Samsung Galaxy A22 5G: ಅಗ್ಗದ ಬೆಲೆಗೆ ಮತ್ತೊಂದು 5G ಫೋನ್: ಜುಲೈ 23ಕ್ಕೆ ಗ್ಯಾಲಕ್ಸಿ ಎ22 ರಿಲೀಸ್

| Updated By: Vinay Bhat

Updated on: Jul 22, 2021 | 3:31 PM

ನಾಳೆ ಅಂದರೆ ಜುಲೈ 23 ರಂದು ಸ್ಯಾಮ್​ಸಂಗ್ ಗ್ಯಾಲಕ್ಸಿ A22 5G ಸ್ಮಾರ್ಟ್​​ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ.

Samsung Galaxy A22 5G: ಅಗ್ಗದ ಬೆಲೆಗೆ ಮತ್ತೊಂದು 5G ಫೋನ್: ಜುಲೈ 23ಕ್ಕೆ ಗ್ಯಾಲಕ್ಸಿ ಎ22 ರಿಲೀಸ್
Samsung Galaxy A22 5G
Follow us on

ಭಾರತದಲ್ಲಿ 5G ಸ್ಮಾರ್ಟ್​ಫೋನ್​ಗಳು (5G Smartphone) ಬಿಡುಗಡೆ ಆಗುತ್ತಿರುವ ಸಂಖ್ಯೆ ಹೆಚ್ಚಾಗುತ್ತಿದೆ. ಎರಡು ದಿನಗಳ ಹಿಂದೆ ಶವೋಮಿ (Xiaomi) ಕಂಪೆನಿ ಬಜೆಟ್ ಬೆಲೆಗೆ ತನ್ನ ರೆಡ್ಮಿ ನೋಟ್ 10 ಸರಣಿಯಲ್ಲಿ ಹೊಸ 5G ಮೊಬೈಲ್ ಅನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಸದ್ಯ ಭಾರತೀಯ ಮಾರುಕಟ್ಟೆಯಲ್ಲಿ ಮತ್ತೊಂದು ಕಡಿಮೆ ಬೆಲೆಗೆ 5ಜಿ ಸ್ಮಾರ್ಟ್​ಫೋನ್ ಬಿಡುಗಡೆ ಆಗಲು ತಯಾರಾಗಿದೆ. ಅದುವೆ ದಕ್ಷಿಣ ಕೊರಿಯಾ ಮೂಲದ ಟೆಕ್‌ ದೈತ್ಯ ಸ್ಯಾಮ್‌ಸಂಗ್ (Samsung) ಸಂಸ್ಥೆಯ ಗ್ಯಾಲಕ್ಸಿ A22 5G (Galaxy A22 5G) ಸ್ಮಾರ್ಟ್‌ಫೋನ್‌.

ನಾಳೆ ಅಂದರೆ ಜುಲೈ 23 ರಂದು ಸ್ಯಾಮ್​ಸಂಗ್ ಗ್ಯಾಲಕ್ಸಿ A22 5G ಸ್ಮಾರ್ಟ್​​ಫೋನ್ ಭಾರತೀಯ ಮಾರುಕಟ್ಟೆಯಲ್ಲಿ ಲಾಂಚ್ ಆಗಲಿದೆ. ಈ ಬಗ್ಗೆ ಕಂಪೆನಿ ಟ್ವೀಟ್ ಮಾಡುವ ಮೂಲಕ ಖಚಿತ ಪಡಿಸಿದೆ. 91 ಮೊಬೈಲ್.ಕಾಮ್ ಹೇಳಿರುವ ಪ್ರಕಾರ, ಸ್ಯಾಮ್‌ಸಂಗ್ ಗ್ಯಾಲಕ್ಸಿ A22 5G ಸ್ಮಾರ್ಟ್‌ಫೋನ್‌ ಭಾರತದಲ್ಲಿ ಎರಡು ಮಾದರಿಯಲ್ಲಿ ಬಿಡುಗಡೆ ಆಗಲಿದೆಯಂತೆ. 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯದ ಬೆಲೆ 19,999 ರೂ. ಇರಲಿದೆ. ಅಂತೆಯೆ 8GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯಕ್ಕೆ 21,999 ರೂ. ನಿಗದಿ ಮಾಡಲಾಗಿದೆ ಎಂದು ಹೇಳಿದೆ.

 

ಈ ಸ್ಮಾರ್ಟ್​ಫೋನ್ ಯಾವ ಇ ಕಾಮರ್ಸ್ ತಾಣದಲ್ಲಿ ಮಾರಾಟವಾಗಲಿದೆ ಎಂಬ ಬಗ್ಗೆ ಕಂಪೆನಿ ಬಹಿರಂಗ ಪಡಿಸಿಲ್ಲ. ಗ್ಯಾಲಕ್ಸಿ A22 5G ಸ್ಮಾರ್ಟ್‌ಫೋನ್‌ ಅಧಿಕ ಪಿಕ್ಸಲ್‌ ರೆಸಲ್ಯೂಶನ್‌ ಹೊಂದಿರುವ 6.6 ಇಂಚಿನ ಫುಲ್‌ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯ ರೀಫ್ರೇಶ್ ರೇಟ್ 90Hz ಆಗಿದೆ. ಸೆಲ್ಫಿ ಕ್ಯಾಮೆರಾ ನಾಚ್ ರಚನೆ ಇದೆ. ಆಕ್ಟಾಕೋರ್ ಮೀಡಿಯಾ ಟೆಕ್ Dimensity 700 ಪ್ರೊಸೆಸರ್‌ ಹೊಂದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್ ಬೆಂಬಲದಲ್ಲಿ ಕಾರ್ಯನಿರ್ವಹಿಸಲಿದೆ.

ಇನ್ನೂ ಇದು ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟ್‌ಆಪ್‌ ಹೊಂದಿದ್ದು, ಮುಖ್ಯ ಕ್ಯಾಮೆರಾ 48 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದೆ. ಸೆಕೆಂಡರಿ ಕ್ಯಾಮೆರಾವು 5 ಎಂಪಿ ಸೆನ್ಸಾರ್ ಸಾಮರ್ಥ್ಯದಲ್ಲಿದ್ದು, ಇನ್ನು ತೃತೀಯ ಕ್ಯಾಮೆರಾವು 2 ಎಂಪಿ ಸೆನ್ಸಾರ್ ಬಲವನ್ನು ಪಡೆದಿದೆ. ಇದರೊಂದಿಗೆ ಸೆಲ್ಫಿಗಾಗಿ 8 ಎಂಪಿ ಸೆನ್ಸಾರ್ ಕ್ಯಾಮೆರಾ ಒದಗಿಸಲಾಗಿದೆ. ಜೊತೆಗೆ ಎಡಿಟಿಂಗ್ ಆಯ್ಕೆಗಳು ಇವೆ.

ಗ್ಯಾಲಕ್ಸಿ A22 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಬ್ಯಾಕ್‌ ಅಪ್ ಸಾಮರ್ಥ್ಯವನ್ನು ಪಡೆದಿದೆ. ಇದರೊಂದಿಗೆ 15W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನು ನೀಡಿದೆ. ಜೊತೆಗೆ ರಿಯರ್‌ ಮೌಂಟೆಡ್‌ ಫಿಂಗರ್‌ಪ್ರಿಂಟ್ ಸೆನ್ಸಾರ್, 5G, ವೈಫೈ, ಬ್ಲೂಟೂತ್‌ ಸೇರಿದಂತೆ ಇತ್ತೀಚಿನ ಅಗತ್ಯ ಫೀಚರ್ಸ್‌ಗಳನ್ನು ಒಳಗೊಂಡಿದೆ.

iPhone 13: ಬಹುನಿರೀಕ್ಷಿತ ಐಫೋನ್ 13 ನಲ್ಲಿರುವ ಸ್ಟೋರೆಜ್ ಆಯ್ಕೆ ಕೇಳಿದ್ರೆ ನೀವು ಶಾಕ್ ಆಗ್ತೀರಾ..!

Jio vs Airtel: ಪ್ರತಿದಿನ 2GB ಡೇಟಾ, 28 ದಿನ ವ್ಯಾಲಿಡಿಟಿ: ನಂ. 1 ಸ್ಥಾನಕ್ಕೆ ಏರ್ಟೆಲ್-ಜಿಯೋ ನಡುವೆ ಗುದ್ದಾಟ

(Samsung Galaxy A22 5G India launch on tommorow July 23 here is the expected price specs)