AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Microsoft: ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್​​​ 2025ಕ್ಕೆ ಕೊನೆ ಎಂದ ಮೈಕ್ರೋಸಾಫ್ಟ್; ಹಾಗಾದ್ರೆ ಮುಂದೇನು?

ವಿಂಡೋಸ್ 10ಗೆ ಸಪೋರ್ಟ್ ಮಾಡುವುದನ್ನು 2025ರಿಂದ ಮೈಕ್ರೋಸಾಫ್ಟ್​ ನಿಲ್ಲಿಸುತ್ತದೆ ಎಂದು ಘೋಷಣೆ ಮಾಡಲಾಗಿದೆ. ಹಾಗಿದ್ದರೆ ಮುಂದೇನು ಎಂದು ಮಾಹಿತಿ ಇಲ್ಲಿದೆ.

Microsoft: ವಿಂಡೋಸ್ 10 ಆಪರೇಟಿಂಗ್ ಸಿಸ್ಟಮ್​​​ 2025ಕ್ಕೆ ಕೊನೆ ಎಂದ ಮೈಕ್ರೋಸಾಫ್ಟ್; ಹಾಗಾದ್ರೆ ಮುಂದೇನು?
ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ (ಸಂಗ್ರಹ ಚಿತ್ರ)
Follow us
TV9 Web
| Updated By: Srinivas Mata

Updated on: Jun 12, 2021 | 8:44 PM

ಮೈಕ್ರೋಸಾಫ್ಟ್​ನಿಂದ ವಿಂಡೋಸ್ 10ಗೆ ಸಪೋರ್ಟ್ ನೀಡುವುದನ್ನು 2025ಕ್ಕೆ ಕೊನೆ ಮಾಡಲಿದೆ ಎಂದು ಘೋಷಣೆ ಮಾಡಿದೆ. ಕಂಪೆನಿಯಿಂದ ವಿಂಡೋಸ್ 10 ಹೋಮ್, ಪ್ರೊ, ವರ್ಕ್​ಸ್ಟೇಷನ್ಸ್ ಪ್ರೊ ಮತ್ತು ಪ್ರೊ ಎಜುಕೇಷನ್​ಗೆ ಅಕ್ಟೋಬರ್ 14, 2025ಕ್ಕೆ ಸಪೋರ್ಟ್ ಕೊನೆ ಮಾಡುತ್ತದೆ. ಇದರರ್ಥ ಏನೆಂದರೆ, ಆ ದಿನಾಂಕದ ನಂತರ ಯಾವುದೇ ಅಪ್​ಡೇಟ್​ಗಳನ್ನು ಮಾಡುವುದಿಲ್ಲ ಮತ್ತು ಭದ್ರತಾ ಸಮಸ್ಯೆಗಳನ್ನು ಸರಿಪಡಿಸುವುದಿಲ್ಲ. ಯಾವಾಗ ಮೈಕ್ರೋಸಾಫ್ಟ್​ನಿಂದ ವಿಂಡೋಸ್ 10 ಬಿಡುಗಡೆ ಮಾಡಲಾಗಿತ್ತೋ ಆಗಲೇ ಇದು ವಿಂಡೋಸ್​ನ ಕೊನೆಯ ವರ್ಷನ್ ಎಂದು ಹೇಳಲಾಗಿತ್ತು. ಆದರೆ ಈಚೆಗೆ ಕಂಪೆನಿ ಟೀಸರ್​ನಲ್ಲಿ ಖಾತ್ರಿ ಪಡಿಸಿರುವ ಪ್ರಕಾರ, ಈ ತಿಂಗಳ ಕೊನೆಗೆ ವಿಂಡೋಸ್ 11 ಬಿಡುಗಡೆ ಮಾಡಲಿದೆ. ವೆಬ್​ಸೈಟ್​ನಲ್ಲಿ ಈ ಕಾರ್ಯಕ್ರಮ ಲಿಸ್ಟ್ ಆಗಿದೆ. ಜೂನ್ 24ನೇ ತಾರೀಕಿನಂದು ಇದು ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಂಪೆನಿಯು ‘ಮುಂಬರುವ ವಿಂಡೋಸ್’ ಪ್ರಮುಖಾಂಶಗಳನ್ನು ತಿಳಿಸಲಾಗುವುದು.

ಈ ಕಾರ್ಯಕ್ರಮವು ಐಎಸ್​ಟಿ 10.30ಕ್ಕೆ ಶುರುವಾಗುತ್ತದೆ. ಮೈಕ್ರೋಸಾಫ್ಟ್​ನಿಂದ ಈ ಸುದ್ದಿಯನ್ನು ಅಧಿಕೃತ ಟ್ವಿಟ್ಟರ್ ಹ್ಯಾಂಡಲ್​ನಿಂದ ಖಾತ್ರಿ ಪಡಿಸಿದೆ. ಮೈಕ್ರೋಸಾಫ್ಟ್ ಬಿಲ್ಡ್ 2021 ಕಾರ್ಯಕ್ರಮದಲ್ಲಿ ಸಿಇಒ ಸತ್ಯ ನಾಡೆಲ್ಲ ಮಾತನಾಡಿ, ಮುಂದಿನ ತಲೆಮಾರಿನ ವಿಂಡೋಸ್ ಕಳೆದ ದಶಕದ ಮಹತ್ವದ ಅಪ್​ಡೇಟ್ ಆಗಿರುತ್ತದೆ ಎಂದಿದ್ದರು. “ಶೀಘ್ರದಲ್ಲೇ ಕಳೆದ ದಶಕದಲ್ಲಿ ವಿಂಡೋಸ್​ನಲ್ಲಿ ಮಹತ್ವದ ಅಪ್​ಡೇಟ್​ ಆಗಲಿದೆ. ಡೆವಲಪರ್​ಗಳು ಮತ್ತು ಕ್ರಿಯೇಟರ್ಸ್​ಗಳಿಗೆ ಅದ್ಭುತ ಆರ್ಥಿಕ ಅವಕಾಶ ತೆರೆದುಕೊಳ್ಳುತ್ತದೆ. ಕಳೆದ ಕೆಲವು ತಿಂಗಳಿಂದ ಇದನ್ನು ನಾನೇ ಪರೀಕ್ಷೆ ಮಾಡ್ತಿದೀನಿ. ಮುಂದಿನ ತಲೆಮಾರಿನ ವಿಂಡೋಸ್ ಬಗ್ಗೆ ಬಹಳ ಖುಷಿಯಾಗಿದ್ದೀನಿ,” ಎಂದಿದ್ದಾರೆ.

ವಿಂಡೋಸ್ 11ನಲ್ಲಿ ಬಹಳ ಪ್ರಮುಖವಾದ ಯೂಸರ್ ಇಂಟರ್​ಫೇಸ್ (UI) ಬದಲಾವಣೆ ಆಗಿದೆ. ವಿಂಡೋಸ್ 10 ನಿವೃತ್ತಿಯ ಬಗ್ಗೆ ಹೇಳುವುದಾದರೆ, 2025ರ ಆಚೆಗೂ ಬಳಕೆ ಆಗುವ ಸಾಧ್ಯತೆ ಇದೆ. ಏಕೆಂದರೆ ವಿಂಡೋಸ್ 7 ಅಪ್​ಗ್ರೇಡ್​ಗೆ ಬಹಳ ಸಮಯ ನೀಡಲಾಗಿತ್ತು. ಹೊಸ ಆಪರೇಟಿಂಗ್​ ಸಿಸ್ಟಮ್​ಗೆ ಮೈಗ್ರೇಟ್​ (ಬದಲಾಗುವುದಕ್ಕೆ) ಹೆಚ್ಚುವರಿ ಸಮಯವನ್ನು ಜನರಿಗೆ ನೀಡಲಾಗುವುದು.

ಇದನ್ನೂ ಓದಿ: ಮೈಕ್ರೋಸಾಫ್ಟ್​ನಿಂದ ಇಂಟರ್​ನೆಟ್​ ಎಕ್ಸ್​ಪ್ಲೋರರ್​ಗೆ ನಿವೃತ್ತಿ; 2022ರ ಜೂನ್​ನಿಂದ ಎಡ್ಜ್​ ಹವಾ

( Technology giant Microsoft to end Windows 10 by 2025. Here is the details all you need to know about)

ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹೊಸಪೇಟೆಯಿಂದ ಬೆಂಗಳೂರಿಗೆ ವಾಪಸ್ಸು ಹೋಗುತ್ತಿದ್ದೇನೆ: ಶಿವಕುಮಾರ್
ಹಂತನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಹಂತನಿಗೆ ಕಠಿಣ ಶಿಕ್ಷೆಯಾಗಬೇಕು ಎನ್ನುತ್ತಾರೆ ಮೃತನ ಸಂಬಂಧಿ ಶಂಕರ್
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ಗೃಹಲಕ್ಷ್ಮಿ ಹಣ ಪ್ರತಿ ತಿಂಗಳು ಕೊಡ್ತೀವಿ ಅಂತ ಹೇಳಿಲ್ಲ: ಡಿಕೆ ಶಿವಕುಮಾರ್​
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ತಂದೆ-ತಾಯಿ ಇಲ್ಲದ ನನಗೆ ಶಿವಣ್ಣ-ಗೀತಕ್ಕನೇ ದೇವರು: ಕಾಫಿನಾಡು ಚಂದು
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಅಧಿಕಾರಿಗಳನ್ನು ಬಯ್ಯುವುದು ಬಿಟ್ರೆ ಸಿದ್ದರಾಮಯ್ಯ ಏನು ಮಾಡಿದ್ದಾರೆ? ಸಿಂಹ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಮೂಲಭೂತ ಸೌಕರ್ಯಗಳಿಲ್ಲದ ಗ್ರೇಟರ್ ಬೆಂಗಳೂರು ಯಾರಿಗೆ ಬೇಕು? ನಿವಾಸಿ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸರ್ಕಾರ ಆಯೋಜಿಸಿರೋದು ಶೂನ್ಯ ಸಾಧನೆ ಸಮಾವೇಶ: ವಿಜಯೇಂದ್ರ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಸೈಂಟ್ ಮೇರಿಸ್ ದ್ವೀಪಕ್ಕೆ ಪ್ರವಾಸ ಪ್ಲ್ಯಾನ್ ಮಾಡಿದ್ದೀರಾ? ಈ ಸಂದೇಶ ಗಮನಿಸಿ
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ಗುಂಡಿ ತಪ್ಪಿಸಲು ಹೋಗಿ 3 ಕಾರು, ಲಾರಿ ಮಧ್ಯೆ ಸರಣಿ ಅಪಘಾತ: ಟ್ರಾಫಿಕ್ ಜಾಮ್
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?
ರಸ್ತೆಗಳು ಹಾಳಾಗೋದಿಕ್ಕೆ ಮೆಟ್ರೋ ಕಾಮಗಾರಿಯೂ ಕಾರಣವಾಗುತ್ತಿದೆಯೇ?