Type C Charger: ಎಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೆ ಟೈಪ್ ಸಿ ಚಾರ್ಜರ್ ಬಳಕೆಗೆ ಸರ್ಕಾರ ಶಿಫಾರಸು
ಗ್ರಾಹಕರು ವಿಭಿನ್ನ ಚಾರ್ಜರ್ಗಳನ್ನು ಹೊಂದಬೇಕಾಗಿರುವುದು ಹೆಚ್ಚು ಖರ್ಚಿಗೂ ಕಾರಣವಾಗುತ್ತಿದೆ. ಇ-ತ್ಯಾಜ್ಯದ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ಗ್ರಾಹಕರಿಗೆ ಅನನುಕೂಲವಾಗುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಶ್ವದಾದ್ಯಂತ ಎಲ್ಲ ದೇಶಗಳು ಮುಂದಾಗಿವೆ ಎಂದು ಬಿಐಎಸ್ ತಿಳಿಸಿದೆ.
ನವದೆಹಲಿ: ಮೊಬೈಲ್ ಫೋನ್, ಲ್ಯಾಪ್ಟಾಪ್ಗಳು, ನೋಟ್ಬುಕ್ಸ್ ಹಾಗೂ ಇತರ ಎಲ್ಲ ಮಾದರಿಯ ಎಲೆಕ್ಟ್ರಾನಿಕ್ ಸಾಧನಗಳಿಗೆ ಟೈಪ್ ಸಿ ಚಾರ್ಜರ್ (Type C Charger) ಅನ್ನೇ ಬಳಸುವಂತೆ ಕೇಂದ್ರ ಸರ್ಕಾರ ಶಿಫಾರಸು ಮಾಡಿದೆ. ಇ-ತ್ಯಾಜ್ಯದ ಪ್ರಮಾಣ ಕಡಿಮೆ ಮಾಡುವುದು ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ. ಸ್ಮಾರ್ಟ್ಫೋನ್ಗಳು ಸೇರಿದಂತೆ ಇತರ ಎಲ್ಲ ಎಲೆಕ್ಟ್ರಾನಿಕ್ ಸಾಧನಗಳಿಗೆ ಟೈಪ್ ಸಿ ಚಾರ್ಜರ್ ಸಾಮಾನ್ಯ ಚಾರ್ಜಿಂಗ್ ಪರಿಹಾರ ನೀಡುತ್ತದೆ. ಒಂದೇ ರೀತಿಯ ಚಾರ್ಜರ್ ಅನ್ನು ಎಲ್ಲ ಸಾಧನಗಳಿಗೆ ಬಳಸುವುದರಿಂದ ಗ್ರಾಹಕರಿಗೂ ಅನುಕೂಲವಾಗುತ್ತದೆ. ವಿಭಿನ್ನ ಚಾರ್ಜರ್ಗಳ ಖರೀದಿಯೂ ತಪ್ಪುತ್ತದೆ ಎಂದು ‘ಬ್ಯುರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್ (BIS)’ ತಿಳಿಸಿದೆ.
ಗ್ರಾಹಕರು ವಿಭಿನ್ನ ಚಾರ್ಜರ್ಗಳನ್ನು ಹೊಂದಬೇಕಾಗಿರುವುದು ಹೆಚ್ಚು ಖರ್ಚಿಗೂ ಕಾರಣವಾಗುತ್ತಿದೆ. ಇ-ತ್ಯಾಜ್ಯದ ಹೆಚ್ಚಳಕ್ಕೆ ಕಾರಣವಾಗುವುದಲ್ಲದೆ, ಗ್ರಾಹಕರಿಗೆ ಅನನುಕೂಲವಾಗುತ್ತಿದೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ವಿಶ್ವದಾದ್ಯಂತ ಎಲ್ಲ ದೇಶಗಳು ಮುಂದಾಗಿವೆ ಎಂದು ಬಿಐಎಸ್ ತಿಳಿಸಿದೆ.
ಸ್ಮಾರ್ಟ್ಫೋನ್, ಟ್ಯಾಬ್ಲೆಟ್, ಲ್ಯಾಪ್ಟಾಪ್ಗಳಿಗೆ ಟೈಪ್ ಸಿ ಚಾರ್ಜರ್ ಅನ್ನು ಮಾನದಂಡವನ್ನಾಗಿ ಪರಿಗಣಿಸಲು ಉದ್ಯಮಿಗಳು ಸಮ್ಮತಿಸಿರುವುದಾಗಿ 2022ರ ಡಿಸೆಂಬರ್ನಲ್ಲಿ ಗ್ರಾಹಕ ವ್ಯವಹಾರಗಳ ಕಾರ್ಯದರ್ಶಿ ರೋಹಿತ್ ಕುಮಾರ್ ಸಿಂಗ್ ಹೇಳಿದ್ದರು. ಈ ವಿಚಾರಕ್ಕೆ ಸಂಬಂಧಿಸಿ ಯುರೋಪ್ ಒಕ್ಕೂಟ ಆದೇಶ ನೀಡಿರುವ ಬಗ್ಗೆಯೂ ಅವರು ಉಲ್ಲೇಖಿಸಿದ್ದರು.
ಈ ಮಧ್ಯೆ, ವಾಚ್ಗಳಂಥ ಧರಿಸುವ ಎಲೆಕ್ಟ್ರಾನಿಕ್ ಸಾಧನಗಳಿಗೆ ಏಕ ಮಾದರಿಯ ಚಾರ್ಜರ್ ಅಭಿವೃದ್ಧಿಪಡಿಸುವ ಬಗ್ಗೆ ಕಾನ್ಪುರ ಐಐಟಿ ಅಧ್ಯಯನ ನಡೆಸುತ್ತಿದೆ. ಅಧ್ಯಯನ ಪೂರ್ಣಗೊಂಡ ಬೆನ್ನಲ್ಲೇ ಕೈಗಾರಿಕೋದ್ಯಮಿಗಳ ಜತೆ ಚರ್ಚಿಸಲಿದೆ. ಇ-ತ್ಯಾಜ್ಯ ತಡೆಗಾಗಿ ಏಕ ಮಾದರಿಯ ಚಾರ್ಜರ್ ಬಳಕೆ ಬಗ್ಗೆ ಕೇಂದ್ರ ಪರಿಸರ ಸಚಿವಾಲಯವೂ ಅಧ್ಯಯನ ನಡೆಸಲಿದೆ ಎನ್ನಲಾಗಿದೆ.
ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ