ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇಂಟರ್ನೆಟ್ ಬ್ಯಾಂಕಿಂಗ್, ಅದರ ಮೊಬೈಲ್ ಅಪ್ಲಿಕೇಷನ್ YONO ಮತ್ತು ಯುಪಿಐ ಸೇವೆಗಳು ಭಾನುವಾರದಂದು ನಿರ್ವಹಣೆ ಚಟುವಟಿಕೆಗಳು ಇರುವುದರಿಂದ ಕಾರ್ಯ ನಿರ್ವಹಿಸುವುದಿಲ್ಲ. “ಉತ್ತಮ ಬ್ಯಾಂಕಿಂಗ್ ಸೇವೆ ಒದಗಿಸಲು ಶ್ರಮಿಸುತ್ತಿದ್ದೇವೆ. ನಮ್ಮ ಗೌರವಾನ್ವಿತ ಗ್ರಾಹಕರಿಗೆ ಸಹಕರಿಸುವಂತೆ ಕೇಳಿಕೊಳ್ಳುತ್ತೇವೆ,” ಎಂದು ದೇಶದ ಅತಿ ದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ. ಬ್ಯಾಂಕ್ ಹೇಳಿರುವ ಪ್ರಕಾರ ಜೂನ್ 13ರಂದು 2:40ರಿಂದ 6:40ರ ಮಧ್ಯೆ ನಿರ್ವಹಣೆ ಚಟುವಟಿಕೆಗಳು ನಡೆಸಲಿದ್ದೇವೆ ಎಂದು ಬ್ಯಾಂಕ್ನಿಂದ ಹೇಳಲಾಗಿದೆ.
ಕಳೆದ ಶುಕ್ರವಾರದಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಕೊಲ್ಯಾಟರಲ್ ಇಲ್ಲದಂತೆ ಕವಚ್ ಪರ್ಸನಲ್ ಲೋನ್ ಅನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಕೊವಿಡ್ಗೆ ಸಂಬಂಧಿಸಿದಂತೆ ಖರ್ಚುಗಳಿದ್ದು, ಆರ್ಥಿಕ ಒತ್ತಡದಲ್ಲಿ ಇರುವ ಗ್ರಾಹಕರಿಗೆ ಪರ್ಸನಲ್ ಲೋನ್ ಅನ್ನು ನೀಡಲಾಗುತ್ತದೆ. ನೆನಪಿರಲಿ, ಇದು ಕೊವಿಡ್ ವೈದ್ಯಕೀಯ ಚಿಕಿತ್ಸೆಗಾಗಿ ನೀಡಲಿರುವ ಹಣಕಾಸಿನ ಸಾಲವಾಗಿದೆ.
We request our esteemed customers to bear with us as we strive to provide a better banking experience.#InternetBanking #YONOSBI #YONO #ImportantNotice pic.twitter.com/FxegFbT5YP
— State Bank of India (@TheOfficialSBI) June 12, 2021
ಸರ್ಕಾರಿ ಸ್ವಾಮ್ಯದ ಎಸ್ಬಿಐ ಯಾವುದೇ ಕೊಲಾಟರಲ್, ಅಂದರೆ ಆಧಾರಗಳನ್ನು ಪಡೆದುಕೊಳ್ಳದೆ 5 ಲಕ್ಷ ರೂಪಾಯಿ ತನಕ ಸಾಲವನ್ನು ನೀಡುತ್ತದೆ. ಅದಕ್ಕಾಗಿ ವಾರ್ಷಿಕ ಶೇ 8.5ರಷ್ಟು ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಈ ಮೂಲಕ ಗ್ರಾಹಕರು ಸ್ವಂತ ಹಾಗೂ ಕುಟುಂಬಸ್ಥರ ಕೊವಿಡ್- 19 ವೈದ್ಯಕೀಯ ವೆಚ್ಚವನ್ನು ಭರಿಸುವುದಕ್ಕೆ ಅನುಕೂಲ ಆಗಲಿದೆ ಎಂದು ಬ್ಯಾಂಕ್ ಅಧ್ಯಕ್ಷರು ತಿಳಿಸಿದ್ದಾರೆ.
ಇದನ್ನೂ ಓದಿ: SBI Loan: ಕೊವಿಡ್- 19 ಚಿಕಿತ್ಸೆಗೆ ಎಸ್ಬಿಐನಿಂದ ಕೊಲಾಟರಲ್ ಇಲ್ಲದಂತೆ ಶೇ 8.5 ಬಡ್ಡಿ ದರದಲ್ಲಿ 5 ಲಕ್ಷದ ತನಕ ಸಾಲ
ಇದನ್ನೂ ಓದಿ: SBI Alert: ಮನೆಯಲ್ಲಿ ಕುಳಿತೇ ಎಸ್ಬಿಐ ಎಟಿಎಂ ಕಾರ್ಡ್ಗೆ ಅಪ್ಲೈ ಮಾಡುವುದು ಹೇಗೆ; ಇಲ್ಲಿದೆ ಹಂತಹಂತವಾದ ವಿವರಣೆ
(Due to maintenance of State Of India internet banking and UPI services unavailable for 4 hours on June 13th, 2021. That is on Sunday)