Honda car offers: ಹೋಂಡಾ ಕಾರುಗಳ ಮೇಲೆ ಜೂನ್ನಲ್ಲಿ ಇರುವ ಆಫರ್ ಮತ್ತು ರಿಯಾಯಿತಿಗಳ ಮಾಹಿತಿ ಇಲ್ಲಿದೆ
ಹೋಂಡಾ ಕಾರುಗಳ ಮೇಲೆ 2021ರ ಜೂನ್ ತಿಂಗಳಲ್ಲಿ ಇರುವ ಆಫರ್ಗಳೇನು ಎಂಬ ಬಗ್ಗೆ ವಿವರ ಇಲ್ಲಿದೆ. ಒಂದು ವೇಳೆ ನಿಮಗೆ ಹೋಂಡಾ ಕಾರು ಖರೀದಿ ಮಾಡಬೇಕು ಎಂದಿದ್ದಲ್ಲಿ ಈ ಲೇಖನದಿಂದ ಸಹಾಯ ಆಗಲಿದೆ.
2021ರ ಜೂನ್ ತಿಂಗಳಲ್ಲಿ ಹೋಂಡಾ ಕಾರುಗಳಿಗೆ ಇರುವ ಆಫರ್ಗಳ ಬಗ್ಗೆ ಮಾಹಿತಿ ಇಲ್ಲಿದೆ. ಜಪಾನ್ ಮೂಲದ ಹೋಂಡಾ ಕಂಪೆನಿಯು ತನ್ನ ಗ್ರಾಹಕರಿಗೆ ಏನೆಲ್ಲ ಆಫರ್ಗಳನ್ನು ನೀಡುತ್ತಿದೆ ನೋಡೋಣ್ವಾ? ಅಂದ ಹಾಗೆ ಇದು ಹೊಸ ಕಾರುಗಳ ಖರೀದಿ ಮೇಲೆ ಇರುವ ಬೆನಿಫಿಟ್ಗಳು ಎಂಬುದು ನಿಮ್ಮ ಗಮನದಲ್ಲಿರಲಿ. ಹೋಂಡಾ ಕಾರುಗಳ ಮೇಲೆ ರೂ. 21,908ರಿಂದ ಆರಂಭವಾಗಿ ರೂ. 33,496ರ ತನಕ ಆಫರ್ ಇದೆ. ಭಾರತದಲ್ಲಿ ಜೂನ್ ತಿಂಗಳಲ್ಲಿ ಯಾವ ಕಾರಿನ ಮೇಲೆ ಏನಿದೆ ಆಫರ್ ಎಂಬ ವಿವರ ಇಲ್ಲಿದೆ. ಇನ್ಯಾಕೆ ತಡ ಮಾಡ್ತೀರಿ, ಮುಂದೆ ಓದಿ.
ಹೋಂಡಾ ಜಾಜ್ (ಪೆಟ್ರೋಲ್- ಎಲ್ಲ ಗ್ರೇಡ್ಗಳು): ರೂ. 21,908 * 10,000 ರೂಪಾಯಿ ಮೌಲ್ಯ ನಗದು ರಿಯಾಯಿತಿ ಅಥವಾ ಎಫ್ಒಸಿ ಆಕ್ಸೆಸರೀಸ್ ರೂ. 11,908ರ ತನಕ * ಕಾರು ವಿನಿಮಯದ ಮೇಲೆ ರೂ. 10,000 ಮೌಲ್ಯದ ರಿಯಾಯಿತಿ
ಹೋಂಡಾ WR-V (ಪೆಟ್ರೋಲ್ ಮತ್ತು ಡೀಸೆಲ್- ಎಲ್ಲ ಗ್ರೇಡ್ಗಳು): ರೂ. 22,158 * 10,000 ರೂಪಾಯಿ ಮೌಲ್ಯ ನಗದು ರಿಯಾಯಿತಿ ಅಥವಾ ಎಫ್ಒಸಿ ಆಕ್ಸೆಸರೀಸ್ ರೂ. 12,158ರ ತನಕ * ಕಾರು ವಿನಿಮಯದ ಮೇಲೆ ರೂ. 10,000 ಮೌಲ್ಯದ ರಿಯಾಯಿತಿ
ಹೋಂಡಾ ಅಮೇಜ್ (VMT ಮತ್ತು VXMT ಪೆಟ್ರೋಲ್): ರೂ. 33,496 * 5,000 ರೂಪಾಯಿ ಮೌಲ್ಯ ನಗದು ರಿಯಾಯಿತಿ ಅಥವಾ ಎಫ್ಒಸಿ ಆಕ್ಸೆಸರೀಸ್ ರೂ. 5,998ರ ತನಕ * ಕಾರು ವಿನಿಮಯದ ಮೇಲೆ ರೂ. 10,000 ಮೌಲ್ಯದ ರಿಯಾಯಿತಿ
ಹೋಂಡಾ ಅಮೇಜ್ (SMT ಪೆಟ್ರೋಲ್) * 15,000 ರೂಪಾಯಿ ಮೌಲ್ಯ ನಗದು ರಿಯಾಯಿತಿ ಅಥವಾ ಎಫ್ಒಸಿ ಆಕ್ಸೆಸರೀಸ್ ರೂ. 18,496ರ ತನಕ * ಕಾರು ವಿನಿಮಯದ ಮೇಲೆ ರೂ. 15,000 ಮೌಲ್ಯದ ರಿಯಾಯಿತಿ
ಈ ಆಫರ್ಗಳು ಜೂನ್ 30, 2021ರ ತನಕ ಅನ್ವಯ ಆಗುತ್ತದೆ. ವೇರಿಯಂಟ್ಗಳು ಮತ್ತು ಸ್ಥಳದ ಮೇಲೆ ಆಫರ್ಗಳು ಬದಲಾಗುತ್ತವೆ. ನಿಮ್ಮ ಸಮೀಪದ ಹೋಂಡಾ ಕಾರು ಡೀಲರ್ಗಳ ಬಳಿ ಬೆಲೆಯನ್ನು ಮತ್ತೊಮ್ಮೆ ಖಾತ್ರಿ ಪಡಿಸಿಕೊಳ್ಳಿ.
ಇದನ್ನೂ ಓದಿ: Top 5 automatic cars: ಭಾರತದಲ್ಲಿ ಖರೀದಿಸಬಹುದಾದ 10 ಲಕ್ಷ ರೂಪಾಯಿ ಒಳಗಿನ ಟಾಪ್ 5 ಆಟೋಮೆಟಿಕ್ ಕಾರುಗಳಿವು
(Honda car offers and discounts offers in the month of June, 2021)
Published On - 7:27 pm, Sat, 5 June 21