SBI Customer Alert: ಎಸ್​ಬಿಐ ಇಂಟರ್​ನೆಟ್​ ಬ್ಯಾಂಕಿಂಗ್, ಯುಪಿಐ ಸೇವೆ ಜೂನ್ 13ರ ಭಾನುವಾರ 4 ಗಂಟೆ ಲಭ್ಯವಿರಲ್ಲ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಿಂದ ಜೂನ್ 13ರ ಭಾನುವಾರ ನಾಲ್ಕು ಗಂಟೆಗಳ ಕಾಲ ಇಂಟರ್​ನೆಟ್ ಬ್ಯಾಂಕಿಂಗ್, ಯುಪಿಐ ಸೇವೆಗಳು ದೊರೆಯುವುದಿಲ್ಲ ಎಂದು ತಿಳಿಸಲಾಗಿದೆ.

SBI Customer Alert: ಎಸ್​ಬಿಐ ಇಂಟರ್​ನೆಟ್​ ಬ್ಯಾಂಕಿಂಗ್, ಯುಪಿಐ ಸೇವೆ ಜೂನ್ 13ರ ಭಾನುವಾರ 4 ಗಂಟೆ ಲಭ್ಯವಿರಲ್ಲ
ಸಾಂದರ್ಭಿಕ ಚಿತ್ರ
Follow us
TV9 Web
| Updated By: Srinivas Mata

Updated on: Jun 12, 2021 | 9:58 PM

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಇಂಟರ್​ನೆಟ್​ ಬ್ಯಾಂಕಿಂಗ್, ಅದರ ಮೊಬೈಲ್ ಅಪ್ಲಿಕೇಷನ್ YONO ಮತ್ತು ಯುಪಿಐ ಸೇವೆಗಳು ಭಾನುವಾರದಂದು ನಿರ್ವಹಣೆ ಚಟುವಟಿಕೆಗಳು ಇರುವುದರಿಂದ ಕಾರ್ಯ ನಿರ್ವಹಿಸುವುದಿಲ್ಲ. “ಉತ್ತಮ ಬ್ಯಾಂಕಿಂಗ್ ಸೇವೆ ಒದಗಿಸಲು ಶ್ರಮಿಸುತ್ತಿದ್ದೇವೆ. ನಮ್ಮ ಗೌರವಾನ್ವಿತ ಗ್ರಾಹಕರಿಗೆ ಸಹಕರಿಸುವಂತೆ ಕೇಳಿಕೊಳ್ಳುತ್ತೇವೆ,” ಎಂದು ದೇಶದ ಅತಿ ದೊಡ್ಡ ಬ್ಯಾಂಕ್​ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಟ್ವೀಟ್ ಮಾಡಿದೆ. ಬ್ಯಾಂಕ್ ಹೇಳಿರುವ ಪ್ರಕಾರ ಜೂನ್ 13ರಂದು 2:40ರಿಂದ 6:40ರ ಮಧ್ಯೆ ನಿರ್ವಹಣೆ ಚಟುವಟಿಕೆಗಳು ನಡೆಸಲಿದ್ದೇವೆ ಎಂದು ಬ್ಯಾಂಕ್​ನಿಂದ ಹೇಳಲಾಗಿದೆ.

ಕಳೆದ ಶುಕ್ರವಾರದಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವು ಕೊಲ್ಯಾಟರಲ್ ಇಲ್ಲದಂತೆ ಕವಚ್ ಪರ್ಸನಲ್ ಲೋನ್ ಅನ್ನು ಪರಿಚಯಿಸಿದೆ. ಇದರ ಅಡಿಯಲ್ಲಿ ಕೊವಿಡ್​ಗೆ ಸಂಬಂಧಿಸಿದಂತೆ ಖರ್ಚುಗಳಿದ್ದು, ಆರ್ಥಿಕ ಒತ್ತಡದಲ್ಲಿ ಇರುವ ಗ್ರಾಹಕರಿಗೆ ಪರ್ಸನಲ್ ಲೋನ್ ಅನ್ನು ನೀಡಲಾಗುತ್ತದೆ. ನೆನಪಿರಲಿ, ಇದು ಕೊವಿಡ್ ವೈದ್ಯಕೀಯ ಚಿಕಿತ್ಸೆಗಾಗಿ ನೀಡಲಿರುವ ಹಣಕಾಸಿನ ಸಾಲವಾಗಿದೆ.

ಸರ್ಕಾರಿ ಸ್ವಾಮ್ಯದ ಎಸ್​ಬಿಐ ಯಾವುದೇ ಕೊಲಾಟರಲ್, ಅಂದರೆ ಆಧಾರಗಳನ್ನು ಪಡೆದುಕೊಳ್ಳದೆ 5 ಲಕ್ಷ ರೂಪಾಯಿ ತನಕ ಸಾಲವನ್ನು ನೀಡುತ್ತದೆ. ಅದಕ್ಕಾಗಿ ವಾರ್ಷಿಕ ಶೇ 8.5ರಷ್ಟು ಬಡ್ಡಿ ದರವನ್ನು ವಿಧಿಸಲಾಗುತ್ತದೆ. ಈ ಮೂಲಕ ಗ್ರಾಹಕರು ಸ್ವಂತ ಹಾಗೂ ಕುಟುಂಬಸ್ಥರ ಕೊವಿಡ್- 19 ವೈದ್ಯಕೀಯ ವೆಚ್ಚವನ್ನು ಭರಿಸುವುದಕ್ಕೆ ಅನುಕೂಲ ಆಗಲಿದೆ ಎಂದು ಬ್ಯಾಂಕ್ ಅಧ್ಯಕ್ಷರು ತಿಳಿಸಿದ್ದಾರೆ.

ಇದನ್ನೂ ಓದಿ: SBI Loan: ಕೊವಿಡ್​- 19 ಚಿಕಿತ್ಸೆಗೆ ಎಸ್​ಬಿಐನಿಂದ ಕೊಲಾಟರಲ್ ಇಲ್ಲದಂತೆ ಶೇ 8.5 ಬಡ್ಡಿ ದರದಲ್ಲಿ 5 ಲಕ್ಷದ ತನಕ ಸಾಲ

ಇದನ್ನೂ ಓದಿ: SBI Alert: ಮನೆಯಲ್ಲಿ ಕುಳಿತೇ ಎಸ್​ಬಿಐ ಎಟಿಎಂ ಕಾರ್ಡ್​ಗೆ ಅಪ್ಲೈ ಮಾಡುವುದು ಹೇಗೆ; ಇಲ್ಲಿದೆ ಹಂತಹಂತವಾದ ವಿವರಣೆ

(Due to maintenance of State Of India internet banking and UPI services unavailable for 4 hours on June 13th, 2021. That is on Sunday)

ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿವಿ 2001ರಿಂದ ಭಾರತದಲ್ಲಿದೆ, ನಿಶ್ಶಕ್ತರು ಇದರ ಟಾರ್ಗೆಟ್: ದಿನೇಶ್
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಹೆಚ್ಎಂಪಿ ವೈರಸ್ ಯಾವ ವೇರಿಯಂಟ್ ಅಂತ ನಾನು ಹೇಳಲಾಗಲ್ಲ: ಅಶ್ವಥ್ ನಾರಾಯಣ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಸಂತೋಷ್ ಲಾಡ್ ತಮ್ಮ ಪಟಾಲಂನೊಂದಿಗೆ ಅಸ್ಪತ್ರೆಗೆ ಬಂದಿದ್ದು ಸರಿಯಲ್ಲ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ಎನ್ಕೌಂಟರ್ ನಡೆದ ಬಳಿಕ ಸಾಕಷ್ಟು ಬದಲಾವಣೆ ಆಗಿದೆ: ನಕ್ಸಲ್ ಸುಂದರಿಯ ಸಂಬಂಧಿ
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ನಿಯಂತ್ರಣ ಕಳೆದುಕೊಂಡು ರಸ್ತೆಯ ಬದಿಯಲ್ಲಿ ಕುಳಿತ ಐವರ ಮೇಲೆ ಹರಿದ ಕಾರು
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ಆನೇಕಲ್: ಸಿಲಿಂಡರ್ ಸ್ಫೋಟ ತೀವ್ರತೆಗೆ ಮನೆ ಗೋಡೆ ಕಿಟಕಿ ಛಿದ್ರ, ಇಬ್ಬಗೆ ಗಾಯ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಾ ಡಿಸೋಜ ಅಂತಿಮ ದರ್ಶನ, ಅಂತ್ಯಕ್ರಿಯೆ ಬಗ್ಗೆ ಪುತ್ರ ನವೀನ್ ಮಾಹಿತಿ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ನಡುರಸ್ತೆಯಲ್ಲಿ ವಿದ್ಯಾರ್ಥಿನಿಯ ಕತ್ತು ಹಿಸುಕಿ ಕೊಲೆ ಮಾಡಲು ಯತ್ನಿಸಿದ ಯುವಕ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಕುದುರೆಮುಖ ಅರಣ್ಯದಲ್ಲಿ ನಕ್ಸಲ್​ ನಾಯಕಿ ಸುಂದರಿ ವಾಸ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ
ಆಸ್ಟ್ರೇಲಿಯಾದಲ್ಲಿ RCB ದಾಂಡಿಗನ ಸಿಡಿಲಬ್ಬರ: ಸ್ಪೋಟಕ ಅರ್ಧಶತಕ