Sign In

By signing in or creating an account, you agree with Associated Broadcasting Company's Terms & Conditions and Privacy Policy.

Honda Activa: ಬರೀ 25 ಸಾವಿರ ರೂಪಾಯಿಗೆ ಹೊಂಡಾ ಆ್ಯಕ್ಟೀವಾ ಖರೀದಿಸಿ; ಬಂಪರ್​ ಆಫರ್ ಪಡೆಯಲು ಹೀಗೆ ಮಾಡಿ

Honda Activa Offer: ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಹಾಗೂ ಖರೀದಿಗೆ ಪ್ರಸಿದ್ಧಿಯಾಗಿರುವ ಡ್ರೂಮ್​ ಈ ಕೊಡುಗೆಯನ್ನು ನೀಡಿದೆ. 110ಸಿಸಿಯ ಸೆಕೆಂಡ್​ ಹ್ಯಾಂಡ್ ಆ್ಯಕ್ಟೀವಾ ಕೇವಲ 18ಸಾವಿರ ಕಿಲೋ ಮೀಟರ್ ಓಡಿದ್ದು, ಸುಸ್ಥಿತಿಯಲ್ಲಿದೆ.

Honda Activa: ಬರೀ 25 ಸಾವಿರ ರೂಪಾಯಿಗೆ ಹೊಂಡಾ ಆ್ಯಕ್ಟೀವಾ ಖರೀದಿಸಿ; ಬಂಪರ್​ ಆಫರ್ ಪಡೆಯಲು ಹೀಗೆ ಮಾಡಿ
ಹೋಂಡಾ ಆ್ಯಕ್ಟೀವಾ (ಸಾಂಕೇತಿಕ ಚಿತ್ರ)
Follow us
TV9 Web
| Updated By: Digi Tech Desk

Updated on:Jun 09, 2021 | 9:49 AM

ಕೊರೊನಾ ಸಂದರ್ಭದಲ್ಲಿ ಸ್ವಂತ ವಾಹನ ಅತ್ಯವಶ್ಯಕ ಎನ್ನಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ, ಆರ್ಥಿಕ ಚಟುವಟಿಕೆಗಳೆಲ್ಲಾ ಸ್ಥಗಿತಗೊಂಡಿರುವ ಸಂದರ್ಭದಲ್ಲಿ ಒಮ್ಮೆಲೆಗೆ ದೊಡ್ಡ ಮೊತ್ತದ ಹಣ ನೀಡಿ ವಾಹನ ಖರೀದಿಗೆ ಕೈ ಹಾಕುವುದೆಂದರೆ ಸಾಮಾನ್ಯ ಜನರ ಜೇಬಿಗೆ ಬಲುಭಾರವಾಗುತ್ತದೆ. ಇಂತಹ ಹೊತ್ತಿನಲ್ಲಿ ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಪ್ರಸಿದ್ಧವಾಗಿರುವ ಹೋಂಡಾ ಕಂಪೆನಿಯ ವಾಹನವೊಂದರ ಮೇಲೆ ಭಾರೀ ಆಫರ್​ ನೀಡಲಾಗಿದೆ. ಈ ಆಫರ್​ ಅಡಿಯಲ್ಲಿ ಸುಮಾರು 70 ಸಾವಿರ ರೂಪಾಯಿ ಮೌಲ್ಯದ ಹೋಂಡಾ ಆ್ಯಕ್ಟೀವಾವನ್ನು ಕೇವಲ 25 ಸಾವಿರ ರೂಪಾಯಿಗೆ ಖರೀದಿಸಬಹುದಾಗಿದೆ. ಮಾರುಕಟ್ಟೆಯಲ್ಲಿ ಭರ್ಜರಿ ಡಿಮ್ಯಾಂಡ್ ಗಿಟ್ಟಿಸಿಕೊಂಡಿರುವ ಆ್ಯಕ್ಟೀವಾ ಮೇಲೆ ಇಷ್ಟು ದೊಡ್ಡ ಆಫರ್ ಹೇಗೆ ಕೊಡುತ್ತಿದ್ದಾರೆ ಎಂದು ಅಚ್ಚರಿಯಾಗುತ್ತದೆ ಅಲ್ಲವಾ? ಹೌದು, ಇದು ಅಚ್ಚರಿಯೆನಿಸಿದರೂ ಸತ್ಯ.

ಅಂದಹಾಗೆ ಈ ಆಫರ್ ಲಭ್ಯವಿರುವುದು ಡ್ರೂಮ್​ ಎಂಬ ಆನ್​ಲೈನ್ ವೇದಿಕೆಯಲ್ಲಿ. ಸೆಕೆಂಡ್ ಹ್ಯಾಂಡ್ ವಾಹನ ಮಾರಾಟ ಹಾಗೂ ಖರೀದಿಗೆ ಪ್ರಸಿದ್ಧಿಯಾಗಿರುವ ಡ್ರೂಮ್​ ಈ ಕೊಡುಗೆಯನ್ನು ನೀಡಿದೆ. 110ಸಿಸಿಯ ಸೆಕೆಂಡ್​ ಹ್ಯಾಂಡ್ ಆ್ಯಕ್ಟೀವಾ ಕೇವಲ 18ಸಾವಿರ ಕಿಲೋ ಮೀಟರ್ ಓಡಿದ್ದು, ಸುಸ್ಥಿತಿಯಲ್ಲಿದೆ. 2013ನೇ ಸಾಲಿನ ಮಾದರಿಯಾಗಿರುವ ಈ ವಾಹನ ಪ್ರಸ್ತುತ ಒಂದು ಲೀಟರ್​ ಪೆಟ್ರೋಲ್​ಗೆ 55 ಕಿ.ಮೀ ಮೈಲೇಜ್​ ನೀಡುವ ಸಾಮರ್ಥ್ಯ ಹೊಂದಿದೆ. ಹೀಗಾಗಿ ಇದಕ್ಕೆ ಬೇಡಿಕೆಯೂ ಸಹಜವಾಗಿ ಹೆಚ್ಚಿದೆ.

ಆಟೋ ಮತ್ತು ಕಿಕ್​ ಸ್ಟಾರ್ಟ್, 10ಇಂಚು ಅಗಲದ ಚಕ್ರ, ಆ್ಯಂಟಿ ಥೆಫ್ಟ್ ಅಲ್ರಾಮ್ ಸೇರಿದಂತೆ ಬಹುತೇಕ ಎಲ್ಲಾ ಸೌಲಭ್ಯಗಳೂ ಉತ್ತಮವಾಗಿಯೇ ಇದ್ದು, ಗಾಡಿಗೆ ವರ್ಷವಾಗಿದ್ದರೂ ನಿರ್ವಹಣೆ ಚೆನ್ನಾಗಿರುವ ಕಾರಣ ಹೊಸದರಂತೆಯೇ ಇದೆ. ಅಲ್ಲದೇ ದೆಹಲಿಯ ರಸ್ತೆಗಳಲ್ಲಿ ಅಡ್ಡಾಡಿರುವ ಬೈಕ್​ ಇದಾಗಿದ್ದು, ಕಚ್ಚಾ ರಸ್ತೆಗಳಲ್ಲಿ ಓಡಿಸಿರದ ಕಾರಣ ಹೆಚ್ಚು ಹೊಡೆತವನ್ನೇನೂ ತಿಂದಿಲ್ಲ ಎನ್ನುವುದು ಮಾರಾಟಗಾರರ ಮಾತು.

ಒಂದುವೇಳೆ, ಈ ಬೈಕ್​ ಕೊಳ್ಳಲು ನಿಮಗೂ ಆಸಕ್ತಿ ಇದ್ದರೆ ಭಾರೀ ಪೈಪೋಟಿಯ ನಡುವೆ ಪ್ರಯತ್ನಿಸಬೇಕಿದೆ. ಸೆಕೆಂಡ್​ ಹ್ಯಾಂಡ್​ ಆ್ಯಕ್ಟೀವಾವನ್ನು ಮಾರಾಟಕ್ಕಿಟ್ಟಿರುವ ಡ್ರೂಮ್ (Droom) ಜಾಲತಾಣದಲ್ಲಿ ಹೆಚ್ಚಿನ ವಿವರಗಳು ಲಭ್ಯವಿದ್ದು, ಅಲ್ಲಿಗೆ ಭೇಟಿ ನೀಡಿ ಖರೀದಿ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಬಹುದಾಗಿದೆ.

ಸೂಚನೆ: ಯಾವುದೇ ಸಂದರ್ಭದಲ್ಲಿ ಸೆಕೆಂಡ್ ಹ್ಯಾಂಡ್ ವಾಹನ ಕೊಳ್ಳುವಾಗ ವಾಹನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅತ್ಯಂತ ಸೂಕ್ಷ್ಮವಾಗಿ ಪರಿಶೀಲಿಸುವುದು ಅತ್ಯಗತ್ಯವಾಗಿದ್ದು, ಆರ್​ಸಿ ಯಾರ ಹೆಸರಿನಲ್ಲಿ ಇರುತ್ತದೋ ಅವರೊಂದಿಗೆ ನೇರ ವ್ಯವಹಾರ ನಡೆಸಿ. ಅಲ್ಲದೇ ಯಾವುದೇ ಕಾರಣಕ್ಕೂ ಕಾನೂನಿನ ಅಡೆತಡೆಗಳನ್ನು ನಿವಾರಿಸಿಕೊಳ್ಳದೇ ಸೆಕೆಂಡ್ ಹ್ಯಾಂಡ್ ವಾಹನ ಖರೀದಿ ಮಾಡಬೇಡಿ.

ಇದನ್ನೂ ಓದಿ: Honda car offers: ಹೋಂಡಾ ಕಾರುಗಳ ಮೇಲೆ ಜೂನ್​ನಲ್ಲಿ ಇರುವ ಆಫರ್​ ಮತ್ತು ರಿಯಾಯಿತಿಗಳ ಮಾಹಿತಿ ಇಲ್ಲಿದೆ 

ಬಂಪರ್ ಆಫರ್! 4 ಲಕ್ಷ ರೂಪಾಯಿ ಕಾರಿ​ಗೆ ಕೇವಲ 1.30 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿ

Published On - 8:53 am, Wed, 9 June 21

ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಬೌಂಡರಿ ಬಳಿ ಅತ್ಯದ್ಭುತ ಕ್ಯಾಚ್ ಹಿಡಿದ ಜ್ಯಾಕ್ ಫ್ರೇಸರ್
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಚೊಚ್ಚಲ ಐಪಿಎಲ್ ಅರ್ಧಶತಕ ಸಿಡಿಸಿದ ಅನಿಕೇತ್ ವರ್ಮಾ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ಮೋದಿ ಭೇಟಿಗೂ ಕೆಲವೇ ಗಂಟೆ ಮೊದಲು ಛತ್ತೀಸ್‌ಗಢದಲ್ಲಿ 50 ನಕ್ಸಲರ ಶರಣಾಗತಿ
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ನಾಗ್ಪುರದಲ್ಲಿ ರೋಡ್ ಶೋ ನಡೆಸಿದ ಮೋದಿ; ಜೈ ಶ್ರೀರಾಮ್ ಘೋಷಣೆ ಕೂಗಿದ ಜನರು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಟ್ರಕ್​ ಕದ್ದವನ ಅತಿಯಾದ ವೇಗವೇ ಸಿಕ್ಕಿಬೀಳಲು ಕಾರಣವಾಯ್ತು
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ಭಟ್ಕಳದಲ್ಲಿ ಬಾಂಬ್ ಸ್ಕ್ವಾಡ್​​ ಹಾಗೂ ಶ್ವಾನದಳದಿಂದ ಪರಿಶೀಲನೆ
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
ವಿಜಯದಶಮಿಗೆ ಹೊಸ ಪಕ್ಷ ಕಟ್ಟುವ ಸುಳಿವು ನೀಡಿದ ಬಸನಗೌಡ ಪಾಟೀಲ್​ ಯತ್ನಾಳ್​
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು
Video: ಒಡಿಶಾದಲ್ಲಿ ಹಳಿ ತಪ್ಪಿದ ಬೆಂಗಳೂರು- ಕಾಮಾಖ್ಯ ಎಕ್ಸ್​ಪ್ರೆಸ್ ರೈಲು