ಗ್ರಾಹಕರಿಗೆ ಮತ್ತಷ್ಟು ಆಯ್ಕೆಗಳು! ದೈನಂದಿನ ಮಿತಿರಹಿತ 5 ನವೀನ ಪ್ರೀಪೇಯ್ಡ್ ಡೇಟಾ ಯೋಜನೆಗಳ ಪರಿಚಯಿಸಿದ ಜಿಯೋ

Jio data plans: ಈ ಹೊಸ ಪ್ರೀಪೇಯ್ಡ್ ಯೋಜನೆಗಳು, ಹಿಂದಿನ ಜನಪ್ರಿಯ 28 ದಿನಗಳು ಮತ್ತು ಬಹು ವಾಯಿದೆಯ ಪ್ರೀಪೇಯ್ಡ್ ಯೋಜನೆಗಳಿಗಿಂತ ವಿಭಿನ್ನವಾಗಿದ್ದು, 30 ದಿನಗಳ ಬಹು ವಾಯಿದೆಯನ್ನು ಹೊಂದಿವೆ ಎಂದು ಮೂಲಗಳು ತಿಳಿಸಿವೆ.

ಗ್ರಾಹಕರಿಗೆ ಮತ್ತಷ್ಟು ಆಯ್ಕೆಗಳು! ದೈನಂದಿನ ಮಿತಿರಹಿತ 5 ನವೀನ ಪ್ರೀಪೇಯ್ಡ್ ಡೇಟಾ ಯೋಜನೆಗಳ ಪರಿಚಯಿಸಿದ ಜಿಯೋ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Digi Tech Desk

Updated on:Jun 12, 2021 | 12:36 PM

ನವದೆಹಲಿ: ದೂರ ಸಂಪರ್ಕ ಜಾಲದ ದಿಗ್ಗಜ ರಿಲಯನ್ಸ್ ಜಿಯೋ ಕಂಪೆನಿಯು ಜಿಯೋ ಫ್ರೀಡಂ ಎಂಬ ಐದು ಹೊಸ ಪ್ರೀ ಪೇಯ್ಡ್ ಡೇಟಾ  ಯೋಜನೆಗಳನ್ನು ಪರಿಚಯಿಸಿದೆ. ಇದು ಐದು ಹೊಸ ದೈನಂದಿನ ಮಿತಿರಹಿತ ಪ್ರೀಪೇಯ್ಡ್ ಮೊಬಿಲಿಟಿ ಆಫರ್‌ಗಳನ್ನು ಒದಗಿಸುತ್ತದೆ ಎಂದು ಜಿಯೋ ವೆಬ್‌ಸೈಟ್‌  ಮಾಹಿತಿ ನೀಡಿದೆ. ವೆಬ್‌ಸೈಟ್‌ನಲ್ಲಿ ಪ್ರಕಟಿಸಿರುವ ಹೊಸ ಯೋಜನೆಗಳು 127 ರೂಪಾಯಿಗೆ 15 ದಿನಗಳ ವ್ಯಾಲಿಡಿಟಿಯೊಂದಿಗೆ ಯೋಜನಾ ಅವಧಿಯಲ್ಲಿ 12 ಜಿಬಿ ತಡೆರಹಿತ ದೈನಂದಿನ ಡೇಟಾ ಆಫರ್‌ನೊಂದಿಗೆ ಆರಂಭವಾಗುತ್ತವೆ. 30 ದಿನಗಳು, 60 ದಿನಗಳು, 90 ದಿನಗಳು ಮತ್ತು 365 ದಿನಗಳ ಇತರೆ ಯೋಜನೆಗಳನ್ನು ಸಹ ಪರಿಚಯಿಸಲಾಗಿದೆ.

ಜಿಯೋ ಫ್ರೀಡಂ ಯೋಜನೆಗಳ ಅಡಿ ಪರಿಚಯಿಸಲಾಗಿರುವ ಐದು ಹೊಸ ದೈನಂದಿನ ಮಿತಿರಹಿತ ಪ್ರೀಪೇಯ್ಡ್ ಮೊಬಿಲಿಟಿ ಆಫರ್‌ಗಳು ಡಿಜಿಟಲ್ ಲೈಫ್‌ಗೆ ಮತ್ತಷ್ಟು ಆಯ್ಕೆಗಳನ್ನು ಒದಗಿಸಿದೆ ಎಂದು ಮೂಲಗಳು ತಿಳಿಸಿವೆ.

ಈ ಹೊಸ ಪ್ರೀಪೇಯ್ಡ್ ಯೋಜನೆಗಳು, ಹಿಂದಿನ ಜನಪ್ರಿಯ 28 ದಿನಗಳು ಮತ್ತು ಬಹು ವಾಯಿದೆಯ ಪ್ರೀಪೇಯ್ಡ್ ಯೋಜನೆಗಳಿಗಿಂತ ವಿಭಿನ್ನವಾಗಿದ್ದು, 30 ದಿನಗಳ ಬಹು ವಾಯಿದೆಯನ್ನು ಹೊಂದಿವೆ ಎಂದು ಮೂಲಗಳು ತಿಳಿಸಿವೆ.

ನಿಗದಿತ ಡೇಟಾದೊಂದಿಗೆ ದೈನಂದಿನ ಮಿತಿ ಇಲ್ಲದ ಹಾಗೂ ಅನಿಯಮಿತ ವಾಯ್ಸ್‌ಅನ್ನು ಈ ಐದು ಯೋಜನೆಗಳು ನೀಡಲಿವೆ. ‘ದೈನಂದಿನ ಮಿತಿ ರಹಿತ’ ಯೋಜನೆಗಳು, ದೈನಂದಿಯ ಮಿತಿಗಳು ಖಾಲಿಯಾಗುವ ಬಗ್ಗೆ ಚಿಂತೆ ಪಡುವ ಅಗತ್ಯವಿಲ್ಲದೆ ತಡೆರಹಿತ ಡೇಟಾ ಬಳಕೆಯನ್ನು ಆನಂದಿಸಲು ಅಧಿಕ ಡೇಟಾ ಬಳಕೆದಾರರಿಗೆ ನೆರವಾಗುತ್ತದೆ. 30 ದಿನಗಳ ವ್ಯಾಲಿಡಿಟಿ ಚಕ್ರವು ರೀಚಾರ್ಜ್ ದಿನಾಂಕವನ್ನು ನೆನಪಿಸಲು ನೆರವಾಗುತ್ತದೆ ಎಂದು ಮೂಲಗಳು ಹೇಳಿವೆ.

ಈ ಯೋಜನೆಗಳು ಜಿಯೋ ಟಿವಿ, ಜಿಯೋ ಸಿನಿಮಾ, ಜಿಯೋ ನ್ಯೂಸ್ ಮತ್ತು ಇತರೆ ಆಪ್‌ಗಳು ಸೇರಿದಂತೆ ಜಿಯೋದ ಮಾಜಿತಿ ಹಾಗೂ ಯುಟಿಲಿಟಿ ಆಪ್‌ಗಳಿಗೆ ಪ್ರವೇಶ ಕಲ್ಪಿಸುತ್ತವೆ.

ಜಿಯೋ ವೆಬ್‌ಸೈಟ್ ಮಾಹಿತಿಯ ಪ್ರಕಾರ, 247 ರೂ. ದರದ ಯೋಜನೆಯು 30 ದಿನಗಳ ವ್ಯಾಲಿಡಿಟಿ ಮತ್ತು ಯಾವುದೇ ದೈನಂದಿನ ಮಿತಿಯಿಲ್ಲದೆ 25 ಜಿಬಿ ಡೇಟಾ ನೀಡುತ್ತಿದೆ. ಇತರೆ ಯೋಜನೆಗಳು 447 ರೂ., (60 ದಿನಗಳ ವ್ಯಾಲಿಡಿಟಿ, 50 ಜಿಬಿ ಡೇಟಾ), 597 ರೂ. (90 ದಿನಗಳ ವ್ಯಾಲಿಡಿಟಿ ಮತ್ತು 75 ಜಿಬಿ ಡೇಟಾ), ಮತ್ತು 2397 ರೂ. (365 ದಿನಗಳ ವ್ಯಾಲಿಡಿಟಿ ಮತ್ತು 365 ಜಿಬಿ ಡೇಟಾ) ದರವನ್ನು ಹೊಂದಿವೆ.

(feast for Jio data customers Jio introduces 5 new no daily limit prepaid plans)

Published On - 12:30 pm, Sat, 12 June 21

ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಕಲಬುರಗಿಯ ಮುಖ್ಯರಸ್ತೆಯಲ್ಲಿ ಸಂಚಾರ ನಿಷೇಧಿಸಿ ಪೊಲೀಸ್ ಕಮೀಶನರ್ ಆದೇಶ
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಮೊದಲ ಓವರ್​ನಲ್ಲೇ ಸ್ಟಾರ್ಕ್ ಬೆಂಡೆತ್ತಿ ದಾಖಲೆ ಬರೆದ ಯಶಸ್ವಿ ಜೈಸ್ವಾಲ್
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಹತ್ಯೆ ಹಿಂದಿನ ಉದ್ದೇಶ ಇನ್ನೂ ಗೊತ್ತಾಗಿಲ್ಲವೆಂದ ಚಿಕ್ಕಬಳ್ಳಾಪುರ ಎಸ್​ಪಿ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ಟೆಸ್ಟ್ ಸ್ಪೆಷಲಿಸ್ಟ್​​ನ ಔಟ್ ಮಾಡಿದ ಕನ್ನಡಿಗ ಪ್ರಸಿದ್ಧ್ ಕೃಷ್ಣ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
ದೇವಾಲಯಗಳಲ್ಲಿ ಮುಡಿ ಕೊಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
Daily Horoscope: ಈ ರಾಶಿಯವರು ಇಂದು ಹೊಸ ವಾಹನ ಖರೀದಿಸುವರು
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಆವೇಶ, ಆಕ್ರೋಶ... ಸ್ಯಾಮ್ ಕೊನ್​ಸ್ಟಾಸ್ ಮುಂದೆ ಘರ್ಜಿಸಿದ ವಿರಾಟ್ ಕೊಹ್ಲಿ
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ಜಸ್​ಪ್ರೀತ್ ಬುಮ್ರಾ ಖಡಕ್ ಲುಕ್​ಗೆ ಸ್ಯಾಮ್​ ಕೊನ್​ಸ್ಟಾಸ್ ಗಪ್ ಚುಪ್
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​