ಬಹುನಿರೀಕ್ಷಿತ ಐಸಿಸಿ ಏಕದಿನ ವಿಶ್ವಕಪ್ (ICC World Cup 2023) ಟೂರ್ನಿಗೆ ಚಾಲನೆ ಸಿಕ್ಕಾಗಿದೆ. ಗುರುವಾರ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ನ್ಯೂಝಿಲೆಂಡ್ ಭರ್ಜರಿ ಜಯ ಸಾಧಿಸಿತು. ಇಂದು ಪಾಕಿಸ್ತಾನ-ನೆದರ್ಲೆಂಡ್ಸ್ ತಂಡ ಮುಖಾಮುಖಿ ಆಗಲಿದೆ. ವಿಶ್ವಕಪ್ನ ಎಲ್ಲ ಪಂದ್ಯಗಳು ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ಪ್ರಸಾರ ಮಾಡಲಾಗುತ್ತದೆ ಮತ್ತು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಡಿಜಿಟಲ್ ಲೈವ್ ಸ್ಟ್ರೀಮ್ ಇರುತ್ತದೆ. ಹಾಟ್‌ಸ್ಟಾರ್ ಮೊಬೈಲ್ ಆವೃತ್ತಿಯಲ್ಲಿ ಮಾತ್ರ ವಿಶ್ವಕಪ್ ಪಂದ್ಯವನ್ನು ಉಚಿತವಾಗಿ ವೀಕ್ಷಿಸಬಹುದು. ಟಿವಿ ಅಥವಾ ಲ್ಯಾಪ್‌ಟಾಪ್‌ನಂತಹ ದೊಡ್ಡ ಪರದೆಯಲ್ಲಿ ಪಂದ್ಯ ಆನಂದಿಸಲು ಬಯಸುವವರು ಚಂದಾದಾರಿಕೆಯನ್ನು ಹೊಂದಿರಬೇಕು.
ಹೀಗಿರುವಾಗ ಡಿಸ್ನಿ+ ಹಾಟ್‌ಸ್ಟಾರ್‌ನೊಂದಿಗೆ ಪಾಲುದಾರಿಕೆಯನ್ನು ಹೊಂದಿರುವ ರಿಲಯನ್ಸ್ ಜಿಯೋ ಐಸಿಸಿ ಏಕದಿನ ವಿಶ್ವಕಪ್ ಸಂದರ್ಭ ವಿಶೇಷ ಪ್ರಿಪೇಯ್ಡ್ ಯೋಜನೆಗಳನ್ನು ನೀಡುವ ಮೂಲಕ ಬಳಕೆದಾರರಿಗೆ ಮತ್ತಷ್ಟು ಹತ್ತಿರವಾಗಿದೆ. ಈ ಪ್ಲಾನ್ಗಳನ್ನು ಅಳವಡಿಸುವ ಮೂಲಕ ನೀವು ಟಿವಿ ಅಥವಾ ಲ್ಯಾಪ್‌ಟಾಪ್‌ನಂತಹ ದೊಡ್ಡ ಪರದೆಯ ಮೇಲೆ ಡಿಸ್ನಿ+ ಹಾಟ್‌ಸ್ಟಾರ್ ಮೂಲಕ ಪಂದ್ಯವನ್ನು ವೀಕ್ಷಿಸಬಹುದು.
ಪ್ರತಿ ಯೋಜನೆಯು 100 ದೈನಂದಿನ SMS, ಅನಿಯಮಿತ ಕರೆ ಮತ್ತು ಜಿಯೋ ಅಪ್ಲಿಕೇಶನ್‌ಗಳಿಗೆ ಪ್ರವೇಶದಂತಹ ಹೆಚ್ಚುವರಿ ಸೌಲಭ್ಯದೊಂದಿಗೆ ಬರುತ್ತದೆ.
ಜಿಯೋದಲ್ಲಿ ಹೆಚ್ಚುವರಿ ಡೇಟಾ ಅಗತ್ಯವಿರುವವರಿಗೆ, ಮೂರು ತಿಂಗಳವರೆಗೆ ಡಿಸ್ನಿ+ ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಳಿಸಿಕೊಂಡು 30 ದಿನಗಳವರೆಗೆ ಹೆಚ್ಚುವರಿ 40GB ಡೇಟಾವನ್ನು ಒದಗಿಸುವ 331 ರೂ. ಆಡ್-ಆನ್ ಪ್ಯಾಕ್ ಇದೆ.
ಇನ್ನು ನೀವು ಮನೋರಂಜನೆ ಪ್ಯಾಕ್ ಬೇಕಿದ್ದರೆ ಜಿಯೋದ 1099 ರೂ. ಪ್ಲಾನ್ ಆಯ್ಕೆ ಮಾಡಿ. ಈ ಯೋಜನೆಯು ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಆದರೆ ಇದು ಮೊಬೈಲ್ ಬಳಕೆದಾರರಿಗೆ ಮಾತ್ರ ಲಭ್ಯವಿದೆ ಎಂಬುದನ್ನು ಗಮನಿಸಬೇಕು. ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ, ನೀವು ಜಿಯೋ ವೆಲ್ಕಮ್ ಆಫರ್ನೊಂದಿಗೆ ಅನಿಯಮಿತ 5G ಡೇಟಾವನ್ನು (ದಿನಕ್ಕೆ 2GB) ಪಡೆಯುತ್ತೀರಿ. ಜೊತೆಗೆ ಅನಿಯಮಿತ ವಾಯಿಸ್ ಕರೆಯನ್ನು ಸಹ ಪಡೆಯುತ್ತೀರಿ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಅಂತೆಯೆ ಜಿಯೋದ 1499 ರೂ. ಪ್ಲಾನ್ ಕೂಡ ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ ಬರುತ್ತದೆ. ಆದರೆ ಮೊಬೈಲ್‌ಗಳಿಗೆ ಸೀಮಿತವಾಗಿಲ್ಲ, ನೀವು ಇದನ್ನು ದೊಡ್ಡ ಪರದೆಯ ಮೇಲೆ ಸಹ ನೋಡಬಹುದು. ನೆಟ್‌ಫ್ಲಿಕ್ಸ್ ಚಂದಾದಾರಿಕೆಯೊಂದಿಗೆ, ವೆಲ್ಕಮ್ ಆಫರ್ನೊಂದಿಗೆ ಅನಿಯಮಿತ 5G ಡೇಟಾವನ್ನು (ದಿನಕ್ಕೆ 3GB) ಪಡೆಯುತ್ತೀರಿ. ಜೊತೆಗೆ ಅನಿಯಮಿತ ವಾಯಿಸ್ ಕರೆಯನ್ನು ಸಹ ಪಡೆಯುತ್ತೀರಿ. ಇದು 84 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:41 am, Fri, 6 October 23