Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಂಪರ್ ಆಫರ್! 4 ಲಕ್ಷ ರೂಪಾಯಿ ಕಾರಿ​ಗೆ ಕೇವಲ 1.30 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿ

ಮಾರುತಿ ಸುಜುಕಿ ಕಂಪೆನಿಯ ಟ್ರೂ ವ್ಯಾಲ್ಯೂ ವೆಬ್​ಸೈಟ್​ ಮೂಲಕ ಸೆಕೆಂಡ್ ಹ್ಯಾಂಡ್ Alto 800 LXI ಕಾರಿನ ಮಾರಾಟ ನಡೆಯುತ್ತಿದ್ದು, ಮಾರುತಿ ಸುಜುಕಿ ಸಂಸ್ಥೆಯ ಅಸಲಿ ಬಿಡಿಭಾಗಗಳನ್ನು ಬಳಸಿ ಈ ಕಾರನ್ನು ಮರುಮಾರಾಟಕ್ಕೆ ಸಿದ್ಧಪಡಿಸಿರುವುದು ಗಮನಾರ್ಹ. ಅಲ್ಲದೇ ಇದನ್ನು ಕೊಂಡ ನಂತರ ಮೂರು ಬಾರಿ ಉಚಿತ ಸರ್ವಿಸ್ ಕೂಡಾ ಕಂಪೆನಿ ವತಿಯಿಂದ ಆಗಲಿದ್ದು, ಆರು ತಿಂಗಳ ವಾರೆಂಟಿ ಕೂಡಾ ಲಭ್ಯವಿದೆ.

ಬಂಪರ್ ಆಫರ್! 4 ಲಕ್ಷ ರೂಪಾಯಿ ಕಾರಿ​ಗೆ ಕೇವಲ 1.30 ಲಕ್ಷ ರೂಪಾಯಿ ಕೊಟ್ಟು ಖರೀದಿ ಮಾಡಿ
ಸಾಂದರ್ಭಿಕ ಚಿತ್ರ
Follow us
Skanda
| Updated By: shruti hegde

Updated on: Apr 27, 2021 | 12:55 PM

ಕೊರೊನಾ ದೇಶಕ್ಕೆ ಕಾಲಿಡುವ ಮುನ್ನ ಎಷ್ಟೋ ಜನರು ಸ್ವಂತ ವಾಹನಗಳಿಗಿಂತ ಸಾರ್ವಜನಿಕ ವಾಹನವನ್ನೇ ನೆಚ್ಚಿಕೊಂಡಿದ್ದರು. ಪರಿಸರ ಕಾಳಜಿ ದೃಷ್ಟಿಯಿಂದ ನೋಡಿದರೆ ಮನೆಗೊಂದರಂತೆ ವಾಹನಗಳು ರಸ್ತೆಗಿಳಿಯುವುದಕ್ಕಿಂತ ಬಸ್, ಮೆಟ್ರೋ, ರೈಲು ಇತ್ಯಾದಿ ಸಾರಿಗೆಗಳ ಮೂಲಕ ಓಡಾಡುವುದು ಅತ್ಯುತ್ತಮ ಆಯ್ಕೆ. ಆದರೆ, ಸದ್ಯ ನಮ್ಮನ್ನು ಕಾಡುತ್ತಿರುವ ಕೊರೊನಾ ವೈರಾಣುವಿನಿಂದಾಗಿ ಸಾರ್ವಜನಿಕ ಸಾರಿಗೆಯಿಂದ ಅನಿವಾರ್ಯವಾಗಿ ದೂರ ಉಳಿಯಬೇಕಾದ ಪರಿಸ್ಥಿತಿ ಎದುರಾಗಿದ್ದು ಸ್ವಂತ ವಾಹನ ಅತ್ಯಗತ್ಯ ಅವಶ್ಯಕತೆ ಎನಿಸಿಕೊಂಡಿದೆ. ಇಂತಹ ಸಂದರ್ಭದಲ್ಲಿ ಮಧ್ಯಮ ವರ್ಗದವರಿಗೆ ಅನುಕೂಲವಾಗುವಂತೆ ಮಾರುತಿ ಸುಜುಕಿ ಸಂಸ್ಥೆ ಮಹತ್ವದ ನಿರ್ಧಾರಕ್ಕೆ ಬಂದಿದ್ದು ಸುಮಾರು 4 ಲಕ್ಷ ರೂಪಾಯಿ ಬೆಲೆ ಬಾಳುವ Alto 800 LXI ಕಾರನ್ನು ಕೇವಲ 1.30 ಲಕ್ಷ ರೂಪಾಯಿಗೆ ಮಾರಲು ಮುಂದಾಗಿದೆ. ಇದು ಸೆಕೆಂಡ್ ಹ್ಯಾಂಡ್ ಕಾರು ಆಗಿದ್ದರೂ ಸ್ವತಃ ಕಂಪನಿಯೇ ಇದನ್ನು ಸಿದ್ಧಪಡಿಸಿ ಕೊಡುವುದರಿಂದ ಯಾವುದೇ ಹೊಸ ಕಾರಿಗೆ ಪೈಪೋಟಿ ನೀಡಬಲ್ಲವಾಗಿದೆ.

ಮಾರುತಿ ಸುಜುಕಿ ಕಂಪೆನಿಯ ಟ್ರೂ ವ್ಯಾಲ್ಯೂ ವೆಬ್​ಸೈಟ್​ ಮೂಲಕ ಸೆಕೆಂಡ್ ಹ್ಯಾಂಡ್ Alto 800 LXI ಕಾರಿನ ಮಾರಾಟ ನಡೆಯುತ್ತಿದ್ದು, ಮಾರುತಿ ಸುಜುಕಿ ಸಂಸ್ಥೆಯ ಅಸಲಿ ಬಿಡಿಭಾಗಗಳನ್ನು ಬಳಸಿ ಈ ಕಾರನ್ನು ಮರುಮಾರಾಟಕ್ಕೆ ಸಿದ್ಧಪಡಿಸಿರುವುದು ಗಮನಾರ್ಹ. ಅಲ್ಲದೇ ಇದನ್ನು ಕೊಂಡ ನಂತರ ಮೂರು ಬಾರಿ ಉಚಿತ ಸರ್ವಿಸ್ ಕೂಡಾ ಕಂಪೆನಿ ವತಿಯಿಂದ ಆಗಲಿದ್ದು, ಆರು ತಿಂಗಳ ವಾರೆಂಟಿ ಕೂಡಾ ಲಭ್ಯವಿದೆ.

ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್​ಸೈಟ್​ನಲ್ಲಿ ಇರುವ ಮಾಹಿತಿ ಪ್ರಕಾರ ಇದು 2016ನೇ ಸಾಲಿನ ಕಾರಾಗಿದ್ದು, ಪೆಟ್ರೋಲ್ ಇಂಜಿನ್ ಹೊಂದಿದೆ. ಬಿಳಿ ಬಣ್ಣದ ಈ ಕಾರು 60,941 ಕಿಲೋಮೀಟರ್ ಓಡಿದ್ದು, ಉತ್ತಮ ಸ್ಥಿತಿಯಲ್ಲಿದೆ. ಈ ಕಾರನ್ನು ಕೊಳ್ಳಲು ಬಯಸುವವರು ವೆಬ್​ಸೈಟ್​ನಲ್ಲಿ ಹೆಸರು, ಮೊಬೈಲ್ ನಂಬರ್ ಮತ್ತು ಇಮೇಲ್​ ವಿಳಾಸ ನೀಡುವ ಮೂಲಕ ಡೀಲರ್​ ಅನ್ನು ಸಂಪರ್ಕಿಸಬಹುದಾಗಿದೆ. ಅಲ್ಲದೇ ಟೆಸ್ಟ್ ಡ್ರೈವ್ ಕೂಡಾ ಲಭ್ಯವಿದ್ದು ಇಷ್ಟವಾದಲ್ಲಿ ಕಾರನ್ನು ಕೊಳ್ಳಬಹುದು. ಸದರಿ ವೆಬ್​ಸೈಟ್​ನಲ್ಲಿ ಇನ್ನೂ ಬೇರೆ ಬೇರೆ ಬಗೆಯ ಕಾರುಗಳು ಲಭ್ಯವಿದ್ದು ಕೊಳ್ಳುವ ಆಸಕ್ತಿ ಉಳ್ಳವರು ಇಲ್ಲಿ ಕ್ಲಿಕ್ ಮಾಡಬಹುದಾಗಿದೆ.

ಹೊಸ Alto 800 LXI ಕಾರಿನ ಬೆಲೆ ಎಷ್ಟಿದೆ? Alto 800 LXI ಕಾರಿನ ಎಕ್ಸ್ ಶೋ ರೂಂ ಬೆಲೆ ₹3.76ಲಕ್ಷವಾಗಿದ್ದು, 796ಸಿಸಿ ಎಂಜಿನ್ ಸಾಮರ್ಥ್ಯವಿರುವ ಈ ಕಾರು 47.3 ಬಿಎಚ್​ಪಿ ಶಕ್ತಿ ಉತ್ಪಾದಿಸುವ ಸಾಮರ್ಥ್ಯವನ್ನೂ ಹೊಂದಿದ್ದು ಒಂದು ಲೀಟರ್ ಪೆಟ್ರೋಲಿಗೆ 22.05 ಕಿಲೋ ಮೀಟರ್ ಮೈಲೇಜ್ ನೀಡಲಿದೆ.

(Buy Maruti Suzuki alto 800 lxi in just rs 130000 know here is how you can get it details in Kannada)

ಇದನ್ನೂ ಓದಿ: ಐಸಿಐಸಿಐ ಬ್ಯಾಂಕ್​ನಿಂದ iDelights Summer Bonanza; ಗ್ರಾಹಕರಿಗೆ ಬೇಸಿಗೆಯಲ್ಲಿ ಆಫರ್​ಗಳ ಸುರಿಮಳೆ

ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಸತೀಶ್ ಜಾರಕಿಹೊಳಿಗೆ ವಯಸ್ಸು 62 ಆದರೂ ಕ್ರೀಡಾಪಟುವಿನಂಥ ಪರ್ಸನಾಲಿಟಿ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಅಜಯ್ ರಾವ್ ಓದಿದ್ದು ಎಸ್​ಎಸ್​ಎಲ್​ಸಿ ತನಕ ಮಾತ್ರ; ಅಚ್ಚರಿ ವಿಷಯ ಹೇಳಿದ ನಟ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಒಬ್ಬ ಸಿಬ್ಬಂದಿ ತಪ್ಪಿನಿಂದ 20,000 ಶಿಕ್ಷಕರು ನೋವಿಗೀಡಾಗಿದ್ದಾರೆ: ಪ್ರಸನ್ನ
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ಪ್ರತಿಭಟನೆ ಕಾರಣ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ನಾವು 75 ಲಕ್ಷ ಇದ್ರೂ 7 ಜನ ಮಾತ್ರ ಶಾಸಕರಿದ್ದೇವೆ: ಸಿಎಂ ಇಬ್ರಾಹಿಂ ಬೇಸರ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಉಡುಪಿ, ತಿರುಪತಿಗೆ ಮುಸ್ಲಿಮರನ್ನ ಸೇರಿಸಿಕೊಳ್ಳುತ್ತೀರಾ? ಇಬ್ರಾಹಿಂ ಪ್ರಶ್ನೆ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಹೃಷಿಕೇಶದಲ್ಲಿ ರಿವರ್ ರಾಫ್ಟಿಂಗ್ ವೇಳೆ ಗಂಗಾ ನದಿಯಲ್ಲಿ ಮುಳುಗಿದ ಯುವಕ
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಲಿಂಗಾಯತ ಸಚಿವರೆಲ್ಲ ಚರ್ಚೆಗೆ ಪೂರ್ವಸಿದ್ಧತೆ ಮಾಡಿಕೊಂಡಿದ್ದೆವು: ಪಾಟೀಲ್
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ಮಾಲೀಕನ ಮೇಲೆ ನಡೆದ ದಾಳಿ ತಪ್ಪಿಸಿ ಹೀರೋ ಆದ ಸಾಕುನಾಯಿ!
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್
ನನ್ನನ್ನು ರಾಜಕೀಯವಾಗಿ ಬೆಳೆಸಿದ್ದು ಡಿಕೆ ಶಿವಕುಮಾರ್: ಸೋಮಶೇಖರ್