Smart TV Lifespan: ಸ್ಮಾರ್ಟ್ ಟಿವಿಗೆ ಎಕ್ಸ್​ಪೈರಿ ಡೇಟ್ ಇದೆಯೇ?: ಅದನ್ನು ಯಾವಾಗ ಬದಲಾಯಿಸಬೇಕು?

|

Updated on: Mar 22, 2025 | 2:30 PM

ಟಿವಿಯ ಜೀವಿತಾವಧಿಯು ಬಳಕೆ, ವೆಂಟಿಲೇಷನ್, ವೋಲ್ಟೇಜ್ ಮತ್ತು ಉತ್ಪಾದನಾ ಗುಣಮಟ್ಟದಂತಹ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಟಿವಿಯ ಜೀವಿತಾವಧಿಯ ಬಗ್ಗೆ ಮಾತನಾಡುವುದಾದರೆ, ಬಜಾಜ್ ಫಿನ್‌ಸರ್ವ್‌ನ ವರದಿಯ ಪ್ರಕಾರ, ಉತ್ತಮವಾಗಿ ನಿರ್ವಹಿಸಲ್ಪಟ್ಟ LED ಟಿವಿಯ ಸರಾಸರಿ ಜೀವಿತಾವಧಿ 50,000 ರಿಂದ 1,00,000 ಗಂಟೆಗಳಿರುತ್ತದೆ.

Smart TV Lifespan: ಸ್ಮಾರ್ಟ್ ಟಿವಿಗೆ ಎಕ್ಸ್​ಪೈರಿ ಡೇಟ್ ಇದೆಯೇ?: ಅದನ್ನು ಯಾವಾಗ ಬದಲಾಯಿಸಬೇಕು?
Smart Tv
Follow us on

ಬೆಂಗಳೂರು (ಮಾ. 22): ಸ್ಮಾರ್ಟ್​ಫೋನ್​ಗಳಂತೆ ಸ್ಮಾರ್ಟ್ ಟಿವಿ (Smart TV) ಕೂಡ ಇಂದು ಪ್ರತಿಯೊಂದು ಮನೆಯಲ್ಲೂ ಅತ್ಯಗತ್ಯವಾಗಿದೆ. ಗ್ರಾಹಕರ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು, ಮುಂದುವರಿದ ತಂತ್ರಜ್ಞಾನ ಹೊಂದಿರುವ ಟಿವಿಗಳು ಮಾರುಕಟ್ಟೆಗೆ ಬರುತ್ತಿವೆ. ಆದರೆ ಸ್ಮಾರ್ಟ್ ಟಿವಿಯ ಜೀವಿತಾವಧಿ ಎಷ್ಟು ಎಂದು ನೀವು ಎಂದಾದರೂ ಯೋಚಿಸಿದ್ದೀರಾ?. ಅನೇಕ ಜನರು ಇದರ ಬಗ್ಗೆ ಯೋಚಿಸಿರಬಹುದು, ಆದರೆ ಅವರಿಗೆ ಈ ಪ್ರಶ್ನೆಗೆ ಸರಿಯಾದ ಉತ್ತರ ಸಿಗುವುದಿಲ್ಲ. ಇಂದು ನಾವು ಟಿವಿಯ ಜೀವಿತಾವಧಿ ಎಷ್ಟು ಮತ್ತು ಟಿವಿ ಖರೀದಿಸಿದ ಎಷ್ಟು ವರ್ಷಗಳ ನಂತರ ಅದನ್ನು ಬದಲಾಯಿಸಬೇಕು ಎಂಬ ಪ್ರಶ್ನೆಗೆ ಉತ್ತರಿಸಲಿದ್ದೇವೆ.

ಎಲ್ಇಡಿ ಟಿವಿಯ ಜೀವಿತಾವಧಿಯು ಈ ವಿಷಯಗಳ ಮೇಲೆ ಅವಲಂಬಿತವಾಗಿದೆ: ಟಿವಿಯ ಜೀವಿತಾವಧಿಯು ಬಳಕೆ, ವೆಂಟಿಲೇಷನ್, ವೋಲ್ಟೇಜ್ ಮತ್ತು ಉತ್ಪಾದನಾ ಗುಣಮಟ್ಟದಂತಹ ಹಲವು ಅಂಶಗಳನ್ನು ಅವಲಂಬಿಸಿರುತ್ತದೆ. ನಾವು ಟಿವಿಯ ಜೀವಿತಾವಧಿಯ ಬಗ್ಗೆ ಮಾತನಾಡುವುದಾದರೆ, ಬಜಾಜ್ ಫಿನ್‌ಸರ್ವ್‌ನ ವರದಿಯ ಪ್ರಕಾರ, ಉತ್ತಮವಾಗಿ ನಿರ್ವಹಿಸಲ್ಪಟ್ಟ LED ಟಿವಿಯ ಸರಾಸರಿ ಜೀವಿತಾವಧಿ 50,000 ರಿಂದ 1,00,000 ಗಂಟೆಗಳಿರುತ್ತದೆ. ನಿಯಮಿತ ಬಳಕೆಯಿಂದ, ಟಿವಿ ಸುಮಾರು 5 ರಿಂದ 10 ವರ್ಷಗಳವರೆಗೆ ಸುಲಭವಾಗಿ ಬಾಳಿಕೆ ಬರುತ್ತದೆ.

ಬಳಕೆ: ಟಿವಿಯನ್ನು ಹೆಚ್ಚು ಬಳಸಿದಷ್ಟೂ ಅದರ ಜೀವಿತಾವಧಿ ಕಡಿಮೆಯಾಗುತ್ತದೆ. ಹಾಗೆಯೆ ನಿಮ್ಮ ಪ್ರದೇಶದಲ್ಲಿ ಹಲವು ವೋಲ್ಟೇಜ್ ಸಮಸ್ಯೆಗಳಿದ್ದರೆ, ವೋಲ್ಟೇಜ್ ನಿಮ್ಮ ಟಿವಿಯ ಜೀವಿತಾವಧಿಯನ್ನು ಕಡಿಮೆ ಮಾಡುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ.

ಇದನ್ನೂ ಓದಿ
ಸಂಚಾರ್ ಸಾಥಿ ಪೋರ್ಟಲ್​ನಲ್ಲಿ 200 ಕದ್ದ ಮೊಬೈಲ್ ಫೋನ್‌ಗಳು ಪತ್ತೆ
ಐಪಿಎಲ್ ಆರಂಭವನ್ನು ವಿಶೇಷ ಡೂಡಲ್ ಮೂಲಕ ಸ್ವಾಗತಿಸಿದ ಗೂಗಲ್
ಐಪಿಎಲ್​ಗಿಂತ ಮೊದಲೇ ಅಮೆಜಾನ್‌ನಲ್ಲಿ ಇಪಿಎಲ್ ಪ್ರಾರಂಭ
ಈ ಲ್ಯಾಪ್‌ಟಾಪ್‌ಗೆ ಚಾರ್ಜ್ ಮಾಡೋದೇ ಬೇಡ: ವಿದ್ಯುತ್ ಇಲ್ಲದೆ ಬಳಸಬಹುದು

ಸಂಚಾರ್ ಸಾಥಿ ಪೋರ್ಟಲ್​ನಲ್ಲಿ 200 ಕದ್ದ ಮೊಬೈಲ್ ಫೋನ್‌ಗಳು ಪತ್ತೆ: ಈ ಆ್ಯಪ್ ಹೇಗೆ ಬಳಸುವುದು?

ಉತ್ಪನ್ನದ ಗುಣಮಟ್ಟ: ಟಿವಿಯ ಬ್ರ್ಯಾಂಡ್ ಕೂಡ ದೊಡ್ಡ ವ್ಯತ್ಯಾಸವನ್ನುಂಟು ಮಾಡುತ್ತದೆ. ಏಕೆಂದರೆ ಟಿವಿ ಸ್ಥಳೀಯ ಕಂಪನಿಯದ್ದಾಗಿದ್ದರೆ, ಅದು ಕಡಿಮೆ ಗುಣಮಟ್ಟದ ಭಾಗಗಳನ್ನು ಬಳಸಬಹುದು. ಭಾಗಗಳು ಸ್ಥಳೀಯ ಗುಣಮಟ್ಟದ್ದಾಗಿದ್ದರೆ, ಟಿವಿಯ ಜೀವಿತಾವಧಿಯೂ ಕಡಿಮೆಯಾಗಬಹುದು.

ಟಿವಿಯನ್ನು ಯಾವಾಗ ಬದಲಾಯಿಸಬೇಕು?: ಟಿವಿಯ ಜೀವಿತಾವಧಿಯನ್ನು ಕಡಿಮೆ ಮಾಡುವ ವಿಷಯಗಳನ್ನು ಅರ್ಥಮಾಡಿಕೊಂಡ ನಂತರ, ಈಗ ಟಿವಿಯನ್ನು ಯಾವಾಗ ಬದಲಾಯಿಸಬೇಕು ಎಂಬುದನ್ನು ಸಹ ನೀವು ಅರ್ಥಮಾಡಿಕೊಳ್ಳಬೇಕು. ನೀವು ಟಿವಿ ಡಿಸ್​ಪ್ಲೇಯಲ್ಲಿ ಆಗಾಗ್ಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ತಾಂತ್ರಿಕ ದೋಷದಿಂದಾಗಿ ಟಿವಿಯನ್ನು ಪ್ರತಿ ಎರಡರಿಂದ ಮೂರು ತಿಂಗಳಿಗೊಮ್ಮೆ ದುರಸ್ತಿ ಮಾಡಬೇಕಾಗಿ ಬಂದರೆ, ಟಿವಿಯನ್ನು ಬದಲಾಯಿಸುವ ಸಮಯ ಬಂದಿದೆ ಎಂದು ಅರ್ಥಮಾಡಿಕೊಳ್ಳಿ.

ಇನ್ನು ಸ್ಮಾರ್ಟ್ ಟಿವಿಯನ್ನು ಸಮಯಕ್ಕೆ ಸರಿಯಾಗಿ ಸ್ವಚ್ಚಗೊಳಿಸುವುದು ಕೂಡ ಮುಖ್ಯ. ಟಿವಿ ಪರದೆಯನ್ನು ಸ್ವಚ್ಛಗೊಳಿಸುವಾಗ ನೀವು ಅಜಾಗರೂಕತೆಯನ್ನು ತೋರಿಸಿದರೆ, ಅದು ಹಾನಿಯನ್ನುಂಟುಮಾಡಬಹುದು. ಏಕೆಂದರೆ ಡಿಸ್​ಪ್ಲೇಯು ತುಂಬಾ ಸೂಕ್ಷ್ಮವಾಗಿರುತ್ತದೆ, ಆದ್ದರಿಂದ ಪರದೆಯನ್ನು ಸ್ವಚ್ಛಗೊಳಿಸುವಾಗ ಕಾಳಜಿ ವಹಿಸಬೇಕಾಗುತ್ತದೆ. ಜನರು ಟಿವಿ ಡಿಸ್​ಪ್ಲೇ ಸ್ವಚ್ಛಗೊಳಿಸಲು ಟವೆಲ್ ಬಳಸುವುದು ಸರಿಯಲ್ಲ. ಇದಕ್ಕಾಗಿ ನೀವು ಯಾವಾಗಲೂ ಮೈಕ್ರೋಫೈಬರ್ ಬಟ್ಟೆಯನ್ನು ಬಳಸಬೇಕು.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:29 pm, Sat, 22 March 25