Moto Edge 20 Fusion: ಮೊದಲ ಸೇಲ್ ಕಾಣುತ್ತಿದೆ 108MP ಕ್ಯಾಮೆರಾದ ಮೋಟೋ ಎಡ್ಜ್ 20 ಫ್ಯೂಷನ್: ಬಂಪರ್ ಆಫರ್​ನಲ್ಲಿ ಖರೀದಿಸಿ

ಮೋಟೋ ಎಡ್ಜ್ 20 ಫ್ಯೂಷನ್ ಎರಡು ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ ಪ್ರಕಾರ 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯದ ಬೆಲೆ 21,499 ರೂ. ಇರಲಿದೆ.

Moto Edge 20 Fusion: ಮೊದಲ ಸೇಲ್ ಕಾಣುತ್ತಿದೆ 108MP ಕ್ಯಾಮೆರಾದ ಮೋಟೋ ಎಡ್ಜ್ 20 ಫ್ಯೂಷನ್: ಬಂಪರ್ ಆಫರ್​ನಲ್ಲಿ ಖರೀದಿಸಿ
Motorola Edge 20 Fusion
Follow us
TV9 Web
| Updated By: Vinay Bhat

Updated on:Aug 27, 2021 | 2:33 PM

ಲೆನೊವಾ ಒಡೆತನದ ಮೋಟೋರೊಲಾ (Motorola) ಕಂಪೆನಿ ಇತ್ತೀಚೆಗಷ್ಟೆ ಭಾರತದಲ್ಲಿ ತನ್ನ ಎಡ್ಜ್ ಸರಣಿಯಲ್ಲಿ ಮೋಟೋ ಎಡ್ಜ್ 20 ಮತ್ತು ಮೋಟೋ ಎಡ್ಜ್ 20 ಫ್ಯೂಷನ್ (Motorola Edge 20, Edge 20 Fusion) ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಿತ್ತು. ಈ ಪೈಕಿ 108 ಮೆಗಾಫಿಕ್ಸೆಲ್​ನ ಕ್ಯಾಮೆರಾ, ಮೀಡಿಯಾ ಟೆಕ್ ಪ್ರೊಸೆಸರ್​ನಿಂದ ಕೂಡಿರುವ ಮೋಟೋ ಎಡ್ಜ್ 20 ಫ್ಯೂಷನ್ ಸ್ಮಾರ್ಟ್​ಫೋನ್ ಪ್ರಸಿದ್ಧ ಇ ಕಾಮರ್ಸ್ ತಾಣವಾದ ಫ್ಲಿಪ್​ಕಾರ್ಟ್​ನಲ್ಲಿ (Flipkart) ಇಂದು ಮೊದಲ ಸೇಲ್ ಕಾಣುತ್ತಿದೆ.

ಮೋಟೋ ಎಡ್ಜ್ 20 ಫ್ಯೂಷನ್ ಎರಡು ಆಯ್ಕೆಯಲ್ಲಿ ಖರೀದಿಗೆ ಸಿಗಲಿದೆ. ಇದರ ಪ್ರಕಾರ 6GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯದ ಬೆಲೆ 21,499 ರೂ. ಇರಲಿದೆ. 8GB RAM ಮತ್ತು 128GB ಸ್ಟೋರೆಜ್​ಗೆ 22,999 ರೂ. ನಿಗದಿ ಮಾಡಲಾಗಿದೆ. ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮೂಲಕ ಖರೀದಿ ಮಾಡಿದರೆ ಬರೋಬ್ಬರಿ 5000 ರೂ. ರಿಯಾಯಿತಿ ಸಿಗಲಿದೆ. 10,599 ರೂ. ವರೆಗೆ ಎಕ್ಸ್​ಚೇಂಜ್ ಆಫರ್ ನೀಡಲಾಗಿದೆ.

ಮೋಟೋ ಎಡ್ಜ್ 20 ಫ್ಯೂಷನ್ ವಿಶೇಷತೆ?:

ಮೋಟೋ ಎಡ್ಜ್ 20 ಫ್ಯೂಷನ್ ಸ್ಮಾರ್ಟ್‌ಫೋನ್ 6.67 ಇಂಚಿನ ಪೂರ್ಣ OLED ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಆಕ್ಟಾ ಕೋರ್ ಮೀಡಿಯಾ ಟೆಕ್ Dimensity 800U ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಹೊಂದಿದೆ.

ಈ ಫೋನ್​ಗೆ ಟ್ರಿಪಲ್ ಕ್ಯಾಮೆರಾ ರಚನೆ ನೀಡಲಾಗಿದ್ದು, ಕ್ರಮವಾಗಿ 108 ಮೆಗಾ ಫಿಕ್ಸೆಲ್ + 8ಎಂಪಿ + 2ಎಂಪಿ ಸೆನ್ಸಾರ್‌ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಜೊತೆಗೆ 5000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದ್ದು, 30W ಫಾಸ್ಟ್‌ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ.

ಇದರ ಜೊತೆ ಬಿಡುಗಡೆ ಆಗಿದ್ದ ಮೋಟೋ ಎಡ್ಜ್ 20 ಕೂಡ ಸದ್ಯದಲ್ಲೇ ಸೇಲ್ ಕಾಣಲಿದೆ. ಇದು 6.67 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಆಕ್ಟಾ ಕೋರ್ ಕ್ವಾಲ್ಕಮ್ ಸ್ನ್ಯಾಪ್‌ಡ್ರಾಗನ್ 778G ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಇದಕ್ಕೆ ಪೂರಕವಾಗಿ ಆಂಡ್ರಾಯ್ಡ್‌ 11 ಓಎಸ್‌ ಸಪೋರ್ಟ್‌ ಹೊಂದಿದೆ.

ಇನ್ನು ಈ ಫೋನ್ ಟ್ರಿಪಲ್ ಕ್ಯಾಮೆರಾ ರಚನೆ ಹೊಂದಿದ್ದು, ಕ್ರಮವಾಗಿ 108 ಮೆಗಾಫಿಕ್ಸೆಲ್ + 16ಎಂಪಿ + 8ಎಂಪಿ ಸೆನ್ಸಾರ್‌ ಪಡೆದಿವೆ. ಇನ್ನು ಸೆಲ್ಫಿ ಕ್ಯಾಮೆರಾವು 32ಎಂಪಿ ಸೆನ್ಸಾರ್‌ ಸಾಮರ್ಥ್ಯದಲ್ಲಿದೆ. ಜೊತೆಗೆ 4000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿದ್ದು, 30W ಟರ್ಬೊಪವರ್ ಚಾರ್ಜಿಂಗ್ ಬೆಂಬಲ ಪಡೆದುಕೊಂಡಿದೆ. ಮೋಟೋ ಎಡ್ಜ್ 20 ಕೇವಲ ಒಂದು ಆಯ್ಕೆಯಲ್ಲಿ ಮಾರಾಟ ಕಾಣಲಿದೆ. ಇದರ 8GB RAM ಮತ್ತು 128GB ಸ್ಟೋರೆಜ್ ಸಾಮರ್ಥ್ಯಕ್ಕೆ 29,999 ರೂ. ಇರಲಿದೆ.

Moto E20: ಬಹುನಿರೀಕ್ಷಿತ ಮೋಟೋ E20 ಸ್ಮಾರ್ಟ್​ಫೋನಿನ ಮಾಹಿಇ ಸೋರಿಕೆ: ಏನೆಲ್ಲ ವಿಶೇಷತೆ?

ನಿಮ್ಮ ಆಧಾರ್ ಕಾರ್ಡ್‌ನೊಂದಿಗೆ ಎಷ್ಟು ಸಿಮ್ ಲಿಂಕ್ ಆಗಿವೆ?: ಟೆಲಿಕಾಂ ಇಲಾಖೆಯಿಂದ ಹೊಸ ಪೋರ್ಟಲ್

(Motorola Edge 20 Fusion first sale going on Flipkart Price specifications and offers)

Published On - 2:32 pm, Fri, 27 August 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ