Tech Tips: ಆಂಡ್ರಾಯ್ಡ್​ನಿಂದ ಐಫೋನ್​ಗೆ ಫೋಟೋ, ವಿಡಿಯೋ, ಚಾಟ್ಸ್​ ವರ್ಗಾವಣೆ ಹೇಗೆ?

| Updated By: Vinay Bhat

Updated on: Dec 18, 2022 | 6:53 AM

Android - iOS: ಆಂಡ್ರಾಯ್ಡ್​ ಬಳಕೆ ಮಾಡುತ್ತಿದ್ದವರಿಗೆ ಐಫೋನ್ ಉಪಯೋಗುಸುವುದು ಕಷ್ಟವಾಗುತ್ತಿತ್ತು. ಆದರೀಗ ಐಫೋನ್ (iPhone) ಹಿಂದಿನ ರೀತಿ ಇಲ್ಲ. ಅನೇಕ ವಿಚಾರಗಳಲ್ಲಿ ಗ್ರಾಹಕರ ಫ್ರೆಂಡ್ಲಿ ಫೋನಾಗಿ ಬಿಟ್ಟಿದೆ.

Tech Tips: ಆಂಡ್ರಾಯ್ಡ್​ನಿಂದ ಐಫೋನ್​ಗೆ ಫೋಟೋ, ವಿಡಿಯೋ, ಚಾಟ್ಸ್​ ವರ್ಗಾವಣೆ ಹೇಗೆ?
Android - iOS
Follow us on

ವಿಶ್ವದಲ್ಲಿ ಕೋಟ್ಯಾಂತರ ಬಳಕೆದಾರರನ್ನು ಹೊಂದಿರುವ ಪ್ರಸಿದ್ಧ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ಈ ವರ್ಷ ಅತಿ ಹೆಚ್ಚು ಫೀಚರ್​ಗಳನ್ನು ಪರಿಚಯಿಸಿದೆ. ಇನ್ನೂ ಕೂಡ ಅನೇಕ ಫೀಚರ್​ಗಳು ಬರಲು ಸಾಲು ನಿಂತಿದ್ದು ಪರೀಕ್ಷಾ ಹಂತದಲ್ಲಿದೆ. ವಾಟ್ಸ್​ಆ್ಯಪ್ ಆಂಡ್ರಾಯ್ಡ್ (Android) ಸ್ಮಾರ್ಟ್​ಫೋನ್ ಮತ್ತು ಐಫೋನ್ ಎರಡಕ್ಕೂ ಸಪೋರ್ಟ್ ಮಾಡುತ್ತದೆ ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಈ ಹಿಂದೆ ಐಫೋನ್ ಎಂದರೆ ದುಬಾರಿ ಎನ್ನುತ್ತಿದ್ದ ಜನರು ಈಗ ಇದನ್ನೇ ಖರೀದಿ ಮಾಡುತ್ತಿದ್ದಾರೆ. ಯಾಕೆಂದರೆ ಮೊದಲು ಐಫೋನ್ ಖರೀದಿಸುವಷ್ಟು ಮೊತ್ತ ಅಥವಾ ಈಗಿರುವ ಹಾಗೆ ಆಫರ್​ಗಳು, ಡಿಸ್ಕೌಂಟ್ ಆಯ್ಕೆ ಇರಲಿಲ್ಲ. ಜೊತೆಗೆ ಆಂಡ್ರಾಯ್ಡ್​ ಬಳಕೆ ಮಾಡುತ್ತಿದ್ದವರಿಗೆ ಐಫೋನ್ ಉಪಯೋಗುಸುವುದು ಕಷ್ಟವಾಗುತ್ತಿತ್ತು. ಆದರೀಗ ಐಫೋನ್ (iPhone) ಹಿಂದಿನ ರೀತಿ ಇಲ್ಲ. ಅನೇಕ ವಿಚಾರಗಳಲ್ಲಿ ಗ್ರಾಹಕರ ಫ್ರೆಂಡ್ಲಿ ಫೋನಾಗಿ ಬಿಟ್ಟಿದೆ.

ಮುಖ್ಯವಾಗಿ ಈ ಹಿಂದೆ ಆಂಡ್ರಾಯ್ಡ್​ ಮೊಬೈಲ್​ನಲ್ಲಿದ್ದ ಫೋಟೋ, ವಿಡಿಯೋ, ಕಾಂಟೆಕ್ಟ್, ವಾಟ್ಸ್​ಆ್ಯಪ್ ಚಾಟ್ ಅನ್ನು ಐಫೋನ್​ಗೆ ಕಳುಹಿಸುವುದು ಅಸಾಧ್ಯವಾಗಿತ್ತು. ಬಳಿಕ ಒಂದು ಆಯ್ಕೆ ನೀಡಿದರೂ ಅದುಕೂಡ ಸುಲಭದ್ದಾಗಿರಲಿಲ್ಲ. ಆದರೀಗ ಇವೆಲ್ಲವೂ ಅತ್ಯಂತ ಸುಲಭ. ಆ್ಯಪಲ್ ಬಳಕೆದಾರರು ಆಂಡ್ರಾಯ್ಡ್​ ಫೋನ್​ನಿಂದ ತಮ್ಮ ಐಫೋನ್​ಗೆ ಯಾವುದೇ ಫೈಲ್ ಅನ್ನು ಸುಲಭವಾಗಿ ವರ್ಗಾವಣೆ ಮಾಡಬಹುದು.

Nokia C31: ವಿದೇಶದಲ್ಲಿ ಧೂಳೆಬ್ಬಿಸಿದ ನೋಕಿಯಾ C31 ಭಾರತದಲ್ಲಿ ಬಿಡುಗಡೆ: ಬೆಲೆ ಎಷ್ಟು?

ಇದನ್ನೂ ಓದಿ
Flipkart Big Saving Days Sale: ಫ್ಲಿಪ್​ಕಾರ್ಟ್​ನಲ್ಲಿ ಶುರುವಾಗಿದೆ ಬಿಗ್ ಸೇವಿಂಗ್ ಡೇಸ್ ಸೇಲ್: ಆಫರ್ ಮಿಸ್ ಮಾಡ್ಬೇಡಿ
Realme 10S 5G: ರಿಯಲ್ ಮಿಯಿಂದ ಮತ್ತೊಂದು ಸ್ಮಾರ್ಟ್​ಫೋನ್ ಬಿಡುಗಡೆ: ಇದು ಬಜೆಟ್ ಬೆಲೆಯ ಬಂಪರ್ ಫೋನ್
Tech Tips: ಕಳೆದ 24 ಗಂಟೆಗಳಲ್ಲಿ ನಿಮ್ಮ ವಾಟ್ಸ್ಆ್ಯಪ್ ಡಿಪಿ ಯಾರು ನೋಡಿದ್ದಾರೆ ತಿಳಿಯಬೇಕೆ?
Realme 10 Pro: 108MP ಕ್ಯಾಮೆರಾ, 5000mAh ಬ್ಯಾಟರಿ: ರಿಯಲ್‌ ಮಿ 10 ಪ್ರೊ 5G ಫೋನ್ ಈಗ ಖರೀದಿಗೆ ಲಭ್ಯ

ಈ ಬಗ್ಗೆ ವಾಟ್ಸ್​ಆ್ಯಪ್ ಇತ್ತೀಚೆಗಷ್ಟೆ ಮಾಹಿತಿ ನೀಡಿದ್ದು, ಐಫೋನ್ ಬಳಕೆದಾರರು ಆಂಡ್ರಾಯ್ಡ್​ ಫೋನ್​ನಲ್ಲಿದ್ದ ತಮ್ಮ ಡೇಟಾವನ್ನು ಟ್ರಾನ್ಫರ್ ಮಾಡಬಹುದು. ಹಾಗೆಯೆ ಐಫೋನ್​ನಲ್ಲಿದ್ದ ವಾಟ್ಸ್​ಆ್ಯಪ್ ಡಾಟಾವನ್ನು ಐಫೋನ್​ಗೂ ವರ್ಗಾವಣೆ ಮಾಡಬಹುದು ಎಂದು ಹೇಳಿತ್ತು. ನಿಮ್ಮ ಪ್ರೊಫೈಲ್ ಪೋಟೋ, ವೈಯಕ್ತಿಕ ಚಾಟ್, ಗ್ರೂಪ್ ಚಾಟ್, ಚಾಟ್ ಹಿಸ್ಟರಿ, ಮಿಡಿಯಾ ಫೈಲ್ ಮಾತ್ರವಲ್ಲದೆ ಸೆಟ್ಟಿಂಗ್ಸ್​ ಕೂಡ ವರ್ಗಾವಣೆ ಆಗುತ್ತಿದೆ.

ಆಂಡ್ರಾಯ್ಡ್​ನಿಂದ ಐಫೋನ್​ಗೆ ಡೇಟಾ ವರ್ಗಾವಣೆ ಹೇಗೆ?:

  • ಇದಕ್ಕಾಗಿ ಮೊದಲು ನೀವು ನಿಮ್ಮ ಆಂಡ್ರಾಯ್ಡ್ ಸ್ಮಾರ್ಟ್​ಫೋನ್​ನಲ್ಲಿ Move to iOS ಆ್ಯಪ್ ಅನ್ನು ಇನ್​ಸ್ಟಾಲ್ ಮಾಡಿಕೊಳ್ಳಬೇಕು.
  • ನಿಮ್ಮ ಐಫೋನ್​ನಲ್ಲಿ ಒಂದು ಕೋಡ್ ಡಿಸ್ ಪ್ಲೇ ಆಗುತ್ತದೆ. ಆಂಡ್ರಾಯ್ಡ್ ಫೋನಲ್ಲಿ ಕೋಡ್ ಕೇಳಿದಾಗ ಅದನ್ನು ಹಾಕಬೇಕು.
  • ಈಗ ವಾಟ್ಸ್​ಆ್ಯಪ್​ನಲ್ಲಿ ಕಾಣಿಸುವ ಟ್ರಾನ್ಫರ್ ಡೇಟಾ ಆಯ್ಕೆಯನ್ನು ಒತ್ತಿರಿ.
  • ನಂತರ ನಿಮ್ಮ ಆಂಡ್ರಾಯ್ಡ್​ ಫೋನನ್ನಲ್ಲಿ START ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಡೇಟಾ ವರ್ಗಾವಣೆಗೆ ತಯಾರಾಗಲು ವಾಟ್ಸ್​ಆ್ಯಪ್ ಕೆಲ ಸಮಯ ತೆಗೆದುಕೊಳ್ಳುತ್ತದೆ.
  • ಡೇಟಾ ಟ್ರಾನ್ಫರ್ ಆಗಲು ತಯಾರಾಗಿದೆ ಎಂಬೊತ್ತಿಗೆ ನಿಮ್ಮ ಆಂಡ್ರಾಯ್ಡ್​ ಫೋನ್​ನಿಂದ ವಾಟ್ಸ್​ಆ್ಯಪ್ ಸೈನ್​ಔಟ್ ಆಗುತ್ತದೆ. ನಂತರ ಅಲ್ಲೆ ಕಾಣಿಸುವ NEXT ಮತ್ತು CONTINUE ಬಟನ್ ಆಯ್ಕೆ ಮಾಡಿ.
  • ನಂತರ ನಿಮ್ಮ ಐಫೋನ್​ನಲ್ಲಿ ಆ್ಯಪ್ ಸ್ಟೋರ್​ಗೆ ತೆರಳಿ ವಾಟ್ಸ್ಆ್ಯಪ್ ಹೊಸ ವರ್ಷನ್ ಅನ್ನು ಡೌನ್​ಲೋಡ್ ಮಾಡಬೇಕು.
  • ಇನ್​ಸ್ಟಾಲ್ ಮಾಡಿದ ಬಳಿಕ ವಾಟ್ಸ್​ಆ್ಯಪ್ ಓಪನ್ ಮಾಡಿ ಆಂಡ್ರಾಯ್ಡ್ ಫೋನ್​ನಲ್ಲಿದ್ದ ವಾಟ್ಸ್​ಆ್ಯಪ್ ನಂಬರ್ ಅನ್ನು ಹಾಕಿ ಲಾಗಿನ್ ಆಗಿ.
  • ನಂತರ ಸ್ಟಾರ್ಟ್​ ಬಟನ್ ಒತ್ತಿ ಮುಂದಿನ ಸವಾಲವನ್ನು ಓದಿ ಮುಂದುವರೆಯಿರಿ. ಎಲ್ಲ ಅಧಿಸೂಷನೆಗಳು ಮುಗಿದ ನಂತರ ವಾಟ್ಸ್​ಆ್ಯಪ್ ಪೂರ್ಣವಾಗಿ ತೆರೆದು ನಿಮ್ಮ ಹಳೆಯ ಚಾಟ್​ಗಳು ಕಾಣಿಸಲು ಪ್ರಾರಂಭವಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ