ಇಂದಿನ ಸ್ಮಾರ್ಟ್ ಯುಗದಲ್ಲಿ ಸ್ಮಾರ್ಟ್ಫೋನುಗಳು (Smartphone) ಎಗ್ಗಿಲ್ಲದೆ ಮಾರಾಟ ಬಿಡುಗಡೆ ಆಗುತ್ತಿದೆ ಜೊತೆಗೆ ಮಾರಾಟವಾಗುತ್ತಿದೆ. ಕಡಿಮೆ ಬೆಲೆಗೆ ಆಕರ್ಷಕ ಫೀಚರ್ಸ್ ಹೊಂದಿರುವ ಮೊಬೈಲ್ಗಳು ರಿಲೀಸ್ ಆಗುತ್ತಿರುವ ಕಾರಣ ಇದಕ್ಕೆ ಎಲ್ಲಿಲ್ಲದ ಬೇಡಿಕೆ. ಇವುಗಳಲ್ಲಿ ಕೆಲವು ಸ್ಮಾರ್ಟ್ಫೋನ್ ಹೆಚ್ಚಿನ ರೇಡಿಯೇಷನ್ ಕೂಡ ಹೊಂದಿರುತ್ತವೆ. ಕೆಲವೊಮ್ಮೆ ಸ್ಮಾರ್ಟ್ಫೋನ್ ಅಧಿಕ ಬಿಸಿ ಆಗಿ ಬಿಡುತ್ತದೆ. ಇದರಿಂದ ಮೊಬೈಲ್ ಹ್ಯಾಂಗ್ ಆಗುವುದು, ಸ್ವಿಚ್ ಆಫ್ ಆಗುವುದು ಕೊನೆಗೆ ಬ್ಲಾಸ್ಟ್ ಆಗುವಂತಹ ತೊಂದರೆಗಳು ಕೂಡ ಎದುರಾಗುತ್ತದೆ. ಈಗಂತು ದಿನೇ ದಿನೇ ಮೊಬೈಲ್ ಫೋನ್ಗಳು ಬ್ಲಾಸ್ಟ್ ಆಗುವ ಪ್ರಕರಣ ಹೆಚ್ಚುತ್ತಲೇ ಇದೆ, ಯಾವುದೇ ಮೊಬೈಲ್ ಶೊ ರೂಂಗೆ ತೆರಳಿ ಅಥವಾ ಮೊಬೈಲ್ ತಜ್ಞರ ಬಳಿ ಮೊಬೈಲ್ ಬ್ಲಾಸ್ಟ್ ಆಗಲು ಕಾರಣ ಕೇಳಿದರೆ ಹೆಚ್ಚಿನವ ಮೊಬೈಲ್ನ ಕಳಪೆ ನಿರ್ವಹಣೆ ಬಗ್ಗೆ ಹೇಳುತ್ತಾರೆ. ಪ್ರಮುಖವಾಗಿ ನಿಮ್ಮ ಫೋನನ್ನು ಬಿಸಿ ಆಗದಂತೆ ನೀವು ನೋಡಿಕೊಳ್ಳಬೇಕು. ಇದರಿಂದ ಬ್ಲಾಸ್ಟ್ ಆಗುವುದನ್ನೂ ತಪ್ಪಿಸಬಹುದು. ಇದಕ್ಕೆ ಸಂಬಂಧಿಸಿದಂತೆ ಕೆಲ ಟಿಪ್ಸ್ ಇಲ್ಲಿದೆ.
ಮೊಬೈಲ್ ಅತೀಯಾಗಿ ಬಿಸಿಯಾಗಲು ಅಥವಾ ಬ್ಲಾಸ್ಟ್ ಆಗಲು ಮುಖ್ಯ ಕಾರಣದಲ್ಲಿ ಒಂದು ಚಾರ್ಜ್ ಆಗುತ್ತಿರುವಾಗಲೇ ಮೊಬೈಲ್ ಬಳಕೆ ಮಾಡುವುದು. ಈ ರೀತಿ ಬಳಕೆ ಮಾಡಬೇಕಾದರೆ ಅಲ್ಲಿ RAM ಸೇರಿದಂತೆ ಪ್ರೊಸೆಸರ್ಗಳು ಎಲ್ಲವೂ ಕಾರ್ಯ ನಿರ್ವಹಿಸುತ್ತಲೇ ಇರುತ್ತದೆ. ಹೀಗಾಗಿ ಮೊಬೈಲ್ ಬೇಗನೇ ಬಿಸಿಯಾಗುತ್ತದೆ, ಹೆಚ್ಚಿನ ಸಂದರ್ಭದಲ್ಲಿ ಇದು ಬ್ಲಾಸ್ಟ್ ಕೂಡಾ ಆಗುತ್ತದೆ. ಇದರ ಜೊತೆಗೆ ನಿಮ್ಮ ಮೊಬೈಲ್ನೊಂದಿಗೆ ನೀಡಿರುವ ಚಾರ್ಜರ್ ನಿಂದಲೇ ಫೋನ್ ಅನ್ನು ಚಾರ್ಜ್ ಮಾಡಿ. ಹಾಗೆಯೆ ಬಿಸಿ ಇರುವಂತಹ ಜಾಗದಲ್ಲಿ ಮೊಬೈಲ್ ಅನ್ನು ಇಡಬೇಡಿ.
OnePlus 10R: ಭರ್ಜರಿ ಆಫರ್ನೊಂದಿಗೆ 150W ಫಾಸ್ಟ್ ಚಾರ್ಜರ್ನ ಒನ್‌ಪ್ಲಸ್ 10R ಫೋನ್ ಮಾರಾಟ ಆರಂಭ
ನಾವು ನಮ್ಮ ಫೋನಿನ ಬ್ಯಾಕ್ ಗ್ರೌಂಡ್ ರನ್ನಿಂಗ್ ಅಪ್ಲಿಕೇಶನ್ ಗಳನ್ನು ತೆಗೆಯದೆ ಇದ್ದಾಗ , ಫೋನಿನ ವೇಗ ಕಡಿಮೆಯಗುವುದಲ್ಲದೆ ನಮ್ಮ ಮೊಬೈಲ್ ಬಿಸಿ ಆಗಬಹುದು. ಇದಕ್ಕಾಗಿ ಯಾವುದೇ ಅಪ್ಲಿಕೇಶನ್ ಬಳಸಿದ ಮೇಲೆ ಅದನ್ನು ಪೂರ್ಣವಾಗಿ ಕ್ಲೀನ್ ಮಾಡಿ, ಇಲ್ಲದಿದ್ದಲ್ಲಿ ಅದು ಸ್ವಯಂ ಚಾಲನೆಯಲ್ಲಿ ಇರುತ್ತದೆ. ಹಾಗೆಯೆ ಬಹಳ ಸಮಯ Wi-Fi ಮತ್ತು HotSpot ಬಳಸಿದರೆ ನಮ್ಮ ಮೊಬೈಲ್ ಬಿಸಿ ಬರುತ್ತದೆ. ಇದಕ್ಕಾಗಿ ಒಂದೇ ಸಮ ಗಂಟೆ ಗಟ್ಟಲೆ Wi-Fi ಮತ್ತು HotSpot ಉಪಯೋಗಿಸದೇ ಇರಿ. ಬೇಕಾದ ಸಮಯದಲ್ಲಿ, ಅವಶ್ಯಕ ಇದ್ದಷ್ಟು ಮಾತ್ರ ಬಳಸಿ.
ಮನೆಯ ಒಳಗಡೆ ಮತ್ತು ರಾತ್ರಿಯ ಸಮಯದಲ್ಲಿ ಬ್ರೈಟ್ ನೆಸ್ ಅಧಿಕವಾಗಿ ಹೆಚ್ಚಿಸುವ ಅಗತ್ಯವಿರುವುದಿಲ್ಲ. ಆಗ ಬ್ರೈಟ್ ಕಡಿಮೆಗೊಳಿಸಿ, ಇದರಿಂದ ಮೊಬೈಲ್ ಬಿಸಿ ಆಗುವುದು ತಪ್ಪುತ್ತದೆ. ಇನ್ನು ಶೇ 90ರಷ್ಟು ಚಾರ್ಜ್ ಆದ ಕೂಡಲೇ ಚಾರ್ಜರ್ ಆಫ್ ಮಾಡಿ. ಈ ಅಭ್ಯಾಸ ರೂಡಿಸಿಕೊಂಡರೆ ಒಳ್ಳೆಯದರು. ಮಾರುಕಟ್ಟೆಯಲ್ಲಿ ವೈಫೈ, ಬ್ಲ್ಯೂಟೂತ್ ಮೂಲಕ ಚಾರ್ಜ್ ಮಾಡಿಕೊಳ್ಳುವ ವೈರ್ ಲೈಸ್ ಚಾರ್ಜರ್ ಲಭ್ಯವಿದ್ದು, ಸಾಧ್ಯವಾದಷ್ಟು ಮಟ್ಟಿಗೆ ಇವುಗಳಿಂದ ದೂರವಿದ್ದರೆ ಒಳ್ಳೆಯದರು.
ತಂತ್ರಜ್ಞಾನ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ