Twitter: ಪರಿವರ್ತನೆ ಹಾದಿಯಲ್ಲಿ ಟ್ವಿಟರ್; ಹೊಸ ಫೀಚರ್ಸ್ ಘೋಷಿಸಿದ ಎಲಾನ್ ಮಸ್ಕ್

ಸದ್ಯ ಒಂದು ಟ್ವೀಟಿನಲ್ಲಿ 280 ಕ್ಯಾರೆಕ್ಟರ್ ಲಿಮಿಟ್ ಇದ್ದು, ಅದನ್ನು 4 ಸಾವಿರ ಕ್ಯಾರೆಕ್ಟರ್ಗೆ ಏರಿಸಲಾಗುತ್ತದೆ. ಹೆಚ್ಚೂಕಡಿಮೆ 14 ಪಟ್ಟು ಹೆಚ್ಚು ಗಾತ್ರದ ಟ್ವೀಟ್ ಮಾಡಬಹುದಾಗಿದೆ. ಈ ಫೀಚರ್ ಅಳವಡಿಸಬೇಕೆಂಬುದು ಟ್ವೀಟ್ ಬಳಕೆದಾರರು ಬಹಳ ದಿನಗಳಿಂದ ಇಟ್ಟಿದ್ದ ಬೇಡಿಕೆ ಈಡೇರುವ ಕಾಲ ಬಂದಿದೆ.

Twitter: ಪರಿವರ್ತನೆ ಹಾದಿಯಲ್ಲಿ ಟ್ವಿಟರ್; ಹೊಸ ಫೀಚರ್ಸ್ ಘೋಷಿಸಿದ ಎಲಾನ್ ಮಸ್ಕ್
ಎಲಾನ್ ಮಸ್ಕ್Image Credit source: google image
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Jan 09, 2023 | 3:09 PM

ಟ್ವಿಟರ್​ನ್ನು ಅಮೂಲಾಗ್ರವಾಗಿ ಬದಲಿಸುತ್ತೇನೆಂದು ಹೇಳಿ ಖರೀದಿ ಮಾಡಿದ್ದ ಎಲಾನ್ ಮಸ್ಕ್ (Elon Musk) ಇದೀಗ ಆ ನಿಟ್ಟಿನಲ್ಲಿ ಕೆಲ ಹಾದಿ ಕ್ರಮಿಸುತ್ತಿದ್ದಾರೆ. ಬ್ಲ್ಯೂ ಟಿಕ್ ಸಬ್ ಸ್ಕ್ರಿಪ್ಷನ್ ಮೂಲಕ ಮಾನಿಟೈಸ್ ಮಾಡಲು ಮೊದಲಿಟ್ಟ ಎಲಾನ್ ಮಸ್ಕ್ ಇದೀಗ ಟ್ವಿಟರ್ ಅಪ್ಲಿಕೇಶನ್ನು ಯೂಸರ್ ಇಂಟರ್ಫೇಸ್ ನಲ್ಲಿ (Twitter user interface) ಭಾರೀ ಬದಲಾವಣೆ ಮಾಡಿಸುತ್ತಿದ್ದಾರೆ. ಹಲವು ಫೀಚರುಗಳನ್ನು ಟ್ವಿಟರ್​ನಲ್ಲಿ ಸೇರಿಸುತ್ತಿದ್ದಾರೆ. ಇದರಲ್ಲಿ ಪ್ರಮುಖವಾದುದು ಲಾಂಗ್ ಫಾರ್ಮ್ ಟ್ವಿಟರ್​ಗಳು (Long form tweet). ಅಂದರೆ ಹೆಚ್ಚು ಪದಗಳಿರುವ ಟ್ವೀಟುಗಳನ್ನು ಮಾಡಲು ಸಾಧ್ಯವಾಗುವ ಫೀಚರ್ ಅನ್ನು ಫೆಬ್ರುವರಿ ತಿಂಗಳಲ್ಲಿ ಅನಾವರಣಗೊಳಿಸಲಾಗುತ್ತಿದೆ. ಸದ್ಯ ಒಂದು ಟ್ವೀಟಿನಲ್ಲಿ 280 ಕ್ಯಾರೆಕ್ಟರ್ ಲಿಮಿಟ್ ಇದ್ದು, ಅದನ್ನು 4 ಸಾವಿರ ಕ್ಯಾರೆಕ್ಟರ್ಗೆ ಏರಿಸಲಾಗುತ್ತದೆ. ಹೆಚ್ಚೂ-ಕಡಿಮೆ 14 ಪಟ್ಟು ಹೆಚ್ಚು ಗಾತ್ರದ ಟ್ವೀಟ್ ಮಾಡಬಹುದಾಗಿದೆ. ಈ ಫೀಚರ್ ಅಳವಡಿಸಬೇಕೆಂಬುದು ಟ್ವೀಟ್ ಬಳಕೆದಾರರು ಬಹಳ ದಿನಗಳಿಂದ ಇಟ್ಟಿದ್ದ ಬೇಡಿಕೆ ಈಡೇರುವ ಕಾಲ ಬಂದಿದೆ.

ಹಾಗೆಯೇ, ನಾವು ಫಾಲೋ ಮಾಡುವ ಖಾತೆಗಳ ಟ್ವೀಟ್ ಮತ್ತು ಟ್ವಿಟರ್​​ನಿಂದ ಶಿಫಾರಸು ಆಗುವ ಟ್ವೀಟ್ ಇವೆರಡನ್ನೂ ಪ್ರತ್ಯೇಕವಾಗಿ ನೋಡಬಹುದು. ಬಲಕ್ಕೆ ಮತ್ತು ಎಡಕ್ಕೆ ಸ್ವೈಪ್ ಮಾಡುವ ಮೂಲಕ ಇವೆರಡು ರೀತಿಯ ಟ್ವೀಟುಗಳ ಪಟ್ಟಿಯನ್ನು ಬದಲಾಯಿಸಿಕೊಳ್ಳಬಹುದು.

ಬುಕ್ ಮಾರ್ಕ್ ಬಟನ್

ಟ್ವೀಟ್ ವಿವರಗಳ ಮೇಲೆ ಬುಕ್ ಮಾರ್ಕ್ ಬಟನ್ ಸದ್ಯದಲ್ಲೇ ಪ್ರತ್ಯಕ್ಷವಾಗಲಿದೆ. ಈಗ ಇರುವ ಷೇರ್ ಬಟನ್ ಒತ್ತಿದರೆ ಬುಕ್ ಮಾರ್ಕ್ ಆಪ್ಷನ್​​ನ್ನು ಕಾಣಬಹುದು. ಆದರೆ, ಪ್ರತ್ಯೇಕವಾಗಿ ಬುಕ್ ಮಾರ್ಕ್ ಬಟನ್ ಅಳವಡಿಕೆ ಒಂದೆರಡು ವಾರದಲ್ಲಿ ಆಗಲಿದೆ. ದಿನಾಂಕ, ಹ್ಯಾಷ್ ಟ್ಯಾಗ್, ಬಳಕೆದಾರ ಇತ್ಯಾದಿ ಆಧಾರಿತದ ಫಿಲ್ಟರಿಂಗ್ ಮೂಲಕ ನಿರ್ದಿಷ್ಟ ಟ್ವೀಟುಗಳನ್ನು ಮತ್ತು ಪ್ರೊಫೈಲುಗಳನ್ನು ಹುಡುಕುವ ಫೀಚರ್ ಕೂಡ ಮುಂದಿನ ದಿನಗಳಲ್ಲಿ ಲಭ್ಯ ಇರಲಿದೆ.

ಇದನ್ನು ಓದಿ:Elon Musk: ಸರಿಯಾಯಿತು ಕೆಟ್ಟು ಹೋಗಿದ್ದ ಟ್ವಿಟರ್: ಎಲಾನ್ ಮಸ್ಕ್ ನೀಡಿದ ಕಾರಣವೇನು ನೋಡಿ

ಎಲಾನ್ ಮಸ್ಕ್ ಕನಸು

ಎಲಾನ್ ಮಸ್ಕ್ ಸುಖಾಸುಮ್ಮನೆ ಟ್ವಿಟ್ಟರ್ ಖರೀದಿ ಮಾಡಿದಂತಿಲ್ಲ. ಚೀನಾದ ವೀಚ್ಯಾಟ್ ಮಾದರಿಯಲ್ಲಿ ಟ್ವಿಟ್ಟರ್ ರೂಪಿಸುವ ಉದ್ದೇಶ ಇದೆ ಎಂದು ಹಿಂದೊಮ್ಮೆ ಮಸ್ಕ್ ಹೇಳಿದ್ದರು. ಅಂದರೆ ಟ್ವಿಟರ್​ಒಂದು ಮೆಸೇಜಿಂಗ್ ಪ್ಲಾಟ್ ಫಾರ್ಮ್ ಮಾತ್ರವಾಗಿರುವುದಲ್ಲದೇ ಪೇಮೆಂಟ್, ವಿಡಿಯೋ ಸ್ಟ್ರೀಮಿಂಗ್, ವಿಡಿಯೋ ಗೇಮ್, ವಾಣಿಜ್ಯ ಮಾರುಕಟ್ಟೆ ಹೀಗೆ ಹಲವು ಕಾರ್ಯಗಳಿಗೆ ಪ್ರಮುಖ ತಾಣವಾಗಿ ಬೆಳೆಸುವ ಪರಿಕಲ್ಪನೆಯಲ್ಲಿ ಮಸ್ಕ್ ಇದ್ದಾರೆ ಎಂದು ಭಾವಿಸಲಾಗಿದೆ.

ಸುದೀರ್ಘ ಟ್ವೀಟ್ ಬಗ್ಗೆ ಕೆಲವರ ಆತಂಕ

ದೊಡ್ಡ ಟ್ವೀಟ್ ಮಾಡುವ ಅವಕಾಶ ಕಲ್ಪಿಸುವ ಫೀಚರ್ ಬಗ್ಗೆ ಕೆಲ ಟ್ವೀಟಿಗರು ಆತಂಕ ತೋಡಿಕೊಂಡಿದ್ದಾರೆ. ಈಗಿರುವ 280 ಕ್ಯಾರೆಕ್ಟರ್ ಲಿಮಿಟ್​ನಿಂದ ಜನರು ಬಹಳ ಎಚ್ಚರಿಕೆಯಿಂದ ಪದಬಳಕೆ ಮಾಡುತ್ತಿದ್ದಾರೆ. ಕ್ಯಾರೆಕ್ಟರ್ ಲಿಮಿಟ್ 4 ಸಾವಿರಕ್ಕೆ ಹೆಚ್ಚಾದರೆ ಟ್ವೀಟುಗಳು ಬ್ಲಾಗ್ ರೀತಿ ಆಗುತ್ತವೆ. ಜನರು ಹಾಳು ಮೂಳನ್ನು ಲೇಖನ ರೂಪದಲ್ಲಿ ತುರುಕುವ ಅಪಾಯ ಇರುತ್ತದೆ ಎಂಬುದು ಇವರ ಆತಂಕ.

ಆದರೆ ಲಾಂಗ್ ಫಾರ್ಮ್ ಟ್ವೀಟಿನಿಂದ ಟ್ವಿಟರ್ ಥ್ರೆಡ್​ಗಳು ಕಣ್ಮರೆಯಾಗಬಹುದು. ಹಾಗೆಯೇ ಥ್ರೆಡ್ ಗಳಿಂದ ಉಂಟಾಗುವ ಗೊಂದಲವೂ ನಿವಾರಣೆ ಆಗಬಹುದು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ