ಮೊಬೈಲ್ ಬಳಕೆದಾರರ ಗಮನಕ್ಕೆ! ಸೆ. 1 ರಿಂದ ಬದಲಾದ 5 ವಿಷಯಗಳ ಬಗ್ಗೆ ಗೊತ್ತಿರಲಿ

| Updated By: ಝಾಹಿರ್ ಯೂಸುಫ್

Updated on: Sep 01, 2021 | 8:07 PM

ಗೂಗಲ್‌ನ ಹೊಸ ನೀತಿಯು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಸುಳ್ಳು ಮತ್ತು ನಕಲಿ ಸುದ್ದಿಗಳನ್ನು ಬಿತ್ತರಿಸುವ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗುತ್ತಿದೆ.

1 / 6
ಸೆಪ್ಟೆಂಬರ್ 1 ರಿಂದ ಡಿಜಿಟಲ್ ಕ್ಷೇತ್ರದಲ್ಲೂ ಹಲವು ಬದಲಾವಣೆಯಾಗಿದೆ. ಅದರಂತೆ ಇಂದಿನಿಂದಲೇ  ಡಿಸ್ನಿ + ಹಾಟ್‌ಸ್ಟಾರ್‌ನಂತಹ OTT ಪ್ಲಾಟ್‌ಫಾರ್ಮ್ ಚಂದಾದಾರಿಕೆ ರಿಚಾರ್ಜ್​ ಮೊತ್ತ ಹೆಚ್ಚಾಗಲಿದೆ. ಇದಲ್ಲದೆ, ಅಮೆಜಾನ್, ಗೂಗಲ್ ಮತ್ತು ಗೂಗಲ್ ಡ್ರೈವ್‌ನ ಸೇವಾ ನಿಯಮಗಳು ಕೂಡ ಈ ತಿಂಗಳಿನಿಂದ ಬದಲಾಗಲಿವೆ. ಅಂತಹ ಪ್ರಮುಖ ಬದಲಾವಣೆ ಬಗ್ಗೆ ಇಲ್ಲಿ ತಿಳಿಸಲಾಗಿದೆ.

2 / 6
 ಡಿಸ್ನಿ + ಹಾಟ್‌ಸ್ಟಾರ್ ಯೋಜನೆಗಳು ದುಬಾರಿ: ಸೆಪ್ಟೆಂಬರ್ 1 ರಿಂದ OTT ಪ್ಲಾಟ್‌ಫಾರ್ಮ್ ಡಿಸ್ನಿ + ಹಾಟ್‌ಸ್ಟಾರ್ ಭಾರತದಲ್ಲಿ ದುಬಾರಿಯಾಗಿದೆ. ಈಗ ಬಳಕೆದಾರರು 399 ರೂ. ಬದಲಾಗಿ ಇನ್ಮುಂದೆ 499 ರೂ. ರಿಚಾರ್ಜ್​ ಮಾಡಬೇಕಾಗುತ್ತದೆ. ಇದರರ್ಥ ಗ್ರಾಹಕರು ಇನ್ಮುಂದೆ 100 ರೂಗಳನ್ನು ಹೆಚ್ಚು ಪಾವತಿಸಬೇಕಾಗುತ್ತದೆ.  ಹಾಗೆಯೇ 899 ರೂ ರಿಚಾರ್ಜ್​ ಮೂಲಕ ಗ್ರಾಹಕರು ಡಿಸ್ನಿ + ಹಾಟ್‌ಸ್ಟಾರ್ ಆ್ಯಪ್​ನ್ನು ಎರಡು ಫೋನ್​ಗಳಲ್ಲಿ ಲಾಗಿನ್ ಆಗಬಹುದು.  ಅದೇ ರೀತಿ 1,499 ರೂ ರಿಚಾರ್ಜ್​ ಮೂಲಕ 4 ಸ್ಕ್ರೀನ್‌ಗಳಲ್ಲಿ ವೀಕ್ಷಿಸಬಹುದು.

3 / 6
ಅಮೆಜಾನ್‌ ದುಬಾರಿ: ಸೆಪ್ಟೆಂಬರ್ 1 ರಿಂದ  ಅಮೆಜಾನ್‌ ಆರ್ಡರ್ ಕೂಡ ದುಬಾರಿಯಾಗಲಿದೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆ ಏರಿಕೆಯಿಂದಾಗಿ ಕಂಪನಿಯು ಲಾಜಿಸ್ಟಿಕ್ಸ್ ವೆಚ್ಚವನ್ನು ಹೆಚ್ಚಿಸುವುದಾಗಿ ತಿಳಿಸಿದೆ.  ಅದರಂತೆ, ಫ್ರೀ ಡೆಲಿವರಿ ಇಲ್ಲದ ವಸ್ತುಗಳ ಮೇಲೆ 500 ಗ್ರಾಂ ಪ್ಯಾಕೇಜ್‌ಗೆ 58 ರೂಪಾಯಿ ಪಾವತಿಸಬೇಕಾಗಬಹುದು. ಹಾಗೆಯೇ ಪ್ರಾದೇಶಿಕ ವೆಚ್ಚ ರೂ 36.50 ಆಗಿರಲಿದೆ ಎಂದು ತಿಳಿಸಲಾಗಿದೆ.

4 / 6
 ಲೋನ್​ ಅಪ್ಲಿಕೇಶನ್‌: 15 ಸೆಪ್ಟೆಂಬರ್ 2021 ಗೂಗಲ್ ಪ್ಲೇ ಸ್ಟೋರ್‌ನಲ್ಲಿ ಹೊಸ ನಿಯಮಗಳು ಅನ್ವಯವಾಗುತ್ತವೆ. ಈ ಹೊಸ ನಿಯಮದ ಪ್ರಕಾರ, ಭಾರತದಿಂದ ಕಿರು ವೈಯಕ್ತಿಕ ಸಾಲದ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗುತ್ತದೆ. ಇದು ಸಾಲದ ನೆಪದಲ್ಲಿ ಬಳಕೆದಾರರನ್ನು ವಂಚಿಸುತ್ತಿದೆ. 100 ಮಿನಿ ಲೋನ್ ಆ್ಯಪ್‌ಗಳ ಬಗ್ಗೆ ಗೂಗಲ್ ದೂರುಗಳನ್ನು ಸ್ವೀಕರಿಸಿದ್ದು, ಅದರಂತೆ ಹೊಸ ನಿಯಮವನ್ನು ಜಾರಿಗೊಳಿಸಿದೆ.

5 / 6
 Google ಡ್ರೈವ್‌:  Google ಡ್ರೈವ್ ಬಳಕೆದಾರರು ಸೆಪ್ಟೆಂಬರ್ 13 ರಿಂದ ಹೊಸ ಭದ್ರತಾ ಅಪ್‌ಡೇಟ್ ಪಡೆಯಲಿದ್ದಾರೆ. ಇದು Google ಡ್ರೈವ್ ಬಳಕೆಯನ್ನು ಮೊದಲಿಗಿಂತ ಹೆಚ್ಚು ಸುರಕ್ಷಿತವಾಗಿಸುತ್ತದೆ.

6 / 6
ಫೇಕ್ ಆ್ಯಪ್ ಬ್ಯಾನ್: ಸುಳ್ಳು ವಿಷಯವನ್ನು ಪ್ರಚಾರ ಮಾಡುವುದನ್ನು ನಿಷೇಧಿಸಿ ಗೂಗಲ್‌ನ ಹೊಸ ನೀತಿಯು ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿದೆ. ಇದರ ಅಡಿಯಲ್ಲಿ ಸುಳ್ಳು ಮತ್ತು ನಕಲಿ ಸುದ್ದಿಗಳನ್ನು ಬಿತ್ತರಿಸುವ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗುತ್ತಿದೆ.