JIO 5G: ಈ 5G ಸ್ಮಾರ್ಟ್​ಫೋನ್​ಗಳಲ್ಲಿ ಜಿಯೋ 5G ಸಪೋರ್ಟ್ ಆಗುವುದಿಲ್ಲ: ನಿಮ್ಮ ಫೋನ್ ಇದೆಯೇ ನೋಡಿ

5G Smartphones: ನೀವೇನಾದರೂ ಜಿಯೋ 5G ಸಪೋರ್ಟ್‌ ಇರುವ ನಗರಗಳಲ್ಲಿ ಇದ್ದರೆ, ಮೈ ಜಿಯೋ (MyJio) ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್‌ ಆಫರ್ ಪಡೆಯಬಹುದು. ಆದರೆ, ಈ 5G ಸ್ಮಾರ್ಟ್​ಫೋನ್​ಗಳಲ್ಲಿ ಮಾತ್ರ ಜಿಯೋ 5ಜಿ ಸಪೋರ್ಟ್ ಆಗುವುದಿಲ್ಲ.

JIO 5G: ಈ 5G ಸ್ಮಾರ್ಟ್​ಫೋನ್​ಗಳಲ್ಲಿ ಜಿಯೋ 5G ಸಪೋರ್ಟ್ ಆಗುವುದಿಲ್ಲ: ನಿಮ್ಮ ಫೋನ್ ಇದೆಯೇ ನೋಡಿ
Reliance Jio 5G
Follow us
TV9 Web
| Updated By: Vinay Bhat

Updated on: Jan 19, 2023 | 12:07 PM

ಭಾರತದಲ್ಲಿ ಈಗಾಗಲೇ 5ಜಿ ಸೇವೆಯನ್ನು (5G Service) ಆರಂಭ ಮಾಡಲಾಗಿದ್ದು ಲಕ್ಷಗಟ್ಟಲೆ ಜನರು ಉಪಯೋಗಿಸುತ್ತಿದ್ದಾರೆ. ಏರ್ಟೆಲ್ ಹಾಗೂ ರಿಲಯನ್ಸ್ ಜಿಯೋದಂತಹ (Reliance Jio) ಪ್ರಮುಖ ಟೆಲಿಕಾಂ ಸಂಸ್ಥೆಗಳು 5ಜಿ ಸೇವೆ ಪ್ರಾಯೋಗಿಕ ಪ್ರಯೋಗವನ್ನು ಆರಂಭಿಸಿದೆ. ಮೊನ್ನೆಯಷ್ಟೆ ಕರ್ನಾಟಕದ ಮೈಸೂರು, ದಾವಣಗೆರೆ, ಹೊಸಪೇಟೆ, ಶಿವಮೊಗ್ಗ, ಬೀದರ್, ಗದಗ-ಬೆಟಗೇರಿ ಸೇರಿದಂತೆ ಇತರ 11 ನಗರಗಳಲ್ಲಿ ಜಿಯೋ ಟ್ರೂ 5ಜಿ ಸೇವೆಗಳ ಬಹು-ರಾಜ್ಯ ಬಿಡುಗಡೆಯನ್ನು ಘೋಷಿಸಿದೆ. ಜಿಯೋ ತನ್ನ ಗ್ರಾಹಕರಿಗೆ ಮೈ ಜಿಯೋ ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್‌ ಆಫರ್‌ನ ಆಹ್ವಾನವನ್ನು ಕಳುಹಿಸುತ್ತದೆ. ಈ ನಿಟ್ಟಿನಲ್ಲಿ ನೀವೇನಾದರೂ ಜಿಯೋ 5G ಸಪೋರ್ಟ್‌ ಇರುವ ನಗರಗಳಲ್ಲಿ ಇದ್ದರೆ, ಮೈ ಜಿಯೋ (MyJio) ಅಪ್ಲಿಕೇಶನ್‌ನಲ್ಲಿ ವೆಲ್‌ಕಮ್‌ ಆಫರ್ ಪಡೆಯಬಹುದು. ಆದರೆ, ಈ 5G ಸ್ಮಾರ್ಟ್​ಫೋನ್​ಗಳಲ್ಲಿ ಮಾತ್ರ ಜಿಯೋ 5ಜಿ ಸಪೋರ್ಟ್ ಆಗುವುದಿಲ್ಲ.

ಟೆಲಿಕಾಂ ಟಾಕ್ ಮಾಡಿರುವ ವರದಿಯ ಪ್ರಕಾರ, ಶವೋಮಿ ಕಂಪನಿಯ ಶವೋಮಿ ಎಂಐ 10 ಮತ್ತು ಎಂಐ 10i ಸ್ಮಾರ್ಟ್​​ಫೋನ್​ಗಳಲ್ಲಿ ಜಿಯೋ 5ಜಿ ಬೆಂಬಲ ಆಗುವುದಿಲ್ಲವಂತೆ. ಶವೋಮಿ ಭಾರತದಲ್ಲಿ ಅನೇಕ 5ಜಿ ಸ್ಮಾರ್ಟ್​ಫೋನ್​ಗಳನ್ನು ಪರಿಚಯಿಸಿ ಪ್ರಮುಖ ಬ್ರ್ಯಾಂಡ್ ಆಗಿ ಗುರುತಿಸಿಕೊಂಡಿದೆ. ಆದರೆ, ಈ ಎರಡು ಮೊಬೈಲ್​ಗಳಲ್ಲಿ ಜಿಯೋ 5ಜಿ ಸಪೋರ್ಟ್ ಆಗದಿರುವುದು ಬಳಕೆದಾರರಿಗೆ ಬೇಸರ ತರಿಸಿದೆ. ಶವೋಮಿ ಕಂಪನಿಯ ಎಂಐ 11 ಆಲ್ಟ್ರಾ 5G, ಶವೋಮಿ 12 ಪ್ರೊ 5G, ಶವೋಮಿ 11T ಪ್ರೊ 5G, ರೆಡ್ಮಿ ನೋಟ್ 11 ಪ್ರೊ 5G, ಶವೋಮಿ 11 Lite NE 5G, ರೆಡ್ಮಿ ನೋಟ್ 11T 5G, ರೆಡ್ಮಿ 11 ಪ್ರೈಮ್ 5G, ರೆಡ್ಮಿ ನೋಟ್ 10T 5G, ಎಂಐ 11X 5G, ಎಂಐ 11X ಪ್ರೊ 5G, ರೆಡ್ಮಿ K50i 5G, ಶವೋಮಿ 11i 5G ಮತ್ತು ಶವೋಮಿ 11i ಹೈಪರ್ ಚಾರ್ಜರ್ 5G ಫೋನ್​ಗಳಲ್ಲಿ ಜಿಯೋ 5ಜಿ ಸಪೋರ್ಟ್ ಆಗುತ್ತದೆ.

5ಜಿ ತಂತ್ರಜ್ಞಾನವು ತಡೆರಹಿತ ಕವರೇಜ್, 5G ತಂತ್ರಜ್ಞಾನ ಶತಕೋಟಿ ಡಿವೈಸ್​ಗಳನ್ನು ಸಂಪರ್ಕಿಸಲು ಸಹಾಯ ಮಾಡುತ್ತದೆ. ಹೆಚ್ಚಿನ ವೇಗದಲ್ಲಿ ಉತ್ತಮ ಗುಣಮಟ್ಟದ ವಿಡಿಯೊ ಕರೆ ಸೇವೆಗಳನ್ನು ಒದಗಿಸುತ್ತದೆ. ಉತ್ತಮ ಮತ್ತು ಗುಣಮಟ್ಟದ ವಿಡಿಯೋ ಅಥವಾ ಚಲನಚಿತ್ರವನ್ನು ಮೊಬೈಲ್ ಸಾಧನದಲ್ಲಿ ಕೆಲವೇ ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಲು (ಜನಸಂದಣಿ ಇರುವ ಪ್ರದೇಶಗಳಲ್ಲಿಯೂ ಸಹ) ಅನುಮತಿಸುತ್ತದೆ. 5G ಸಪೋರ್ಟ್​​ ಸ್ಮಾರ್ಟ್​ಫೋನ್​​ ಇದ್ದಾಗ ಮಾತ್ರ 5G ವೇಗದ ಬಗ್ಗೆ ತಿಳಿಯುತ್ತದೆ. ಒಂದು ವೇಳೆ ನಿಮ್ಮ ಮೊಬೈಲ್‌ 5G ಸೇವೆಯನ್ನು ಬೆಂಬಲಿಸದಿದ್ದರೆ, ನೀವು ಹೊಸ ಮೊಬೈಲ್‌ನ್ನು ಖರೀದಿಸಬೇಕಾಗುತ್ತದೆ. ನಿಮ್ಮ ಫೋನ್​ 5G ಅನ್ನು ಸಪೋರ್ಟ್​ ಮಾಡುತ್ತಿದೆಯಾ ಎಂದು ಹೀಗೆ ಪರಿಶೀಲಿಸಿ.

ಇದನ್ನೂ ಓದಿ
Image
WhatsApp Voice Status: ವಾಯ್ಸ್ ಸ್ಟೇಟಸ್: ವಾಟ್ಸ್​ಆ್ಯಪ್ ಆಂಡ್ರಾಯ್ಡ್ ಬಳಕೆದಾರರಿಗೆ ಬರುತ್ತಿದೆ ಅಚ್ಚರಿಯ ಫೀಚರ್
Image
Twitter Bird: ಪೀಠೋಪಕರಣ ಸೇರಿದಂತೆ ಟ್ವಿಟರ್ ಪ್ರಧಾನ ಕಚೇರಿ ವಸ್ತುಗಳ ಹರಾಜು; ಹಕ್ಕಿ ಪ್ರತಿಮೆಗೆ 1 ಲಕ್ಷ ಡಾಲರ್
Image
IPL 2023: ಈ ಬಾರಿ ಐಪಿಎಲ್ ಉಚಿತ ಪ್ರಸಾರ: ವರದಿ
Image
PLI scheme: ಐಟಿ ಸರ್ವರ್, ಹಾರ್ಡ್​ವೇರ್​ಗೂ ಪಿಎಲ್​ಐ ಸ್ಕೀಮ್​; ಏನಿದು?

Type C Charger: ಎಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೆ ಟೈಪ್ ಸಿ ಚಾರ್ಜರ್ ಬಳಕೆಗೆ ಸರ್ಕಾರ ಶಿಫಾರಸು

  • ನಿಮ್ಮ Android ಫೋನ್‌ನಲ್ಲಿ, ಸೆಟ್ಟಿಂಗ್‌ಗಳ ಅಪ್ಲಿಕೇಶನ್‌ಗೆ ಹೋಗಿ.
  • ‘Wi-Fi & Network’ ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
  • ಈಗ ‘SIM & Network’ ಆಯ್ಕೆಯನ್ನು ಕ್ಲಿಕ್ ಮಾಡಿ.
  • ಈಗ ನೀವು ‘ಆದ್ಯತೆಯ ನೆಟ್‌ವರ್ಕ್ ಪ್ರಕಾರ’ ಆಯ್ಕೆಯ ಅಡಿಯಲ್ಲಿ ಎಲ್ಲಾ ತಂತ್ರಜ್ಞಾನಗಳ ಪಟ್ಟಿಯನ್ನು ನೋಡಲು ಸಾಧ್ಯವಾಗುತ್ತದೆ.
  • ನಿಮ್ಮ ಫೋನ್ 5G ಅನ್ನು ಸಪೋರ್ಟ್​ ಮಾಡಿದರೆ, ಅದನ್ನು 2G/3G/4G/5G ಎಂದು ಪಟ್ಟಿ ಮಾಡಲಾಗುತ್ತದೆ.

ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ