ಸ್ಯಾಮ್‌ಸಂಗ್ ತನ್ನ ಪ್ರಮುಖ ಗ್ಯಾಲಕ್ಸಿ S23 ಸರಣಿಯಿಂದ ಫ್ಯಾನ್ ಆವೃತ್ತಿ (Samsung Galaxy S23 FE) ಮಾದರಿಯನ್ನು ಬಿಡುಗಡೆ ಮಾಡಲು ಸಜ್ಜಾಗಿದೆ. ಸ್ಯಾಮ್‌ಸಂಗ್ 2022 ರಲ್ಲಿ ಕೊನೆಯದಾಗಿ ಗ್ಯಾಲಕ್ಸಿ S21 FE ಬಿಡುಗಡೆ ಮಾಡಿತ್ತು. ಆ ಬಳಿಕ ಅನಾವರಣಗೊಳ್ಳುತ್ತಿರುವ ಮೊದಲ ಫ್ಯಾನ್ ಎಡಿಷನ್ ಸ್ಮಾರ್ಟ್‌ಫೋನ್ ಇದಾಗಿದೆ. ಈ ವರ್ಷದ ಆರಂಭದಿಂದಲೂ FE ಮಾದರಿ ಬಗ್ಗೆ ಒಂದೊಂದೆ ಮಾಹಿತಿ ಸೋರಿಕೆ ಆಗುತ್ತಿದ್ದವು. ಇದೀಗ ಸ್ಯಾಮ್‌ಸಂಗ್ ಕಂಪನಿ ಈ ವಿಚಾರವನ್ನು ದೃಢಪಡಿಸಿದೆ.
”ನಾವು ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಆವೃತ್ತಿಯನ್ನು ಬಿಡುಗಡೆ ಮಾಡಲು ಎದುರು ನೋಡುತ್ತಿದ್ದೇವೆ,” ಎಂದು ಕಂಪನಿ ಹೇಳಿದೆ. ಮುಂದಿನ ತಿಂಗಳು ಈ ಫೋನ್ ಅನಾವರಣಗೊಳ್ಳಲಿದೆ. ಗ್ಯಾಲಕ್ಸಿ ಎಸ್ 23 ಎಫ್‌ಇ ಬಿಡುಗಡೆ ದಿನಾಂಕವನ್ನು ಸ್ಯಾಮ್‌ಸಂಗ್ ಇನ್ನೂ ಘೋಷಿಸಿಲ್ಲ. ಆದರೆ, ಟಿಪ್‌ಸ್ಟರ್ ಯೋಗೇಶ್ ಬ್ರಾರ್ ಪ್ರಕಾರ, ಲಾಂಚ್ ಟೈಮ್‌ಲೈನ್ ಅನ್ನು ಸೆಪ್ಟೆಂಬರ್ನಲ್ಲಿ ನಿಗದಿ ಮಾಡಲಾಗಿದೆಯಂತೆ. ಈ ಮಾಹಿತಿಯು ನಿಜವಾಗಿದ್ದರೆ, ಶೀಘ್ರದಲ್ಲೇ ಗ್ಯಾಲಕ್ಸಿ S23 FE ಬಿಡುಗಡೆ ಆಗಲಿದೆ. ಇದರ ಬೆಲೆ 54,999 ರೂ. ಇರಬಹುದೆಂದು ಹೇಳಲಾಗಿದೆ.
ಡಿಸ್ ಪ್ಲೇ: ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಸ್ಮಾರ್ಟ್‌ಫೋನ್ 120Hz ರಿಫ್ರೆಶ್ ದರದೊಂದಿಗೆ 6.4-ಇಂಚಿನ FHD+ ಡೈನಾಮಿಕ್ AMOLED ಡಿಸ್ ಪ್ಲೇಯನ್ನು ಹೊಂದಿರುತ್ತದೆ.
ಪಾಸ್ವರ್ಡ್ ಶೇರಿಂಗ್ ಆಯ್ಕೆ ಬಂದ್: ಏರ್ಟೆಲ್, ಜಿಯೋದ ಯಾವ ಪ್ಲಾನ್ನಲ್ಲಿ ನೆಟ್‌ಫ್ಲಿಕ್ಸ್ ಫ್ರೀ ಇದೆ?
ಪ್ರೊಸೆಸರ್: ಈ ಸ್ಮಾರ್ಟ್‌ಫೋನ್ ಕ್ವಾಲ್ಕಂ ಸ್ನಾಪ್ಡ್ರಾಗನ್ 8 Gen 1 ಅಥವಾ ಎಕ್ಸಿನೊಸ್ 2200 ಪ್ರೊಸೆಸರ್ನಿಂದ ಚಾಲಿತವಾಗುವ ನಿರೀಕ್ಷೆಯಿದೆ. ಕಳೆದ ವರ್ಷದ ಗ್ಯಾಲಕ್ಸಿ S22 ಸರಣಿಯಲ್ಲಿ ಇದೇ ಚಿಪ್‌ಸೆಟ್ ನೀಡಲಾಗುತ್ತು.
ಕ್ಯಾಮೆರಾಗಳು: OIS ಜೊತೆಗೆ 50MP ಪ್ರಾಥಮಿಕ ಕ್ಯಾಮೆರಾ, 8MP ಕ್ಯಾಮೆರಾ ಮತ್ತು 12MP ಟೆಲಿಫೋಟೋ ಲೆನ್ಸ್ ಅನ್ನು ಒಳಗೊಂಡಿರುವ ಟ್ರಿಪಲ್ ಕ್ಯಾಮೆರಾ ಸೆಟಪ್ ಇರಲಿದೆ. ಸೆಲ್ಫಿಗಾಗಿ, ಇದು 10MP ಮುಂಭಾಗದ ಕ್ಯಾಮೆರಾವನ್ನು ಹೊಂದಬಹುದು.
ಬ್ಯಾಟರಿ, ಚಾರ್ಜಿಂಗ್: ಈ ಸ್ಮಾರ್ಟ್‌ಫೋನ್ 25W ವೇಗದ ಚಾರ್ಜಿಂಗ್ ಮತ್ತು ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 4,500mAh ಬ್ಯಾಟರಿಯನ್ನು ಹೊಂದಿದೆ.
ಸಾಫ್ಟ್‌ವೇರ್: ಸ್ಯಾಮ್‌ಸಂಗ್ ಗ್ಯಾಲಕ್ಸಿ S23 FE ಫೋನ್ ಆಂಡ್ರಾಯ್ಡ್ 13 ಅನ್ನು ಆಧರಿಸಿದ UI 5.1 ಮೂಲಕ ರನ್ ಆಗುತ್ತದೆ. ಸ್ಯಾಮ್‌ಸಂಗ್ ನಾಲ್ಕು ವರ್ಷಗಳವರೆಗೆ ಆಂಡ್ರಾಯ್ಡ್ ಸಾಫ್ಟ್‌ವೇರ್ ನವೀಕರಣಗಳನ್ನು ಮತ್ತು ಐದು ವರ್ಷಗಳವರೆಗೆ ಭದ್ರತಾ ಬೆಂಬಲವನ್ನು ನೀಡುತ್ತದೆ ಎಂದು ಹೇಳಲಾಗಿದೆ.
IP ರೇಟಿಂಗ್: ಈ ಫೋನ್ ಸಹ IP ರೇಟಿಂಗ್‌ನೊಂದಿಗೆ ಬರುತ್ತದೆ ಎಂದು ಹೇಳಲಾಗುತ್ತದೆ ಆದರೆ ನಿಖರವಾದ ರೇಟಿಂಗ್ ಇನ್ನೂ ತಿಳಿದುಬಂದಿಲ್ಲ.
ಹೆಚ್ಚಿನ ಟೆಕ್ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ