Flipkart Big Saving Days Sale: ಅತ್ಯಾಕರ್ಷಕ ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ ಫ್ಲಿಪ್​ಕಾರ್ಟ್​

Flipkart offer: ಗೂಗಲ್​ ಪಿಕ್ಸೆಲ್​ 4ಎ, ಐಫೋನ್ 11 ಪ್ರೋ, ಮೋಟೋರೋಲಾ ರೇಜರ್ 5ಜಿ, ಸ್ಯಾಮ್​ಸಂಗ್ ಗ್ಯಲಾಕ್ಸಿ ಎಫ್​ 12, ಏಸಸ್ ಆರ್​ಓಜಿ ಫೋನ್ 3 ಸೇರಿದಂತೆ ಇನ್ನಿತರ ಮಾದರಿಗಳ ಮೇಲೆ ಫ್ಲಿಪ್​ಕಾರ್ಟ್​ ರಿಯಾಯಿತಿ ಘೋಷಿಸಿದೆ. ಅವುಗಳ ಪೈಕಿ ಹೆಚ್ಚು ಗಮನ ಸೆಳೆಯುತ್ತಿರುವ ಸ್ಮಾರ್ಟ್​ಫೋನ್​ಗಳು ಇಂತಿವೆ.

Flipkart Big Saving Days Sale: ಅತ್ಯಾಕರ್ಷಕ ಸ್ಮಾರ್ಟ್​ಫೋನ್​ಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಿದ ಫ್ಲಿಪ್​ಕಾರ್ಟ್​
ಫ್ಲಿಪ್​ಕಾರ್ಟ್​ ಆಫರ್​
Follow us
TV9 Web
| Updated By: Skanda

Updated on: Jun 12, 2021 | 12:19 PM

ಕೊರೊನಾ ಎರಡನೇ ಅಲೆ ಕಾರಣ ರಾಜ್ಯದ ಹಲವೆಡೆ ಲಾಕ್​ಡೌನ್​ ಚಾಲ್ತಿಯಲ್ಲಿದ್ದು, ಜೂನ್​ 14ರ ನಂತರವೂ 11 ಜಿಲ್ಲೆಗಳಲ್ಲಿ ಬಿಗಿ ನಿಯಮಾವಳಿಗಳು ಮುಂದುವರೆಯುತ್ತಿದೆ. ಈ ಸಂದರ್ಭದಲ್ಲಿ ಜನರಿಗೆ ಹೊಸತೇನಾದರೂ ಖರೀದಿಸಬೇಕೆಂದರೆ ಆನ್​ಲೈನ್​ ಮಾರುಕಟ್ಟೆಗಳೇ ಸರ್ವಸ್ವ ಎಂಬಂತಾಗಿವೆ. ಅದಕ್ಕೆ ಪೂರಕವಾಗಿ ಈ ಆನ್​ಲೈನ್​ ಮಾರುಕಟ್ಟೆಗಳಲ್ಲಿ ಕೆಲ ಆಫರ್​ಗಳನ್ನೂ ಘೋಷಿಸುವುದರಿಂದ ಜನರು ಸಹಜವಾಗಿಯೇ ಅದರತ್ತ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಇದೀಗ ಜೂನ್​ 13ರಿಂದ ವಾಲ್​ಮಾರ್ಟ್​ ಒಡೆತನದ ಫ್ಲಿಪ್​ಕಾರ್ಟ್​ನಲ್ಲಿ ಬಿಗ್​ ಸೇವಿಂಗ್ಸ್ ಡೇ ಸೇಲ್​ ಆರಂಭವಾಗುತ್ತಿದ್ದು, ಅತ್ಯಾಕರ್ಷಕ ಸ್ಮಾರ್ಟ್​ಫೊನ್​ಗಳ ಮೇಲೆ ಭರ್ಜರಿ ರಿಯಾಯಿತಿ ಘೋಷಿಸಲಾಗಿದೆ. ಅನೇಕ ದಿನಗಳ ನಂತರ ಒಂದೊಳ್ಳೇ ಸ್ಮಾರ್ಟ್​ಫೋನ್​ ಕೊಳ್ಳಬೇಕೆಂದು ಯೋಜನೆ ಹಾಕಿಕೊಂಡವರು ಈ ಕೆಳಗಿನವುಗಳಲ್ಲಿ ಯಾವುದು ನಿಮ್ಮ ಜೇಬಿಗೆ ಸೂಕ್ತ ಎಂದು ನೋಡಬಹುದು.

ಜೂನ್​ 13ರಿಂದ ಆರಂಭವಾಗುತ್ತಿರುವ ಈ ರಿಯಾಯಿತಿ ಮೇಳದಲ್ಲಿ ಎಸ್​ಬಿಐ ಕಾರ್ಡ್​ ಹೊಂದಿರುವವರಿಗೆ ಇರುವ ರಿಯಾಯಿತಿ ಮೇಲೆ ಹೆಚ್ಚುವರಿಯಾಗಿ ಶೇ.10ರಷ್ಟು ಡಿಸ್ಕೌಂಟ್ ಸಿಗಲಿದೆ. ಸದ್ಯ ಸ್ಮಾರ್ಟ್​ಫೋನ್, ಲ್ಯಾಪ್​ಟಾಪ್, ಟ್ಯಾಬ್ಲೆಟ್ ಸೇರಿದಂತೆ ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ರಿಯಾಯಿತಿ ಘೋಷಿಸಲಾಗಿದ್ದು, ಸ್ಮಾರ್ಟ್​ಫೋನ್​ಗಳ ಮೇಲಿಉವ ಆಫರ್ ತುಸು ಹೆಚ್ಚೇ ಗಮನ ಸೆಳೆಯುತ್ತಿದೆ.

ಗೂಗಲ್​ ಪಿಕ್ಸೆಲ್​ 4ಎ, ಐಫೋನ್ 11 ಪ್ರೋ, ಮೋಟೋರೋಲಾ ರೇಜರ್ 5ಜಿ, ಸ್ಯಾಮ್​ಸಂಗ್ ಗ್ಯಲಾಕ್ಸಿ ಎಫ್​ 12, ಏಸಸ್ ಆರ್​ಓಜಿ ಫೋನ್ 3 ಸೇರಿದಂತೆ ಇನ್ನಿತರ ಮಾದರಿಗಳ ಮೇಲೆ ಫ್ಲಿಪ್​ಕಾರ್ಟ್​ ರಿಯಾಯಿತಿ ಘೋಷಿಸಿದೆ. ಅವುಗಳ ಪೈಕಿ ಹೆಚ್ಚು ಗಮನ ಸೆಳೆಯುತ್ತಿರುವ ಸ್ಮಾರ್ಟ್​ಫೋನ್​ಗಳು ಇಂತಿವೆ.

Flipkart Big Saving Days Sale

ಅತ್ಯಾಕರ್ಷಕ ವಿನ್ಯಾಸವುಳ್ಳ ಸ್ಮಾರ್ಟ್​ಫೋನ್​ಗಳಿಗೆ ರಿಯಾಯಿತಿ

ಏಸಸ್ ಆರ್​ಓಜಿ ಫೋನ್ 3 ಮಾರುಕಟ್ಟೆಯಲ್ಲಿ ಹೊಸ ನಿರೀಕ್ಷೆಗಳೊಂದಿಗೆ ಗ್ರಾಹಕರನ್ನು ಎದುರುಗೊಂಡಿದ್ದು, 46,999ರೂ. ಮೂಲಬೆಲೆಯ ಈ ಮಾದರಿಯನ್ನು ಆಫರ್ ವೇಳೆ 41,999 ರೂ.ಗಳಿಗೆ ಮಾರಾಟ ಮಾಡಲು ಫ್ಲಿಪ್​ಕಾರ್ಟ್​ ನಿರ್ಧರಿಸಿದೆ. ಆ ಮೂಲಕ ಗ್ರಾಹಕರಿಗೆ 5,000 ರೂಪಾಯಿಗಳ ಭರ್ಜರಿ ರಿಯಾಯಿತಿ ನೀಡುತ್ತಿದೆ.

ಸ್ಯಾಮ್​ಸಂಗ್​ ಗ್ಯಾಲಕ್ಸಿ ಎಫ್​ 12 ಫೋನ್​ ಈಗಾಗಲೇ ಮೊಬೈಲ್ ಪ್ರಿಯರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಸಾಧಾರಣ ಬೆಲೆಯಲ್ಲಿ ಸಿಗುತ್ತಿರುವ ಒಂದೊಳ್ಳೇ ಫೋನ್​ ಆಗಿರುವ ಕಾರಣಕ್ಕೆ ಜನ ಇದನ್ನು ಇಷ್ಟಪಡುತ್ತಿದ್ದಾರೆ. 10,999ರೂ. ಮೂಲಬೆಲೆಯ ಈ ಫೊನ್​ ಮೇಲೆ ಫ್ಲಿಪ್​ಕಾರ್ಟ್​ 1ಸಾವಿರ ರೂ. ರಿಯಾಯಿತಿ ನೀಡುತ್ತಿದ್ದು, 9,999ರೂ.ಗೆ ಸಿಗಲಿದೆ.

ಗೂಗಲ್​ ಪಿಕ್ಸೆಲ್​ 4ಎ ಫೋನ್​ಗೆ ಅದರದ್ದೇ ಆದ ಅಭಿಮಾನಿ ವರ್ಗವಿದೆ. ಮೊದಲಿನಿಂದಲೂ ಗೂಗಲ್ ಫೋನ್ ಇಷ್ಟಪಟ್ಟವರು ಇದನ್ನು ಕೊಳ್ಳಲು ತುದಿಗಾಲಲ್ಲಿ ನಿಂತಿರುತ್ತಾರೆ. 29,999ರೂ. ಮೂಲಬೆಲೆಯ ಈ ಫೋನ್​ ಇದೀಗ 26,999ರೂ.ಗೆ ಲಭ್ಯವಿದೆ.

ಐಕೂ 3 ಎಂಬ 5ಜಿ ಫೋನ್​ ವಿಶಿಷ್ಟ ವಿನ್ಯಾಸದೊಂದಿಗೆ ಗ್ರಾಹಕರನ್ನು ಕೈಬೀಸಿ ತನ್ನತ್ತ ಕರೆಯುತ್ತಿದೆ. ಈ ಫೋನ್​ ಮೇಲೆ 10ಸಾವಿರ ರೂಪಾಯಿಗಳ ಭರ್ಜರಿ ರಿಯಾಯಿತಿ ಇದ್ದು 34,990ರೂ. ಮೂಲಬೆಲೆ ಹೊಂದಿರುವ ಇದು ಆಫರ್​ ವೇಳೆ 24,990 ರೂ.ಗೆ ಸಿಗಲಿದೆ.

ಐಫೋನ್​ನ ಎರಡು ಮಾದರಿಗಳ ಮೇಲೂ ರಿಯಾಯಿತಿ ಘೋಷಿಸಿರುವ ಫ್ಲಿಪ್​ಕಾರ್ಟ್ ಐಫೋನ್ ಎಕ್ಸ್​ಆರ್ ಹಾಗೂ ಐಫೋನ್​ 11 ಪ್ರೋ ಮಾದರಿಗಳನ್ನು ಕೊಂಚ ಕಡಿಮೆ ಬೆಲೆಗೆ ಮಾರಾಟ ಮಾಡುತ್ತಿದೆ. ಸುಮಾರು 42 ಸಾವಿರ ರೂಪಾಯಿ ಆಸುಪಾಸಿನ ಮೂಲಬೆಲೆ ಹೊಂದಿದ ಐಫೋನ್ ಎಕ್ಸ್​ಆರ್ 39,999ರೂ.ಗೆ ಹಾಗೂ 79,999ರೂ ಮೂಲಬೆಲೆಯ ಐಫೋನ್​ 11 ಪ್ರೋ 74,990ರೂ.ಗೆ ಮಾರಾಟವಾಗಲಿದೆ.

ಈ ಎಲ್ಲಾ ಫೋನ್​ಗಳಿಗಿಂತಲೂ ವಿಭಿನ್ನವಾಗಿರುವ ಹಾಗೂ ವಿನ್ಯಾಸದ ಮೂಲಕವೇ ಕಣ್ಮನ ಗೆಲ್ಲುತ್ತಿರುವ ಮೋಟೋರೋಲಾ ಕಂಪೆನಿಯ ಮೋಟೋರೋಲಾ ರೇಜರ್ 5ಜಿ (Motorola Razr 5G) ಫೋನ್​ 89,999ರೂ.ಗೆ ಲಭ್ಯವಿದೆ. ಇದರ ಮೂಲಬೆಲೆ 1,09,999ಆಗಿದ್ದು ರಿಯಾಯಿತಿಯಲ್ಲಿ 20ಸಾವಿರ ರೂ. ಉಳಿಯಲಿದೆ.

Flipkart Big Saving Days Sale (1)

ಅತ್ಯುತ್ತಮ ಆಫರ್​ ಘೋಷಿಸಿದ ಫ್ಲಿಪ್​ಕಾರ್ಟ್​

ಇದನ್ನೂ ಓದಿ: Honda Activa: ಬರೀ 25 ಸಾವಿರ ರೂಪಾಯಿಗೆ ಹೊಂಡಾ ಆ್ಯಕ್ಟೀವಾ ಖರೀದಿಸಿ; ಬಂಪರ್​ ಆಫರ್ ಪಡೆಯಲು ಹೀಗೆ ಮಾಡಿ 

Hyundai cars: ಹುಂಡೈ ಕಾರುಗಳ ಖರೀದಿ ಮೇಲೆ ಜೂನ್ ತಿಂಗಳ ಆಫರ್ ನಗದು ರಿಯಾಯಿತಿ ವಿನಿಮಯ ಬೋನಸ್ ಎಷ್ಟೆಲ್ಲ ಇವೆ!

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ