Amazon Diwali sale: ಗ್ಯಾಲಕ್ಸಿ S22 5G ಸ್ಮಾರ್ಟ್​ಫೋನ್ ಖರೀದಿಗೆ ಮುಗಿಬಿದ್ದ ಜನರು: ಎಷ್ಟು ರೂ. ಡಿಸ್ಕೌಂಟ್ ಗೊತ್ತೇ?

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್‌ 50,000 ರೂ. ಗಳ ಒಳಗೆ ಖರೀದಿಸಬಹುದು. ಅಮೆಜಾನ್​ನಲ್ಲಿ ಇದರ ಬೆಲೆಯು 59,000 ರೂ. ಆಗಿದ್ದು, ಕೊಡುಗೆಯಲ್ಲಿ ಈ ಫೋನ್‌ 49,000 ರೂ. ಗಳಿಗೆ ದೊರೆಯುತ್ತದೆ.

Amazon Diwali sale: ಗ್ಯಾಲಕ್ಸಿ S22 5G ಸ್ಮಾರ್ಟ್​ಫೋನ್ ಖರೀದಿಗೆ ಮುಗಿಬಿದ್ದ ಜನರು: ಎಷ್ಟು ರೂ. ಡಿಸ್ಕೌಂಟ್ ಗೊತ್ತೇ?
Samsung Galaxy S22
Edited By:

Updated on: Oct 13, 2022 | 11:25 AM

ಭಾರತದಲ್ಲಿ ಹಬ್ಬದ ಸೀಸನ್ ಶುರುವಾಗಿದೆ. ಇ ಕಾಮರ್ಸ್ ತಾಣಗಳಲ್ಲಂತು ಬಂಪರ್ ಡಿಸ್ಕೌಂಟ್​ಗೆ ಮೊಬೈಲ್, ಲ್ಯಾಪ್​ಟಾಪ್, ಡ್ರೆಸ್ ಸೇರಿದಂತೆ ಎಲೆಕ್ಟ್ರಾನಿಕ್ ವಸ್ತುಗಳು ಮಾರಾಟ ಆಗುತ್ತಿದೆ. ಮುಖ್ಯವಾಗಿ ಸ್ಯಾಮ್​ಸಂಗ್ (Samsung) ಕಂಪನಿಯ ಸ್ಮಾರ್ಟ್​ಫೋನ್​ಗಳು ಭರ್ಜರಿ ರಿಯಾಯಿತಿ ಪಡೆದುಕೊಂಡಿದೆ. ಅಮೆಜಾನ್​ನಲ್ಲಿ ಸ್ಯಾಮ್​ಸಂಗ್ ಗ್ಯಾಲಕ್ಸಿ S20 FE 5G ಕೇವಲ 29,990 ರೂ. ಗೆ ಮಾರಾಟ ಆಗುತ್ತಿದೆ. ಆದರೆ, ನೀವು ಇನ್ನೊಂದಿಷ್ಟು ಹಣ ಹಾಕುವವರಾಗಿದ್ದರೆ ಗ್ಯಾಲಕ್ಸಿ S21 FE 5G ಅನ್ನು ಫ್ಲಿಪ್​ಕಾರ್ಟ್​ನಲ್ಲಿ (Flipkart) ಕೇವಲ 35,999 ರೂ. ಗೆ ಖರೀದಿಸಬಹುದು. ಇದರ ಮೂಲಬೆಲೆ 54,999 ರೂ. ಆಗಿದೆ. ಇವುಗಳ ನಡುವೆ ಫ್ಲ್ಯಾಗ್​ಶಿಪ್ 5G ಸ್ಮಾರ್ಟ್​ಫೋನ್ ಗ್ಯಾಲಕ್ಸಿ S22 ಅಮೆಜಾನ್ ದೀಪಾವಳಿ ಸೇಲ್​ನಲ್ಲಿ (Amazon Diwali sale) ಬಂಪರ್ ಡಿಸ್ಕೌಂಟ್​ನಲ್ಲಿ ನಿಮ್ಮದಾಗಿಸಬಹುದಾಗಿದೆ.

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್‌ 50,000 ರೂ. ಗಳ ಒಳಗೆ ಖರೀದಿಸಬಹುದು. ಅಮೆಜಾನ್​ನಲ್ಲಿ ಇದರ ಬೆಲೆಯು 59,000 ರೂ. ಆಗಿದ್ದು, ಕೊಡುಗೆಯಲ್ಲಿ ಈ ಫೋನ್‌ 49,000 ರೂ. ಗಳಿಗೆ ದೊರೆಯುತ್ತದೆ. 10,000 ರೂ. ಗಳ ರಿಯಾಯಿತಿ ಕೂಪನ್‌ ಕೊಡುಗೆ ಲಭ್ಯವಾಗಲಿದೆ. ಫ್ಯಾಂಟಮ್ ವೈಟ್, ಫ್ಯಾಂಟಮ್ ಬ್ಲಾಕ್ ಮತ್ತು ಗ್ರೀನ್ ಬಣ್ಣಗಳಲ್ಲಿ ಈ ಫೋನನ್ನಿ ನೀವು ಖರೀದಿಸಬಹುದು.

ಗ್ಯಾಲಕ್ಸಿ S22 ಸ್ಮಾರ್ಟ್‌ಫೋನ್‌ 6.1 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡೈನಾಮಿಕ್ AMOLED 2X ಡಿಸ್‌ಪ್ಲೇಯನ್ನು ಹೊಂದಿದ್ದು ಜೊತೆಗೆ ಡಿಸ್‌ಪ್ಲೇಯು ಗೊರಿಲ್ಲಾ ಗ್ಲಾಸ್ ವಿಕ್ಟಸ್ + ನಿಂದ ರಕ್ಷಿಸಲಾಗಿದೆ. 8 GB RAM ಮತ್ತು 256 GB ವೇರಿಯಂಟ್ ಆಯ್ಕೆ ಪಡೆದಿದೆ. ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 12 ಓಎಸ್‌ ಸಪೋರ್ಟ್‌ ಪಡೆದಿದೆ. ಆಕ್ಟಾ ಕೋರ್ 4nm SoC ಪ್ರೊಸೆಸರ್‌ ಬೆಂಬಲ ನೀಡಲಾಗಿದೆ.

ಇದನ್ನೂ ಓದಿ
WhatsApp Tricks: ಐಫೋನ್, ಆಂಡ್ರಾಯ್ಡ್​ ಸ್ಮಾರ್ಟ್​​ಫೋನ್​​ನಲ್ಲಿ ವಾಟ್ಸ್​ಆ್ಯಪ್​​ ಕಾಲ್ ರೆಕಾರ್ಡ್​ ಹೇಗೆ?: ಇಲ್ಲಿದೆ ಟ್ರಿಕ್
ಭಯೋತ್ಪಾದಕ ಸಂಘಟನೆಗಳ ಪಟ್ಟಿಗೆ ಫೇಸ್​ಬುಕ್ ಮಾತೃಸಂಸ್ಥೆ ಮೆಟಾವನ್ನೂ ಸೇರಿಸಿದ ರಷ್ಯಾ!
Lava Yuva Pro: ಇದು ಭಾರತದ ಸ್ಮಾರ್ಟ್​ಫೋನ್: ಅತಿ ಕಡಿಮೆ ಬೆಲೆಗೆ ಆಕರ್ಷಕ ಮೊಬೈಲ್ ಬಿಡುಗಡೆ ಮಾಡಿದ ಲಾವಾ
WhatsApp: ವಾಟ್ಸ್​ಆ್ಯಪ್​ ಗ್ರೂಪ್​ಗೆ ಎಷ್ಟು ಮಂದಿಯನ್ನು ಆ್ಯಡ್ ಮಾಡಬಹುದು?: ಬರುತ್ತಿದೆ ಅಚ್ಚರಿಯ ಆಯ್ಕೆ

ಹಾಗೆಯೇ ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆಯನ್ನು ಒಳಗೊಂಡಿದ್ದು, ಮುಖ್ಯ ಕ್ಯಾಮೆರಾವು 50 ಮೆಗಾ ಪಿಕ್ಸಲ್ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿದೆ. 3,700mAh ಬ್ಯಾಟರಿ ಬ್ಯಾಕ್‌ಅಪ್‌ ಪಡೆದಿದ್ದು, 15W ವೈರ್‌ಲೆಸ್ ಚಾರ್ಜಿಂಗ್ ಮತ್ತು ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗಾಗಿ ವೈರ್‌ಲೆಸ್ ಪವರ್‌ಶೇರ್ ಅನ್ನು ಸಹ ಬೆಂಬಲಿಸುತ್ತದೆ. ಹಾಗೆಯೇ 5G, 4G LTE, ವೈ ಫೈ 6, ಬ್ಲೂಟೂತ್ v5.2, ಜಿಪಿಎಸ್‌/ A ಜಿಪಿಎಸ್‌, NFC ಮತ್ತು USB ಟೈಪ್ ಸಿ ಪೋರ್ಟ್ ನಂತಹ ಕನೆಕ್ಟಿವಿಟಿ ಆಯ್ಕೆ ಇದೆ.

ಇನ್ನು ಬರೋಬ್ಬರಿ 6000mAh ಬ್ಯಾಟರಿ ಸಾಮರ್ಥ್ಯದಿಂದ ಕೂಡಿರುವ ಸ್ಯಾಮ್‌ಸಂಗ್‌ ಗ್ಯಾಲಕ್ಸಿ F13 ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ ​ಅತಿ ಕಡಿಮೆ ಬೆಲೆಗೆ ಮಾರಾಟ ಆಗುತ್ತಿದೆ. ಗ್ಯಾಲಕ್ಸಿ F13 ಸ್ಮಾರ್ಟ್‌ಫೋನ್‌ ಭಾರತದಲ್ಲಿ 14,999 ರೂ. ಗೆ ಬಿಡುಗಡೆ ಆಗಿತ್ತು. ಇದೀಗ 5,000 ರೂ. ಗಳ ಡಿಸ್ಕೌಂಟ್ ಪಡೆದುಕೊಂಡಿರುವ ಈ ಫೋನ್ ಕೇವಲ 9999 ರೂ. ಗೆ ಮಾರಾಟ ಆಗುತ್ತಿದೆ. ಹೆಚ್​ಡಿಎಫ್​ಸಿ ಬ್ಯಾಂಕ್ ಕಾರ್ಡ್​ ಮೂಲಕ ಖರೀದಿಸಿದರೆ ಪುನಃ 500 ರೂ. ರಿಯಾಯಿತಿ ಪಡೆಯಬಹುದು.