ದಕ್ಷಿಣ ಕೊರಿಯಾದ ಜನಪ್ರಿಯ ಸ್ಯಾಮ್‌ಸಂಗ್ (Samsung) ಮೊಬೈಲ್ ಕಂಪನಿಯು ಬಜೆಟ್, ಪ್ರೀಮಿಯಂ, ಮೀಡ್‌ರೇಂಜ್ ಹಾಗೂ ಹೈ ಎಂಡ್ ಮಾದರಿಯ ಸ್ಮಾರ್ಟ್‌ಫೋನ್‌ಗಳ ಆಯ್ಕೆ ಹೊಂದಿದೆ. ಬಹುತೇಕ ಸ್ಯಾಮ್‌ಸಂಗ್‌ನ ಎಲ್ಲ ಮಾಡೆಲ್‌ಗಳಲ್ಲಿ ಗ್ರಾಹಕರಿಂದ ಮೆಚ್ಚುಗೆ ಪಡೆದಿವೆ. ಆದರೆ ಹೈ ಎಂಡ್ ಫೀಚರ್ಸ್ ಫೋನ್‌ಗಳು ಅತ್ಯುತ್ತಮ ಎನಿಸಿವೆ. ಈ ಪೈಕಿ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್20 ಎಫ್ಇ (Samsung Galaxy S20 FE) ಸ್ಮಾರ್ಟ್‌ಫೋನ್ ಕೂಡ ಒಂದು. ಈ ಸ್ಮಾರ್ಟ್‌ಫೋನ್ (Smartphone) ಮಾರುಕಟ್ಟೆಯಲ್ಲಿ ಧೂಳೆಬ್ಬಿಸಿತ್ತು. ಆದರೆ, ಇದೀಗ ಇದರ ಹವಾ ತಗ್ಗುವ ಮುನ್ನವೇ ಕಂಪನಿಯು ಹೊಸದಾಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE (Samsung Galaxy S21 FE) ಫೋನ್ ಬಿಡುಗಡೆ ಮಾಡುವ ಸೂಚನೆ ಬಯಲು ಮಾಡಿದೆ. ಅಷ್ಟೇ ಅಲ್ಲದೆ ಇದಕ್ಕೆ ಸಂಬಂಧಿಸಿದಂತೆ ಈ ಹೊಸ ಫೋನಿನ ಕೆಲ ವಿಶೇಷತೆಗಳು ಸೋರಿಕೆ ಕೂಡ ಆಗಿವೆ.
ಹೌದು, ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE ಸ್ಮಾರ್ಟ್‌ಫೋನಿನ ಮುಂದುವರಿದ ಭಾಗವಾಗಿ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್ ಅನ್ನು ಲಾಂಚ್ ಮಾಡಲು ಸಜ್ಜಾಗಿದೆ. 2022ರ ಜನವರಿ ತಿಂಗಳಿನಲ್ಲಿನ CES 2022 ಕಾರ್ಯಕ್ರಮದಲ್ಲಿ ಅನಾವರಣಗೊಳಿಸುವ ನಿರೀಕ್ಷೆಯಿದೆ. ಈ ಫೋನ್ ದೈತ್ಯ ಫೀಚರ್ಸ್‌ಗಳನ್ನು ಒಳಗೊಂಡಿರುವ ನಿರೀಕ್ಷೆಗಳಿದ್ದು, ಗ್ರಾಹಕರ ಕುತೂಹಲ ಹೆಚ್ಚಿಸಿದೆ.
ಕೆಲವು ಆನ್‌ಲೈನ್ ಲೀಕ್ ಮಾಹಿತಿ ಪ್ರಕಾರ ಸ್ಯಾಮ್‌ಸಂಗ್ ಗ್ಯಾಲಕ್ಸಿ S21 FE ಸ್ಮಾರ್ಟ್‌ಫೋನ್ ಈ ಹಿಂದಿನ ಸ್ಯಾಮ್‌ಸಂಗ್ ಗ್ಯಾಲಕ್ಸಿ S20 FE ಸ್ಮಾರ್ಟ್‌ಫೋನ್ ಬೆಲೆಗಿಂತ ಅಗ್ಗ ಇರಲಿದೆ ಎಂದು ಸೂಚಿಸಿವೆ. ಗ್ಯಾಲಕ್ಸಿ S21 FE ಬೆಲೆ KRW 700,000 (ಸುಮಾರು 45,900ರೂ.) ಮತ್ತು KRW 800,000 (ಸುಮಾರು 52,450ರೂ.) ನಡುವೆ ಇರಲಿದೆ ಎಂದು ಹೇಳಲಾಗುತ್ತದೆ.
ಈ ಸ್ಮಾರ್ಟ್‌ಫೋನ್ Exynos 2100 SoC ಅಥವಾ SD888 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿರಲಿದೆ ಎನ್ನಲಾಗಿದೆ. ಹಾಗೆಯೇ ಈ ಫೋನ್ 120Hz ರಿಫ್ರೆಶ್ ದರದೊಂದಿಗೆ 6.4-ಇಂಚಿನ AMOLED ಇನ್ಫಿನಿಟಿ-ಒ ಡಿಸ್ಪ್ಲೇಯನ್ನು ಒಳಗೊಂಡಿರುವ ನಿರೀಕ್ಷೆಯಿದೆ. ಇದಲ್ಲದೆ, ಈ ಫೋನ್ ಹಿಂದಿನ ಪ್ಯಾನೆಲ್‌ನಲ್ಲಿ ಟ್ರಿಪಲ್ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಅವು ಕ್ರಮವಾಗಿ 12 ಮೆಗಾ ಪಿಕ್ಸಲ್ ಪ್ರಾಥಮಿಕ ಕ್ಯಾಮೆರಾ, 12 ಮೆಗಾ ಪಿಕ್ಸಲ್ ಅಲ್ಟ್ರಾ ವೈಡ್ ಕ್ಯಾಮೆರಾ ಮತ್ತು 8 ಮೆಗಾ ಪಿಕ್ಸಲ್ ಟೆಲಿಫೋಟೋ ಸೆನ್ಸಾರ್ ಅನ್ನು ಒಳಗೊಂಡಿರುತ್ತದೆ ಎನ್ನುವುದು ಸೋರಿಕೆಯಾಗಿರುವ ಮಾಹಿತಿ.
ಹಾಗೆಯೇ ಈ ಫೋನ್ 32 ಮೆಗಾ ಪಿಕ್ಸಲ್ ಸೆನ್ಸಾರ್‌ನ ಸೆಲ್ಫಿ ಕ್ಯಾಮೆರಾ ಅನ್ನು ಒಳಗೊಂಡಿರಲಿದೆ ಎನ್ನಲಾಗಿದೆ. ಜೊತೆಗೆ 4,500 mAh ಬ್ಯಾಟರಿ ಬ್ಯಾಕ್‌ಅಪ್ ಪಡೆದಿರಲಿದ್ದು, ಇದಕ್ಕೆ ಪೂರಕವಾಗಿ 25W ಚಾರ್ಜಿಂಗ್ ಫಾಸ್ಟ್ ಚಾರ್ಜಿಂಗ್ ಸಪೋರ್ಟ್ ಪಡೆದಿರಲಿದೆ ಎಂದು ಹೇಳಲಾಗುತ್ತಿದೆ.
WhatsApp: ವಾಟ್ಸ್ಆ್ಯಪ್ ಕಾಲ್ ರೆಕಾರ್ಡ್ ಮಾಡುವ ಸುಲಭ ಟ್ರಿಕ್ ನಿಮಗೆ ಗೊತ್ತೇ?: ಇಲ್ಲಿದೆ ನೋಡಿ
Tecno Pop 5C: ಭಾರತೀಯ ಮಾರುಕಟ್ಟೆಯಲ್ಲಿ ಕೇವಲ 2000 ರೂ. ಗೆ ಮಾರಾಟ ಕಾಣಲಿದೆ ಈ ಸ್ಮಾರ್ಟ್‌ಫೋನ್
(Samsung Galaxy S21 FE features leaked ahead of launch Here is the camera and specs)