JIO Prepaid Plans: ವಿ, ಏರ್ಟೆಲ್​ಗೆ ಬಿಗ್ ಶಾಕ್: ಜಿಯೋದಿಂದ ಎರಡು ಧಮಾಕ ಪ್ಲಾನ್ ಬಿಡುಗಡೆ

| Updated By: Vinay Bhat

Updated on: Jan 20, 2023 | 1:48 PM

Reliance JIO: ಜಿಯೋ ದಿಢೀರ್ ಆಗಿ ತನ್ನ ಗ್ರಾಹಕರಿಗೆ 899 ರೂ. ಮತ್ತು 349 ರೂ. ವಿನ ಎರಡು ಹೊಸ ಪ್ರಿಪೇಯ್ಡ್‌ ಪ್ಲಾನ್​ಗಳನ್ನು (Prepaid Plan) ಅನ್ನು ಬಿಡುಗಡೆ ಮಾಡಿದೆ.

JIO Prepaid Plans: ವಿ, ಏರ್ಟೆಲ್​ಗೆ ಬಿಗ್ ಶಾಕ್: ಜಿಯೋದಿಂದ ಎರಡು ಧಮಾಕ ಪ್ಲಾನ್ ಬಿಡುಗಡೆ
Reliance JIO
Follow us on

ಟೆಲಿಕಾಂ ಮಾರುಕಟ್ಟೆಯಲ್ಲಿ ಜಿಯೋ (Jio) ಹಾಗೂ ಏರ್ಟೆಲ್ (Airtel) ನಡುವಣ ಪೈಪೋಟಿ ಮುಂದುವರೆಯುತ್ತಲೇ ಇದೆ. ನಂಬರ್ ಒನ್ ಸ್ಥಾನಕ್ಕಾಗಿ ಹೋರಾಡುತ್ತಿರುವ ಏರ್ಟೆಲ್ ಬಳಕೆದಾರರಿಗೆ ಆಕರ್ಷಕ ಯೋಜನೆಗಳನ್ನು ಬಿಡುಗಡೆ ಮಾಡುತ್ತಿದೆ. ಇತ್ತ ಜಿಯೋ ಕೂಡ ನಂಬರ್ ಒನ್ ಸ್ಥಾನದಲ್ಲೇ ಮುಂದುವರೆಯಲು ವಿಶೇಷ ಕೊಡುಗೆಗಳನ್ನು ನೀಡುತ್ತಿದೆ. ಜೊತೆಗೆ ಹೊಸ ಹೊಸ ಬಳಕೆದಾರರನ್ನು ಸೆಳೆಯುವಲ್ಲಿ ಕೂಡ ಯಶಸ್ವಿಯಾಗುತ್ತಿದೆ. ಬೆಲೆ ಹೆಚ್ಚಳ ಮಾಡಿದ್ದರೂ ತನ್ನ ಪ್ಲಾನ್​ನ ಜೊತೆಗೆ ಇತರೆ ವಿಶೇಷ ಆಫರ್​ಗಳನ್ನು ನೀಡುತ್ತಿರುವ ಜಿಯೋ ಯೋಜನೆಗಳು ಹೆಚ್ಚಿನವರ ಗಮನ ಸೆಳೆಯುತ್ತಿವೆ. ಇದೀಗ ಜಿಯೋ ದಿಢೀರ್ ಆಗಿ ತನ್ನ ಗ್ರಾಹಕರಿಗೆ 899 ರೂ. ಮತ್ತು 349 ರೂ. ವಿನ ಎರಡು ಹೊಸ ಪ್ರಿಪೇಯ್ಡ್‌ ಪ್ಲಾನ್​ಗಳನ್ನು (Prepaid Plan) ಅನ್ನು ಬಿಡುಗಡೆ ಮಾಡಿದೆ.

ಜಿಯೋ ಟೆಲಿಕಾಂ ಹೊಸ 899 ರೂ. ಪ್ರಿಪೇಯ್ಡ್‌ ಯೋಜನೆ 90 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದುಕೊಂಡಿದೆ. ಇದರಲ್ಲಿ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಒಟ್ಟಾರೆ ಪೂರ್ಣ ವ್ಯಾಲಿಡಿಟಿ ಅವಧಿಗೆ 225 GB ಡೇಟಾ ಪ್ರಯೋಜನ ಸಿಗುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ, ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ದೊರೆಯುತ್ತದೆ. ಇವುಗಳ ಜೊತೆಗೆ ಜಿಯೋ ಆಪ್​ಗಳನ್ನೂ ಬಳಸಬಹುದು.

ಇನ್ನು ಜಿಯೋ ಟೆಲಿಕಾಂ ಹೊಸದಾಗಿ ಪರಿಚಯಿಸಿರುವ 349 ರೂ. ಪ್ರಿಪೇಯ್ಡ್‌ ಯೋಜನೆ 30 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಯೋಜನೆಯಲ್ಲಿ ಪ್ರತಿದಿನ 2.5 GB ಡೇಟಾ ಪ್ರಯೋಜನಗಳು ಗ್ರಾಹಕರಿಗೆ ಲಭ್ಯವಾಗಲಿದ್ದು, ಒಟ್ಟಾರೆ ಪೂರ್ಣ ವ್ಯಾಲಿಡಿಟಿ ಅವಧಿಗೆ 75 GB ಡೇಟಾ ಸಿಗುತ್ತದೆ. ಹಾಗೆಯೇ ಅನಿಯಮಿತ ವಾಯಿಸ್‌ ಕರೆಯ ಪ್ರಯೋಜನ, ಪ್ರತಿದಿನ ಉಚಿತ 100 ಎಸ್‌ಎಮ್‌ಎಸ್‌ ಪ್ರಯೋಜನ ಸಹ ದೊರೆಯುತ್ತದೆ. ಇದರೊಂದಿಗೆ ಜಿಯೋ ಆಪ್​ಗಳನ್ನು ಉಚಿತವಾಗಿ ಬಳಸಬಹುದು.

ಇದನ್ನೂ ಓದಿ
Reliance JIO: 56GB ಡೇಟಾ, ಅನಿಯಮಿತ ಕರೆ: ಜಿಯೋ ಕಂಪನಿಯ ಧಮಾಕ ಆಫರ್
Gaming Smartphones: ಕಡಿಮೆ ಬೆಲೆಗೆ ಗೇಮಿಂಗ್ ಸ್ಮಾರ್ಟ್​ಫೋನ್ ಬೇಕೇ?: ಇಲ್ಲಿದೆ 30,000 ರೂ. ಒಳಗಿನ ಬೆಸ್ಟ್ ಫೋನ್
Cyber Fraud: ನೀವು ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದರೆ ಎಚ್ಚರ: ಹೊಸ ಸ್ಕ್ಯಾಮ್​ಗೆ 22,396 ರೂ. ಕಳೆದುಕೊಂಡ ವ್ಯಕ್ತಿ
JIO 5G: ಈ 5G ಸ್ಮಾರ್ಟ್​ಫೋನ್​ಗಳಲ್ಲಿ ಜಿಯೋ 5G ಸಪೋರ್ಟ್ ಆಗುವುದಿಲ್ಲ: ನಿಮ್ಮ ಫೋನ್ ಇದೆಯೇ ನೋಡಿ

Twitter: ಆದಾಯಕ್ಕಾಗಿ ಯೂಸರ್ ನೇಮ್​ ಮಾರಾಟಕ್ಕೆ ಮುಂದಾದ ಟ್ವಿಟರ್; ಹೆಚ್ಚಾಗುತ್ತಿದೆ ಹ್ಯಾಕ್ ಆಗುವ ಆತಂಕ

ಜಿಯೋ ಟೆಲಿಕಾಂನಲ್ಲಿ ಮುಖ್ಯವಾಗಿ 299 ರೂ. ಪ್ರಿಪೇಯ್ಡ್ ಯೋಜನೆ ಹೆಚ್ಚು ಗಮನ ಸೆಳೆದಿದೆ. ಇದರಲ್ಲಿ ಬಳಕೆದಾರರು ಪ್ರತಿದಿನ 2 GB ಇಂಟರ್ನೆಟ್ ಪ್ರಯೋಜನವನ್ನು ಪಡೆಯುತ್ತಾರೆ. ಹಾಗೆಯೇ ಸಂಪೂರ್ಣ ಅನಿಯಮಿತ ಉಚಿತ ಕರೆ ಸೌಲಭ್ಯ ನೀಡಲಾಗಿದೆ. ಪ್ರತಿದಿನ 100 ಎಸ್ ಎಮ್ ಎಸ್ ಸೌಲಭ್ಯ ಲಭ್ಯವಿದೆ. ಇದು ಒಟ್ಟು 28 ದಿನಗಳ ವ್ಯಾಲಿಡಿಟಿ ಅವಧಿ ಹೊಂದಿದೆ. ಈ ಯೋಜನೆ ಯಲ್ಲಿ ಒಟ್ಟು 56 GB ಡೇಟಾ ಸಿಗಲಿದ್ದು, ಜಿಯೋ ಆ್ಯಪ್ ಅನ್ನು ಸಹ ಪಡೆಯಬಹುದು.

ಜಿಯೋದಲ್ಲಿ 479 ರೂ. ಪ್ರಿಪೇಯ್ಡ್ ಯೋಜನೆ ಕೂಡ ಇದ್ದು ಇದು ಒಟ್ಟು 56 ದಿನಗಳ ವ್ಯಾಲಿಡಿಟಿ ಅವಧಿಯನ್ನು ಪಡೆದಿದೆ. ಈ ಯೋಜನೆಯಲ್ಲಿ ಬಳಕೆದಾರರಿಗೆ ಪ್ರತಿದಿನ 1.5 GB ಡೇಟಾ ಸೌಲಭ್ಯವನ್ನು ಒದಗಿಸುತ್ತದೆ. ಇದರೊಂದಿಗೆ ಜಿಯೋ ದಿಂದ ಜಿಯೋಗೆ ಸೇರಿದಂತೆ ಇತರೆ ನೆಟವರ್ಕ್ ಕರೆಗಳು ಸಹ ಅನಿಯಮಿತ ಉಚಿತ ಸೌಲಭ್ಯ ಪಡೆದಿವೆ. ಇದರೊಂದಿಗೆ ಪ್ರತಿದಿನ 100 ಉಚಿತ ಎಸ್ ಎಮ್ ಎಸ್ ಸೌಲಭ್ಯ ನೀಡುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 1:48 pm, Fri, 20 January 23