಲಿ ಕಾಣಿಸಿಕೊಳ್ಳಬಹುದು. ನಿಮ್ಮ ಚಿತ್ರದ ವಿವರಣೆಯಲ್ಲಿ ಹ್ಯಾಷ್ ಟ್ಯಾಗ್ ಸೇರಿಸುವುದರಿಂದ ಪ್ರಪಂಚದಾದ್ಯಂತ ಇರುವ ಬಳಕೆದಾರರು ನಿಮ್ಮ ಚಿತ್ರವನ್ನು ಸುಲಭವಾಗಿ ನೋಡಬಹುದು. ಆಗ ನಿಮ್ಮ ಖಾತೆಗೆ ಪ್ರವೇಶಿಸಿ ಅವರಿಗೆ ನಿಮ್ಮ ಪೋಸ್ಟ್ ಇಷ್ಟವಾದಲ್ಲಿ ಫಾಲೋ ಮಾಡಬಹುದು. ಇನ್​ಸ್ಟಾದಲ್ಲಿ ಹೆಚ್ಚಾಗಿ ಉಪಯೋಗಿಸುವ ಕೆಲವು ಹ್ಯಾಷ್ ಟ್ಯಾಗುಗಳೆಂದರೆ #Love, #Instadaily, #Instagood, #Food, #PhotoOfTheDay, InstaReels.

Tech Tips: ಇನ್​​ಸ್ಟಾಗ್ರಾಮ್​ನಲ್ಲಿ ಫೋಟೋ, ರೀಲ್ಸ್ ಎಷ್ಟು ಗಂಟೆಗೆ ಹಾಕಿದರೆ ಹೆಚ್ಚು ಲೈಕ್ಸ್ ಬರುತ್ತೆ?: ಇಲ್ಲಿದೆ ನೋಡಿ

ಈ ವಿಚಾರ ಅನೇಕರಿಗೆ ತಿಳಿದಿಲ್ಲ. ನೀವು ಒಂದು ಫೋಟೋ ಅಥವಾ ರೀಲ್ಸ್ ಅನ್ನು ಪೋಸ್ಟ್ ಮಾಡುವಾಗ ಅದಕ್ಕೆ ನೀಡುವ ಶೀರ್ಷಿಕೆ ಕೂಡ ನಿಮ್ಮ ಫಾಲೋವರ್​ಗಳನ್ನು ಹೆಚ್ಚಿಸಬಹುದು.ಒಂದು ಸಂಶೋಧನೆಯ ಪ್ರಕಾರ ಇನ್​ಸ್ಟಾಗ್ರಾಮ್​ನಲ್ಲಿ 1 ದಶಲಕ್ಷಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಜನರು ಅವರ ಪೋಸ್ಟ್​ಗಳು ಶೀರ್ಷಿಕೆಗಳಿಲ್ಲದೆ ಹೆಚ್ಚು ಇಷ್ಟವಾಗುತ್ತವೆ. ಅದೇರೀತಿ 10 ಸಾವಿರ ಅನುಯಾಯಿಗಳನ್ನು ಹೊಂದಿರುವವರು, ಅವರ ಪೋಸ್ಟ್​ಗಳು ಕನಿಷ್ಠ 50 ಅಕ್ಷರಗಳ ಶೀರ್ಷಿಕೆಗಳನ್ನು ಹೊಂದಿರಬೇಕು. ಶೀರ್ಷಿಕೆಯಲ್ಲಿ ಎಮೋಜಿಯ ಬಳಕೆ ಮಾಡಿದರೆ ಜನರು ಹೆಚ್ಚು ಅಟ್ರಾಕ್ಟ್ ಆಗುತ್ತಾರಂತೆ.

ವಿಶೇಷ ಸೂಚನೆ:

ಇನ್​ಸ್ಟಾಗ್ರಾಮ್​ನಲ್ಲಿ ಫಾಲೋವರ್ಸ್ ಹೆಚ್ಚಿಸಲು, ಫಾಂಟ್ ಸ್ಟೈಲಿಶ್ ಆಗಿ ಕಾಣಲು, ಲೈಕ್ಸ್ ಬರಲು, ಕಮೆಂಟ್ ಮಾಡಲೆಂದು ಅನೇಕ ಥರ್ಡ್ ಪಾರ್ಟಿ ಆ್ಯಪ್​ಗಳಿವೆ. ಆದರೆ, ಇದು ಸಂಪೂರ್ಣ ಸುರಕ್ಷಿತವಾಗಿದೆ ಎಂದು ಹೇಳಲು ಸಾಧ್ಯವಿಲ್ಲ. ಈರೀತಿಯ ಆ್ಯಪ್​ಗಳಿಗೆ ಜನರು ಮರಳಾಗುತ್ತಾರೆ ಎಂದು ತಿಳಿದು ಹ್ಯಾಕರ್​ಗಳು ಫೇಕ್ ಆ್ಯಪ್ ಕ್ರಿಯೆಟ್ ಮಾಡಿ ಇಟ್ಟಿರುತ್ತಾರೆ. ಅದನ್ನು ನೀವು ಇನ್​ಸ್ಟಾಲ್ ಮಾಡಿ ಲಾಗಿನ್ ಆಗಿ ಉಪಯೋಗಿಸಿದರೆ ನಿಮ್ಮ ವೈಯಕ್ತಿಕ ಮಾಹಿತಿ ಸೋರಿಕೆ ಆಗಬಹುದು. ಹೀಗಾಗಿ ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಸುರಕ್ಷಿತರಾಗಿದ್ದರೆ ಮಾತ್ರ ಬಳಸಬಹುದು. ಈರೀತಿಯ ಯಾವುದೇ ಆ್ಯಪ್ ಇನ್​ಸ್ಟಾಲ್ ಮಾಡುವ ಮುನ್ನ ಎಚ್ಚರ ವಹಿಸಿಕೊಳ್ಳಿ.

ಮತ್ತಷ್ಟು ಟೆಕ್ನಾಲಜಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ಭಗವಾನ್ ಜಗನ್ನಾಥನ ವಿಗ್ರಹ ಖರೀದಿಸಿ, ಡಿಜಿಟಲ್ ಪೇಮೆಂಟ್ ಮಾಡಿದ ಪಿಎಂ ಮೋದಿ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ತ್ರಿವರ್ಣ ಧ್ವಜದಲ್ಲಿ ಉರ್ದು ವಾಕ್ಯ ಬರೆದು ದರ್ಗಾಕ್ಕೆ ಕಟ್ಟಿದ ಯುವಕ:ವಿಡಿಯೋ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ದಸರಾ ಉದ್ಘಾಟನೆ ಅನಿರೀಕ್ಷಿತವಾಗಿ ಬಂದ ಸಂತೋಷದ ಕ್ಷಣ; ಹಂಪಾ ನಾಗರಾಜಯ್ಯ
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಬಯೋಲಾಜಿಕಲ್ ವಾರ್ ರೀತಿ ಏಡ್ಸ್ ಇರುವವರನ್ನು ಬಳಸಿದ್ದಾರೆ: ಡಿಕೆ ಸುರೇಶ್​
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ
ಹೆಚ್​ಡಿ ಕುಮಾರಸ್ವಾಮಿ ಸುದ್ದಿಗೋಷ್ಠಿ