ಭಾರತದಲ್ಲಿ ಅತಿ ಹೆಚ್ಚು ಮಾರಾಟ ಆಗುವ ಸ್ಮಾರ್ಟ್ಫೋನ್ಗಳ ಪೈಕಿ ಸ್ಯಾಮ್‌ಸಂಗ್ (Samsung) ದ್ವಿತೀಯ ಸ್ಥಾನದಲ್ಲಿದೆ. ಇದಕ್ಕೆ ಕಾರಣ ಕಂಪನಿ ಕಡಿಮೆ ಬೆಲೆಗೆ ಆಕರ್ಷಕ ಫೋನ್ಗಳನ್ನು ಬಿಡುಗಡೆ ಮಾಡುತ್ತಿರುವುದು. ಮುಖ್ಯವಾಗಿ ಗ್ಯಾಲಕ್ಸಿ ಹೊಸ ಆವೃತ್ತಿಯ ಫೋನ್ ಬಿಡುಗಡೆ ಆಯಿತು ಎಂದಾದರೆ ಅಲ್ಲಿ ಹಿಂದಿನ ಆವೃತ್ತಿಯ ಫೋನಿನ ಬೆಲೆ ಕೊಂಚ ಕಡಿಮೆ ಮಾಡಿ ಮಾರಾಟ ಮಾಡುತ್ತದೆ. ಆದರೆ, ಇದೀಗ ಅಚ್ಚರಿ ಎಂಬಂತೆ ಸ್ಯಾಮ್‌ಸಂಗ್ ತನ್ನ ಗ್ಯಾಲಕ್ಸಿ ಎಮ್52 5ಜಿ (Samsung Galaxy M52 5G) ಸ್ಮಾರ್ಟ್‌ಫೋನ್ ಬೆಲೆಯಲ್ಲಿ ಖಡಿತ ಮಾಡಿದೆ. ಅದು ಒಂದೆರಡಲ್ಲ ಬರೋಬ್ಬರಿ 9,000 ರೂ. ಹಾಗಾದ್ರೆ ಗ್ಯಾಲಕ್ಸಿ M52 5G ಸ್ಮಾರ್ಟ್‌ಫೋನಿನ ನೂತನ ಬೆಲೆ ಎಷ್ಟು?, ಇದರಲ್ಲಿ ಏನೆಲ್ಲ ವಿಶೇಷತೆ ಇದೆ ಎಂಬುದನ್ನು ನೋಡೋಣ.
ಸ್ಯಾಮ್‌ಸಂಗ್ ಕಂಪನಿಯು ಗ್ಯಾಲಕ್ಸಿ M52 5G ಫೋನ್ ಕಳೆದ ವರ್ಷ ಭಾರತದಲ್ಲಿ 29,999 ರೂ. ಗೆ ಬಿಡುಗಡೆ ಆಗಿತ್ತು. ಇದೀಗ ಬೆಲೆ ಇಳಿಕೆಯಿಂದಾಗಿ 6GB+128GB ಸ್ಟೋರೇಜ್‌ನ ಬೇಸ್ ವೇರಿಯಂಟ್ ಕೇವಲ 20,999 ರೂ. ಗಳಗೆ ಮಾರಾಟ ಆಗುತ್ತಿದೆ.
Flipkart: ಫ್ಲಿಪ್ಕಾರ್ಟ್ನಲ್ಲಿ ಶುರುವಾಗಿದೆ ಎಲೆಕ್ಟ್ರಾನಿಕ್ ಸೇಲ್: ಸ್ಮಾರ್ಟ್ಫೋನ್ಗಳಿಗೆ ಬಂಪರ್ ಡಿಸ್ಕೌಂಟ್
ಸ್ಯಾಮ್‌ಸಂಗ್ ಗ್ಯಾಲಕ್ಸಿ M52 5G ಸ್ಮಾರ್ಟ್‌ಫೋನ್ 1,080×2,400 ಪಿಕ್ಸೆಲ್ ಸ್ಕ್ರೀನ್ ರೆಸಲ್ಯೂಶನ್ ಸಾಮರ್ಥ್ಯದ 6.7 ಇಂಚಿನ ಫುಲ್-ಎಚ್‌ಡಿ+ ಡಿಸ್‌ಪ್ಲೇ ಹೊಂದಿದೆ. ಇದು ಸೂಪರ್ AMOLED ಪ್ಲಸ್ ಡಿಸ್‌ಪ್ಲೇ ಆಗಿದೆ. ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 778G SoC ಪ್ರೊಸೆಸರ್ ಹೊಂದಿದೆ. ಇದು ಆಂಡ್ರಾಯ್ಡ್ 11 ನಲ್ಲಿ ಒಂದು UI 3.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.
ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64 ಮೆಗಾ ಪಿಕ್ಸೆಲ್ ಸೆನ್ಸಾರ್, ಎರಡನೇ ಕ್ಯಾಮೆರಾ 12 ಮೆಗಾಪಿಕ್ಸೆಲ್ ವೈಡ್ ಆಂಗಲ್ ಶೂಟರ್ ಮತ್ತು ಮೂರನೇ ಕ್ಯಾಮೆರಾ 5 ಮೆಗಾ ಪಿಕ್ಸೆಲ್ ಮ್ಯಾಕ್ರೋ ಶೂಟರ್ ಹೊಂದಿದೆ. ಇದಲ್ಲದೆ 32 ಮೆಗಾ ಪಿಕ್ಸೆಲ್ ಸೆನ್ಸಾರ್ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ.
5,000 mAh ಬ್ಯಾಟರಿ ಯನ್ನು ಒಳಗೊಂಡಿದ್ದು 25W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಇದು ಸಿಂಗಲ್ ಚಾರ್ಜ್ ನಲ್ಲಿ 48 ಗಂಟೆ ಗಳ ಟಾಕ್ ಟೈಮ್ ಅಥವಾ 20 ಗಂಟೆಗಳ ವೀಡಿಯೊ ಪ್ಲೇಬ್ಯಾಕ್ ಟೈಂ ಅನ್ನು ನೀಡಲಾಗಿದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 6, ಬ್ಲೂಟೂತ್, GPS, A-GPS, NFC, ಮತ್ತು USB Type-C ಪೋರ್ಟ್ ಬೆಂಬಲಿಸಲಿದೆ.
Poco F4: ಪೋಕೋ F4 5G ಸ್ಮಾರ್ಟ್‌ಫೋನ್ ಬಿಡುಗಡೆ: ಇದರಲ್ಲಿರುವ ಫೀಚರ್ಸ್ ಕೇಳಿದ್ರೆ ಶಾಕ್ ಆಗ್ತೀರಾ