ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಡುಪ್ಲಿಕೇಟ್ ಕಾಂಟೆಕ್ಟ್‌ಗಳನ್ನು ಒಮ್ಮೆಲೇ ಡಿಲೀಟ್ ಮಾಡಲು ಇಲ್ಲಿದೆ ಟ್ರಿಕ್

| Updated By: Vinay Bhat

Updated on: Aug 27, 2021 | 3:30 PM

ಡುಪ್ಲೀಕೆಟ್ ಕಾಂಟೆಕ್ಟ್‌ಗಳನ್ನು ಡಿಲೀಟ್ ಮಾಡುವ ಮತ್ತು ಮರ್ಜ್ ಮಾಡಲು ಅನೇಕ ಆ್ಯಪ್‌ಗಳು ಮತ್ತು ಸೇವೆಗಳು ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿದೆ.

ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಡುಪ್ಲಿಕೇಟ್ ಕಾಂಟೆಕ್ಟ್‌ಗಳನ್ನು ಒಮ್ಮೆಲೇ ಡಿಲೀಟ್ ಮಾಡಲು ಇಲ್ಲಿದೆ ಟ್ರಿಕ್
Smartphone
Follow us on

ಸ್ಮಾರ್ಟ್‌ಫೋನ್ (Smartphone) ಬಳಕೆದಾರರು ಸದ್ಯ ಎದುರಿಸುತ್ತಿರುವ ದೊಡ್ಡ ಸಮಸ್ಯೆ ಎಂದರೆ ಒಂದೇ ನಂಬರ್ ಗಳು ಬೇರೆ ಬೇರೆ ಹೆಸರಿನಲ್ಲಿ ಅಥವಾ ಖಾಲಿ ಹೆಸರು ನಂಬರ್ ಇಲ್ಲದೆ, ಒಂದೇ ನಂಬರ್​ನಲ್ಲಿ ಎರಡು ಮೂರು ಹೆಸರು ಸೇವ್ ಆಗಿರುವುದು. ಇಲ್ಲವೇ ಇವುಗಳನ್ನು ಡಿಲೀಟ್ ಮಾಡಲು ಆಗುವುದಿಲ್ಲ, ಮಾಡಿದರೂ ಮತ್ತೊಮ್ಮೆ ಪುನಃ ಅದೇಗೋ ಕ್ರಿಯೇಟ್ ಆಗಿ ಬಿಡುತ್ತವೆ. ಈ ಹಿನ್ನಲೆಯಲ್ಲಿ ಡುಪ್ಲಿಕೇಟ್ ಕಾಂಟೆಕ್ಟ್ ಗಳನ್ನು ಡಿಲೀಟ್ ಮಾಡಿ, ಒಂದೇ ಮಾದರಿಯ ಕಾಂಟೆಕ್ಟ್‌ಗಳನ್ನು ಸೇವೆ ಮಾಡಿಕೊಳ್ಳುವುದು ಹೇಗೆ ಎಂಬುದಕ್ಕೆ ಈ ಸ್ಟೋರಿ ಓದಿ.

ಈ ಸಮಸ್ಯೆಗೆ ಪರಿಹಾರವನ್ನು ನೀಡುವ ಸಲುವಾಗಿ ಡುಪ್ಲೀಕೆಟ್ ಕಾಂಟೆಕ್ಟ್‌ಗಳನ್ನು ಡಿಲೀಟ್ ಮಾಡುವ ಮತ್ತು ಮರ್ಜ್ ಮಾಡಲು ಅನೇಕ ಆ್ಯಪ್‌ಗಳು ಮತ್ತು ಸೇವೆಗಳು ಗೂಗಲ್ ಪ್ಲೇ ಸ್ಟೋರ್​ನಲ್ಲಿ ಲಭ್ಯವಿದ್ದು, ಇವುಗಳ ಬಳಕೆಯಿಂದಾಗಿ ಆಂಡ್ರಾಯ್ಡ್ ಫೋನಿನಲ್ಲಿ ಡುಪ್ಲಿಕೇಟ್ ಕಾಂಟೆಕ್ಟ್ ಗಳನ್ನು ಮ್ಯಾನೆಜ್ ಮಾಡುವುದು ಇನ್ನು ಮುಂದೆ ನಿಮಗೆ ಸುಲಭವಾಗಲಿದೆ.

ನಿಮ್ಮ ಕಾಟೆಂಕ್ಟ್‌ಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸುವ ಸಲುವಾಗಿ ಸಿಂಪಲ್ ಮರ್ಜ್ ಡುಪ್ಲಿಕೆಟ್ಸ್ (Simpler Merge Duplicates) ಎನ್ನುವ ಆ್ಯಪ್ ಒಂದನ್ನು ನಿಮ್ಮ ಸ್ಮಾರ್ಟ್‌ಫೋನಿನಲ್ಲಿ ಡೌನ್‌ಲೋಡ್ ಮಾಡಿಕೊಳ್ಳಿ. ಡೌನ್‌ಲೋಡ್ ಮಾಡಿದ ನಂತರದಲ್ಲಿ ಈ ಆ್ಯಪ್ ಅನ್ನು ಸ್ಮಾರ್ಟ್‌ಫೋನಿನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಿ. ಇದಾದ ಮೇಲೆ ಆ್ಯಪ್ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಕಾಂಟೆಕ್ಟ್ ಗಳನ್ನು ಸ್ಕ್ಯಾನ್ ಮಾಡಿಕೊಳ್ಳುತ್ತದೆ.

ಇದು ಸ್ಕ್ಯಾನ್ ಆದ ನಂತರದಲ್ಲಿ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಡುಪ್ಲಿಕೇಟ್ ಕಾಂಟೆಕ್ಟ್‌ಗಳು, ಒಂದೇ ಮಾದರಿಯ ನಂಬರ್ ಗಳು ಮತ್ತು ಹೆಸರಿಲ್ಲದ ಕಾಂಟೆಕ್ಟ್‌ಗಳ ಪಟ್ಟಿಯನ್ನು ಕಾಣಬಹುದಾಗಿದೆ. ಇದಾದ ನಂತರದಲ್ಲಿ ಒಂದೇ ಮಾದರಿಯ ಕಾಂಟೆಕ್ಟ್‌ ಗಳನ್ನು ಮರ್ಜ್ ಮಾಡಬಹದು, ಅಲ್ಲದೇ ಒಂದು ಕಾಂಟೆಕ್ಟ್ ಉಳಿದುಕೊಂಡು ಮಿಕ್ಕಿದ್ದವು ಡಿಲೀಟ್ ಆಗುತ್ತದೆ. ಈ ಮೂಲಕ ನಿಮ್ಮ ಸ್ಮಾರ್ಟ್‌ಫೋನಿನಲ್ಲಿರುವ ಡುಪ್ಲಿಕೇಟ್ ಕಾಂಟೆಕ್ಟ್‌ಗಳನ್ನು ಒಮ್ಮೆಲೇ ಡಿಲೀಟ್ ಮಾಡಬಹುದಾಗಿದೆ.

Moto Edge 20 Fusion: ಮೊದಲ ಸೇಲ್ ಕಾಣುತ್ತಿದೆ 108MP ಕ್ಯಾಮೆರಾದ ಮೋಟೋ ಎಡ್ಜ್ 20 ಫ್ಯೂಷನ್: ಬಂಪರ್ ಆಫರ್​ನಲ್ಲಿ ಖರೀದಿಸಿ

Moto E20: ಬಹುನಿರೀಕ್ಷಿತ ಮೋಟೋ E20 ಸ್ಮಾರ್ಟ್​ಫೋನಿನ ಮಾಹಿಇ ಸೋರಿಕೆ: ಏನೆಲ್ಲ ವಿಶೇಷತೆ?

(how to remove duplicate contacts in smartphone here is the tricks)